Friday, 2 February 2018

ವಿವಿಧ ಮಹನೀಯರ ಜಯಂತಿ : ಫೆ. 05 ರಂದು ಪೂರ್ವಭಾವಿ ಸಭೆ


ಕೊಪ್ಪಳ ಫೆ. 02 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿವಿಧ ಮಹನೀಯರುಗಳ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ಫೆ. 05 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಇದೇ ಮೊದಲ ಬಾರಿಗೆ ಸಂತ ಸೇವಾಲಾಲ್ ಅವರ ಜಯಂತಿಯನ್ನು ಫೆ. 15 ರಂದು ಆಚರಿಸಬೇಕಾಗಿದ್ದು, ಈ ಕುರಿತ ಪೂರ್ವಭಾವಿ ಸಭೆ ಫೆ. 05 ರಂದು ಮಧ್ಯಾಹ್ನ 03 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.  ಛತ್ರಪತಿ ಶಿವಾಜಿ ಜಯಂತಿ ಫೆ. 19 ರಂದು ಆಚರಿಸಬೇಕಾಗಿದ್ದು, ಪೂರ್ವಭಾವಿ ಸಭೆ ಫೆ. 05 ರಂದು ಮಧ್ಯಾಹ್ನ 3-30 ಗಂಟೆಗೆ ಜರುಗಲಿದೆ.  ಸಂತ ಕವಿ ಸರ್ವಜ್ಞ ಅವರ ಜಯಂತಿ ಆಚರಣೆ ಫೆ. 20 ರಂದು ಆಚರಿಸಬೇಕಾಗಿದ್ದು, ಪೂರ್ವಭಾವಿ ಸಭೆ ಫೆ. 05 ರಂದು ಸಂಜೆ 04 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
     ಎಲ್ಲ ಸಮಾಜದ ಗಣ್ಯರು, ಮುಖಂಡರು, ಮಹನೀಯರುಗಳ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು, ಉಪಯುಕ್ತ ಸಲಹೆ, ಸೂಚನೆಗಳನ್ನು ನೀಡುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.
Post a Comment