Friday, 8 September 2017

ಬಾಲಕಿ ಕಾಣೆ : ಅಪಹರಣ ಶಂಕೆ


ಕೊಪ್ಪಳ ಸೆ. 08 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕೆರೆಹಳ್ಳಿ ಗ್ರಾಮದ ನಿವಾಸಿ ಹುಲಿಗೆಮ್ಮ (14) ತಂದೆ ಈರಪ್ಪ ಜಬ್ಬಲಗುಡ್ಡ ಎಂಬ ಬಾಲಕಿ ಆಗಸ್ಟ್. 29 ರಂದು ಕಾಣೆಯಾಗಿದ್ದು,  ಬಾಲಕಿಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೆÇಲೀಸ್ ಠಾಣೆಯ ಪೆÇಲೀಸ್ ಸಬ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ಹುಲಿಗೆಮ್ಮ (14)  ತಂದೆ ಈರಪ್ಪ ಜಬ್ಬಲಗುಡ್ಡ ಎಂಬ ಬಾಲಕಿ ಕಳೆದ ಆಗಸ್ಟ್. 29 ರಂದು ರಾತ್ರಿ ಕೆರೆಹಳ್ಳಿ ಗ್ರಾಮದ ತಮ್ಮ ಮನೆಯಿಂದ ಬರ್ಹಿದೆಸೆಗಾಗಿ ಹೊರಗೆ ಹೋಗಿದ್ದ ಸಮಯದಲ್ಲಿ ಅದೇ ಗ್ರಾಮದ ರಮೇಶ ತಂದೆ ಜಂಬಣ್ಣ ವಡ್ಡರ ಎಂಬ ಆರೋಪಿಯು ಬಾಲಕಿಯನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂಬುದಾಗಿ ಬಾಲಕಿಯ ಸಹೋದಯ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಬಾಲಕಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ 08539-230111, ಡಿ.ಎಸ್.ಪಿ 08539-222433, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ 08539-221333, ಹಾಗೂ ಪಿ.ಎಸ್.ಐ ಮುನಿರಾಬಾದ 08539-270333, ಇಲ್ಲಿಗೆ ಮಾಹಿತಿ ನೀಡುವಂತೆ ಕೋರಲಾಗಿದ್ದು, ಮಾಹಿತಿ ನೀಡಿದವರಿಗೆ ಇಲಾಖೆ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ಮುನಿರಾಬಾದ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment