Thursday, 30 November 2017

ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆ : ಸಂಚಾಲಕರ ಆಯ್ಕೆ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕಲಬುರಗಿ ರಂಗಾಯಣ ವತಿಯಿಂದ ಪದವಿ ಮತ್ತು ಸ್ನಾತಕೊತ್ತರ ಕಾಲೇಜುಗಳಿಗಾಗಿ ಏರ್ಪಡಿಸಿರುವ ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆಗಾಗಿ ಆಯ್ಕೆ ಸಮಿತಿಯ ನಿರ್ಧಾರದ ಮೇರೆಗೆ ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಂಚಾಲಕರನ್ನು ಆಯ್ಕೆ ಮಾಡಲಾಗಿದೆ. 
    ಕಲಬುರಗಿ ರಂಗಾಯಣ ವತಿಯಿಂದ ಪದವಿ ಮತ್ತು ಸ್ನಾತಕೊತ್ತರ ಕಾಲೇಜುಗಳಿಗಾಗಿ ಏರ್ಪಡಿಸಿರುವ ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆಗಾಗಿ ಆಯ್ಕೆ ಸಮಿತಿಯ ನಿರ್ಧಾರದ ಮೇರೆಗೆ ಕಲಬುರಗಿ ಜಿಲ್ಲೆಗೆ ಶಾಂತಲಿಂಗ ಎಸ್. ಹಿರೇಮಠ, ಕೊಪ್ಪಳ - ಶೀಲಾ ಹಾಲ್ಕುರಿಕೆ, ರಾಯಚೂರು – ರಂಜಾನ್ ಸಾಹೇಬ್ ಉಳಾಗಡ್ಡಿ, ಯಾದಗಿರಿ – ರವೀಂದ್ರ ಹಿರೇಮಠ ಹಾಗೂ ಬಳ್ಳಾರಿ ಜಿಲ್ಲೆಗೆ ಅಣ್ಣಾಜೀರಾವ್ ಕೃಷ್ಣರೆಡ್ಡಿ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment