Friday, 8 September 2017

ಕೊಪ್ಪಳದಲ್ಲಿ ಸುಧಾರಿತ ಹುರುಳಿ ಬೇಸಾಯ ಕ್ರಮ ಕುರಿತು ತರಬೇತಿ


ಕೊಪ್ಪಳ ಸೆ. 08 (ಕರ್ನಾಟಕ ವಾರ್ತೆ):  ಸುಧಾರಿತ ಹುರಳಿ ಬೇಸಾಯ ಕ್ರಮಗಳ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ರೈತರಿಗೆ ಶುಕ್ರವಾರದಂದು ತರಬೇತಿ ನೀಡಲಾಯಿತು.
      ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ 2017-18ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ (ದ್ವಿದಳ ಧಾನ್ಯಗಳು) “ಸುಧಾರಿತ ಹುರುಳಿ ಬೇಸಾಯ ತರಬೇತಿ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮವನ್ನು ಪ್ರಾಧ್ಯಾಪಕರು ಹಾಗೂ ಬೇಸಾಯ ಶಾಸ್ತ್ರಜ್ಞರಾದ ಡಾ. ಬಿ.ಎಮ್. ಚಿತ್ತಾಪುರ ರವರು ಉದ್ಘಾಟನೆ ಮಾಡಿ, ಇತ್ತೀಚಿನ ದಿನಗಳಲ್ಲಿ ಹುರುಳಿ ಬೆಳೆಯುವುದನ್ನು ರೈತರು ಮರೆಯುತ್ತಿದ್ದಾರೆ.  ಹುರುಳಿ ಒಂದು ಉತ್ಕøಷ್ಟವಾದ ಬೆಳೆ, ಇದು ಬಂಜರು ಪ್ರದೇಶದಲ್ಲಿ ಕೂಡ ಬೆಳೆಯಬಹುದಾದ ಬೆಳೆ.  ಇದನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಫಲವತ್ತತೆ ಮತ್ತು ಒಳ್ಳೆಯ ಪೋಷಕಾಂಶಗಳನ್ನು ಹೆಚ್ಚಿಸಬಹುದು.  ನಮ್ಮ ದೇಹಕ್ಕೆ ಬೇಕಾಗುವಂತಹ ಹೆಚ್ಚಿನ ಪ್ರಮಾಣದ ಪೋಷಕಾಂಶÀಗಳನ್ನು ಇದು ಒದಗಿಸುತ್ತದೆ ಎಂದು ಹೇಳಿದರು.
 ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಡಾ. ಗಿರೀಶ ಎನ್. ಮರಡ್ಡಿ  ಪ್ರಾಸ್ತಾವಿಕವಾಗಿ ಮಾತನಾಡಿ, ಹುರುಳಿ ಬೀಜವನ್ನು ಕೇಂದ್ರೀಯ ಒಣಭೂಮಿ ಕೃಷಿ ಸಂಶೋಧನಾ ಸಂಸ್ಥೆ, ಹೈದ್ರಾಬಾದ್ ರವರು ಸಂಶೋಧನೆ ಮಾಡಿ ಬಿಡುಗಡೆ ಮಾಡಿರುವ ಸಿಆರ್‍ಐಡಿಎ-1-18ಆರ್ ಸುಧಾರಿತ ತಳಿಯಾಗಿರುವುದರಿಂದ ರೈತರು ಇದರ ಸದುಪಯೋಗ ಪಡೆಯಬೇಕು ಹಾಗೂ ಹುರುಳಿ ಬೆಳೆಯುವುದರಿಂದ ಮಣ್ಣ್ಣಿನ ಫಲವತ್ತತೆಯನ್ನು ಕೂಡ ಹೆಚ್ಚಿಸಬಹುದು ಎಂದು ಹೇಳಿದರು. 
 ಕೃಷಿ ಸಮಾಜದ ರಾಜ್ಯ ಪ್ರತಿನಿಧಿ ಶಂಕ್ರಪ್ಪ ಚೌಡಿ ಮಾತನಾಡಿ, ರೈತರು ಆರ್ಥಿಕವಾಗಿ ಮುಂದುವರಿಯಬೇಕಾದರೆ, ಹೊಸ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸುಧಾರಿತ ತಳಿಯಾದ ಹುರುಳಿಯಂತಹ ಬೆಳೆಯನ್ನು ಬೆಳೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಧಾರಿತ ತಳಿಯಾದ ಹುರುಳಿ ಸಿಆರ್‍ಐಡಿಎ-1-18ಆರ್  ಬೀಜಗಳನ್ನು ಪ್ರಾತ್ಯಕ್ಷಿತೆಗಾಗಿ ರೈತರಿಗೆ ವಿತರಿಸಲಾಯಿತು.
Post a Comment