Thursday, 15 February 2018

ಫೆ. 18 ರಂದು ಯಲಬುರ್ಗಾದಲ್ಲಿ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳ ವಿತರಣೆ *


ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಚೈತನ್ಯ ಯೋಜನೆ ಅಡಿಯಲ್ಲಿ ನೊಂದಾಯಿತ ಯುವ ಸಂಘಗಳಿಗೆ ಕ್ರೀಡಾಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಫೆ. 18 ರಂದು ಮಧ್ಯಾಹ್ನ 3 ಗಂಟೆಗೆ ಯಲಬುರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. 
    ಗ್ರಾಮೀಣ ಯುವ ಜನತೆಯ ಆರೋಗ್ಯಕರ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯಕವಾಗುವ ವಾತಾವರಣವನ್ನು ಸೃಜಿಸಲು “ಯುವ ಚೈತನ್ಯ” ಎಂಬ ಹೊಸ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ನೊಂದಾಯಿತ ಒಟ್ಟು  49 ಯುವ ಸಂಘಗಳಿಗೆ ಫೆ. 18 ರಂದು ಮಧ್ಯಾಹ್ನ 3 ಗಂಟೆಗೆ ಯಲಬುರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರಿಂದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗುವುದು.
    ಈ ಯೋಜನೆ ಅಡಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ನೊಂದಾಯಿತ ಯುವ ಸಂಘದ ಅಧ್ಯಕ್ಷರು/ ಕಾರ್ಯದರ್ಶಿ/ ಸಂಘದ ಸದಸ್ಯರನ್ನೊಳಗೊಂಡಂತೆ ತಮ್ಮ ಸಂಘದ ಲೆಟರ್ ಪ್ಯಾಡ ಮತ್ತು ಶೀಲು ತೆಗೆದುಕೊಂಡು ಸಂಘದವರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಾಗಬೇಕು.  ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ ರಸ್ತೆ ಕೊಪ್ಪಳ ಇಲ್ಲಿಗೆ ಅಥವಾ ದೂರವಾಣಿ ಸಂಖ್ಯೆ 9482404848, 8970288857, ಹಾಗೂ 7899432227 ಕ್ಕೆ ಸಂಪರ್ಕಿಸಬಹುದು ಎಂದು ಇಲಾಖಾ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment