Friday, 2 February 2018

ಫೆ. 04 ರಿಂದ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ


ಕೊಪ್ಪಳ ಫೆ. 02 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಹಾಗೂ ಕಲಬುರ್ಗಿಯ ರಂಗಾಯಣ ಇವರ ಸಹಯೋಗದಲ್ಲಿ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಗಳನ್ನೊಳಗೊಂಡ ಕೊಪ್ಪಳ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ ಕಾರ್ಯಕ್ರಮ ಫೆ. 04 ಮತ್ತು 05 ರಂದು ಎರಡು ದಿನಗಳ ಕಾಲ ಜರುಗಲಿದ್ದು, ಉದ್ಘಾಟನಾ ಸಮಾರಂಭವನ್ನು ಫೆ. 04 ರಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ. 
    ಹಿರಿಯ ರಂಗಭೂಮಿ ಕಲಾವಿದರಾದ ಬಾಬಣ್ಣ ಕಲ್ಮನಿ ಕುಕನೂರು ಅವರು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸುವರು.  ಮುಖ್ಯ ಅತಿಥಿಗಳಾಗಿ ರಂಗವಿಜ್ಞಾನಿಗಳು ಹಾಗೂ ನಾಟಕ ಅಕಾಡೆಮಿ ಮಾಜಿ ಸದಸ್ಯರಾದ ಶಿವಶಂಕರ ಹಾಲ್ಕುರಿಕೆ, ಮತ್ತು ಕಲಬುರ್ಗಿ ರಂಗಾಯಣ ನಿರ್ದೇಶಕರಾದ ಮಹೇಶ ಪಾಟೀಲ್ ಪಾಲ್ಗೊಳ್ಳುವರು.  ಹಿರಿಯ ರಂಗಭೂಮಿ ಕಲಾವಿದರಾದ ವಿಠ್ಠಪ್ಪ ಗೋರಂಟ್ಲಿ ಅವರ ಅಧ್ಯಕ್ಷತೆಯಲ್ಲಿ ಫೆ. 05 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. 
ನಾಟಕ/ ಜಾನಪದ ನೃತ್ಯಗಳು : ಕೊಪ್ಪಳ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕ/ ಜಾನಪದ ನೃತ್ಯಗಳ ವಿವರ ಇಂತಿದೆ.  ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಕೃಷಿ ವಿದ್ಯಾಲಯದಿಂದ “ಕೆಂಪು ಹೂವು” ಎಂಬ ನಾಟಕ ಹಾಗೂ “ಹಳ್ಳಿ ಸೊಗಡಿನ ಕೋಲಾಟ” ಎಂಬ ಜಾನಪದ ಪ್ರಕಾರ ನೃತ್ಯ  ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ “ಕೆಂಡದ ಮಳೆ ಕರೆಯುವಲ್ಲಿ” ನಾಟಕ ಹಾಗೂ ಕೋಲಾಟ, ಮಂಗಳೂರು ಗ್ರಾಮದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಿಂದ “ತುಕ್ರನ ಕನಸು” ನಾಟಕ, ಕುಕನೂರಿನ ಅಂದಾನಪ್ಪ ಹೊಸಮನಿ ಗ್ರಾಮೀಣ ಪ್ರಥಮ ದರ್ಜೆ ಕಾಲೇಜಿನಿಂದ “ರಾವಣ ಸಂಹಾರ” ನಾಟಕ, ಗಂಗಾವತಿ ತಾಲೂಕಿನ ಮರಳಿಯ ಎಂ.ಎಸ್.ಎಂ.ಎಸ್ ಪದವಿ ಮಹಾವಿದ್ಯಾಲಯದಿಂದ “ಸುಳ್ಳ-ಪಳ್ಳ” ನಾಟಕ ಹಾಗೂ ಕೋಲಾಟ, ಗಂಗಾವತಿಯ ಟಿ.ಎಂ.ಏ.ಈ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯದಿಂದ “ಸಿಂಹಾಸನ ಖಾಲಿ ಇದೆ” ನಾಟಕ ಹಾಗೂ ಭಾಗ್ಯದ ಬಳೆಗಾರ ಹಾಡಿಗೆ ನೃತ್ಯ, ಕೊಪ್ಪಳದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರದಿಂದ ಲಾವಣಿ ಮತ್ತು ಸುಗ್ಗಿ ನೃತ್ಯ,  ಮಂಗಳೂರು ಗ್ರಾಮದ ಸುವರ್ಣಗಿರಿ ಡಾ. ಚನ್ನಮಲ್ಲ ಸ್ವಾಮೀಜಿ ಸರ್ಕಾರಿ ಕಾಲೇಜಿನಿಂದ ಜಾನಪದ ಕೋಲಾಟ, ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ “ದೇಶಪ್ರೇಮಿ” ನಾಟಕ ಹಾಗೂ ಕೋಲಾಟ, ಮತ್ತು ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ “ಅಂಧೇರ್ ನಗರದ ಅರ್ಥ ಶಾಸ್ತ್ರ” ಎಂಬ ನಾಟಕ ಹಾಗೂ ವೀರಗಾಸೆ ಎಂಬ ಜಾನಪದ ಪ್ರಕಾರ ನೃತ್ಯಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.      
Post a Comment