Wednesday, 28 June 2017

ಕುಷ್ಟಗಿ : ವಾಜಪೇಯಿ ನಗರ ವಸತಿ ಯೋಜನೆಗೆ ಅರ್ಜಿ ಆಹ್ವಾನ


ಕೊಪ್ಪಳ ಜೂ. 28 (ಕರ್ನಾಟಕ ವಾರ್ತೆ): ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ 2017-18  ನೇ ಸಾಲಿಗಾಗಿ ವಾಜಪೇಯಿ ನಬಗರ ವಸತಿ ಯೋಜನೆಯಡಿ ವಸತಿಗಾಗಿ ಆರ್ಥಿಕ ಸಹಾಯಧನ ಒದಗಿಸಲಾಗುತ್ತಿದ್ದು, ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ವಸತಿ ರಹಿತ ಅರ್ಹ ಸಾಮಾನ್ಯ ವರ್ಗದ ಹಾಗೂ ಅಲ್ಪಸಂಖ್ಯಾತÀ ಕುಟುಂಬಗಳಿಗೆ (ನಿವೇಶನ ಹೊಂದಿರುವವರಿಗೆ) ಒಟ್ಟು 223 ಫಲಾನುಭವಿಗಳಿಗೆ (ಅಲ್ಪಸಂಖ್ಯಾತರರಿಗೆ-37, ಇತರೆ-186) ಆರ್ಥಿಕ ಸಹಾಯಧನ ಒದಗಿಸಲಾಗುವುದು. ಇಚ್ಛೆಯುಳ್ಳವರು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಪುರಸಭೆ ಕಾರ್ಯಾಲಯಕ್ಕೆ ಜುಲೈ 15 ರೊಳಗಾಗಿ ಸಲ್ಲಿಸಬೇಕು.  ಅರ್ಜಿಯೊಂದಿಗೆ ಚಾಲ್ತಿ ವರ್ಷದ ಫಾರಂ ನಂ.3., ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆಧಾರ ಕಾರ್ಡ. ಪಡಿತರ ಚೀಟಿ. ಗುರುತಿನ ಚೀಟಿ/ಓಟರ್ ಕಾರ್ಡ, 3 ಫೋಟೊ, ಹೊಂದಿರುವ ಮನೆಯ ವರ್ಗಾವಣೆ ಪ್ರಮಾಣ ಪತ್ರ(ಮುಟೇಶನ ಕಾಪಿ) /ಹಕ್ಕು ಪತ್ರ/ಡೀಡ್, ಬ್ಯಾಂಕ ಖಾತೆ ಸಂಖ್ಯೆ ಐಎಫ್‍ಎಸ್‍ಸಿ ಕೋಡ್ ಸಹಿತ ಸಲ್ಲಿಸಬೇಕು.  ಆಸ್ತಿ ಇರುವವರ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.  ಈ ಹಿಂದೆ ಸರ್ಕಾರದಿಂದ ಯಾವುದೇ ವಸತಿ ಯೋಜನೆಯಲ್ಲಿ ಈ ಸೌಲಭ್ಯ ಪಡೆದಿರಬಾರದು.  ಕುಷ್ಟಗಿ ಪುರಸಭೆ ವ್ಯಾಪ್ತಿಯವರೇ ಆಗಿರಬೇಕು.  ಅಗತ್ಯ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪುರಸಭೆ ನೋಟಿಸ್ ಬೋರ್ಡ ಅಥವಾ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಪಿಪಿಪಿ ಯೋಜನೆಯಲ್ಲಿ ಐಟಿಐ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಜೋಡಣೆಗಾರ ಮತ್ತು ವಿದ್ಯುತ್ ಶಿಲ್ಪಿ (ಎಲೆಕ್ಟ್ರೀಕಲ್) ವೃತ್ತಿಗಳ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  
   ಸಂಸ್ಥೆಯಲ್ಲಿ ಜೋಡಣೆಗಾರ ಮತ್ತು ವಿದ್ಯುತ್ ಶಿಲ್ಪಿ (ಎಲೆಕ್ಟ್ರಿಕಲ್) ವೃತ್ತಿಗಳ ತಲಾ 05 ಸೀಟುಗಳು ಖಾಲಿ ಇದ್ದು, ತರಬೇತಾರ್ಥಿಗಳನ್ನು ಮ್ಯಾನೇಜ್‍ಮೆಂಟ್ ಕೋಟಾದಡಿಯಲ್ಲಿ ಭರ್ತಿ ಮಾಡಲಾಗುವುದು.  ಅಭ್ಯರ್ಥಿಗಳಿಗೆ ಐ.ಎಂ.ಸಿ ಸೊಸೈಟಿ ಆಯ್ಕೆ ಮಾಡಲಾಗುತ್ತಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಸೀಟುಗಳನ್ನು ನೀಡಲಾಗುವುದು.  ಐ.ಎಂ.ಸಿ ಸೊಸೈಟಿ ತೀರ್ಮಾನವೇ ಅಂತಿಮವಾಗಿರುತ್ತದೆ.  ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ. 03 ರಿಂದ ಪ್ರಾರಂಭಗೊಳ್ಳಲಿದ್ದು, ಖುದ್ದಾಗಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ಮಂಗಳೂರು, ಇಲ್ಲಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. 
   ಹೆಚ್ಚಿನ ಮಾಹಿತಿಗಾಗಿ  ತರಬೇತಿ ಅಧಿಕಾರಿಗಳು, ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ಮಂಗಳೂರು ಗ್ರಾಮ, ಇವರನ್ನು ಕಛೇರಿ ದೂರವಾಣಿ ಸಂಖ್ಯೆ 08534-259225 ಅಥವಾ ಮೊಬೈಲ್ ಸಂಖ್ಯೆ – 9740358208, 9886297774, 9741215138 ಗಳಿಗೆ  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೌಲಾನಾ ಅಜಾದ ಮಾದರಿ ಶಾಲೆ ಪ್ರಾರಂಭ : ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಮಂಜೂರಾಗಿರುವ ವಸತಿ ರಹಿತ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆಗಳನ್ನು ಕೊಪ್ಪಳ, ಗಂಗಾವತಿ ಹಾಗೂ ಯಲಬುರ್ಗಾದಲ್ಲಿ ಪ್ರಾರಂಭಿಸಲಾಗುತ್ತಿದ್ದು, 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
   ಅರ್ಜಿ ಸಲ್ಲಿಸಲು 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು 1 ಲಕ್ಷ ರೂ. ಗಳಿಗೆ ಮೀರಿರಬಾರದು.  ಪ್ರತಿ ಶಾಲೆಯಲ್ಲಿ 60 ಆಸನಗಳನ್ನು ನಿಗದಿ ಪಡಿಸಲಾಗಿದ್ದು, ಶೇ.75 ಸ್ಥಾನಗಳನ್ನು ಅಲ್ಪಸಂಖ್ಯಾತರು ಹಾಗೂ ಶೇ.25 ಇತರೆ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.  ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು, ಇತ್ಯಾದಿಗಳಿಗೆ ಶೇ. 03 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.  
   ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ದೃಢೀಕರಿಸಿದ ಪ್ರಮಾಣ ಪತ್ರ, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಅಂಕ ಪಟ್ಟಿಯ ದೃಢೀಕೃತ ಪ್ರತಿ, ವಾಸಸ್ಥಳ ಪ್ರಮಾಣ ಪತ್ರ, ಆಧಾರ ಕಾರ್ಡ ಹಾಗೂ ವಿದ್ಯಾರ್ಥಿ ಪಾಸ್ ಪೊರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರಗಳೊಂದಿಗೆ ಜುಲೈ. 25 ರೊಳಗಾಗಿ ಸಂಬಂಧ ಪಟ್ಟ ಅಲ್ಪ ಸಂಖ್ಯಾತರ ತಾಲೂಕ ಮಾಹಿತಿ ಕೇಂದ್ರ, ಅಥವಾ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳ ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ 08539-225070 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮೂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಖಲೆ ಸಲ್ಲಿಸಲು ಮಾಜಿ ಸೈನಿಕರಿಗೆ ಸೂಚನೆ


ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಡೋಗರಾ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು, ಡಿಸ್ಚಾರ್ಜ ಪುಸ್ತಕ, ಪಿ.ಪಿ.ಓ, ಬ್ಯಾಂಕ್ ಅಕೌಂಟ್ ಪಾಸ್ ಬುಕ್, ಟೆಲೆಪೊನ್ ನಂಬರ ಇತ್ಯಾದಿ ದಾಖಲೆಗಳನ್ನು ಜೂ.30 ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ಇವರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.  ಹೆಚ್ಚಿನ  ಮಾಹಿತಿಗಾಗಿ ದೂ.ಸಂ 08354-235434 ಗೆ ಸಂಪರ್ಕಿಸಬಹುದು.

ಹನಮಸಾಗರ: ವಿವಿಧ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ಹನಮಸಾಗರ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಬಾಷ್ ವತಿಯಿಂದ ಪಿಪಿಪಿ ಯೋಜನೆಯಡಿಯಲ್ಲಿ ಬ್ರಿಡ್ಜ್ ಪ್ರೋಗ್ರಾಂ ಅನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 3 ತಿಂಗಳುಗಳ ಕಾಲಾವಧಿಯ ವಿವಿಧ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
       ಗಣಕಯಂತ್ರ ತರಬೇತಿ (ಕಂಪ್ಯೂಟರ್ ಟ್ರೈನಿಂಗ್), ಸಂವಹನ ಕೌಶಲ್ಯ (ಕಮ್ಯೂನಿಕೇಶನ್ ಸ್ಕಿಲ್ಸ್), ಮಾರುಕಟ್ಟೆ ಕೌಶಲ್ಯ (ಮಾರ್ಕೆಟಿಂಗ್ ಸ್ಕಿಲ್ಸ್), ಮತ್ತು ಆಂಗ್ಲ ಭಾಷಾ ಸ್ಪೀಕಿಂಗ್ ಕೋರ್ಸ್ (ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್), ಇತ್ಯಾದಿ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತಿದ್ದು, ಆಸಕ್ತಿವುಳ್ಳ ಅಭ್ಯರ್ಥಿಗಳು ರೂ. 15000/- ಗಳ ಶುಲ್ಕವನ್ನು ತಕ್ಷಣವೇ ತುಂಬಿ ಪ್ರವೇಶವನ್ನು ಪಡೆಯಬಹುದಾಗಿದೆ ಎಂದು ಹನಮಸಾಗರ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕಿ ಇರುವ ಪ್ರಕರಣ : ಜುಲೈ. 08 ರಂದು ಕೊಪ್ಪಳ ಜಿಲ್ಲೆಯಲ್ಲಿ ರಾಜೀ ಸಂಧಾನ


ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿಯಾಗುವಂತಹ ಪ್ರಕರಣಗಳನ್ನು ಜುಲೈ. 08 ರಂದು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ತಿಳಿಸಿದ್ದಾರೆ. 
ಕ್ರಿಮಿನಲ್ ಪ್ರಕರಣಗಳು, ಇತ್ಯಾರ್ಥವಾಗುವಂತಹ ಸಿವಿಲ್, ಕೌಟುಂಬಿಕ, ಮೋಟಾರು ವಾಹನ ಅಪಘಾತ, ಭೂಸ್ವಾಧೀನ, ಅರಣ್ಯ ಇಲಾಖೆ, ಬ್ಯಾಂಕ್, ವ್ಯಾಜ್ಯ ಪೂರ್ವ ಮತ್ತು ಚೆಕ್‍ಬೌನ್ಸ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.  ಅಲ್ಲದೆ ಜುಲೈ. 03 ರಿಂದ 08ರ ವರೆಗೆ ವಿವಿಧ ವಿಮಾ ಕಂಪನಿಗಳೊಂದಿಗೆ ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. 
ಜನತಾ ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು.  ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಪಡಿಸಿಕೊಳ್ಳುವುದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳುತ್ತದೆ.  ಜನತಾ ನ್ಯಾಯಾಲದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು   ಮರುಪಾವತಿಸಲಾಗುವುದು.  ಕಡಿಮೆ ಖರ್ಚು, ಶೀಘ್ರ ವಿಲೇವಾರಿಗಾಗಿ ಲೋಕ ಅದಾಲತ್‍ನಲ್ಲಿ ಉತ್ತಮ ಅವಕಾಶ ಕಲ್ಪಿಸಲಾಗಿದ್ದು, ಅದಾಲತ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದು  ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಸತಿ ನಿಲಯಕ್ಕೆ ಬಾಡಿಗೆ ಕಟ್ಟಡ ಬೇಕಾಗಿದೆ


ಕೊಪ್ಪಳ, ಜೂ. 28 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಜಿಲ್ಲೆಯ ಯಲಬುರ್ಗಾ ಮತ್ತು ಕಾರಟಗಿ ಪಟ್ಟಣದಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳುಳ್ಳಾ ಒಂದು ಬಾಡಿಗೆ ಕಟ್ಟಡವು ಬೇಕಾಗಿದ್ದು,  ಇಚ್ಛೆಯುಳ್ಳ ಮಾಲೀಕರು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳ ಕಛೇರಿಗೆ ಅಥವಾ ದೂರವಾಣಿ ಸಂಖ್ಯೆ 08539-225070 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Tuesday, 27 June 2017

ಅಡುಗೆಯವರು, ಸಹಾಯಕರಿಗೆ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ


ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು ಮತ್ತು ಅಡುಗೆ ಸಹಾಯಕರ ನೇರ ನೇಮಕಾತಿಗಾಗಿ ಏರ್ಪಡಿಸಲಾಗಿದ್ದ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿದೆ.
     ಅಡುಗೆಯವರು-41 ಮತ್ತು ಅಡುಗೆ ಸಹಾಯಕರ-92 ಹುದ್ದೆಗಳ ನೇರ ನೇಮಕಾತಿಗಾಗಿ ಈಗಾಗಲೆ ಅರ್ಹತೆಯ ಆಧಾರದಲ್ಲಿ 1:5 ರಂತೆ ದಾಖಲಾತಿ ಪರಿಶೀಲನೆ ಮಾಡಲಾಗಿದೆ.  ದಾಖಲಾತಿ ಪರಿಶೀಲನೆಯಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿ 1:3 ರಂತೆ ಪಟ್ಟಿಯನ್ನು ತಯಾರಿಸಿದ್ದು,  www.koppal.nic.in ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.  ಈ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ವೆಬ್‍ಸೈಟ್‍ನಿಂದ ತಮ್ಮ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕು.
      ಅಡುಗೆಯವರ ಹುದ್ದೆಗೆ ಅಡುಗೆ ತಯಾರಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಜೂ. 28 ರ ಬದಲಿಗೆ ಜುಲೈ 03 ರಂದು ಬೆಳಿಗ್ಗೆ 09 ಗಂಟೆಗೆ ನಡೆಸಲಾಗುವುದು.  ಅದೇ ರೀತಿ ಅಡುಗೆ ಸಹಾಯಕರ ಹುದ್ದೆಗೆ ಅಡುಗೆ ತಯಾರಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಜೂ. 29 ರ ಬದಲಿಗೆ ಜುಲೈ 04 ರಂದು ಬೆಳಿಗ್ಗೆ 09 ಗಂಟೆಗೆ ಕೊಪ್ಪಳದ ಕವಲೂರು ನಗರ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಗಳ ಸಂಕೀರ್ಣದಲ್ಲಿ ಏರ್ಪಡಿಸಲಾಗಿದೆ. 
     ಅಡುಗೆಯವರು ಮತ್ತು ಅಡುಗೆ ಸಹಾಯಕರ ತಾತ್ಕಾಲಿಕ ಆಯ್ಕೆ ಪಟ್ಟಿ ಜು. 07 ರಂದು ಪ್ರಕಟಿಸಲಾಗುವುದು.  ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ ಜುಲೈ 22 ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವಿಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರಿಗೆ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ


ಕೊಪ್ಪಳ, ಜೂ.27 (ಕರ್ನಾಟಕ ವಾರ್ತೆ) : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಕೇಂದ್ರ ಸರ್ಕಾರದ 2017-18 ನೇ ಸಾಲಿನ ವಿಕಲಚೇತನ ವಿದ್ಯಾರ್ಥಿವೇತನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಜಿಲ್ಲೆಯ ಅರ್ಹ ವಿಕಲಚೇತನ ವಿದ್ಯಾರ್ಥಿಗಳು ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್  www.disabilityaffairs.gov.in ರಲ್ಲಿ ಭರ್ತಿ ಮಾಡಬೇಕು.  ಅರ್ಜಿ ಸಲ್ಲಿಸಲು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಸೆ. 30 ಕೊನೆಯ ದಿನಾಂಕವಾಗಿದೆ.  ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಮತ್ತು ಟಾಪ್ ಕ್ಲಾಸ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿರುತ್ತದೆ.  ನವೀಕರಣ ಅಭ್ಯರ್ಥಿಗಳು ಜುಲೈ 31 ರ ಒಳಗಾಗಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಮಹೇಶ್ ರಡ್ಡೇರ್ ಬಿಲ್ಡಿಂಗ್, ಗವಿಶ್ರೀ ನಗರ, ಕೆಇಬಿ ಗ್ರಿಡ್ ಹತ್ತಿರ, ಮಂಗಳ ಆಸ್ಪತ್ರೆ ಹಿಂಭಾಗ, ಹೊಸಪೇಟೆ ರಸ್ತೆ, ಕೊಪ್ಪಳ ಇವರನ್ನು ಅಥವಾ ದೂರವಾಣಿ ಸಂಖ್ಯೆ 08539-221460/220496 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಜೂ. 29 ರಂದು ಕೊಪ್ಪಳದಲ್ಲಿ ಸಾಂಖ್ಯಿಕ ದಿನಾಚರಣೆ ಹಾಗೂ ಹಾಸ್ಯಸಂಜೆ ಕಾರ್ಯಕ್ರಮ


ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ): ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ವತಿಯಿಂದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಜೂ. 29 ರಂದು ಮಧ್ಯಾಹ್ನ 03 ಗಂಟೆಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
     ಕಾರ್ಯಕ್ರಮದ ಅಂಗವಾಗಿ ‘ಆಡಳಿತ ಅಂಕಿ-ಅಂಶಗಳು’ ವಿಷಯ ಕುರಿತು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಪ್ರಭುರಾಜ ನಾಯಕ್ ಅವರು ವಿಶೇಷ ಉಪನ್ಯಾಸ ನೀಡುವರು.  ನಂತರ ಜಿಲ್ಲೆಯ ಹಾಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ವೈಶಂಪಾಯನ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sunday, 25 June 2017

ಉದ್ಯೋಗಖಾತ್ರಿಯಡಿ ತುಂಗಭದ್ರಾ ಹೂಳು ತೆಗೆಸಲು ಸರ್ಕಾರಕ್ಕೆ ಮನವಿ- ಬಸವರಾಜ ರಾಯರಡ್ಡಿ


ಕೊಪ್ಪಳ  ಜೂ. 25 (ಕ.ವಾ): ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ತೆಗೆಸಲು ಸಾಧ್ಯಾಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿದ್ದು, ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರಾದ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕೊಪ್ಪಳ ತಾಲೂಕು ಹಿರೇಕಾಸನಕಂಡಿ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಹೂಳು ತೆಗೆಯುತ್ತಿರುವ ಪ್ರದೇಶಕ್ಕೆ ಭಾನುವಾರದಂದು ಭೇಟಿ ನೀಡಿ, ನಂತರ ಅಲ್ಲಿನ ರೈತರೊಂದಿಗೆ ಅವರು ಮಾತನಾಡಿದರು.

     ತುಂಗಭದ್ರಾ ಜಲಾಶಯದಲ್ಲಿ ಸುಮಾರು 30 ಟಿಎಂಸಿ ಯಷ್ಟು ಹೂಳು ತುಂಬಿರುವುದಾಗಿ ತಜ್ಞರು ವರದಿ ನೀಡಿದ್ದು, ಹೂಳು ತೆಗೆಯುವುದು ಅಸಾಧ್ಯ ಎಂದು ವೈಜ್ಞಾನಿಕ ವರದಿಯಲ್ಲಿ ತಿಳಿಸಲಾಗಿದೆ.  ಸರ್ಕಾರವೂ ಕೂಡ ಇಲ್ಲಿನ ಹೂಳನ್ನು ತೆಗೆಸಲು  ಜಾಗತಿಕ ಟೆಂಡರ್ ಕರೆಯಿತು.  ಇದರಿಂದ ಯಾವುದೇ ಯಶಸ್ಸು ದೊರೆಯಲಿಲ್ಲ.  ನಂತರ ಹೂಳು ತೆಗೆಸಲು ಸಾಧ್ಯವಿರುವ ಎಲ್ಲ ಕ್ರಮಗಳ ಬಗ್ಗೆ ಪರಿಶೀಲಿಸಿ, ನೀರಾವರಿ ತಜ್ಞರು, ಉನ್ನತ ಅಧಿಕಾರಿಗಳು, ಹಾಗೂ ರಾಜ್ಯ ಮಟ್ಟದ ಉನ್ನತ ಮಟ್ಟದಲ್ಲಿ ಸಮಾಲೋಚಿಸಿದ ನಂತರವೇ, ಹೂಳು ತೆಗೆಸುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು.  ಅಲ್ಲದೆ ಇದಕ್ಕೆ ಪರ್ಯಾಯವಾಗಿ ಸಮಾನಾಂತರ ಜಲಾಶಯ ನಿರ್ಮಿಸುವ ಕುರಿತಂತೆ ಸರ್ಕಾರ ಈಗಾಗಲೆ ಅಗತ್ಯ ಕ್ರಮ ಕೈಗೊಂಡಿದೆ.  ಆದಾಗ್ಯೂ, ಈ ಭಾಗದ ರೈತರು, ಸಾಮಾಜಿಕ ಚಿಂತಕರು, ಸಮಾಜ ಸೇವಕರು ಸ್ವಯಂ ಪ್ರೇರಿತರಾಗಿ ಹೂಳು ತೆಗೆಯಲು ಮುಂದಾಗಿದ್ದಕ್ಕೆ ಅವರೆಲ್ಲರನ್ನು ಅಭಿನಂದಿಸುತ್ತೇನೆ.  ಇಂತಹ ಉತ್ತಮ ಪ್ರಯತ್ನಕ್ಕೆ ತಾವು ಎಂದೂ ಬೆಂಬಲವನ್ನು ನೀಡುತ್ತೇನೆ.  ಹೂಳು ತೆಗೆಯುವ ಸಲುವಾಗಿ ತಾವು ಹಾಗೂ ತಮ್ಮ ಗೆಳೆಯರ ಬಳಗದ ವತಿಯಿಂದ 05 ಲಕ್ಷ ರೂ. ಗಳ ದೇಣಿಗೆಯನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಘೋಷಿಸಿದರು.  ಕೆರೆ ಹೂಳೆತ್ತುವುದು, ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ.  ತೀವ್ರ ಬರ ಪರಿಸ್ಥಿತಿಯಲ್ಲಿ ಇಂತಹ ಯೋಜನೆಗಳು ಕೂಲಿಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.  ತುಂಗಭದ್ರಾ ಜಲಾಶಯದ ಹೂಳನ್ನು ಉದ್ಯೋಗಖಾತ್ರಿಯಡಿ ತೆಗೆಸಲು ನಿಯಮಗಳಲ್ಲಿ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ಹೇಳಬೇಕಾಗುತ್ತದೆ.  ಈ ದಿಸೆಯಲ್ಲಿ ಯೋಜನೆಯನ್ನು ಬಳಸುವ ಕುರಿತು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರಾದ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು.  ಹೂಳು ತೆಗೆಸಲು ರೈತರು ಸಲ್ಲಿಸಿರುವ ಬೇಡಿಕೆ ಬಗ್ಗೆ ಅವರ ಗಮನಕ್ಕೆ ತರಲಾಗುವುದು.  ಅಲ್ಲದೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಸಚಿವ ಎಚ್.ಕೆ. ಪಾಟೀಲರನ್ನು ಈ ಪ್ರದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಗುವುದು.  ರೈತರು, ಸಾಮಾಜಿಕ ಚಿಂತಕರು, ಸಮಾಜ ಸೇವಕರು ಒಂದಾಗಿ ಸ್ವಯಂ ಪ್ರೇರಿತವಾಗಿ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಅವರನ್ನು ಅಭಿನಂದಿಸುವುದಾಗಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ, ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಗಣ್ಯರಾದ ವಿರುಪಾಕ್ಷಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು, ಸಮಾಜ ಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Saturday, 24 June 2017

ಮುನಿರಾಬಾದ್ : ನುಗ್ಗೆ ಸಸಿ ಮತ್ತು ಈರುಳ್ಳಿ ಬಿತ್ತನೆ ಬೀಜ ಲಭ್ಯ


ಕೊಪ್ಪಳ ಜೂ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಮುನಿರಾಬಾದಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ‘ಭಾಗ್ಯ’ ತಳಿಯ ನುಗ್ಗೆ ಸಸಿಗಳು, ಪ್ರತಿ ಸಸಿಗೆ 10 ರೂ. ನಂತೆ ಹಾಗೂ ‘ಅರ್ಕ ಕಲ್ಯಾಣ’ ತಳಿಯ ಈರುಳ್ಳಿ ಬಿತ್ತನೆ ಬೀಜ , ಪ್ರತಿ ಕೆ.ಜಿ. ಗೆ ರೂ. 1000 ರಂತೆ ಲಭ್ಯವಿರುತ್ತವೆ.
     ಆಸಕ್ತ ರೈತರು ಮುನಿರಾಬಾದಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನುಗ್ಗೆ ಸಸಿಗಳು ಮತ್ತು ಈರುಳ್ಳಿ ಬಿತ್ತನೆ ಬೀಜವನ್ನು ಖರೀದಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗೆ 9741641881 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್


ಕೊಪ್ಪಳ ಜೂ. 24 (ಕರ್ನಾಟಕ ವಾರ್ತೆ): ಸಮನ್ವಯ ಶಿಕ್ಷಣ ಚಟುವಟಿಕೆ ಅನುಷ್ಠಾನಕ್ಕಾಗಿ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಜೂ. 29 ರಂದು ಬೆ. 10-45 ಗಂಟೆಗೆ ಕೊಪ್ಪಳದ ಸರ್ವಶಿಕ್ಷಣ ಅಭಿಯಾನ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ.
     ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆಗಳಿಗಾಗಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ವಿಶೇಷ ಬಿ.ಇಡಿ/ ಡಿ.ಇಡಿ ಪದವಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ನೇಮಿಸಲಾಗುವುದು.  ಇದರಲ್ಲಿ ಎಂ.ಆರ್ (ಬುದ್ದಿಮಾಂದ್ಯತೆ) ವಿಶೇಷ ಬಿಇಡಿ ಆದವರಿಗೆ ಪ್ರಥಮ, ದೃಷ್ಟಿದೋಷದಲ್ಲಿ ವಿಶೇಷ ಬಿಇಡಿ ಆದವರಿಗೆ ದ್ವಿತೀಯ ಹಾಗೂ ಶ್ರವಣದೋಷದಲ್ಲಿ ಬಿಇಡಿ ಆದವರಿಗೆ ತೃತೀಯ ಮತ್ತು ಕಲಿಕಾ ಹಾಗೂ ಇತರೆ ಯಾವುದಾದರೂ ನ್ಯೂನತೆಯಲ್ಲಿ ವಿಶೇಷ ಬಿಇಡಿ ಆದವರಿಗೆ ನಂತರದ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.  ಇದಕ್ಕಾಗಿ ಜೂ. 29 ರಂದು ಬೆ. 10-45 ಗಂಟೆಗೆ ಕೊಪ್ಪಳದ ಸರ್ವಶಿಕ್ಷಣ ಅಭಿಯಾನ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಕೌನ್ಸಿಲಿಂಗ್ ಏರ್ಪಡಿಸಲಾಗಿದ್ದು, ವಿಶೇಷ ಬಿಇಡಿ ಪದವಿ ಪಡೆದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ಸೇವಾ ಪ್ರಮಾಣ ಪತ್ರ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಕೌನ್ಸಿಲಿಂಗ್‍ಗೆ ಹಾಜರಾಗಬೇಕು.  ಹೆಚ್ಚಿನ ಮಾಹಿತಿಗೆ 9480488001 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕೌಶಲ್ಯಾಭಿವೃದ್ಧಿಯಿಂದ ಉದ್ಯೋಗಾವಕಾಶ ಹೆಚ್ಚಳ- ಬಸವರಾಜ ರಾಯರಡ್ಡಿ

 ಕೊಪ್ಪಳ, ಜೂ.24 (ಕರ್ನಾಟಕ ವಾರ್ತೆ) : ಶಿಕ್ಷಣವನ್ನು ಕೇವಲ ಸರ್ಕಾರಿ ಉದ್ಯೋಗದ ದೃಷ್ಟಿಕೋನದಿಂದ ನೋಡದೆ, ಸ್ವಾಭಿಮಾನದ ಬದುಕು ಕಟ್ಟಿಕೊಡುವ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ.  ಕೌಶಲ್ಯಾಭಿವೃದ್ಧಿಯಿಂದ ಉದ್ಯೋಗದ ಅವಕಾಶ ಹೆಚ್ಚಾಗಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
 
     ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ‘ಸಂಜೀವಿನಿ’ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ದೀನ್‍ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಹಾಗೂ ರಾಜೀವ್ ಗಾಂಧಿ ಜೈತನ್ಯ ಯೋಜನೆಯಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಒಗ್ಗೂಡಿಸುವಿಕೆ, ಆಯ್ಕೆ ಮತ್ತು ಉದ್ಯೋಗ ಮೇಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 
      ಯುವಜನರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಅವರಿಗೆ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನಮ್ಮ ಸರ್ಕಾರ ನೀಡುತ್ತಿದೆ.  ಇದಕ್ಕೆಂದೇ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಇಲಾಖೆಯನ್ನು ಪ್ರಾರಂಭಿಸಲಾಗಿದೆ.  ಯುವಜನರು, ಶಿಕ್ಷಣವನ್ನು ಕೇವಲ ಸರ್ಕಾರಿ ಉದ್ಯೋಗ ಪಡೆಯುವ ದೃಷ್ಟಿಕೋನದಿಂದ ನೋಡಬಾರದು.  ಪ್ರತಿಯೊಬ್ಬರು ಸರಕಾರಿ ನೌಕರಿಯನ್ನು ಅವಲಂಬಿಸದೇ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಖಾಸಗಿ ರಂಗದಲ್ಲಿ ಉದ್ಯೋಗವನ್ನು ಪಡೆದುಕೊಂಡು ಹಾಗೂ ಸ್ವ ಉದ್ಯೋಗಗಳನ್ನು ಮಾಡುವುದರ ಮೂಲಕ ಸ್ವಾವಲಂಬಿಗಳಾಗಬೇಕು.  ದೇಶದ ಜನಸಂಖ್ಯೆ 130 ಕೋಟಿ ತಲುಪಿದ್ದರೆ, ಕರ್ನಾಟಕದ ಜನಸಂಖ್ಯೆ 6.5 ಕೋಟಿ ದಾಟಿದೆ.  ಈ ಜನಸಂಖ್ಯೆಯಲ್ಲಿ ಯುವ ಜನರ ಸಂಖ್ಯೆ ಹೆಚ್ಚಾಗಿದ್ದು, ಯುವಶಕ್ತಿಯನ್ನು ದೇಶಕ್ಕೆ ವಿನಿಯೋಗಿಸುವ ಅವಶ್ಯಕತೆ ಇದೆ.  ಈ ನಿಟ್ಟಿನಲ್ಲಿ ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಡುವುದು ಅಗತ್ಯವಾಗಿದೆ.  ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಿರೀಕ್ಷೆಯಂತೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.  ಔದ್ಯೋಗಿಕ ನೀತಿ ಬದಲಾಗಬೇಕಿದೆ.  ಜಾಗತೀಕರಣದ ನಂತರ ವಿದೇಶ ಬಂಡವಾಳ ಹರಿದುಬಂದರೂ, ಉದ್ಯೋಗ ಸೃಷ್ಟಿ ನಿರೀಕ್ಷೆಯಷ್ಟು ಆಗಿಲ್ಲ.  ಉದ್ಯೋಗ ಸೃಷ್ಟಿ ನಿರೀಕ್ಷೆಯ ಹಂತ ತಲುಪದಿರಲು ದ್ವಂದ್ವ ರಾಜಕೀಯ ನೀತಿಗಳು ಕಾರಣವಾಗಿದೆ. ಚೀನಾ ದೇಶದಲ್ಲಿ ಆದಂತಹ ಉದ್ಯೋಗ ಸೃಷ್ಟಿಯ ಕ್ರಾಂತಿ ನಮ್ಮ ದೇಶದಲ್ಲೂ ಆಗಬೇಕಿದೆ.  ಕರ್ನಾಟಕದಲ್ಲಿ ಇದೀಗ ನಮ್ಮ ಸರ್ಕಾರ ಯುವಶಕ್ತಿಯ ಸದ್ಬಳಕೆ ಹಾಗೂ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ.  ಪ್ರತಿ ಜಿಲ್ಲೆಯಲ್ಲಿ ಕೌಶಲ್ಯಾಬಿವೃದ್ಧಿ ಕೇಂದ್ರ ಪ್ರಾರಂಭಿಸಬೇಕಿದೆ.  ಕೊಪ್ಪಳ ಜಿಲ್ಲೆಯಲ್ಲಿ ತಳಕಲ್‍ನಲ್ಲಿ ಪ್ರಾರಂಭಿಸಲಾಗುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಹೊಂದಿಕೊಂಡಂತೆ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸಲಾಗುವುದು.  ಇದಕ್ಕೆಂದೇ 85 ಕೋಟಿ ರೂ. ಅನುದಾನವನ್ನು ಪ್ರತ್ಯೇಕವಾಗಿ ಒದಗಿಸಲಾಗುತ್ತಿದೆ.  ಗ್ರಾಮೀಣ ಪ್ರದೇಶದಲ್ಲಿ ಪರಂಪರಾಗತವಾಗಿ ಬಂದ ಕಸುಬುಗಳು ಮಾಯವಾಗುತ್ತಿದ್ದು, ಅದರ ಕಡೆ ನಮ್ಮ ಯುವಕರು ಆಸಕ್ತಿಯನ್ನು ತೋರಿಸುತ್ತಿಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ.  ಗ್ರಾಮೀಣ ಪ್ರದೇಶದ ಕಸಬುಗಳನ್ನು ಉತ್ತೇಜಿಸಿ ಅವುಗಳು ಪುನಃ ಜೀವ ತುಂಬಿಕೊಳ್ಳಲು ಯುವ ಪೀಳಿಗೆ ಗಮನಹರಿಸಬೇಕಾಗಿರುವುದು ಇಂದಿನ ಅವಶ್ಯಕತೆಗಳಲ್ಲೊಂದಾಗಿದೆ. ಜಾಗತೀಕರಣ ಹಾಗೂ ಆಧುನಿಕ ಜೀವನಶೈಲಿಯಿಂದಾಗಿ ಹಳ್ಳಿಗಳಲ್ಲಿನ ಗುಡಿ ಕೈಗಾರಿಕೆಗಳು, ಕರ-ಕುಶಲ ಕೌಶಲ್ಯಗಳು ನೇಪಥ್ಯಕ್ಕೆ ಸರಿದಿದೆ.  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ-ಕುಶಲ ಕಲೆಗಳು, ಗುಡಿಕೈಗಾರಿಕೆಗಳ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ ಇದೆ.  ಆದರೆ ನಮ್ಮವರು ಮಾರ್ಕೆಟಿಂಗ್ ಕಲೆಗಾರಿಕೆ, ವ್ಯಾಪಾರಿ ತಂತ್ರಗಳನ್ನು ಕಲಿಯಬೇಕಿದೆ.  ರಾಜ್ಯದಲ್ಲಿ ಉದ್ಯೋಗಾವಕಾಶ ನೀಡುವ 500 ಕ್ಕೂ ಹೆಚ್ಚಿನ ಕೌಶಲ್ಯ ಕಲೆಗಳ ತರಬೇತಿ ಕಲಿಯಲು ಅವಕಾಶ ಕಲ್ಪಿಸಲಾಗುತ್ತಿದೆ.  ಗುಡಿ ಕೈಗಾರಿಕೆ, ಕರ-ಕುಶಲ ಕಲೆಗಳನ್ನು ಮಾಡಬಯಸುವವರಿಗೆ ಸರ್ಕಾರ ಸಹಕಾರ ಹಾಗೂ ಉತ್ತೇಜನ ನೀಡುತ್ತಿದ್ದು, ಸಾರ್ವಜನಿಕರು, ಯುವಜನರು, ಕೌಶಲ್ಯಾಬಿವೃದ್ಧಿ ತರಬೇತಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕರೆ ನೀಡಿದರು.
    ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಶಿಕ್ಷಣದ ಗುಣಮಟ್ಟ ನಮ್ಮ ರಾಜ್ಯದಲ್ಲಿ ಪ್ರಾದೇಶಿಕವಾಗಿ ಬೇರೆ ಬೇರೆ ಇದೆ.  371(ಜೆ) ಕಲಂ ತಿದ್ದುಪಡಿಯ ಜಾರಿಯಿಂದಾಗಿ ಹೈ-ಕ ಪ್ರದೇಶದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಿಂದ ಮೀಸಲಾತಿ ಕಲ್ಪಿಸಲಾಗಿದೆ.  ಹೀಗಾಗಿ ಈ ಭಾಗದ ಅಭ್ಯರ್ಥಿಗಳಿಗೆ ಹೆಚ್ಚು, ಹೆಚ್ಚು, ಉದ್ಯೋಗಾವಕಾಶ ಲಭಿಸುತ್ತಿದೆ.  ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಹಲವು ಜನಪರ ಯೋಜನೆಗಳ ಜಾರಿ ಮೂಲಕ ಮಾಡುತ್ತಿದೆ.  ಕೌಶಲ್ಯಾಭಿವೃದ್ಧಿ ತರಬೇತಿಯಿಂದ ನಿರುದ್ಯೋಗಿಗಳಲ್ಲಿ ದುಡಿಯುವ ವಿಶ್ವಾಸ ಬರಲಿದೆ.  ತೀವ್ರ ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಮ್ಮ ಸರ್ಕಾರ 50000 ರೂ. ವರೆಗಿನ ರೈತರ ಸಾಲ ಮನ್ನ ಮಾಡಿದ್ದು, ಇದಕ್ಕಾಗಿ 8100 ಕೋಟಿ ರೂ. ಅನುದಾನವನ್ನು ಒದಗಿಸಿದೆ.  ಬಡವರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ ಎಂದರು.
     ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಮಾತನಾಡಿ, ಶಿಕ್ಷಣ ಸ್ವಾಭಿಮಾನದ ಪ್ರತೀಕವಾಗಿದ್ದು, ಯುವಕರು ಶಿಕ್ಷಣ ಎಂದರೆ ಸರ್ಕಾರಿ ಉದ್ಯೋಗಕ್ಕಾಗಿ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ.  ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೌಶಲ್ಯಾಬಿವೃದ್ಧಿ ತರಬೇತಿ ಕಾರ್ಯಕ್ರಮ ಉತ್ತಮವಾಗಿದೆ.  ತರಬೇತಿ ನೀಡುವ ಮೂಲಕ ಬದು ಕಟ್ಟಿಕೊರ್ಳಳುವ ಕೆಲಸ ಆಗುತ್ತಿರುವುದು ಶ್ಲಾಘನೀಯವಾಗಿದೆ.  ಕುಷ್ಟಗಿ ತಾಲೂಕಿನಲ್ಲಿ ಬರುವ ದಿನಗಳಲ್ಲಿ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದರು.
     ಕೌಶಲ್ಯಭಿವೃದ್ಧಿ ಮತ್ತು ಉದ್ಯೋಗಮೇಳ ಕಾರ್ಯಕ್ರಮದಲ್ಲಿ ಜಿಲ್ಲೆಯ 780 ಅಭ್ಯರ್ಥಿಗಳು ಯೋಜನಾ ಅನುಷ್ಠಾನ ಸಂಸ್ಥೆಗಳಾದ ರೂರಲ್ ಶೋರ್ಸ್ ಸ್ಕಿಲ್ ಅಕ್ಯಾಡೆಮಿ ಪ್ರೈ.ಲಿ., ಬೆಂಗಳೂರು, ಸಾಹಿತಿ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು, ಶ್ರೀ ಅಮರೇಶ್ವರ ಗ್ರಾಮೀಣಾಭಿವೃದ್ದಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ (ರಿ), ಕೊಪ್ಪಳ, ಹಾಗೂ ವಿನೂತನ ಶಿಕ್ಷಣ ಸೇವಾ ಸಂಸ್ಥೆ (ರಿ), ಅಳವಂಡಿ, ಕೊಪ್ಪಳ ರವರಲ್ಲಿ ವೃತ್ತಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗಕ್ಕಾಗಿ ನೊಂದಣಿ ಮಾಡಿಕೊಂಡರು. 
     ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಮಾರಂಭದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಜಿ.ಪಂ. ಹಂಗಾಮಿ ಅಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ಭೀಮಪ್ಪ ಅಗಸಿಮುಂದಿನ, ರಾಮಣ್ಣ ಚೌಡ್ಕಿ, ಹನುಮಂತಪ್ಪಗೌಡ ಪಾಟೀಲ, ಗವಿಸಿದ್ದಪ್ಪ ಕರಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರ ಉಪಸ್ಥಿತರಿದ್ದರು.  ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪರಸಪ್ಪ ಭಜಂತ್ರಿ ವಂದಿಸಿದರು.  ಸಿ.ವಿ. ಜಡಿಯವರ್ ನಿರೂಪಿಸಿದರು.

ಅಗತ್ಯಕ್ಕನುಗುಣವಾಗಿ ಗೋಶಾಲೆ, ಟ್ಯಾಂಕರ್ ನೀರು ಮುಂದುವರಿಕೆ- ಬಸವರಾಜ ರಾಯರಡ್ಡಿ

ಕೊಪ್ಪಳ, ಜೂ.24 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಹತ್ತು ದಿನಗಳ ವಿಳಂಬವಾಗಿರುವುದರಿಂದ, ಅಗತ್ಯಕ್ಕೆ ಅನುಗುಣವಾಗಿ ಸದ್ಯ ಚಾಲನೆಯಲ್ಲಿರುವ ಗೋಶಾಲೆಗಳು ಹಾಗೂ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಯನ್ನು ಜುಲೈ 15 ರವರೆಗೂ ಮುಂದುವರೆಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಹೆಚ್‍ಕೆಆರ್‍ಡಿಬಿ ಯೋಜನೆ, ಕುಡಿಯುವ ನೀರು ಹಾಗೂ ಕೃಷಿ ಇಲಾಖೆಗೆ ಸಂಬಂಧಿತ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಮಳೆ ಹತ್ತು ದಿನಗಳ ಕಾಲ ತಡವಾಗಿ ಪ್ರಾರಂಭವಾಗಿದೆ.  ಜಿಲ್ಲೆಯಾದ್ಯಂತ ಎಲ್ಲೆಡೆಯೂ ನಿರೀಕ್ಷೆಯಂತೆ ಉತ್ತಮ ಮಳೆಯಾಗಿಲ್ಲ.  ಕೆಲವೆಡೆ ಹೆಚ್ಚು ಮಳೆಯಾದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಮಳೆಯ ಕೊರತೆಯಾಗಿದೆ.  ಹೀಗಾಗಿ ತಕ್ಷಣವೇ ಗೋಶಾಲೆಗಳನ್ನು ನಿಲ್ಲಿಸುವುದು ಸಮಂಜಸವಲ್ಲ.  ಮಳೆಗಾಲ ಇದೀಗ ತಾನೆ ಆರಂಭವಾಗಿರುವುದರಿಂದ, ಸದ್ಯ ಜಾನುವಾರುಗಳಿಗೆ ಇನ್ನೂ ಮೇವು ಲಭ್ಯತೆಯಾಗುವುದು ವಿಳಂಬವಾಗುವುದರಿಂದ, ಜಿಲ್ಲೆಯಲ್ಲಿ ಸದ್ಯ ಚಾಲನೆಯಲ್ಲಿರುವ ಗೋಶಾಲೆಗಳನ್ನು ಜುಲೈ 15 ರವರೆಗೂ ಮುಂದುವರೆಸಬೇಕು.   ನಂತರದ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಗೋಶಾಲೆ ಮುಂದುವರಿಕೆ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.  ಅದೇ ರೀತಿ ಕಳೆದೆರಡು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ತೀವ್ರ ಕುಸಿದ ಪರಿಣಾಮ, ಕೊಳವೆ ಬಾವಿಗಳಲ್ಲಿ ನೀರು ಇಲ್ಲದಂತಾಗಿದೆ.  ನೀರಿನ ಮೂಲ ಲಭ್ಯವಿಲ್ಲದಿರುವ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು.  ಪರಿಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ, ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯವನ್ನು ಜು. 15 ರವರೆಗೂ ಮುಂದುವರೆಸಬೇಕು.  ಮಳೆಯ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆಗೆ ಅನುಗುಣವಾಗಿ ನಂತರದ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೈ-ಕ ಅಭಿವೃದ್ಧಿ ಯೋಜನೆಯ ಕಾಮಗಾರಿ ಪ್ರಾರಂಭಿಸಿ :
*************** ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಳೆದ 2013-14 ನೇ ವರ್ಷದಿಂದ ಈವರೆಗೆ ಅನುದಾನ ಬಿಡುಗಡೆ, ಕಾಮಗಾರಿಗಳ ಸ್ಥಿತಿ-ಗತಿ ಕುರಿತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಪ್ರಗತಿ ಪರಿಶೀಲನೆ ನಡೆಸಿದರು.  2013-14 ರಲ್ಲಿ ಮೈಕ್ರೋ ಯೋಜನೆಯಡಿ 13. 50 ಕೋಟಿ ರೂ. ಬಿಡುಗಡೆಯಾಗಿ ಎಲ್ಲ 100 ಕಾಮಗಾರಿಗಳು ಪೂರ್ಣಗೊಂಡಿವೆ.  2014-15 ರಲ್ಲಿ 60. 91 ಕೋಟಿ ರೂ. ಅನುದಾನ ಜಿಲ್ಲೆಗೆ ಬಿಡುಗಡೆಯಾಗಿದ್ದು, 261 ರಲ್ಲಿ 246 ಕಾಮಗಾರಿಗಳು ಪೂರ್ಣಗೊಂಡಿವೆ.  2015-16 ರಲ್ಲಿ 55 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 328 ರಲ್ಲಿ 220 ಕಾಮಗಾರಿಗಳು ಪೂರ್ಣಗೊಂಡಿವೆ.  2016-17 ರಲ್ಲಿ 57 ಕೋಟಿ ರೂ. ಬಿಡುಗಡೆಯಾಗಿದ್ದು, 170 ಕಾಮಗಾರಿಗಳು ಅನುಮೋದನೆಗೊಂಡಿವೆ.  ಈ ಸಾಲಿನಲ್ಲಿ ಇನ್ನೂ 42 ಕಾಮಗಾರಿಗಳು ಪ್ರಾರಂಭವಾಗಿಲ್ಲ.  ಹೀಗಾಗಿ ತಾಲೂಕುವಾರು ಕಾಮಗಾರಿಗಳ ಸಂಪೂರ್ಣ ವಿವರ, ಏಜೆನ್ಸಿ ವಿವರ, ಕಾಮಗಾರಿ ಪ್ರಾರಂಭಕ್ಕೆ ಇರುವ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೂಡಲೆ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಾಮರ್ಶೆ ನಡೆಸಬೇಕು.  2017-18 ನೇ ಸಾಲಿನಲ್ಲಿ ಜಿಲ್ಲೆಗೆ 87 ಕೋಟಿ ರೂ. ಗಳ ಅನುದಾನ ನಿಗದಿಪಡಿಸಿದೆ.  ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಆಧಾರದಲ್ಲಿ ಅನುದಾನ ನಿಗದಿಪಡಿಸಿದ್ದು, ಈ ಪೈಕಿ ಗಂಗಾವತಿ ತಾಲೂಕು- 6.20 ಕೋಟಿ ರೂ., ಕೊಪ್ಪಳ-16. 84 ಕೋಟಿ, ಕುಷ್ಟಗಿ-31. 91 ಕೋಟಿ ಹಾಗೂ ಯಲಬುರ್ಗಾ ತಾಲೂಕಿಗೆ 32. 80 ಕೋಟಿ ರೂ. ನಿಗದಿಪಡಿಸಲಾಗಿದೆ.  ಈಗಾಗಲೆ ಕಾಮಗಾರಿ ಕೈಗೊಳ್ಳಲು ಏಜೆನ್ಸಿಗಳನ್ನು ಸಹ ನಿಗದಿಪಡಿಸಲಾಗಿದೆ.  ಲೋಕೋಪಯೋಗಿ, ನಿರ್ಮಿತಿ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಸೇರಿದಂತೆ ಸಂಬಂಧಪಟ್ಟ ಏಜೆನ್ಸಿಗಳು, ತಮಗೆ ಹಂಚಿಕೆಯಾಗಿರುವ ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸಬೇಕು.  ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರತ್ಯೇಕ  ನೀರು ಪೂರೈಕೆ ಯೋಜನೆ :
************** ಕೊಪ್ಪಳ ಜಿಲ್ಲಾಡಳಿತ ಭವನ, ಜಿಲ್ಲಾ ಆಸ್ಪತ್ರೆ ಹಾಗೂ ಕೊಪ್ಪಳದ ಸರ್ಕಾರಿ ಮೆಡಿಕಲ್ ಕಾಲೇಜಿಗೆ ನೀರಿನ ತೊಂದರೆ ಕಂಡುಬಂದಿದ್ದು, ಈ ಮೂರೂ ಕಟ್ಟಡಗಳಿಗಾಗಿ ತುಂಗಭದ್ರಾ ಯೋಜನೆಯಿಂದ ಪ್ರತ್ಯೇಕ ನೀರು ಪೂರೈಕೆ ಯೋಜನೆ ಸಿದ್ಧಪಡಿಸಬೇಕು.  ಇದಕ್ಕಾಗಿ 10 ಕೋಟಿ ರೂ. ಅನುದಾನವನ್ನು ಕಂದಾಯ ಇಲಾಖೆ ಹಾಗೂ ಹೆಚ್‍ಕೆಆರ್‍ಡಿಬಿ ಯೋಜನೆಯಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.  ಯೋಜನಾ ವರದಿ ಕೂಡಲೆ ಸಿದ್ಧಪಡಿಸಿ ಸಲ್ಲಿಸುವಂತೆ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಮಂತ್ರಿಗಳೂ ಸೂಚನೆ ನೀಡಿದರು.
ಮುಂಗಾರು ಬೆಳೆ ವಿಮೆ ವಿವರ ಸಲ್ಲಿಸಿ :
************** ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 43395 ರೈತರು ಬೆಳೆ ವಿಮೆಗಾಗಿ ನೋಂದಣಿ ಮಾಡಿಸಿದ್ದು, ಜಿಲ್ಲೆಯಲ್ಲಿ ಮಳೆಯ ವೈಫಲ್ಯದಿಂದಾಗಿ ಮುಂಗಾರು ಬೆಳೆ ಬಹುತೇಕ ನಷ್ಟವಾಗಿತ್ತು.  ಜಿಲ್ಲೆಯಲ್ಲಿ ಈವರೆಗೆ 15630 ರೈತರಿಗೆ 35. 78 ಕೋಟಿ ರೂ. ಬೆಳೆ ವಿಮೆ ಪಾವತಿಯಾಗಿದೆ.  ಇನ್ನೂ ಹಂತ ಹಂತವಾಗಿ ವಿಮಾ ಕಂಪನಿಯು ರೈತರಿಗೆ ಬೆಳೆ ವಿಮೆ ಪಾವತಿಸಲಿದೆ ಎಂದು ಜಂಟಿಕೃಷಿ ನಿರ್ದೇಶಕ ವಿರೇಶ್ ಹುನಗುಂದ ಅವರು ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ನೋಂದಣಿ ಮಾಡಿಸಿದ ರೈತರ ಪೈಕಿ, ಎಷ್ಟು ರೈತರು ಬೆಳೆ ವಿಮೆ ಪರಿಹಾರ ಪಡೆಯಲು ಅರ್ಹರಿದ್ದಾರೆ.  ಈ ಕುರಿತಂತೆ ಸಮಗ್ರ ವಿವರವನ್ನು ಸಂಗ್ರಹಿಸಬೇಕು.  ವಿಮಾ ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡು, ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.  ಅದೇ ರೀತಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿಗೆ ಯಾವುದೇ ರೀತಿಯ ಬಿತ್ತನೆ ಬೀಜ ಅಥವಾ ರಸಗೊಬ್ಬರದ ಕೊರತೆಯಾಗದಂತೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಹಂಗಾಮಿ ಅಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Thursday, 22 June 2017

ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ


ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರ ಹುದ್ದೆಗೆ ನೇರ ನೇಮಕಾತಿ ಮಾಡುತ್ತಿದ್ದು ಅರ್ಜಿ ಸಲ್ಲಿಸಿದ ಅಬ್ಯರ್ಥಿಗಳ ದಾಖಲಾತಿ ಪರಿಶೀಲನೆ ಗುರುವಾರದಂದು ಕೊಪ್ಪಳದ ಬಾಲಕಿಯರ ವಸತಿ ನಿಲಯದಲ್ಲಿ ನೆರವೇರಿತು.
     ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರ ಹುದ್ದೆಗೆ ನೇರ ನೇಮಕಾತಿ ಮಾಡಲಾಗುತ್ತಿದ್ದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಖಾಲಿ ಇರುವ ಹುದ್ದೆಗೆ ಅನುಗುಣವಾಗಿ 1:5 ರಂತೆ ದಾಖಲಾತಿ ಪರಿಶೀಲನೆಗಾಗಿ ಒಟ್ಟು 205 ಅಭ್ಯರ್ಥಿಗಳಿಗೆ ಕರೆಯಲಾಗಿತ್ತು. ಗುರುವಾರದಂದು ಕೊಪ್ಪಳದ ಕವಲೂರ ನಗರದ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ದಾಖಲಾತಿ ಪರಿಶಿಲನೆ ಕಾರ್ಯ ಕೈಗೊಂಡಿದ್ದು ದಾಖಲಾತಿ ಪರಿಶಿಲನೆಗೆ ಅರ್ಹರಾದ 205 ಅಭ್ಯರ್ಥಿಗಳ ಪೈಕಿ 110 ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ದಾಖಲಾತಿ ಪರಿಶೀಲನಾ ಕೇಂದ್ರಕ್ಕೆ ಭೇಟಿ ನೀಡಿ, ದಾಖಲಾತಿ ಪರಿಶೀಲನೆ ಕಾರ್ಯ ವೀಕ್ಷಿಸಿದರು.
      ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಜೂ. 23 ರಂದು ಕೊಪ್ಪಳದ ಕವಲೂರ ನಗರದ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದ್ದು ಖಾಲಿ ಇರುವ 92 ಹುದ್ದೆಗಳಿಗೆ 1:5 ರಂತೆ ಒಟ್ಟು 410 ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ.  ಅರ್ಹ ಅಭ್ಯರ್ಥಿಗಳು  www.koppal.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್‍ನಲ್ಲಿ ಸೂಚನಾ ಪತ್ರವನ್ನು ಡೌನಲೋಡ ಮಾಡಿಕೊಂಡು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 25 ರಂದು ಕೆಎಎಸ್/ಐಎಎಸ್ ತರಬೇತಿಗೆ ಪ್ರವೇಶ ಪರೀಕ್ಷೆ


ಕೊಪ್ಪಳ, ಜೂ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸ್ಪರ್ದಾತ್ಮಕ ಪರೀಕ್ಷೆಗಳಾದ ಕೆಎಎಸ್/ಐಎಎಸ್ ಪೂರ್ವಭಾವಿ ತರಬೇತಿ ಆಯ್ಕೆಗೆ ಜೂನ್. 25 ರಂದು ನಡೆಯಲಿದ್ದು, ಕೆಎಎಸ್ ತರಬೇತಿ ಪರೀಕ್ಷೆಗೆ 3086, ಐಎಎಸ್ ಗೆ 1708 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಲಿದ್ದಾರೆ.  ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಜೂನ್. 25 ರಂದು ಸ್ಪರ್ದಾತ್ಮಕ ಪರೀಕ್ಷೆ ಕೆಎಎಸ್ ಪೂರ್ವಭಾವಿ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರವೇಶ ಪರೀಕ್ಷೆ, ಕೊಪ್ಪಳದ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9-30 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ವರೆಗೆ ನಡೆಯಲಿದ್ದು, ಜಿಲ್ಲೆಯ 3086 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.  ಐಎಎಸ್ ಪೂರ್ವಭಾವಿ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ದಾತ್ಮಕ ಪರೀಕ್ಷೆ, ಕೊಪ್ಪಳದ ಒಟ್ಟು 06 ಪರೀಕ್ಷಾ ಕೇಂದ್ರಗಳಲ್ಲಿ ಜೂ. 25 ರಂದು ಮಧ್ಯಾಹ್ನ 02-00 ಗಂಟೆಯಿಂದ ಸಂಜೆ 5-00 ಗಂಟೆಯ ವರೆಗೆ ನಡೆಯಲಿದ್ದು, ಜಿಲ್ಲೆಯ 1708 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 
     ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಬೆಳಿಗ್ಗೆ 08 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ಎಸ್‍ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.  ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು, ಸಿಬ್ಬಂದಿ, ಜಾಗೃತ ದಳದವರನ್ನು ಹೊರತುಪಡಿಸಿ, ಉಳಿದವರ ಪ್ರವೇಶ ನಿಷೇಧಿಸಿದೆ.  ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ

ಕೊಪ್ಪಳ, ಜೂ.22 (ಕರ್ನಾಟಕ ವಾರ್ತೆ) : ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹ ವಿಧಾನದಲ್ಲಿ ಸಾಕಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಇಲಾಖೆಯು ಈಗಾಗಲೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ನಿರ್ದೇಶಕ ಯಾಲಕ್ಕಿ ಗೌಡ ಅವರು ಹೇಳಿದರು.

     ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ದರ ಮತ್ತು ಶುಲ್ಕಗಳನ್ನು ಪರಿಷ್ಕರಿಸುವ ಕುರಿತು ಜಿಲ್ಲಾಡಳಿತ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಅಧಿಕಾರಿಗಳು, ಪಿಡಿಓ, ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್ಸ್, ಕಾರ್ಯದರ್ಶಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಯೋಜನೆಗಳ ಅನುಷ್ಟಾನಗೊಳಿಸುವ ಹೊಣೆಗಾರಿಕೆಯನ್ನು ಬಹುತೇಕವಾಗಿ ಗ್ರಾಮ ಪಂಚಾಯತಿಗಳಿಗೇ ನೀಡಲಾಗುತ್ತಿದ್ದು, ಇದರಿಂದಾಗಿ ಗ್ರಾಮ ಪಂಚಾಯತಿಗಳಿಗೆ ಜವಾಬ್ದಾರಿ ಹೆಚ್ಚಾಗುತ್ತಿದೆ.  ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರಿಂದ, ಗ್ರಾಮ ಮಟ್ಟದಲ್ಲಿ ಸುಲಲಿತ ಆಡಳಿತ ನಡೆಯುವುದರ ಜೊತೆಗೆ ಗ್ರಾಮೀಣ ಜನಪ್ರತಿನಿಧಿಗಳಿಗೆ ಹೆಚ್ಚಿನ ಹೊಣೆ ನೀಡುವ ಮೂಲಕ ಅಧಿಕಾರ ವಿಕೇಂದ್ರೀಕರಣಗೊಳಿಸುವುದು ಸರ್ಕಾರದ ಆಶಯವಾಗಿದೆ.  ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ, ವಿವಿಧ ಸೇವೆಗಳ ಶುಲ್ಕ ನಿಗದಿ ಕುರಿತಂತೆ ಹಲವು ಸುಧಾರಣೆಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ.  ಇದರಿಂದ, ತೆರಿಗೆಯನ್ನು ಸರಿಯಾಗಿ ನೀಡದೆ, ವಂಚಿಸುವವರನ್ನು ಗುರುತಿಸಿ, ವಸೂಲಾತಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದರ ಜೊತೆಗೆ ಸ್ಥಳೀಯ ಆಡಳಿತಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ಸಾಮಥ್ರ್ಯ ಹೆಚ್ಚಿಸಲು ಸಾಧ್ಯವಾಗಲಿದೆ.  ಗ್ರಾಮ ಪಂಚಾಯತಿಗಳಲ್ಲಿ ಸಿಬ್ಬಂದಿಗಳ ಕೊರತೆಯೂ ಸಹ ಇದ್ದು, ಬರುವ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನೀಡಲು ಚಿಂತನೆ ನಡೆಸಲಾಗುತ್ತಿದೆ.  ಸ್ವಚ್ಛಭಾರತ ಮಿಷನ್ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ನಿರ್ಮಾಣ ಬಾಕಿ ಇರುವ ಶೌಚಾಲಯಗಳಿಗೆ ಅನುಗುಣವಾಗಿ, ಗುರಿ ನಿಗದಿಪಡಿಸಲು ಉದ್ದೇಶಿಸಲಾಗಿದ್ದು, ಪ್ರತಿ ಕುಟುಂಬಕ್ಕೂ ಮೊಬೈಲ್ ಹೇಗೆ ಅನಿವಾರ್ಯವೋ, ಶೌಚಾಲಯವೂ ಅಷ್ಟೇ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ.  ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು.  ಬಯಲು ಶೌಚ ವ್ಯವಸ್ಥೆ ತೊಲಗಬೇಕು.  ಆಗ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಧ್ಯವಾಗಲಿದೆ.  ಪಿಎಂಜಿಎಸ್‍ವೈ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ, ರೆವಲ್ಯೂಷನರಿ ಇಂಡೆಕ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಈ ಎಲ್ಲ ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನಮ್ಮ ರಾಜ್ಯ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ನಿರ್ದೇಶಕ ಯಾಲಕ್ಕಿ ಗೌಡ ಅವರು ಹೇಳಿದರು.
     ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣವನ್ನು ಹೆಚ್ಚಿಸಬೇಕು.  ತೆರಿಗೆ ಸಂಗ್ರಹ ಹೆಚ್ಚಳದಿಂದ ಅಧಿಕಾರಿ, ಸಿಬ್ಬಂದಿಗಳ ವೇತನದ ಮೇಲೆ ನೇರ ಪರಿಣಾಮ ಉಂಟಾಗಲಿದೆ.  ತೆರಿಗೆ ಹಣವನ್ನು ಗ್ರಾಮ ಪಂಚಾಯತಿಗಳು ಸಮರ್ಪಕವಾಗಿ ವಿನಿಯೋಗಿಸಬೇಕು.  ಪಂಚಾಯತಿಗಳಿಗೆ ಶಾಶ್ವತ ಆಸ್ತಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.  ಪಂಚಾಯತಿ ಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಬಾಹ್ಯ ಒತ್ತಡಗಳು ಬರುವುದು ಸಹಜ.  ಆದರೂ, ನಿಯಮಗಳ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.
     ತೆರಿಗೆ ದರ ಮತ್ತು ಶುಲ್ಕ ಪರಿಷ್ಕರಣೆ ಕುರಿತು ವಿಶೇಷ ಉಪನ್ಯಾಸ ನೀಡಿದ, ಬೆಂಗಳೂರು ನಗರ ಜಿ.ಪಂ.ನ ಸಹಾಯಕ ಯೋಜನಾಧಿಕಾರಿ ಕೆ.ಜಿ. ಜಗದೀಶ್ ಅವರು, ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿ ಸಮರ್ಪಕವಾಗಿ ಆಗುತ್ತಿಲ್ಲ.  ಕರ ವಸೂಲಿಗಾರರು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.  ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನಡೆಯಾಗುತ್ತಿದ್ದು, ಹೀಗಾಗಿ ಗ್ರಾಮ ಪಂಚಾಯತಿಗಳು ಸ್ಥಳೀಯ ಸರ್ಕಾರ ಎಂಬ ಮಾತಿಗೆ ಅರ್ಥವಿಲ್ಲದಂತಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತಿಗಳಿದ್ದು, 18. 30 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಕೇವಲ 1. 15 ಕೋಟಿ ಅಂದರೆ ಶೇ. 6. 31 ರಷ್ಟು ಮಾತ್ರ ತೆರಿಗೆ ವಸೂಲಿ ಮಾಡಲಾಗಿದೆ.  ಬರುವ ದಿನಗಳಲ್ಲಿ ಆಸ್ತಿ ಸಮೀಕ್ಷೆ ಮತ್ತು ಸ್ವಯಂಚಾಲಿತ ತೆರಿಗೆ ಗಣಕೀಕರಣ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದ್ದು, ಸಂಪೂರ್ಣ ಗಣಕೀಕೃತ ಆಸ್ತಿ ನಕ್ಷೆ ತಯಾರಿಸುವುದರ ಜೊತೆಗೆ ಆಸ್ತಿ ಮಾಹಿತಿ ಸಂಪೂರ್ಣವಾಗಿ ಗಣಕೀಕೃತವಾಗಲಿದೆ ಎಂದರು.
     ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಸಹಾಯಕ ನಿರ್ದೇಶಕ ಶರಣಪ್ಪ ಮುಂತಾದವರಿದ್ದರು.  ಕಾರ್ಯಗಾರದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಯ ಗ್ರಾಮ ಪಂಚಾಯತಿಗಳ ಪಿಡಿಒ ಗಳು, ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್ಸ್, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ಐಟಿಐ ಪಾಸಾದವರಿಗೆ 3ನೇ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಜೂ. 22 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಐಟಿಐ ಪಾಸಾದವರಿಗೆ 3ನೇ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ ಸ್ಕೀಂ) ಆನ್‍ಲೈನ್ ಇಂಟರಾಕ್ಟಿವ್ ಕೌನ್ಸಲಿಂಗ್ ಮುಖಾಂತರ ದ್ವಿತೀಯ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
    ಜೂ. 27ರ ವರೆಗೆ ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್ www.kea.kar.nic.in & www.dte.kar.nic.in ಗಳ ಮೂಲಕ ಡೌನ್‍ಲೋಡ್ ಮಾಡಿಕೊಂಡು ಅರ್ಜಿಯನ್ನು ಸಂಪೂರ್ಣ ಭರ್ತಿ ಮಾಡಿ, ನಿಗದಿಪಡಿಸಿದ ಅರ್ಜಿ ಶುಲ್ಕವನ್ನು (ಜಿ.ಎಂ./ 2ಎ/ 2ಬಿ/ 3ಎ.3ಬಿ ರೂ. 100/- & ಎಸ್‍ಸಿ/ ಎಸ್‍ಟಿ/ ಸಿಎಟಿ-1 ರೂ. 50/-) ರಾಜ್ಯದ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿನ ಖಾತೆ ಸಂಖ್ಯೆ:  ED-KEA-DCET-2017 ಅಪ್ಲಿಕೇಶನ್ ಫೀ ಕಲೇಕ್ಷನ್ ಅಕೌಂಟ್ ನಂ. 36843662415 ಐಎಫ್‍ಸಿ ಕೊಡ್-  SBIN0007080  ಗೆ ಪಾವತಿಸಿ, ಬ್ಯಾಂಕ್ ಚ್ಯಾನೆಲ್ (ಕೌಂಟರ್‍ಫೈಲ್) ನೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳ, ಸಂಸ್ಥೆಗೆ ಎಲ್ಲಾ ಮೂಲ ದಾಖಲೆಗಳು ಮತ್ತು ಅವುಗಳ ಧೃಢೀಕರಿಸಿದ ನಕಲು ಪ್ರತಿಗಳೊಂದಿಗೆ ಆನ್‍ಲೈನ್ ನಲ್ಲಿ ಜೂ. 27 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲರ ಕಛೇರಿ, ಕೊಪ್ಪಳ ಸರ್ಕಾರಿ ಪಾಲಿಟೆಕ್ನಿಕ್ ದೂರವಾಣಿ ಸಂಖ್ಯೆ 9448715325 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕುಕನೂರು: ಆರ್ಥಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಜೂ. 22 (ಕರ್ನಾಟಕ ವಾರ್ತೆ): ಕುಕನೂರು ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ವಸತಿ ರಹಿತ ಅರ್ಹ ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತರ ಕುಟುಂಬಗಳಿಗೆ (ನಿವೇಶನ ಹೊಂದಿರುವವರಿಗೆ) ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಇಚ್ಚಿಸುವ ಫಲಾನುಭವಿಗಳು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕುಕನೂರು ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಜೂ. 30 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಪ.ಪಂ. ಕಾರ್ಯಾಲಯದ ನೋಟಿಸ್ ಬೋರ್ಡ ಅಥವಾ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕುಕನೂರು ಪ.ಪಂ. ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಜಪೇಯಿ ನಗರ ವಸತಿ ಯೋಜನೆ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 22 (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತರ ಕುಟುಂಬಗಳಿಗೆ ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
      ಸರ್ಕಾರವು ಪ್ರಸಕ್ತ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಗಳಡಿ ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತರ ಕುಟುಂಬಗಳಿಗೆ ಸೌಲಭ್ಯವನ್ನು ನಿಗದಿಪಡಿಸಿದ್ದು, ಯಲಬುರ್ಗಾ ಪಟ್ಟಣ ಪಂಚಾಯತಿಯಲ್ಲಿ 14 ಮನೆಗಳ ಗುರಿಯನ್ನು ನಿಗದಿಪಡಿಸಲಾಗಿದೆ.  ಫಲಾನುಭವಿಗಳ ಆಯ್ಕೆ ಹಾಗೂ   ಅನುಮೋದನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಾಮಾನ್ಯ ಮತ್ತು ಅಲ್ಪಸಂಖ್ಯಾತರ ಕುಟುಂಬಗಳಿಗೆ ವಾಜಪೇಯಿ ನಗರ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲು ಸರ್ಕಾರವು ನಡುವಳಿಯನ್ನು ಹೊರಡಿಸಿದಂತೆ ಪಟ್ಟಣದ ವಿವಿಧ ವಾರ್ಡಗಳಲ್ಲಿ ವಸತಿ ರಹಿತ ನಾಗರಿಕರು ತಮ್ಮ ಸ್ವಂತ ಜಾಗೆಯಲ್ಲಿ ವಾಜಪೇಯಿ ನಿವಾಸವನ್ನು ನಿರ್ಮಿಸಿಕೊಳ್ಳಬಹುದು.
    ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಮತ್ತು ಆಧಾರ ಕಾರ್ಡ, ಸ್ವಂತ ನಿವೇಶನ ಹೊಂದಿರುವ ಖಾತಾ ನಕಲು, ದೂರವಾಣಿ ಸಂಪರ್ಕಕ್ಕಾಗಿ ನಂಬರನ್ನು ನೀಡಬೇಕು.  4 ಭಾವಚಿತ್ರಗಳನ್ನು ಅರ್ಜಿ ನಮೂನೆಗೆ ಲಗತ್ತಿಸಿ ಜೂ. 30ರ ಸಾಯಂಕಾಲ 5-30 ಗಂಟೆ ಒಳಗಾಗಿ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Wednesday, 21 June 2017

ವಿಶ್ವದ ಮನ್ನಣೆ ಪಡೆದಿದೆ ಭಾರತದ ಯೋಗ : ಕರಡಿ ಸಂಗಣ್ಣ
ಕೊಪ್ಪಳ, ಜೂ.21 (ಕರ್ನಾಟಕ ವಾರ್ತೆ) : ಭಾರತ ದೇಶದಲ್ಲಿ ಋಷಿ-ಮುನಿಗಳಿಂದ ಪರಂಪರಾಗತವಾಗಿ ಬಂದಿರುವ ಭಾರತದ ಯೋಗವು ಇಡೀ ವಿಶ್ವದ ಮನ್ನಣೆಯನ್ನು ಪಡೆದಿದ್ದು, ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಲ್ಲಷ್ಟೇ ಅಲ್ಲದೇ, ಜಗತ್ತಿನ ಸುಮಾರು 181 ದೇಶಗಳು ಆಚರಿಸುತ್ತಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಮೂರನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

      ಯೋಗವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದ್ದು, ಋಷಿ-ಮುನಿಗಳು ಪರಿಚಯಿಸಿದ ಯೋಗದ ಮಹತ್ವದಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗು ನೋಡುವಂತಾಗಿದೆ.   ಜಗತ್ತಿಗೆ ಭಾರತದ ಕೊಡುಗೆಯಾಗಿರುವ ಯೋಗವು ಇಂದು ಯಾವುದೇ ಧರ್ಮಕ್ಕೆ ಸೀಮಿತಗೊಳ್ಳದೇ ವಿಶ್ವ ವ್ಯಾಪ್ತಿಯಾಗಿ ಬೆಳೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದೀಗ ಯೋಗ ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದ್ದು, ಜಗತ್ತಿನ 181 ದೇಶಗಳು ಇಂದು ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ.  ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇದರ ಶ್ರೇಯಸ್ಸು ಸಲ್ಲಬೇಕು.   ಒತ್ತಡದ ನಡುವೆ ಬದುಕು ಸಾಗಿಸುವ ಇಂದಿನ ಜೀವನ ಶೈಲಿಗೆ ಯೋಗ ಅವಶ್ಯಕವಾಗಿ ಬೇಕಾಗಿದ್ದು, ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಲ್ಲರು.  ದಿನನಿತ್ಯ ಯೋಗಾಭ್ಯಾಸ ಮಾಡುವವರು, ಇಡೀ ದಿನ ಹುರುಪಿನಿಂದ ಹಾಗೂ ಚೈತನ್ಯದಿಂದ ಕಾರ್ಯ ನಿರ್ವಹಿಸಲು ಸಾಧ್ಯವಿದೆ.  ಯೋಗವು ಇಂದಿನ ಸಾಮಾಜಿಕ ಬದುಕಿನಲ್ಲಿನ ಒತ್ತಡಗಳನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುವ ದಿವ್ಯ ಔಷಧಿಯಾಗಿದೆ.  ಯೋಗದಿಂದ ಬದುಕಿನಲ್ಲಿ ಏಕಾಗ್ರತೆ ಹಾಗೂ ದೃಢ ಮನಸ್ಸು ಪಡೆಯಲು ಸಾಧ್ಯವಿದೆ.  ಬದುಕಿನ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುವ ಸಾಮಥ್ರ್ಯ ಯೋಗಕ್ಕಿದೆ.  ಹೀಗಾಗಿಯೇ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಯೋಗಕ್ಕೆ ಮೊರೆಹೋಗುತ್ತಿದ್ದು, ಯುವಕರು ಕೂಡ ಯೋಗಕ್ಕೆ ಹತ್ತಿರವಾಗುತ್ತಿದ್ದಾರೆ.  ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ದಿನಕ್ಕೆ ಒಂದು ತಾಸು ಯೋಗಕ್ಕೆ ಮೀಸಲಿಡುವುದು ಅಗತ್ಯ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
     ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧಿಸಲು ಏಕಾಗ್ರತೆ ಹಾಗೂ ಶ್ರದ್ಧ ಬೇಕು.  ಯೋಗದಿಂದ ಮಾತ್ರ ಏಕಾಗ್ರತೆ ಪಡೆಯಲು ಸಾಧ್ಯವಿದೆ.  ರಕ್ತದೊತ್ತಡದಂತಹ ರೋಗಗಳನ್ನು ನಿಗ್ರಹಿಸಲು ಯೋಗ ಉತ್ತಮ ವಿಧಾನವಾಗಿದೆ.  ಯೋಗ ಶಿಬಿರಗಳು ವರ್ಷಕ್ಕೊಮ್ಮೆ ಮಾತ್ರ ನಡೆಯದೆ, ನಿರಂತರವಾಗಿ ನಡೆಯಬೇಕು ಎಂದರು.
     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಯೋಗಾಭ್ಯಾಸ ಕೇವಲ ದಿನಾಚರಣೆ ದಿನದಂದು ಮಾತ್ರ ಸೀಮಿತವಾಗಬಾರದು.  ದೈನಂದಿನ ಬದುಕಿನ ಚಟುವಟಿಕೆಯ ಭಾಗವಾಗಬೇಕು.  ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಶಾಂತ ಮನಸ್ಸು ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ ಎಂದರು.
        ಸಮಾರಂಭಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳದ ಯೋಗ ಗುರು ಅಶೋಕಸ್ವಾಮಿ ಹಿರೇಮಠ ಅವರು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು.  ಜಿಲ್ಲಾ ಆಯುಷ್ ಅಧಿಕಾರಿ ಬಸಪ್ಪ ವಾಲಿಕಾರ್, ಈಶ್ವರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ, ನಗರಸಭೆ ಪೌರಾಯುಕ್ತ ಪರಮೇಶ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಆರ್ಟ್ ಆಫ್ ಲಿವಿಂಗ್‍ನ ಡಾ. ಎಲ್. ಜುಕ್ತಿಮಠ, ಶರಣಪ್ಪ, ರೇಣುಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಐಎಎಸ್/ಕೆಎಸ್ ಪರೀಕ್ಷಾ ಪೂರ್ವ ತರಬೇತಿಗೆ ಜೂ. 25 ರಂದು ಪ್ರವೇಶ ಪರೀಕ್ಷೆ


ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆಗೆ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಭ್ಯರ್ಥಿಗಳಿಗೆ ಉಚಿತವಾಗಿ ನೀಡುವ ಪರೀಕ್ಷಾ ಪೂರ್ವ ತರಬೇತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಜೂ. 25 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
     ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಈಗಾಗಲೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಇಲಾಖೆಯ ವೆಬ್‍ಸೈಟ್  www.backwardclasses.kar.nic.in ವೀಕ್ಷಿಸಬಹುದಾಗಿದೆ.  ಅಥವಾ ಸಹಾಯವಾಣಿ ಸಂಖ್ಯೆ 080-65970009 ಕ್ಕೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 28 ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ನಿಷೇದಾಜ್ಞೆ ಜಾರಿ


ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಜೂನ್. 28 ರಿಂದ ಜುಲೈ. 08 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ, ಜಿಲ್ಲೆಯ ಒಟ್ಟು 05 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಬೆಳಿಗ್ಗೆ 08 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ಎಸ್‍ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.  ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು, ಸಿಬ್ಬಂದಿ, ಜಾಗೃತ ದಳದವರನ್ನು ಹೊರತುಪಡಿಸಿ, ಉಳಿದವರ ಪ್ರವೇಶ ನಿಷೇಧಿಸಿದೆ.  ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಜೂ. 28 ರಂದು ಕೊಪ್ಪಳದಲ್ಲಿ ಬೀದಿ ವ್ಯಾಪಾರಸ್ಥರಿಗೆ ಒಂದು ದಿನದ ಕಾರ್ಯಗಾರ


ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗಾಗಿ ಕೊಪ್ಪಳ ನಗರಸಭೆಯಲ್ಲಿ “ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ” ಯಡಿಯಲ್ಲಿ ಬೀದಿ ವ್ಯಾಪಾರಸ್ಥರಿಗೆ ಒಂದು ದಿನದ ಕಾರ್ಯಗಾರವನ್ನು ಜೂನ್. 28 ರಂದು ಕೊಪ್ಪಳ ನಗರದ ಸರ್ಕಾರಿ ನೌಕರರ ಭವನ, ಶಾದಿ ಮಹಲ ಹಿಂಬಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೊಪ್ಪಳ ನಗರದ ಬೀದಿ ಬದಿ ವ್ಯಾಪಾರಸ್ಥರು ನಗರಸಭೆಯಿಂದ ಬೀದಿ ಬದಿ ವ್ಯಾಪಾರಸ್ಥಿಗೆ ನೀಡಲಾದ ಗುರುತಿನ ಚೀಟಿ, ಆಧಾರ ಕಾರ್ಡ, ಹಾಗೂ ಬ್ಯಾಂಕ್ ಪಾಸ್‍ಬುಕ್‍ಗಳ ಝರಾಕ್ಸ್ ಪ್ರತಿಯೊಂದಿಗೆ ಕಾರ್ಯಗಾರಕ್ಕೆ ಹಾಜರಾಗಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ


ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ಕೃಷಿ ಭಾಗ್ಯ ಯೋಜನೆಯಡಿ ಈಗಾಲೇ ನಿರ್ಮಿಸಲಾಗಿರುವ ಕೃಷಿಹೊಂಡಗಳು ಮಳೆ ನೀರಿನಿಂದ ತುಂಬಿದ್ದು, ಆಕಸ್ಮಿಕವಾಗಿ ಜನರು ಹಾಗೂ ಜಾನುವಾರುಗಳು ಬಿದ್ದು, ಪ್ರಾಣ ಹಾನಿಯಾಗುವ ಪ್ರಕರಣಗಳನ್ನು ತಪ್ಪಿಸಲು   ರೈತರು ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ. 
    ಕೃಷಿ ಹೊಂಡಗಳಲ್ಲಿನ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು, ಕೃಷಿಹೊಂಡದ ಸುತ್ತಲೂ ತಂತಿಬೇಲಿ ನಿರ್ಮಿಸಿಕೊಳ್ಳುವುದು ಸೂಕ್ತ.  ಕೃಷಿಹೊಂಡದ ಹತ್ತಿರ ಪ್ರಾಣಾಹಾನಿಯಾಗದಂತೆ ನಿಗಾವಹಿಸಲು ಎಚ್ಚರಿಕೆ ಫಲಕ ಅಳವಡಿಸಬೇಕು.  ಕೃಷಿಹೊಂಡದಲ್ಲಿ ಹಗ್ಗಗಳನ್ನು ಇಳಿ ಬಿಡಬೇಕು.  ಇದರಿಂದ ಜನರ ಪ್ರಾಣಾಹಾನಿ ತಪ್ಪಿಸಲು ನೆರವಾಗಲಿದೆ.  ಪಾಲಿಥೀನ್ ಹೊದಿಕೆ ಅಳವಡಿಸಿರುವ ಕೃಷಿಹೊಂಡದ ಸುತ್ತಲೂ ಇಲಾಖೆಯ ಶೇ.50 ರ ಸಹಾಯಧನದಲ್ಲಿ ಪೂರೈಸುವ ನೆರಳು ಪರದೆ ಅಳವಡಿಸುವುದು.   ಮಕ್ಕಳು ಕೃಷಿಹೊಂಡದ ಸಮೀಪ ಬರದಂತೆ ಕಾಳಜಿ ವಹಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ಜೂ. 24 ರಿಂದ ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಮೇಳ


ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ರಾಜೀವ್ ಗಾಂಧಿ ಚೈತನ್ಯ ಯೋಜನೆ, ಡಿಡಿಯು-ಜಿಕೆವೈ ಯೋಜನೆಯಡಿ ಗ್ರಾಮೀಣ ನಿರುದ್ಯೋಗಿ ಯುವ ಅಭ್ಯರ್ಥಿಗಳಿಗೆ ಕೌಶಲ್ಯಾಧಾರಿತ ಉದ್ಯೋಗ ಕಲ್ಪಿಸುವ ಕುರಿತು ಜಿಲ್ಲಾ/ ತಾಲೂಕ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮಗಳನ್ನು ಜೂ. 24 ರಿಂದ ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭವಾಗಲಿದ್ದು, ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
    ಕೊಪ್ಪಳ ಜಿಲ್ಲಾ/ ತಾಲೂಕ ಮಟ್ಟದ ಉದ್ಯೋಗ ಮೇಳ ಜೂನ್. 24 ರಂದು ಕೊಪ್ಪಳ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲಾಗಿದೆ.  ಜೂ. 28 ರಂದು ಗಂಗಾವತಿ ತಾಲೂಕ ಮಟ್ಟದ ಉದ್ಯೋಗ ಮೇಳ ಗಂಗಾವತಿಯ ಶ್ರೀ ಕೃಷ್ಣ ದೇವರಾಯ ಕಲಾ ಮಂದಿರದಲ್ಲಿ, ಜೂ. 29 ರಂದು ಕುಷ್ಟಗಿ ತಾಲೂಕ ಮಟ್ಟದ ಉದ್ಯೋಗ ಮೇಳ ಕುಷ್ಟಗಿಯ ಬುತ್ತಿಬಸವೇಶ್ವರ ಸಭಾಮಂಟಪದಲ್ಲಿ, ಹಾಗೂ ಜೂ. 30 ರಂದು ಯಲಬುರ್ಗಾ ತಾಲೂಕ ಮಟ್ಟದ ಉದ್ಯೋಗ ಮೇಳವನ್ನು ಯಲಬುರ್ಗಾದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ. 
ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕೊಪ್ಪಳ  ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮವನ್ನು  ಉದ್ಘಾಟಿಸುವರು.   ಉದ್ಯೋಗ ಮೇಳದಲ್ಲಿ ಜಿಲ್ಲೆಗೆ ಆಯ್ಕೆಯಾದ ಯೋಜನಾ ಅನುಷ್ಠಾನ ಸಂಸ್ಥೆಗಳು ಡಿಡಿಯು-ಜಿಕೆವೈ ಹಾಗೂ ರಾಜೀವ್ ಗಾಂಧಿ ಚೈತನ್ಯ ಯೋಜನೆ ಅಡಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳ ಒಗ್ಗೂಡಿಸುವಿಕೆ, ಆಯ್ಕೆ ಹಾಗೂ ತರಬೇತಿ ನೀಡಿ ಫಲಾನುಭವಿಗಳಿಗೆ ಉದ್ಯೋಗ ಕಲ್ಪಿಸಲಾಗುವುದು.
ಕೋರ್ಸಗಳ ವಿವರ :
************ ಬಿಪಿಓ (ವಾಯ್ಸ್ ಮತ್ತು ನಾನ್ ವಾಯ್ಸ್), ರಿಟೇಲಿಂಗ್, ಹೌಸ್ ಕೀಪಿಂಗ್, ರಿಸೆಪ್ಸನಿಸ್ಟ್, ಡಾಟಾ ಎಂಟ್ರಿ, ಟೇಲರಿಂಗ್/ ಫ್ಯಾಶನ್ ಡಿಸೈನಿಂಗ್, ಡ್ರೈವಿಂಗ.
ಯೋಜನಾ ಅನುಷ್ಠಾನ ಸಂಸ್ಥೆಗಳು :
************* ಬಿವಿಸಿ ಇಂಡಿಯಾ ಲಿ. ಚಿಂಚವಾರ್ಡ, ಪುಣೆ ಜಿಲ್ಲೆ ಮಹಾರಾಷ್ಟ್ರ.  * ಟೀಮ್ ಲೀಸ ಸರ್ವಿಸ್ ಪ್ರೈ.ಲಿ ಕೋರಮಂಗಲ, ಬೆಂಗಳೂರು.  * ರೂರಲ್ ಶೋರ್ಸ್ ಸ್ಕಿಲ್ ಅಕಾಡೆಮಿ ಪ್ರೈ.ಲಿ, ವೈಟ್ ಫಿಲ್ಡ್, ಬೆಂಗಳೂರು.  * ಸಾಹಿತಿ ಸಿಸ್ಟಂಸ್ ಪ್ರೈ.ಲಿ ಬೆಂಗಳೂರು.  ಶ್ರೀ ಅಮರೇಶ್ವರ ಗ್ರಾಮಿಣಾಭಿವೃದ್ಧಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ಮಿಲೇನಿಯಂ ಇನ್‍ಸ್ಟಿಟ್ಯೂಷನ್ ದದೇಗಲ್, ಕೊಪ್ಪಳ.  * ವಿನೂತನ ಶಿಕ್ಷಣ ಸೇವಾ ಸಂಸ್ಥೆ, ಮಹಾಮಾಯ ಕೃಪಾ, ಸತ್ಯದ್ಯಾನಪುರ ಬಡಾವಣೆ, ಕಿನ್ನಾಳ ರೋಡ್ ಕೊಪ್ಪಳ.  ವ್ಯವಸ್ಥಾಪಕ ನಿರ್ದೇಶಕರು, ಅಪೆರಲ್ ರೀಟೈಲ್ ಟ್ರೈನಿಂಗ್ & ಜಾಬ್ ಸೆಲ್ಯೂಷನ್ಸ್ (ಎಆರ್‍ಟಿಜೆಎಸ್), ಬೆಂಗಳೂರು. 
    ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು/ ಫಲಾನುಭವಿಗಳು ಜಿಲ್ಲಾ/ ತಾಲೂಕ ಮಟ್ಟದ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ - 9480871002, ಸಂಜೀವಿನಿ ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕರುಗಳಾದ ಬಸವರಾಜ ಮೂಲಿಮನಿ - 9663662321, ಹಾಗೂ ಬಸವರಾಜ ಪಾಟೀಲ್ – 9480630377, ಇವರಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಜೂ. 19 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಜೂ. 24 ರಂದು ಒಂದು ದಿನದ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮಂತ್ರಿಗಳು ಜೂ. 24 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು, ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್‍ಕೆಆರ್‍ಡಿಬಿ, ಕುಡಿಯುವ ನೀರು ಮತ್ತು ಕೃಷಿ ಇಲಾಖೆಗೆ ಸಂಬಂಧಿತ ವಿಷಯಗಳ ಕುರಿತು ಸಭೆ ನಡೆಸುವರು.  ಮಧ್ಯಾಹ್ನ 03 ಗಂಟೆಗೆ ಯಲಬುರ್ಗಾಕ್ಕೆ ತೆರಳಿ, ಯಲಬುರ್ಗಾದ ಕೆಂಪು ಕೆರೆ ಅಭಿವೃದ್ಧಿ ಕುರಿತಂತೆ ಸಭೆ ನಡೆಸುವರು.  ರಾತ್ರಿ 8 ಗಂಟೆಗೆ ಹೊಸಪೇಟೆಗೆ ತೆರಳಿ ವಾಸ್ತವ್ಯ ಮಾಡುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಕನಕಗಿರಿ : ವಸತಿ ರಹಿತ ಪರಿಶಿಷ್ಟರಿಗೆ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ


ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ಕನಕಗಿರಿ ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ವಸತಿ ರಹಿತ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ (ನಿವೇಶನ ಹೊಂದಿರುವವರಿಗೆ) ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.  
    ಒಟ್ಟು 45 ಫಲಾನುಭವಿಗಳಿಗೆ (ಪ.ಜಾ-34, ಪ.ಪಂ-11) ಆರ್ಥಿಕ ಸಹಾಯಧನ ಒದಗಿಸಲಾಗುತ್ತಿದ್ದು, ಆಸ್ತಿ ಇರುವವರ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.  ಈ ಹಿಂದೆ ಸರ್ಕಾರದಿಂದ ಯಾವುದೇ ವಸತಿ ಯೋಜನೆಗಳಲ್ಲಿ ಈ ಸೌಲಭ್ಯ ಪಡೆದಿರಬಾರದು.  ಕನಕಗಿರಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯವರೇ ಆಗಿರಬೇಕು.
ಇಚ್ಛೆಯುಳ್ಳ ಅರ್ಹ ಫಲಾನುಭವಿಗಳು ಅರ್ಜಿ ಜೊತೆ ಜಾಲ್ತಿ ವರ್ಷದ ಫಾರಂ ನಂ.3, ಪಾವತಿಸಿದ ಆಸ್ತಿ ತೆರಿಗೆ, ನೀರಿನ ತೆರಿಗೆ ರಸೀದಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಪಡಿತರ ಚೀಟಿ, ಗುರುತಿನ ಚೀಟಿ, 3 ಫೋಟೋ, ಹೊಂದಿರುವ ಮನೆಯ ವರ್ಗಾವಣೆ ಪ್ರಮಾಣ ಪತ್ರ (ಮುಟೇಶನ ಕಾಪಿ)/ ಹಕ್ಕು ಪತ್ರ/ ಡೀಡ್ ಇತ್ಯಾದಿ ದಾಖಲೆಗಳೊಂದಿಗೆ ಕನಕಗಿರಿ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಜೂ. 30 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ.ಪಂ. ಕಾರ್ಯಾಲಯದ ನೋಟಿಸ್ ಬೋರ್ಡ ಅಥವಾ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕನಕಗಿರಿ ಪ.ಪಂ. ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ಕನಕಗಿರಿ ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ವಸತಿ ರಹಿತ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ (ನಿವೇಶನ ಹೊಂದಿರುವವರಿಗೆ) ಒಟ್ಟು 16 ಫಲಾನುಭವಿಗಳಿಗೆ  ಆರ್ಥಿಕ ಸಹಾಯಧನ ಒದಗಿಸಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು  ಸ್ವಂತ ಆಸ್ತಿ ಹೊಂದಿರಬೇಕು.  ಈ ಹಿಂದೆ ಸರ್ಕಾರದಿಂದ ಯಾವುದೇ ವಸತಿ ಯೋಜನೆಗಳಲ್ಲಿ ಈ ಸೌಲಭ್ಯ ಪಡೆದಿರಬಾರದು.  ಕನಕಗಿರಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯವರೇ ಆಗಿರಬೇಕು. ಅರ್ಹ ಫಲಾನುಭವಿಗಳು ಅರ್ಜಿ ಜೊತೆ ಜಾಲ್ತಿ ವರ್ಷದ ಫಾರಂ ನಂ.3, ಪಾವತಿಸಿದ ಆಸ್ತಿ ತೆರಿಗೆ, ನೀರಿನ ತೆರಿಗೆ ರಸೀದಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಪಡಿತರ ಚೀಟಿ, ಗುರುತಿನ ಚೀಟಿ, 3 ಫೋಟೋ, ಹೊಂದಿರುವ ಮನೆಯ ವರ್ಗಾವಣೆ ಪ್ರಮಾಣ ಪತ್ರ (ಮುಟೇಶನ ಕಾಪಿ)/ ಹಕ್ಕು ಪತ್ರ/ ಡೀಡ್ ಇತ್ಯಾದಿ ದಾಖಲೆಗಳೊಂದಿಗೆ ಕನಕಗಿರಿ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಜೂ. 30 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ.ಪಂ. ಕಾರ್ಯಾಲಯದ ನೋಟಿಸ್ ಬೋರ್ಡ ಅಥವಾ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕನಕಗಿರಿ ಪ.ಪಂ. ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಸಸ್ಯ ಸಂತೆಯಲ್ಲಿ ಜೈವಿಕ ಗೊಬ್ಬರ ಲಭ್ಯ


ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ): ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಪ್ರಾರಂಭಿಸಲಾಗಿರುವ ಸಸ್ಯ ಸಂತೆಯಲ್ಲಿ ಉತ್ತಮ ಕೃಷಿ ಹಾಗೂ ತೋಟಗಾರಿಕೆಗೆ ಅಗತ್ಯವಿರುವ   ಜೈವಿಕ ಗೊಬ್ಬರವನ್ನು ಕಡಿಮೆ ದರದಲ್ಲಿ ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
      ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಪ್ರಾರಂಭಿಸಲಾಗಿರುವ ಸಸ್ಯ ಸಂತೆ,  ಅನೇಕ ರೈತರು, ಸಾರ್ವಜನಿಕರಿಂದ ಪ್ರಶಂಸೆಗೆ ಕಾರಣವಾಗಿದ್ದು,  ಇದರ ಪ್ರಯೋಜನ ಪಡೆಯಿತ್ತಿದ್ದಾರೆ. ಇಲಾಖೆ ನಿಗದಿಪಡಿಸಿರುವ ದರದಲ್ಲಿ ಹಲವು ಬಗೆಯ ಹೂವು, ಹಣ್ಣಿನ ಸಸಿಗಳು ಲಭ್ಯವಿರುವುದು ರೈತರಿಗೆ ವರದಾನವಾಗಿದೆ. ಇದಲ್ಲದೇ ಸಾರ್ವಜನಿಕರೂ ತಮ್ಮ ಮನೆ ಅಂಗಳದಲ್ಲಿ ಅಲಂಕಾರಿಕ ಹಾಗೂ ಪುಷ್ಪ ಬೆಳೆಗಳನ್ನು ಖುಷಿಯಿಂದ ಖರೀದಿಸುತ್ತಿದ್ದಾರೆ.
       ಕೇವಲ ಸಸಿಗಳ ಮಾರಾಟ ಅಷ್ಟೇ ಅಲ್ಲದೇ ಇಲಾಖೆಯ ಜೈವಿಕ ಕೇಂದ್ರ ಹುಳಿಮಾವು (ಬೆಂಗಳೂರು) ನಲ್ಲಿ ಉತ್ಪಾದಿಸಿದ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸೂಡೊಮೋನಾಸ್, ಹಾಗೂ ತರಕಾರಿ ಕನ್ಸೊರ್ಟಿಯಂ ಎನ್ನುವ ಸೂಕ್ಷ್ಮಾಣು ಜೀವಿಗಳಿಂದ ಸಂಪದ್ಭರಿಸಿದ ಜೈವಿಕ ಪೋಷಕಾಂಶಗಳ ಮಿಶ್ರಣಗಳನ್ನು ರೂ.100 ರಿಂದ 120 ಪ್ರತಿ ಕಿ.ಗ್ರಾಂ. ಗೆ ನಿಗದಿಪಡಿಸಲಾಗಿದೆ.  ಇದರ ಜೊತೆಗೆ ಎಲ್ಲಾ ವಿಧದ ತರಕಾರಿ ಸಸಿಗಳನ್ನು ಹಸಿರು ಮನೆಯಲ್ಲಿ, ಪ್ರೋಟ್ರೆನಲ್ಲಿ ಆಧುನಿಕ ತಾಂತ್ರಿಕತೆಯಲ್ಲಿ ಬೆಳೆದು ಯೋಗ್ಯ ಬೆಲೆಗೆ ಸರಬರಾಜು ಮಾಡಲಾಗುವುದು.  ತರಕಾರಿ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳಾಗಲಿ ಅಥವಾ ಜೈವಿಕ ಗೊಬ್ಬರಗಳಾಗಲಿ ಬೇಕಾದಲ್ಲಿ ಮುಂಗಡ ಬುಕಿಂಗ್ ಮಾಡಿ ಕಾಯ್ದಿರಿಸುವ ಅವಕಾಶ ಇರುತ್ತದೆ.  
      ಹೆಚ್ಚಿನ ಮಾಹಿತಿಗಾಗಿ ವಂಕಾ ದುರ್ಗಾ ಪ್ರಸಾದ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಕೊಪ್ಪಳ- 8861697989.  ಅಥವಾ ಹನುಮೇಶ ನಾಯಕ್ ಸಹಾಯಕ ತೋಟಗಾರಿಕೆ ನಿರ್ದೇಶಕರು ( ತರಬೇತಿ ಕೇಂದ್ರ ಮುನಿರಾಬಾದ್ )-9740934208 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳದ ಸರ್ಕಾರಿ ಬಾಲಮಂದಿರದಲ್ಲಿ ಯೋಗ ದಿನಾಚರಣೆ


ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ): ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೊಪ್ಪಳದ ಬಾಲಕಿಯರ/ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳಿಗೆ ಯೋಗಾಭ್ಯಾಸ ಶಿಕ್ಷಣ ನೀಡುವ ಮೂಲಕ ಆಚರಿಸಲಾಯಿತು.
     ಯೋಗ ಶಿಕ್ಷಕರು ಹಾಗೂ ಯೋಗಪಟುಗಳಾದ ಕೃಷ್ಣ ಬಿ. ಕುಟಗನಹಳ್ಳಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಮಕ್ಕಳಿಗೆ ಯೋಗದ ಹಿನ್ನೆಲೆ, ಅದರ ಮಹತ್ವ ಮತ್ತು ಉಪಯೋಗಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.  ಇಂದಿನ ಆಧುನಿಕ ಜೀವನ ಶೈಲಿಯಿಂದ ಅನೇಕ ದೈಹಿಕ ಮತ್ತು ಮಾನಸಿಕ ರೋಗಗಳು ಹೆಚ್ಚುತ್ತಿರುವುದರಿಂದ ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.  ಅಲ್ಲದೆ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಯೋಗದ ಪ್ರಕಾರಗಳಾದ ಆಸನ, ಧಾರಣ, ಪ್ರಾಣಾಯಾಮ ಮತ್ತು ಧ್ಯಾನವನ್ನು ಬಾಲಮಂದಿರದ ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಯೋಗಾಭ್ಯಾಸ ಮಾಡಿಸುವ ಮೂಲಕ ತಿಳಿಸಿಕೊಟ್ಟರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸುಮಲತಾ ಆಕಳವಾಡಿ ಸಾಂಸ್ಥಿಕ ರಕ್ಷಣಾಧಿಕಾರಿ ವಹಿಸಿದ್ದರು,   ಶಿವಲೀಲಾ ವನ್ನೂರು, ಬಸವರಾಜ ವಿ., ರವಿ ಬಡಿಗೇರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ. ಮತ್ತು ಬಾಲಮಂದಿರದ ಸಿಬ್ಬಂದಿ ಗೀತಾ, ರವಿ ಗುಡ್ಡದಮೇಗಳ ಲಕ್ಷ್ಮೀ ಪಾಲ್ಗೊಂಡಿದ್ದರು.

ಸಮಾಜಕಲ್ಯಾಣ ಇಲಾಖೆ ಗ್ರೂಪ್’ಡಿ’ ವೃಂದದ ನೇಮಕಾತಿ : ಕಟ್-ಆಫ್ ಅಂಕ ಪ್ರಕಟ


ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಗ್ರೂಪ್’ಡಿ’ ವೃಂದದ ಅಡುಗೆ ಸಹಾಯಕ ಮತ್ತು ಕಾವಲುಗಾರರ ಹುದ್ದೆಗಳನ್ನು ನೇರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಅರ್ಹತೆಯ ಆಧಾರದ ಮೇಲೆ ಕಟ್-ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ.
        ಕಾವಲುಗಾರರ ಹುದ್ದೆಗೆ ಸಂಬಂಧಿಸಿದಂತೆ ಹೈದ್ರಾಬಾದ್-ಕರ್ನಾಟಕ ವೃಂದದ ಹುದ್ದೆಗಳಲ್ಲಿ ವಿವಿಧ ಮೀಸಲಾತಿ ವರ್ಗಗಳಲ್ಲಿ ಕಟ್-ಆಫ್ ಅಂಕಗಳ ವಿವರ ಇಂತಿದೆ. 2ಎ ವರ್ಗದಲ್ಲಿ ಇತರೆ-73.28, ಮಹಿಳೆ-56.96, ಗ್ರಾಮೀಣ-73.60.  3ಎ : ಇತರೆ-60.  3ಬಿ : ಇತರೆ-73.76.  ಸಿಎ: ಇತರೆ-71.84.  ಸಾಮಾನ್ಯ ವರ್ಗ: ಇತರೆ-73. 92, ಮಹಿಳೆ-59.52, ಗ್ರಾಮೀಣ-74.08, ಪಿಹೆಚ್‍ಸಿ-66.56, ಮಾಜಿ ಸೈನಿಕ-45.44.  ಪ.ಜಾತಿ: ಮಹಿಳೆ-55.52, ಗ್ರಾಮೀಣ-72.48, ಪಿಹೆಚ್‍ಸಿ-56.96.  ಪ.ವರ್ಗ: ಇತರೆ-72.32.  ಹೈದ್ರಾಬಾದ್-ಕರ್ನಾಟಕ ಉಳಿಕೆ ವೃಂದದ ಕಾವಲುಗಾರರ ಹುದ್ದೆಗೆ ವಿವಿಧ ಮೀಸಲಾತಿ ವರ್ಗದಲ್ಲಿ ಕಟ್-ಆಫ್ ಅಂಕಗಳ ವಿವರ ಇಂತಿದೆ.  ಸಾಮಾನ್ಯ ವರ್ಗ: ಇತರೆ-80.96, ಪ.ಜಾತಿ: ಇತರೆ-77.  ಪ.ವರ್ಗ: ಇತರೆ-71.84  ಕಾವಲುಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ 1:5 ರ ಅನುಪಾತದ ಪ್ರಕಾರ ಜೂ. 24 ರಂದು ಬೆಳಿಗ್ಗೆ 09 ಗಂಟೆಗೆ ದಾಖಲಾತಿ ಪರಿಶೀಲನೆ ಕಿನ್ನಾಳ ರಸ್ತೆಯಲ್ಲಿನ ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು  www.koppal.nic.in ನಲ್ಲಿ ತಮ್ಮ ಪ್ರವೇಶ ಪತ್ರಗಳನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು.  ಅರ್ಹ ಅಭ್ಯರ್ಥಿಗಳಿಗೆ ಜೂ. 29 ರಂದು ಕಿನ್ನಾಳ ರಸ್ತೆಯಲ್ಲಿನ ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ದೇಹದಾಢ್ರ್ಯತೆ ಪರೀಕ್ಷೆ ಏರ್ಪಡಿಸಲಾಗಿದೆ
     ಅಡುಗೆ ಸಹಾಯಕರ ಹುದ್ದೆಗೆ ಸಂಬಂಧಿಸಿದಂತೆ ಹೈದ್ರಾಬಾದ್-ಕರ್ನಾಟಕ ವೃಂದದ ಹುದ್ದೆಗಳಲ್ಲಿ ವಿವಿಧ ಮೀಸಲಾತಿ ವರ್ಗಗಳಲ್ಲಿ ಕಟ್-ಆಫ್ ಅಂಕಗಳ ವಿವರ ಇಂತಿದೆ. 2ಎ ವರ್ಗದಲ್ಲಿ ಮಹಿಳೆ-51. 36, ಗ್ರಾಮೀಣ-57.76, ಪಿಹೆಚ್‍ಸಿ-36.16.  2ಬಿ ವರ್ಗದಲ್ಲಿ ಮಹಿಳೆ-54.72.  3ಎ ರಲ್ಲಿ ಇತರೆ-42.72.  3ಬಿರಲ್ಲಿ ಇತರೆ-61.64.  ಸಿಎ ರಲ್ಲಿ ಮಹಿಳೆ-46.56.  ಸಾಮಾನ್ಯ ವರ್ಗದಲ್ಲಿ ಇತರೆ-64.16, ಮಹಿಳೆ-58.08, ಗ್ರಾಮೀಣ-61.76, ಕನ್ನಡ ಮಾಧ್ಯಮ-65.12, ಪಿಡಿಪಿ- 38.72.  ಪ.ಜಾತಿ : ಮಹಿಳೆ-56.80, ಗ್ರಾಮೀಣ-60.80, ಪಿಹೆಚ್‍ಸಿ-35.84.  ಪ.ವರ್ಗ : ಮಹಿಳೆ-54.88.  ಹೈದ್ರಾಬಾದ್-ಕರ್ನಾಟಕ ಉಳಿಕೆ ವೃಂದದ ಅಡುಗೆ ಸಹಾಯಕರ ಹುದ್ದೆಗೆ ವಿವಿಧ ಮೀಸಲಾತಿ ವರ್ಗದಲ್ಲಿ ಕಟ್-ಆಪ್ ಅಂಕಗಳ ವಿವರ ಇಂತಿದೆ.  ಸಾಮಾನ್ಯ ಅಭ್ಯರ್ಥಿ: ಇತರೆ-71. 20, ಮಹಿಳೆ-73. 44.  ಪ.ಜಾತಿ : ಇತರೆ-69.92.  ಪ.ವರ್ಗ: ಇತರೆ-59.52.  ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ಜೂ. 30 ರಂದು ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 19 June 2017

ಕೈಮಗ್ಗ ಗಣತಿ : ಫೋಟೋ ಗುರುತಿನ ಚೀಟಿ ಸಲ್ಲಿಸಲು ಸೂಚನೆ


ಕೊಪ್ಪಳ, ಜೂ. 19 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಜವಳಿ ಮಂತ್ರಾಲಯವು ದೇಶದಾದ್ಯಂತ 4ನೇ ಕೈಮಗ್ಗ ಹಾಗೂ ಕೈಮಗ್ಗ ಸಂಬಂಧಿತ ಕಾರ್ಮಿಕರ ಗಣತಿ ಹಾಗೂ ಫೋಟೋ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಜೂ. 21 ರಿಂದ ಪ್ರಾರಂಭಿಸುತ್ತಿದ್ದು, ನೇಕಾರರು ತಮ್ಮ ಸೂಕ್ತ ಮಾಹಿತಿ ಒದಗಿಸಲು ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಸೂಚನೆ ನೀಡಿದ್ದಾರೆ. 
     ಗಣತಿ ಕಾರ್ಯಕ್ರಮವನ್ನು ಮೆ. ಕಾರ್ವಿ ಡೇಟಾ ಮ್ಯಾನೇಜ್‍ಮೆಂಟ್ (M/s Karvy Data Management Services Limited)  ಏಜೆನ್ಸಿ ರವರಿಗೆ ವಹಿಸಲಾಗಿದೆ.  ಜಿಲ್ಲೆಯ ನೇಕಾರರು ಇದರ ಸದುಪಯೋಗ ಪಡೆಯಲು ಹಾಗೂ ಸಂಸ್ಥೆಯವರು ತಮ್ಮ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಸ್ಥಳಿಯವಾಗಿ ಲಭ್ಯವಿದ್ದು, ಅವರಿಗೆ ಆಧಾರ ಕಾರ್ಡ ಮತ್ತು ಬ್ಯಾಂಕ್ ಪಾಸ್‍ಬುಕ್ ಪ್ರತಿಗಳನ್ನು ಸಲ್ಲಿಸಿ ಸೂಕ್ತ ಮಾಹಿತಿ ಒದಗಿಸಲು ಕೋರಿದೆ.
     ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕೈಮಗ್ಗ ಸಹಕಾರ ಸಂಘದ ಕಾರ್ಯದರ್ಶಿ ಅಥವಾ ಜಿಲ್ಲಾ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಕೊಪ್ಪಳ, ದೂರವಾಣಿ ಸಂಖ್ಯೆ 08539-230069 ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಯಲಬುರ್ಗಾ: ವ್ಯಕ್ತಿಗತ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 19 (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತ್ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಮತ್ತು ಪಟ್ಟಣ ಪಂಚಾಯತ್ ನಿಧಿ ಶೇ.24.10ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ (ಪ.ಜಾತಿ-17.15 ಪ.ಪಂ-9.95) ವ್ಯಕ್ತಿಗತ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 
ಎಸ್.ಎಫ್.ಸಿ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ನೆರವು : ಎಸ್.ಎಸ್.ಎಲ್.ಸಿ, ಐ.ಟಿ.ಐ ಇತರೆ ವೃತ್ತಿಪರ ತರಗತಿ - ರೂ.3000/-, ಪಿಯುಸಿ. ಉದ್ಯೋಗ ಆಧಾರಿತ ಡಿಪ್ಲೋಮಾ ರೂ.4500/-, ಪ್ಯಾರಾ ಮೆಡಿಕಲ್ ಕೋರ್ಸ/ ಡಿಪ್ಲೋಮಾ/ ಡಿಇಎಇ/ ಸಿಪಿಇಡಿ ಇತರೆ ತಾಂತ್ರಿಕ ರೂ.4500/-, ಪದವಿ ತರಗತಿಗೆ ರೂ.6000/-, ಬಿಇಡಿ/ ಬಿಪಿಇಎಡ್/ ಇತರೆ ಡಿಪ್ಲೋಮಾ - ರೂ.6000/, ಎಂ.ಎ/ ಎಂ.ಎಸ್.ಸಿ/ ಎಂ.ಕಾಂ/ ಎಂ.ಎಸ್.ಡಬ್ಲ್ಯೂ/ಎಂ.ಸಿ.ಎ/ ಬಿ.ಇ - ರೂ.15000/-, ಎಂ.ಇ.ಡಿ/ ಎಂ.ಪಿ.ಇ.ಡಿ/ ರೂ.9000/-, ಎಂಬಿಬಿಎಸ್/ ಬಿಡಿಎಸ್/ ಎಂ.ಟೆಕ್/ ಎಂ.ಎಸ್/ ಎಂ.ಡಿ/ ಎಂ.ಇ ರೂ.25000/-ಗಳ ವಿಶೇಷ ನೆರವು ಒದಗಿಸಲಾಗುವುದು.
    ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿ, ಹಿಂದಿನ ತರಗತಿಯ ಅಂಕಪಟ್ಟಿ, ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ, ಶಾಲೆ/ ಕಾಲೇಜನ ಸಂಪೂರ್ಣ ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಇತ್ಯಾದಿಗಳ ದೃಢೀಕರಿಸಿದ ದಾಖಲೆಗಳೊಂದಿಗೆ 7 ದಿನಗಳೊಳಗಾಗಿ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ.ಪಂ. ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ. 

ಅಡುಗೆಯವರು/ ಅಡುಗೆ ಸಹಾಯಕರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ


ಕೊಪ್ಪಳ, ಜೂ. 19 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು/ ಅಡುಗೆ ಸಹಾಯಕರ ನೇರ ನೇಮಕಾತಿಗಾಗಿ ಈ ಹಿಂದೆ ಆನ್‍ಲೈಲ್ ಮೂಲಕ  ಅರ್ಜಿ ಆಹ್ವಾನಿಸಲಾಗಿದ್ದು, ಇದೀಗ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಹಾಗೂ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.
    ಅಡುಗೆಯವರು - 41 ಹುದ್ದೆ ಮತ್ತು ಅಡುಗೆ ಸಹಾಯಕರು – 92 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.  ಇದೀಗ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ 1:5 ರ ಅನುಪಾತದ ಪ್ರಕಾರ ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು  www.koppal.nic.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆ ಹಾಗೂ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕು.  
       ದಾಖಲೆಗಳ ಪರಿಶೀಲನೆಗಾಗಿ, ಅಡುಗೆಯವರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 22 ರಂದು  ಮತ್ತು ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 23 ರಂದು  ಕೊಪ್ಪಳದ ಕವಲೂರು ನಗರ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಂಕೀರ್ಣದಲ್ಲಿ ಹಾಜರಾಗಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.
      ಅಡುಗೆ ತಯಾರಿಕ ಪ್ರಾಯೋಗಿಕ ಪರೀಕ್ಷೆಗಾಗಿ,  ಅಡುಗೆಯವರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 28 ರಂದು ಮತ್ತು ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 29 ರಂದು   ಕೊಪ್ಪಳದ ಕವಲೂರು ನಗರ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಂಕೀರ್ಣ ಇಲ್ಲಿಗೆ ಹಾಜರಾಗಬೇಕು.  
    ಜುಲೈ. 03 ರಂದು ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹೊರಡಿಸಲಾಗುವುದು.  ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ ಜುಲೈ. 18 ರಂದು ಅಂತಿಮ ಆಯ್ಕೆ ಪಟ್ಟಿ ಹೊರಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಗ್ರೂಪ್-ಡಿ ನೌಕರರ ನೇರ ನೇಮಕಾತಿ ಸಮಿತಿಯ ಅಧ್ಯಕ್ಷರಾದ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 17 June 2017

ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ


ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಕಳೆದ ಕೆಲವು ತಿಂಗಳುಗಳಿಂದಲೂ ಕೃತಕವಾಗಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಅಕ್ಕಿ, ಸಕ್ಕರೆ ಮತ್ತು ಮೊಟ್ಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎನ್ನುವ ಸುಳ್ಳು ಸುದ್ದಿಯು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರಕಟವಾಗುತ್ತಿದೆ.  ಇಂತಹ ಪದಾರ್ಥಗಳನ್ನು ಪ್ರದರ್ಶಿಸಿದ ವರದಿಗಳು ಸಹಾ ಪ್ರಸಾರವಾಗುತ್ತಿದ್ದು, ಇಂತಹ ಸತ್ಯಕ್ಕೆ ದೂರವಾದ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಮೊಟ್ಟೆ : ಮೊಟ್ಟೆಯನ್ನು ಕೃತಕವಾಗಿ ಚೀನಾ ದೇಶದಲ್ಲಿ ತಯಾರಿಸಲಾಗುತ್ತಿದ್ದು, ಭಾರತಕ್ಕೆ ರಫ್ತು ಆಗುತ್ತಿದೆ, ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ ಎಂಬುದು ವಂದತಿಯೇ ಹೊರತು ನಿಜವಲ್ಲ.  ನೈಸರ್ಗಿಕ ಮೊಟ್ಟೆಗೆ ಸರಿಸಮನಾದ ಕೃತಕ ಮೊಟ್ಟೆ ತಯಾರಿಸಲು ಸಾಧ್ಯವೇ ಇಲ್ಲ.  ಕೃತಕ ಮೊಟ್ಟೆ ತಯಾರಿಸಲು ಒಂದು ಮೊಟ್ಟೆಗೆ ಕನಿಷ್ಟ 250 ರೂ. ವೆಚ್ಚವಾಗಲಿದ್ದು, ಇದೂ ಕೂಡ ನೈಸರ್ಗಿಕ ಮೊಟ್ಟೆಯನ್ನು ಹೋಲುವುದಿಲ್ಲ ಹಾಗೂ ವ್ಯವಹಾರಿಕವಾಗಿಯೂ ಸಾಧ್ಯವಿಲ್ಲ.  ರಾಜ್ಯದ ಆಹಾರ ತಜ್ಞರು ಈ ಕುರಿತು ಪರಿಶೀಲಿಸಿದ್ದು,  ರಾಜ್ಯದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಮೊಟ್ಟೆ ಬಳಕೆ ಮಾಡಿರುವುದು ಧೃಢಪಟ್ಟಿರುವುದಿಲ್ಲ.
ಪ್ಲಾಸ್ಟಿಕ್ ಅಕ್ಕಿ : ಚೀನಾ ದೇಶದಲ್ಲಿ ತಯಾರಾಗುತ್ತಿದ್ದ ಅಕ್ಕಿಯನ್ನು ಹೋಲುವ ಯಾವುದೋ ಪದಾರ್ಥವನ್ನೇ ಕೃತಕ ಅಕ್ಕಿಯೆಂದು ಬಿಂಬಿಸಿ ಭಾರತದ ಮಾರುಕಟ್ಟೆಗೆ ಸರಬರಾಜಾಗುತ್ತಿದೆ ಎಂದು ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ.  ಆದರೆ ಕೃತಕವಾಗಿ 1 ಕೆ.ಜಿ ಅಕ್ಕಿ ತಯಾರಿಸಲು ಅಂದಾಜು 200  ರೂ. ವೆಚ್ಚ ತಗಲುತ್ತದೆ.  ಆದರೂ ನೈಸರ್ಗಿಕ ಅಕ್ಕಿಗೆ ಸರಿಸಮಾನಾಗಿ ಭೌದ್ಧಿಕವಾಗಿ ಹಾಗೂ ರಚನಾತ್ಮಕವಾಗಿ ಇರಲು ಸಾಧ್ಯವೆ ಇಲ್ಲ.  ಮಾರುಕಟ್ಟೆಯಲ್ಲಿ ಉತ್ತಮ ಅಕ್ಕಿ ರೂ. 20-00 ರಿಂದ 40-00 ರೂ. ಗಳಿಗೆ ಸಿಗುತ್ತದೆ.  ಆದ್ದರಿಂದ ಇದು ಕೇವಲ ವಂದತಿಯೇ ಹೊರತು ಸತ್ಯವಲ್ಲ.  ಈಗಾಗಲೇ ಆಹಾರ ತಜ್ಞರಾದ ಕೆ.ಸಿ. ರಘು ಅವರು ಇದನ್ನು ಸಾರಿ ಸಾರಿ ಸ್ಪಷ್ಟಪಡಿಸಿದ್ದಾರೆ.  ಯಾರೂ   ಗೊಂದಲಕ್ಕೆ ಈಡಾಗದೇ ಇಂತಹ ವರದಿಗಳನ್ನು ನಂಬಬಾರದು.  ಹಾಗೂ ಈ ವಿಷಯದ ಕುರಿತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಹ ವ್ಯಾಪಕವಾಗಿ ವಿಶ್ಲೇಷಣೆ ಮಾಡಿ ಇದು ಕೇವಲ ಕಳಪೆ ಗುಣಮಟ್ಟದ ಅಕ್ಕಿಯೇ ಹೊರತು ಕೃತಕ ಪ್ಲಾಸ್ಟಿಕ್ ಅಕ್ಕಿ ಅಲ್ಲವೆಂದು ಧೃಢಪಡಿಸಿದ್ದಾರೆ. 
ಪ್ಲಾಸ್ಟಿಕ್ ಅಕ್ಕಿ ಪತ್ತೆ ಹಚ್ಚುವಿಕೆ :
************* * ಒಂದು ಚಮಚ ಪ್ಲಾಸ್ಟಿಕ್ ಅಕ್ಕಿಯನ್ನು ಎಣ್ಣೆ ಬಾಣಲಿಗೆ ಹಾಕಿ ಬಿಸಿ ಮಾಡಿದರೆ, ಈ ಅಕ್ಕಿ ಮೆಲ್ಟ್ ಆಗಿ ತಳಕ್ಕೆ ಅಂಟಿಕೊಳ್ಳುತ್ತದೆ.  * ಅನ್ನ ಮಾಡುವಾಗ, ಅಕ್ಕಿ ಪ್ಲಾಸ್ಟಿಕ್ ನಿರ್ಮಿತವಾಗಿದ್ದರೆ, ಅನ್ನ ಪಾತ್ರೆಯ ಮೇಲ್ಬಾಗದಲ್ಲಿ ದಪ್ಪ ಪೊರೆಯ ರೀತಿ ಕಟ್ಟಿಕೊಂಡಿರುತ್ತದೆ.  * ಅಕ್ಕಿ ನೀರಿನಲ್ಲಿ ತೇಲುವುದಿಲ್ಲ, ಮುಳುಗುತ್ತದೆ.  ಆದರೆ ಪ್ಲಾಸ್ಟಿಕ್ ಅಕ್ಕಿ ತೇಲುತ್ತದೆ. 
ಸಕ್ಕರೆ :
****** ಸಕ್ಕರೆ ವಿಷಯದಲ್ಲಿಯೂ ಇದೆ ರೀತಿ ಗೊಂದಲ ಮೂಡಿಸಲಾಗುತ್ತಿದ್ದು, ನೈಸರ್ಗಿಕ ಸಕ್ಕರೆ 1 ಕೆ.ಜಿಗೆ ರೂ. 40-00 ಇರುತ್ತದೆ.  ಆದರೆ ಸಾಧಾರಣ ಗುಣಮಟ್ಟದ ಒಂದು ಕೆ.ಜಿ ಪ್ಲಾಸ್ಟಿಕ್‍ಗೆ ರೂ. 65 ಆಗುತ್ತದೆ.  ಇದನ್ನು ಕೃತಕವಾಗಿ ಸಕ್ಕರೆಯನ್ನಾಗಿ ಪರಿವರ್ತಿಸಲು ಹೆಚ್ಚಿನ ಖರ್ಚು ವೆಚ್ಚ ತಗಲುವುದರಿಂದ ಪ್ಲಾಸ್ಟಿಕ್ ಮಿಶ್ರಿತ ಸಕ್ಕರೆಯನ್ನು ತಯಾರಿಸಿ ಮಾರಾಟ ಮಾಡಲು ಸಾಧ್ಯವಿಲ್ಲ.  ಸಕ್ಕರೆಯನ್ನು ದಾಸ್ತಾನು ಮಾಡುವಾಗ ಹಾಳಗದಂತೆ ರಕ್ಷಿಸಲು ಸರ್ಕಾರದ ಆಹಾರ ಇಲಾಖೆ ಮಾರ್ಗಸೂಚಿಯಂತೆ ಸೋಡಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಸಿಲಿಕೇಟ್ ಎನ್ನುವ ರಾಸಾಯನಿಕಗಳನ್ನು ಬಳಸಬಹುದಾಗಿದೆ.  ಈ ಎರಡೂ ರಾಸಾಯನಿಕಗಳು ನೀರಿನಲ್ಲಿ ಕರಗುವುದಿಲ್ಲ.  ಇದನ್ನೇ ಕೆಲವರು ಕೃತಕ ಸಕ್ಕರೆ ಯೆಂದು ಬಿಂಬಿಸಿರುತ್ತಾರೆ.  ಇಂತಹ ವಿಷಯಗಳು ಸುಳ್ಳು ವಂದತಿಗಳಾಗಿರುವುದರಿಂದ ಸಾರ್ವಜನಿಕರು ನಂಬಬಾರದು. 
    ಈ ಎಲ್ಲ ಅಂಶಗಳ ಕುರಿತು ಕಲಬೆರಕೆಯ ಅತಿರೇಕವೇ ಇಂತಹ ಸುದ್ದಿಗಳಿಗೆ ಹಾಗೂ ಗೊಂದಲಗಳಿಗೆ ಮೂಲವೆಂದು ತಿಳಿಸುತ್ತಾ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ ಮತ್ತು ಪ್ಲಾಸ್ಟಿಕ್ ಮೊಟ್ಟೆ ಎನ್ನುವುದು ಸುಳ್ಳು ವಂದತಿಗಳು. ಇದನ್ನು ಸಾರ್ವಜನಿಕರು ನಂಬಕೂಡದು ಹಾಗೂ ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಆಹಾತ ತಜ್ಞರು ದೃಢಪಡಿಸಿರುವುದರಿಂದ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ.  ಇಂತಹ ಊಹಾಪೋಹಗಳು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಆಹಾರ ಸುರಕ್ಷಾ ಇಲಾಖೆ ಗಮನಕ್ಕೆ ತರಲು ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಅವರು ಪ್ರಕಟಣೆ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಜೂ. 20 ರಂದು ವಸತಿ ನಿಲಯಗಳ ಪ್ರವೇಶಕ್ಕೆ 2ನೇ ಸುತ್ತಿನ ಕೌನ್ಸ್‍ಲಿಂಗ್


ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಖಾಲಿ ಉಳಿದ ಸ್ಥಾನಗಳಿಗೆ 2ನೇ ಸುತ್ತಿನ ಕೌನ್ಸ್‍ಲಿಂಗ್ ಅನ್ನು ಜೂ. 20 ರಂದು ಬೆಳಿಗ್ಗೆ 10-00 ಗಂಟೆಗೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬೇವೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಏರ್ಪಡಿಸಲಾಗಿದೆ.
    ಮೊದಲನೇ ಸುತ್ತಿನ ಕೌನ್ಸ್‍ಲಿಂಗ್‍ನಲ್ಲಿ ಭರ್ತಿ ಮಾಡಿದ ನಂತರ, ಖಾಲಿ ಇರುವ ಸ್ಥಾನಗಳಿಗೆ ಮೊದಲನೇ ಸುತ್ತಿನ ಕೌನ್ಸ್‍ಲಿಂಗ್‍ಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ, ಖಾಲಿ ಇರುವ ಸೀಟುಗಳಿಗೆ ಅನುಗುಣವಾಗಿ ಮೆರಿಟ್ ಆಧಾರದ ಮೇಲೆ 2ನೇ ಸುತ್ತಿನ ಕೌನ್ಸ್‍ಲಿಂಗ್ ಅನ್ನು ಆಯೋಜಿಸಲಾಗಿದೆ. ಪ್ರವೇಶ ಪಡೆಯಲು ಇಚ್ಚಿಸುವರು ಜೂ. 20 ರಂದು ಬೆಳಿಗ್ಗೆ 10-00 ಗಂಟೆಯೊಳಗಾಗಿ ಹಾಜರಾಗಬೇಕು.  ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪ್ರವೇಶ ಪರೀಕ್ಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ : ಅವಧಿ ವಿಸ್ತರಣೆ


ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರವು ಗ್ರಾಮೀಣ ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಪ್ರಸಕ್ತ ಸಾಲಿನ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ (ಸಿಎಂಎಸ್‍ಇಜಿಪಿ) ಯಡಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ 03ರ ವರೆಗೆ ವಿಸ್ತರಿಸಲಾಗಿದೆ.
    ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆಯಡಿ ಅರ್ಜಿ ಸಲ್ಲಿಸಲು ಜೂ. 12 ಕೊನೆಯ ದಿನವಾಗಿತ್ತು.  ಇದೀಗ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 03 ರವರೆಗೆ ವಿಸ್ತರಿಸಲಾಗಿದೆ.  ಆಸಕ್ತ ಅಭ್ಯರ್ಥಿಗಳು ವೆಬ್‍ಸೈಟ್  http://cmegp.kar.nic.in ನಲ್ಲಿ ಕೆ.ವಿ.ಐ.ಬಿ. ಏಜೆನ್ಸಿ  ನಮೂದಿಸಿ ಅರ್ಜಿ ಸಲ್ಲಿಸಿ, ಅರ್ಜಿ ಪ್ರತಿ ಹಾಗೂ ನಿಗದಿತ ದಾಖಲಾತಿಯೊಂದಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ ಕೊಪ್ಪಳ ಇವರಿಗೆ, ದ್ವಿಪ್ರತಿಯಲ್ಲಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-231473 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಹಿರೇಹಳ್ಳ ಜಲಾಶಯದಲ್ಲಿ ಮೀನುಗಾರಿಕೆ : ಅರ್ಜಿ ಆಹ್ವಾನ


ಕೊಪ್ಪಳ ಜೂ. 17 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯು ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯದಲ್ಲಿ ಮೀನುಗಾರಿಕೆ ನಡೆಸಲು ಪರವಾನಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಜಲಾಶಯದ 05 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಮೀನುಗಾರರಿಂದ ಅರ್ಜಿ ಆಹ್ವಾನಿಸಿದೆ.
     ಹಿರೇಹಳ್ಳ ಜಲಾಶಯದಲ್ಲಿ 2017-18 ನೇ ಸಾಲಿಗೆ ಆಗಸ್ಟ್ 01 ರಿಂದ ಅನ್ವಯವಾಗುವಂತೆ ಮೀನು ಹಿಡಿಯಲು ಪರವಾನಿಗೆಯನ್ನು ನೀಡಲು ಮೀನುಗಾರಿಕೆ ಇಲಾಖೆ ಉದ್ದೇಶಿಸಿದ್ದು, ಜಲಾಶಯದ 05 ಕಿ.ಮೀ. ಪರಿಧಿಯ ವ್ಯಾಪ್ತಿಯಲ್ಲಿ ವಾಸಿಸುವ ಮೀನುಗಾರರಿಂದ ಅರ್ಜಿ ಆಹ್ವಾನಿಸಿದೆ.  ಆಸಕ್ತ ಮೀನುಗಾರರು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2), ಕೊಪ್ಪಳ ಇವರ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ, ಪರವಾನಿಗೆ ಪಡೆದುಕೊಳ್ಳಬೇಕು.  ಪರವಾನಿಗೆ ಪಡೆಯದೆ ಮೀನು ಹಿಡಿಯುವವರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು.  ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2), ಕೊಪ್ಪಳ 08539-225016 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಗ್ರಾಮ ಪಂಚಾಯತಿ ಚುನಾವಣೆ : ಅಧಿಸೂಚನೆ ಪ್ರಕಟ


ಕೊಪ್ಪಳ ಜೂ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
     ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾ.ಪಂ.ನ ಹನುಮಸಾಗರ (ಅನುಸೂಚಿತ ಪಂಗಡ-ಮಹಿಳೆ),  ಬೆನಕನಾಳ ಗ್ರಾ.ಪಂ.ನ ಮಡಿಕೇರಿ (ಅನುಸೂಚಿತ ಪಂಗಡ) ಹಾಗೂ ಹಿರೇಗೊಣ್ಣಾಗರ ಗ್ರಾ.ಪಂ.ನ ವಾರಿಕಲ್ (ಹಿಂದುಳಿದ ವರ್ಗ’ಅ’ ಮಹಿಳೆ, ಹಾಗೂ ಚಿಕ್ಕಗೊಣ್ಣಾಗರ (ಸಾಮಾನ್ಯ) ಸೇರಿದಂತೆ ಒಟ್ಟು 04 ಸದಸ್ಯ ಸ್ಥಾನಗಳಿಗಾಗಿ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ.  ಅಧಿಸೂಚನೆಯನ್ವಯ ನಾಮಪತ್ರ ಸಲ್ಲಿಸಲು ಜೂ. 20 ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಜೂ. 21 ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಜೂ. 23 ಕೊನೆಯ ದಿನವಾಗಿರುತ್ತದೆ.  ಮತದಾನದ ಅವಶ್ಯವಿದ್ದರೆ, ಜುಲೈ 02 ರಂದು ಬೆ. 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಸಲಾಗುವುದು.  ಜು. 05 ರೊಳಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಜೂ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಜೂ. 18 ರಂದು ಮಧ್ಯಾಹ್ನ 03 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ಸಂಜೆ 04 ಗಂಟೆಗೆ ಕೊಪ್ಪಳದಲ್ಲಿ ಗಾಣಿಗ ಸಮಾಜದಿಂದ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಸಂಜೆ 06 ಗಂಟೆಗೆ ಕುಕನೂರಿನಲ್ಲಿ ಇಫ್ತಾರ್ ಭೋಜನ ಕೂಟದಲ್ಲಿ ಪಾಲ್ಗೊಳ್ಳುವರು.  ರಾತ್ರಿ 8-20 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ


ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಗ್ರೂಪ್’ಡಿ’ ವೃಂದದ ಅಡುಗೆ ಸಹಾಯಕರು / ಕಾವಲುಗಾರರ ನೇರ ನೇಮಕಾತಿಗಾಗಿ ಈ ಹಿಂದೆ ಆನ್‍ಲೈಲ್ ಮೂಲಕ  ಅರ್ಜಿ ಆಹ್ವಾನಿಸಲಾಗಿದ್ದು, ಇದೀಗ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ, ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ಹಾಗೂ ದೇಹದಾಢ್ರ್ಯತೆ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.
    ಅಡುಗೆ ಸಹಾಯಕರು - 29 ಹುದ್ದೆ ಮತ್ತು ಕಾವಲುಗಾರರು – 24 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.  ಇದೀಗ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ 1:5 ರ ಅನುಪಾತದ ಪ್ರಕಾರ  ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು www.koppal.nic.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆ, ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ಹಾಗೂ ದೇಹದಾಢ್ರ್ಯತೆ ಪರೀಕ್ಷೆಗೆ ಹಾಜರಾಗಬೇಕು.  
       ದಾಖಲೆಗಳ ಪರಿಶೀಲನೆಗಾಗಿ, ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 21 ರಂದು  ಮತ್ತು ಕಾವಲುಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 24 ರಂದು  ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.
      ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಅಡುಗೆ ತಯಾರಿಕ ಪ್ರಾಯೋಗಿಕ ಪರೀಕ್ಷೆ ಜೂನ್. 30 ರಂದು ಮತ್ತು ಕಾವಲುಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ದೇಹದಾಢ್ರ್ಯತೆ ಪರೀಕ್ಷೆ ಜೂನ್. 29 ರಂದು  ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಏರ್ಪಡಿಸಲಾಗಿದ್ದು, ನಿಗದಿತ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಹಾಜರಾಗಬೇಕು. 
    ಜುಲೈ. 03 ರಂದು ಅಡುಗೆ ಸಹಾಯಕರ ಹುದ್ದೆಗಳ ಹಾಗೂ ಜು. 05 ರಂದು ಕಾವಲುಗಾರರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹೊರಡಿಸಲಾಗುವುದು.  ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ ಅಡುಗೆ ಸಹಾಯಕರ ಹುದ್ದೆಗೆ ಜುಲೈ. 20 ರಂದು ಹಾಗೂ ಕಾವಲುಗಾರರ ಹುದ್ದೆಗೆ ಜು. 25 ರಂದು ಅಂತಿಮ ಆಯ್ಕೆ ಪಟ್ಟಿ ಹೊರಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಗ್ರೂಪ್-ಡಿ ನೌಕರರ ನೇರ ನೇಮಕಾತಿ ಸಮಿತಿಯ ಅಧ್ಯಕ್ಷರಾದ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಚಾಲನಾ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ವರ್ಗದ ಅಲೆಮಾರಿ/ಅರೆ ಅಲೆಮಾರಿ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ಭಾರಿ ವಾಹನ ಚಾಲನಾ ತರಬೇತಿ ಹಾಗೂ ಲಘು ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 
    ಪರಿಶಿಷ್ಟ ವರ್ಗದ ಅಲೆಮಾರಿ/ಅರೆ ಅಲೆಮಾರಿ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯದ ಕೊಪ್ಪಳ ಜಿಲ್ಲೆಯ 40 ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ಕಾರ್ಯಕ್ರಮವನ್ನು ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬೆಂಗಳೂರು ರವರ ಮೂಲಕ ಅನುಷ್ಠಾನಗೊಳಿಸಲು ಹಾಗೂ 40 ಅಭ್ಯರ್ಥಿಗಳಿಗೆ ಲಘು ವಾಹನ ಚಾಲನಾ ತರಬೇತಿಯನ್ನು ಜಿಲ್ಲಾ ಮಟ್ಟದ ಅಧಿಕೃತ ಪರವಾನಿಗೆ ಪಡೆದ ಚಾಲನಾ ತರಬೇತಿ ಸಂಸ್ಥೆಯಿಂದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರಿಶಿಷ್ಟ ವರ್ಗದ ಅಲೆಮಾರಿ/ಅರೆ ಅಲೆಮಾರಿ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳಿಗೆ ಸೇರಿದವರಾಗಿರಬೇಕು.  ಲಘು ವಾಹನ ತರಬೇತಿಗಾಗಿ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು.  ಅರ್ಜಿ ಸಲ್ಲಿಸುವ ದಿನಾಂಕಕ್ಕೆ 18 ವರ್ಷ ತುಂಬಿರಬೇಕು.  ದೇಹದಾಢ್ರ್ಯತೆ ತೂಕ-50 ಕೆಜಿ ಕನಿಷ್ಠ ಮತ್ತು ಎತ್ತರ 160 ಸೆಂ.ಮೀ ಹೊಂದಿರಬೇಕು.  ವಿಳಾಸ, ಛಾಯಾ ಚಿತ್ರ ಹಾಗೂ ಧೃಢೀಕರಣ ದಾಖಲೆಗಳನ್ನು ಲಗತ್ತಿಸಬೇಕು.  ಭಾರಿ ವಾಹನ ತರಬೇತಿಗಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು.  ಲಘು ವಾಹನ ಚಾಲನಾ ಪರವಾನಿಗೆಯನ್ನು ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು.  ಅರ್ಜಿ ಸಲ್ಲಿಸುವ ದಿನಾಂಕಕ್ಕೆ 21 ವರ್ಷ ತುಂಬಿರಬೇಕು.  ದೇಹದಾಢ್ರ್ಯತೆ ತೂಕ-50 ಕೆಜಿ ಕನಿಷ್ಠ ಮತ್ತು ಎತ್ತರ 160 ಸೆಂ.ಮೀ ಹೊಂದಿರಬೇಕು.  ವಿಳಾಸ, ಛಾಯಾ ಚಿತ್ರ ಹಾಗೂ ಧೃಢೀಕರಣ ದಾಖಲೆಗಳನ್ನು ಲಗತ್ತಿಸಿ ಜೂನ್. 30 ರೊಳಗಾಗಿ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

ನಿವೇಶನ/ವಸತಿ ನಿರ್ಮಾಣ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ವರ್ಗದ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ನಿವೇಶನ/ ವಸತಿ ನಿರ್ಮಾಣದ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಪರಿಶಿಷ್ಟ ವರ್ಗದ ಅಲೆಮಾರಿ/ಅರೆ ಅಲೆಮಾರಿ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯದ ವಿಶೇಷ ಅಭಿವೃದ್ಧಿ ಯೋಜನೆಯಡಿ ನಿವೇಶನ ಒದಗಿಸುವುದು ಹಾಗೂ ವಸತಿ ನಿರ್ಮಾಣ ಕಾರ್ಯಕ್ರಮವನ್ನು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಯಮ ನಿಯಮಿತ, ಬೆಂಗಳೂರು, ರವರ ಮೂಲಕ ಅನಿಷ್ಠಾನಗೊಳಿಸಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ 50 ಮನೆಗಳ ನಿರ್ಮಾಣ ಹಾಗೂ 30 ನಿವೇಶನ ಒದಗಿಸುವ ಗುರಿ ನಿಗದಿಪಡಿಸಲಾಗಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಆಸಕ್ತರು ಅರ್ಜಿಗಳನ್ನು ಜೂನ್. 30 ರೊಳಗಾಗಿ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

ತಳಕಲ್: ಐ.ಎಂ.ಸಿ ಕೋಟಾದಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ತತ್ಸಂಬಂಧ (ಫಿಟ್ಟರ್), ವಿದ್ಯುತ್ ಶಿಲ್ಪಿ (ಎಲೆಕ್ಟ್ರಿಕಲ್) ಹಾಗೂ ವಿದ್ಯುನ್ಮಾನ ದುರಸ್ತಿಗಾರ (ಎಲೆಕ್ಟ್ರಾನಿಕ್ ಮೆಕಾನಿಕಲ್) ವೃತ್ತಿಗಳಲ್ಲಿ  ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  
    ತತ್ಸಂಬಂಧ (ಫಿಟ್ಟರ್) ಮತ್ತು ವಿದ್ಯುತ್ ಶಿಲ್ಪಿ (ಎಲೆಕ್ಟ್ರಿಕಲ್) ತಲಾ 5 ಸೀಟುಗಳು, ಹಾಗೂ ವಿದ್ಯುನ್ಮಾನ ದುರಸ್ತಿಗಾರ (ಎಲೆಕ್ಟ್ರಾನಿಕ್ ಮೆಕಾನಿಕಲ್) – 6 ಸೀಟು, ಸಂಸ್ಥೆಯಲ್ಲಿ ಒಟ್ಟು 16 ಸೀಟುಗಳು ಖಾಲಿ ಇದ್ದು, ಐ.ಎಂ.ಸಿ ಕೋಟಾದಡಿ ಭರ್ತಿ ಮಾಡಲಾಗುವುದು.  ಇಚ್ಛೆಯುಳ್ಳ ಅಭ್ಯರ್ಥಿಗಳು ರೂ. 100/- ಗಳನ್ನು ಪಾವತಿಸಿ ಸಂಸ್ಥೆಯಿಂದ ಅರ್ಜಿ ಪಡೆದುಕೊಂಡು ಭರ್ತಿ ಮಾಡಿ, ಪ್ರಾಚಾರ್ಯರ ಕಾರ್ಯಾಲಯದಲ್ಲಿ ಸಲ್ಲಿಸಬೇಕು.   
ಅರ್ಜಿ ಸಲ್ಲಿಸಲು ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಸೀಟುಗಳನ್ನು ನೀಡಲಾಗುವುದು.  ಪ್ರವೇಶ ಪಡೆಯುವ ಅಭ್ಯರ್ಥಿಯು ಪ್ರವೇಶ ಪಡೆಯುವ ದಿನದಂದೇ ತಕ್ಷಣದಲ್ಲಿಯೇ ಐ.ಎಂ.ಸಿ ಶುಲ್ಕ ಹಾಗೂ ಸರಕಾರಿ ಶುಲ್ಕಗಳನ್ನು ಅದೇ ದಿನ ಭರ್ತಿ ಮಾಡಬೇಕು.  ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಐ.ಎಂ.ಸಿ ಕಮೀಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ.  ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು/ ಕಾರ್ಯದರ್ಶಿ ಐ.ಎಂ.ಸಿ ಆಫ್ ಐ.ಟಿ.ಐ, ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ತಳಕಲ್ ಗ್ರಾಮ, ಇವರನ್ನು ದೂರವಾಣಿ ಸಂಖ್ಯೆ 08534-239216 ರಲ್ಲಿ ಅಥವಾ ಖುದ್ದಾಗಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Friday, 16 June 2017

ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿ.ಸಿ. ಕನಗವಲ್ಲಿ ಸೂಚನೆ


ಕೊಪ್ಪಳ ಜೂ. 16 (ಕರ್ನಾಟಕ ವಾರ್ತೆ): ಮಳೆಗಾಲ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಮಲೇರಿಯಾ ವಿರೋಧಿ ಮಾಸಾಚರಣೆ ನಿಮಿತ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗ ಪ್ರಕರಣಗಳು ಸಾಮಾನ್ಯವಾಗಿ ಕುಷ್ಟಗಿ ತಾಲೂಕಿನಲ್ಲಿ ಅತಿ ಹೆಚ್ಚು ವರದಿಯಾಗುತ್ತವೆ.  ಇದಕ್ಕೆ ಕುಷ್ಟಗಿ ತಾಲೂಕಿನಲ್ಲಿನ ಕಲ್ಲು ಗಣಿಗಾರಿಕೆಯ ಕ್ವಾರಿಗಳು ಪ್ರಮುಖ ಕಾರಣವಾಗಿವೆ.  ಕ್ವಾರಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಾಟ್ಟು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಆ ಕ್ವಾರಿಗಳ ಸಮೀಪವಿರುವ ಹಳ್ಳಿಗಳ ಜನರು ಸೊಳ್ಳೆಗಳಿಂದ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ.  ಎಲ್ಲಾ ಕ್ವಾರಿಗಳಲ್ಲಿ ಸೊಳ್ಳೆಗಳ ಹಾಗೂ ಲಾರ್ವಾಗಳ ನಾಶಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.  ಹೊರ ರಾಜ್ಯಗಳಿಂದ/ಬೇರೆ ಜಿಲ್ಲೆಗಳಿಂದ ಕ್ವಾರಿಗಳಿಗೆ ಕೆಲಸಕ್ಕೆ ಬರುವ ವಲಸೆ ಕಾರ್ಮಿಕರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಿ ರೋಗಗಳ ನಿಯಂತ್ರಣದಲ್ಲಿ ಕ್ವಾರಿ ಮಾಲೀಕರುಗಳು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು.  ಕ್ವಾರಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸೊಳ್ಳೆ ಪರದೆಗಳನ್ನು ಒದಗಿಸುವಂತಾಗಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವುದು.  ಕೆಲಸ ನಿರ್ವಹಿಸದೇ ಸ್ಥಗಿತಗೊಂಡಿರುವ ಹಾಗೂ ಅನಧಿಕೃತ ಕ್ವಾರಿಗನ್ನು ಮುಚ್ಚಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ನೀರಿನ ನಳ, ಬೋರ್‍ವೆಲ್ & ಬಾವಿಗಳ ಸುತ್ತಮುತ್ತ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ,  ಗ್ರಾಮಗಳಲ್ಲಿ ಗುಂಡಿಗಳನ್ನು, ತಗ್ಗುಗಳನ್ನು ಹಾಗೂ ನಿರುಪಯುಕ್ತ ಬಾವಿಗಳನ್ನು ಮುಚ್ಚಿಸಬೇಕು.  ಇದರಿಂದ ನೀರು ಸಂಗ್ರಹವಾಗದಂತೆ ತಡೆಗಟ್ಟಬಹುದಾಗಿದೆ.   ನಗರ/ಪಟ್ಟಣ ಪ್ರದೇಶಗಳ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸುವ ಸಲುವಾಗಿ ಈಗಿರುವ ನಾಗರೀಕ ಬೈ-ಲಾ (Civic Bye Law) ಮತ್ತು ಕಟ್ಟಡ ಬೈ-ಲಾಗಳನ್ನು ಕಟ್ಟುನಿಟ್ಟಾಗಿ ಅನುಸ್ಟಾನಗೊಳಿಸಬೇಕು.  ಅನುಪಯುಕ್ತ ಮತ್ತು ಘನತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮಾಡಬೇಕು. ಸೂಕ್ತ ಒಳಚರಂಡಿ ವ್ಯವಸ್ಥೆ,  ನಗರದ  ಸ್ವಚ್ಚತೆ ಕಾಪಾಡುವುದು. ನಗರಗಳಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವ ಕಾರ್ಯವನ್ನು ನಗರಸಭೆ, ಪುರಸಭೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜೈವಿಕ ನಿಯಂತ್ರಣ :
**********  ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವಲ್ಲಿ ಜೈವಿಕ ವಿಧಾನದಲ್ಲಿ ಉಪಯೋಗಿಸುವ  ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬೂಸಿಯ ಮೀನುಗಳನ್ನು ಮೀನುಗಾರಿಕೆ ಇಲಾಖೆಯವರು, ಬೆಳೆಸಿ ಜಿಲ್ಲೆಯಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳುವುದು ಸೂಕ್ತವಾಗಿದೆ. ಸೊಳ್ಳೆ ನಿಯಂತ್ರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಅಗತ್ಯಬಿದ್ದಾಗ ಮೀನುಗಳನ್ನು ಸೂಕ್ತ ಸಮಯದಲ್ಲಿ ಉಚಿತವಾಗಿ ಒದಗಿಸುವಂತಾಗಬೇಕು.   ಈ ಮೀನುಗಳು ಸೊಳ್ಳೆಗಳ ಲಾರ್ವವನ್ನು ತಿನ್ನುವುದರಿಂದ, ಸೊಳ್ಳೆಗಳ ಸಂತತಿ ಹರಡುವುದನ್ನು ಈ ಮೂಲಕ ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.
ಮಕ್ಕಳಲ್ಲಿ ಜಾಗೃತಿ ಮೂಡಿಸಿ :
************ ಸೊಳ್ಳೆಗಳಿಂದ ಹರಡುವ ರೋಗಗಳು, ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಶಾಲೆ ಮತ್ತು ಮನೆಗಳ ಸುತ್ತ ಸ್ವಚ್ಚತೆ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಶಾಲಾ ಮಕ್ಕಳಲ್ಲಿ ಶಿಕ್ಷಕರು ಜಾಗೃತಿ ಮೂಡಿಸುವಂತಾಗಬೇಕು.  ಈ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಆರೋಗ್ಯ ಶಿಕ್ಷಣ ನೀಡುವ ಕಾರ್ಯವನ್ನು ಶಿಕ್ಷಣ ಇಲಾಖೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ವಿರುಪಾಕ್ಷರೆಡ್ಡಿ  ಮಾದಿನೂರ ರವರು  ದೇಶದಾದ್ಯಂತ 2030 ರೊಳಗಾಗಿ ಮಲೇರಿಯಾ ರೋಗವನ್ನು ಸಂಪೂರ್ಣ ನಿವಾರಣೆಗೊಳಿಸಲು ಗುರಿ ನಿಗದಿಪಡಿಸಿ ರಾಷ್ಟ್ರೀಯ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಲಾಗಿದೆ. ಅದರಂತೆ ಕರ್ನಾಟಕ ಸರಕಾರವು ಕೂಡ ರಾಜ್ಯದಲ್ಲಿ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಿದ್ದು, ಅದರನ್ವಯ ರಾಜ್ಯದಲ್ಲಿ 2025  ರ ವೇಳೆಗೆ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ನಿಗದಿಪಡಿಸಿದೆ ಎಂದರು.
ಜಿಲ್ಲಾ ವಿ.ಬಿ.ಡಿ ಸಲಹೆಗಾರ ರಮೇಶ್. ಕೆ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ 2005 ರಲ್ಲಿ ಹೆಚ್ಚು 6634 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು 2016 ರಲ್ಲಿ 382 ಪ್ರಕರಣಗಳು ವರದಿಯಾಗಿವೆ. 2016 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿರುವ  382 ಪ್ರಕರಣಗಳಲ್ಲಿ  271 ಪ್ರಕರಣಗಳು ಕುಷ್ಟಗಿ ತಾಲೂಕಿನಿಂದ, 49 ಪ್ರಕರಣಗಳು ಯಲಬುರ್ಗಾ, 46 ಪ್ರಕರಣಗಳು ಗಂಗಾವತಿ ಹಾಗೂ 16 ಪ್ರಕರಣಗಳು ಕೊಪ್ಪಳ ತಾಲೂಕಿನಲ್ಲಿ ವರದಿಯಾಗಿವೆ. ಕುಷ್ಟಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳ ವರದಿಯಾಗಲು ಹೂಲಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಹೆಚ್ಚಿನ ಗ್ರಾನೈಟ್ ಕ್ವಾರಿಗಳು ಹಾಗೂ ವಲಸೆ ಕಾರ್ಮಿಕರೇ ಕಾರಣ.  ಜಿಲ್ಲೆಯಲ್ಲಿ 2005 ರಿಂದ 2016 ರವರೆಗೆ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಅದರಲ್ಲಿ ಜಿಲ್ಲಾಡಳಿತದ ಸಹಕಾರ ಹಾಗೂ ಆರೋಗ್ಯ ಇಲಾಖೆಯ ಪರಿಶ್ರಮ ಕಾರಣವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಕೊಪ್ಪಳ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಶೀಘ್ರ ರೋಗಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆ ತತ್ವದ ಆಧಾರದ ಮೇಲೆ 24 ತಾಸುಗಳೊಳಗೆ ರೋಗಪತ್ತೆ ಮಾಡಿ ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ಉಪಕೇಂದ್ರ ಮತ್ತು ಹಳ್ಳಿಗಳಲ್ಲಿ ಪುರುಷ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತರಿಂದ ಹಾಗೂ ಆಶಾಗಳಿಂದ ಮಲೇರಿಯಾ ಸರ್ವೇಕ್ಷಣೆ ನಡೆಸಲಾಗುತ್ತಿದೆ. ಆಶಾಗಳಿಗೆ ಶೀಘ್ರರೋಗ ಪತ್ತೆ ಸಾಧನಗಳನ್ನು ನೀಡಲಾಗಿದೆ. ಮಲೇರಿಯಾ ಸಮಸ್ಯಾತ್ಮಕ ಹಳ್ಳಿಗಳಲ್ಲಿ ವರ್ಷಕ್ಕೆರಡು ಬಾರಿ ಒಳಾಂಗಣ ಕೀಟನಾಶಕ ಸಿಂಪರಣೆಯನ್ನು ಮಾಡಲಾಗುತ್ತಿದೆ. ಹಾಗೂ ಆಯ್ದ ಸಮಸ್ಯಾತ್ಮಕ ಹಳ್ಳಿಗಳಿಗೆ ಧೀರ್ಘಬಾಳಿಕೆಯ ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ನೀಡಲಾಗುತ್ತಿದೆ ಮತ್ತು ಮಲೇರಿಯಾ ಸಮಸ್ಯಾತ್ಮಕ ಗ್ರಾಮಪಂಚಾಯತ್‍ಗಳಲ್ಲಿ ಜನಜಾಗೃತಿ ಸಭೆಗಳನ್ನು ಏರ್ಪಡಿಸಿ ಜನಪ್ರತಿನಿಧಿಗಳಿಗೆ ಹಾಗೂ ಜನಸಮುದಾಯಕ್ಕೆ ಅರಿವು ಮೂಡಿಸಲಾಗುತ್ತಿದೆ. ಆಯ್ದ ಸಮಸ್ಯಾತ್ಮಕ ಪ್ರದೇಶಗಳ ಶಾಲಾ ಕಾಲೇಜುಗಳಲ್ಲಿ  ಮಲೇರಿಯಾ ಹರಡುವಿಕೆ ಹಾಗೂ ತಡೆಗಟ್ಟುವಿಕೆಯ ಬಗ್ಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ದೆ, ಕ್ವಿಜ್ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು.
      ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ರಾಮಾಂಜನೇಯ, ಡಾ. ಆನಂದ ಗೋಟೂರು, ಡಾ. ಗೌರಿಶಂಕರ, ಸಹಾಯಕ ಎಂಟೋಮಾಜಿಸ್ಟ್ ಎಲ್. ಹಿರೇಗೌಡರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜೂ. 21 ರಂದು ಕೊಪ್ಪಳದಲ್ಲಿ 3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ


ಕೊಪ್ಪಳ, ಜೂ. 16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ 3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21 ರಂದು ಬೆಳಿಗ್ಗೆ 06-00 ಗಂಟೆಗೆ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ಜಿ.ಪಂ. ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಪಾಲ್ಗೊಳ್ಳುವರು.
3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರು ಆಯುಷ್ ನಿರ್ದೇಶನಾಲಯದ ನಿರ್ದೇಶಕ ರಾಜ ಕಿಶೋರ ಸಿಂಗ್ ಹಾಗೂ ಆಯುಷ್ ಇಲಾಖೆ ಯೋಗ ವಿಭಾಗದ ಉಪ ನಿರ್ದೇಶಕ ಡಾ. ಸತೀಶ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

ಅಡುಗೆಯವರು/ ಅಡುಗೆ ಸಹಾಯಕರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ


ಕೊಪ್ಪಳ, ಜೂ. 16 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು/ ಅಡುಗೆ ಸಹಾಯಕರ ನೇರ ನೇಮಕಾತಿಗಾಗಿ ಈ ಹಿಂದೆ ಆನ್‍ಲೈಲ್ ಮೂಲಕ  ಅರ್ಜಿ ಆಹ್ವಾನಿಸಲಾಗಿದ್ದು, ಇದೀಗ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಹಾಗೂ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.
    ಅಡುಗೆಯವರು - 41 ಹುದ್ದೆ ಮತ್ತು ಅಡುಗೆ ಸಹಾಯಕರು – 92 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.  ಇದೀಗ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ 1:5 ರ ಅನುಪಾತದ ಪ್ರಕಾರ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ವೆಬ್‍ಸೈಟ್  www.koppal.nic.in  ನಲ್ಲಿ ಪ್ರಕಟಿಸಲಾಗಿದೆ.  ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆ ಹಾಗೂ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕು.  
       ದಾಖಲೆಗಳ ಪರಿಶೀಲನೆಗಾಗಿ, ಅಡುಗೆಯವರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 22 ರಂದು  ಮತ್ತು ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 23 ರಂದು  ಕೊಪ್ಪಳದ ಕವಲೂರು ನಗರ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಂಕೀರ್ಣದಲ್ಲಿ ಹಾಜರಾಗಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.
      ಅಡುಗೆ ತಯಾರಿಕ ಪ್ರಾಯೋಗಿಕ ಪರೀಕ್ಷೆಗಾಗಿ,  ಅಡುಗೆಯವರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 28 ರಂದು ಮತ್ತು ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 29 ರಂದು   ಕೊಪ್ಪಳದ ಕವಲೂರು ನಗರ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಂಕೀರ್ಣ ಇಲ್ಲಿಗೆ ಹಾಜರಾಗಬೇಕು.  
    ಜುಲೈ. 03 ರಂದು ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹೊರಡಿಸಲಾಗುವುದು.  ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ ಜುಲೈ. 18 ರಂದು ಅಂತಿಮ ಆಯ್ಕೆ ಪಟ್ಟಿ ಹೊರಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಗ್ರೂಪ್-ಡಿ ನೌಕರರ ನೇರ ನೇಮಕಾತಿ ಸಮಿತಿಯ ಅಧ್ಯಕ್ಷರಾದ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ


ಕೊಪ್ಪಳ, ಜೂ. 16 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗಾಗಿ ಒಂದನೇ ತರಗತಿಯಿಂದ ಪದವಿ/ ಡಿಪ್ಲೋಮಾ ವರೆಗೆ ಕರ್ನಾಟಕದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಮಿಲಿಟರಿ ಪಿಂಚಿಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
    ಪಿಂಚಿಣಿ ಇಲ್ಲದ ಕರ್ನಾಟಕ ಮಾಜಿ ಸೈನಿಕರು ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದ ಮಾಜಿ ಸೈನಿಕರ ಮಕ್ಕಳಿಗೂ ಸಹ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಪುಸ್ತಕ ಧನ ಸಹಾಯ ಮತ್ತು ಡಿಗ್ರಿ ಡಿಪ್ಲೋಮಾ, ಜೆಓಸಿ/ ಪ್ರೋಫೇಷನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳ ವಿಶೇಷ ನಿಧಿಯಿಂದ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಮಾಜಿ ಸೈನಿಕರು/ ಅವಲಂಬಿತರು/ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ದಲ್ಲಿ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.  ಬ್ಯಾಂಕ್ ಖಾತೆಯ ರಿಸಿಪೆಂಟ್ ನಂಬರನ್ನು, ಅರ್ಜಿಯ ಜೊತೆಗೆ ಬ್ಯಾಂಕ್ ಖಾತೆ ಪುಸ್ತಕ ಹಾಗೂ ಮಕ್ಕಳ ಆಧಾರ ಕಾರ್ಡ ನೆರಳಚ್ಚು ಪ್ರತಿಯನ್ನು ಲಗತ್ತಿಸಿ ಸೆಪ್ಟೆಂಬರ್. 30 ರೊಳಗಾಗಿ ಸಲ್ಲಿಸಬೇಕು.  ನಿಗದಿತ ನಮೂನೆಯ ಅರ್ಜಿ ಫಾರಂಗಳನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಸೆಕ್ಟರ ನಂಬರ 22 ಪೊಲೀಸ್ ಪ್ಯಾಲೇಸ ಹತ್ತಿರ ನವನಗರ ಬಾಗಲಕೋಟ ದೂರವಾಣಿ ಸಂಖ್ಯೆ 08354-235434 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜನರಲ್ ಕೆ.ಎಸ್ ತಿಮ್ಮಯ್ಯ ನಗದು ಪ್ರಶಸ್ತಿ : ಮಾಜಿ ಸೈನಿಕರ ಮಕ್ಕಳಿಗೆ ಅರ್ಜಿ ಆಹ್ವಾನ


ಕೊಪ್ಪಳ, ಜೂ. 16 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಅರ್ಹ ಮಾಜಿ ಸೈನಿಕರ ಗಂಡು ಮತ್ತು ಹೆಣ್ಣು ಮಕ್ಕಳಿಗೆ “ಜನರಲ್ ಕೆ.ಎಸ್ ತಿಮ್ಮಯ್ಯ” ನಗದು ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು ಸೆಪ್ಟೆಂಬರ್. 10 ಕೊನೆಯ ದಿನವಾಗಿದ್ದು, ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯ ಕರ್ನಾಟಕ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳು ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಶೇ. 60% ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.  ನಿಗಧಿತ ನಮೂನೆಯ ಅರ್ಜಿ ಫಾರಂಗಳನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ಇವರ ಕಾರ್ಯಾಲಯ, ದೂರವಾಣಿ ಸಂಖ್ಯೆ 08354-235434 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಕಲಚೇತನರೊಂದಿಗೆ ವಿವಾಹವಾದವರಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ


ಕೊಪ್ಪಳ, ಜೂ. 16 (ಕರ್ನಾಟಕ ವಾರ್ತೆ): ಕೊಪ್ಪಳದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ವಿವಾಹ ಪ್ರೋತ್ಸಾಹಧನ ಯೋಜನೆಗಾಗಿ, ಸಾಮಾನ್ಯ ವ್ಯಕ್ತಿ ವಿಕಲಚೇತನರೊಂದಿಗೆ ವಿವಾಹವಾದವರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ದಿ. 28-08-2013 ರ ನಂತರ ಮದುವೆಯಾದವರು ಈ ಯೋಜನೆಗೆ ಅರ್ಹರು.  ಅರ್ಜಿ ನಮೂನೆ (ಮೂಲ ಪ್ರತಿ), ವಾಸಸ್ಥಳ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ ಮತ್ತು ಮತದಾರರ ಗುರುತಿನ ಚೀಟಿ, ಅಂಗವಿಕಲರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ (ಜಂಟಿ ಖಾತೆ), ಮದುವೆ ಕಾರ್ಡ (ಲಗ್ನ ಪತ್ರಿಕೆ ಮೂಲ ಪ್ರತಿ), ಮದುವೆ ನೊಂದಣಿ ಪ್ರಮಾಣ ಪತ್ರ, ರೂ. 20 ಬಾಂಡ (ಇನ್ನೊಂದು ಮದುವೆ ಆಗುವುದಿಲ್ಲವೆಂದು), ಭಾವಚಿತ್ರ, ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರ (ಸಾಮಾನ್ಯ ವ್ಯಕ್ತಿ), ವಿ.ಆರ್.ಡಬ್ಲ್ಯೂ. ಮತ್ತು ಎಂ.ಆರ್.ಡಬ್ಲ್ಯೂ ವರದಿ ಇತ್ಯಾದಿ ಅಗತ್ಯ ದಾಖಲೆಗಳೊಂದಿಗೆ ಜುಲೈ. 31 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಮಹೇಶ್ ಹೆಚ್.ರಡ್ಡೇರ್ ಬಿಲ್ಡೀಂಗ್ ಗವಿಶ್ರೀ ನಗರ ಕೆ.ಇ.ಬಿ ಗ್ರೀಡ್ ಹತ್ತಿರ ಹೊಸಪೇಟೆ ರಸ್ತೆ, ಕೊಪ್ಪಳ ಇವರಿಗೆ ಸಲ್ಲಿಸಲುಬೇಕು. 
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಛೇರಿಗೆ ಅಥವಾ ದೂರವಾಣಿ ಸಂಖ್ಯೆ 08539- 221460/ 220496 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜೂ. 16 (ಕರ್ನಾಟಕ ವಾರ್ತೆ): ಕುಕನೂರು ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಲ್ಲಿ ವಸತಿ ರಹಿತ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ (ನಿವೇಶನ ಹೊಂದಿರುವವರಿಗೆ) ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲಿಚ್ಚಿಸುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಕುಕನೂರು ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಜೂ. 30 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ.ಪಂ. ಕಾರ್ಯಾಲಯದ ನೋಟಿಸ್ ಬೋರ್ಡ ಅಥವಾ ವಸತಿ ಶಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಕುಕನೂರು ಪ.ಪಂ. ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Thursday, 15 June 2017

ಭಾಗ್ಯನಗರ ರೈಲ್ವೆ ಮೇಲ್ಸೇತುವೆ: 100 ಮೀ. ಭೂಮಿ ರೈಲ್ವೆಗೆ ಶೀಘ್ರ ಹಸ್ತಾಂತರ- ಎಂ. ಕನಗವಲ್ಲಿಕೊಪ್ಪಳ, ಜೂ. 15 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಭಾಗ್ಯನಗರದ ರೈಲ್ವೆ ಗೇಟ್ ಸಂಖ್ಯೆ 62 ರಲ್ಲಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಗಾಗಿ ರೈಲ್ವೆ ಸ್ಟೇಷನ್ ರಸ್ತೆ ವರೆಗೆ 100 ಮೀ. ಭೂಮಿಯನ್ನು ರೈಲ್ವೆ ಇಲಾಖೆಗೆ ಶೀಘ್ರವೇ ಹಸ್ತಾಂತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಭೂಮಿ ಹಾಗೂ ಕಟ್ಟಡಗಳ ಮಾಲೀಕರು, ಅಧಿಕಾರಿಗಳೊಂದಿಗೆ ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿಯಲ್ಲಿ ಏರ್ಪಡಿಸಲಾದ ಸಭೆಯ ಬಳಿಕ, ಅವರು ಮಾತನಾಡಿದರು.

     ಭಾಗ್ಯನಗರದಿಂದ ರೈಲ್ವೆ ಸ್ಟೇಷನ್ ರೋಡ್‍ವರೆಗಿನ 100 ಮೀ. ಭೂಮಿಯನ್ನು ರೈಲ್ವೆ ಇಲಾಖೆಗೆ ಶೀಘ್ರ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದಲ್ಲಿ, 05 ತಿಂಗಳ ಒಳಗಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿಯನ್ನು ಭೂ ಮಾಲೀಕರಿಂದ ನೇರವಾಗಿ ಖರೀದಿಸಲು ಸರ್ಕಾರ ಮಂಜೂರಾತಿ ನೀಡಿದ ನಂತರ, ನಿರಂತರವಾಗಿ ಸಭೆಗಳನ್ನು ನಡೆಸಿ, ಭೂಮಿ ಪಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತದಿಂದ ಯಾವುದೇ ವಿಳಂಬ ಆಗಿಲ್ಲ.  ಭೂಮಿಯನ್ನು ಅವರ ಒಪ್ಪಿಗೆಯೊಂದಿಗೆ, ನೇರವಾಗಿ ಖರೀದಿಸುವ ಪ್ರಕ್ರಿಯೆ ಅತ್ಯಂತ ಉತ್ತಮವಾಗಿದ್ದು, ಇದರಿಂದಾಗಿ ಭೂ ಮಾಲೀಕರು ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆ ಉದ್ಭವವಾಗುವುದಿಲ್ಲ. ಅನಗತ್ಯ ವಿಳಂಬ ಉಂಟಾಗುವುದನ್ನು ತಡೆಯಬಹುದಾಗಿದ್ದು, ವಿಳಂಬದಿಂದಾಗಿ ಕಾಮಗಾರಿ ಯೋಜನಾ ವೆಚ್ಚದ ಹೆಚ್ಚಳ ಆಗಿ, ಆರ್ಥಿಕ ಹೊರೆ ಉಂಟಾಗುವುದನ್ನೂ ಸಹ ತಡೆಗಟ್ಟಬಹುದಾಗಿದೆ.   ಹೀಗಾಗಿ ಭೂ ಮಾಲೀಕರ ಒಪ್ಪಿಗೆಯೊಂದಿಗೆ ನೇರವಾಗಿ ಖರೀದಿಸುವ ಪ್ರಕ್ರಿಯೆಯನ್ನು ಸರ್ಕಾರದ ಒಪ್ಪಿಗೆ ಪಡೆದು ಕೈಗೊಳ್ಳಲಾಗಿದೆ.  ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಬೇಕಿರುವ ಭೂಮಿ/ಕಟ್ಟಡ ಒಟ್ಟು 17 ಜನರಿಗೆ ಸೇರಿದ್ದಾಗಿದ್ದು, ಭೂಮಿಯ ಮಾಲೀಕರ ಒಪ್ಪಿಗೆಯನ್ನು ಪಡೆದುಕೊಂಡೇ ವಶಕ್ಕೆ ಪಡೆಯಬೇಕಿದೆ.  ಈ ನಿಟ್ಟಿನಲ್ಲಿ ಭೂ ಮಾಲೀಕರಿಂದ ಭೂಮಿಯನ್ನು ನೇರವಾಗಿ ಖರೀದಿಸಿ, ವಶಕ್ಕೆ ಪಡೆಯಲು ಸರ್ಕಾರ ಮಂಜೂರಾತಿ ನೀಡಿರುವ ಪತ್ರ 2017 ರ ಮಾರ್ಚ್ 21 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ.  ಸರ್ಕಾರದ ಮಂಜೂರಾತಿ ಪತ್ರ ಬಂದ ಬಳಿಕವೇ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಏಪ್ರಿಲ್ 05, 06 ಹಾಗೂ ಮೇ. 06 ರಂದು ಹೀಗೆ ಮೂರು ಬಾರಿ ಭೂ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ.  ಅಲ್ಲದೆ ಭೂಮಿಯ ಸರ್ವೆ ಕಾರ್ಯವನ್ನು ಮತ್ತೊಮ್ಮೆ ನಡೆಸಲಾಗಿದೆ.  ಭೂ ಮಾಲೀಕರುಗಳು ತಮಗೆ ಸಂಬಂಧಿಸಿದ ಆಸ್ತಿಗಳ ದಾಖಲೆಗಳನ್ನು ಸಲ್ಲಿಸಿದ ಬಳಿಕವಷ್ಟೇ ಮೌಲ್ಯ ನಿರ್ಧರಿಸಲು ಅವಕಾಶವಿದೆ.  17 ಜನರ ಪೈಕಿ 16 ಜನರ ಭೂಮಿ/ಕಟ್ಟಡಗಳಿಗೆ ಸಂಬಂಧಿಸಿದಂತೆ ಈಗಾಗಲೆ ಮೌಲ್ಯ ವನ್ನು ನಿರ್ಧರಿಸಲಾಗಿದ್ದು, ಇನ್ನೂ ಒಂದು ಆಸ್ತಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಆಗುವುದು ಬಾಕಿ ಇದೆ.  ಭೂಮಿಯ ಮಾಲೀಕರುಗಳು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಳಂಬ ಮಾಡಿದ ಕಾರಣದಿಂದಾಗಿ ಪ್ರಕ್ರಿಯೆಯೂ ವಿಳಂಬವಾಗಿದೆ.  ಮಾರ್ಗಸೂಚಿಯನ್ವಯ ಭಾಗ್ಯನಗರದಿಂದ ಕನಕಾಚಲ ಟಾಕೀಸ್ ವರೆಗೂ ಒಂದು ದರ ಹಾಗೂ ಮಂಜುನಾಥ ಲಾಡ್ಜ್‍ನಿಂದ ರೈಲ್ವೆ ಸ್ಟೇಷನ್ ರಸ್ತೆಯವರೆಗೆ ಒಂದು ದರ ಹೀಗೆ ಎರಡು ಬಗೆಯಲ್ಲಿ ದರವನ್ನು ನಿರ್ಧರಿಸಲಾಗುತ್ತಿದೆ.  ರಾಷ್ಟ್ರೀಯ ಹೆದ್ದಾರಿ-63 ಬಳಿ ಇಬ್ಬರ ಆಸ್ತಿ ಇದ್ದು, ಮಾರ್ಗಸೂಚಿಯಂತೆ ದರ ನಿಗದಿಪಡಿಸಲಾಗಿದೆ.   ಕಳೆದ ಜೂನ್ 05 ರಂದು ಕಟ್ಟಡಗಳ ಮೌಲ್ಯವನ್ನು ನಿಗದಿಪಡಿಸಲಾಗಿದೆ.  ಸಂಬಂಧಪಟ್ಟ ಭೂಮಿ/ಕಟ್ಟಡಗಳ ಮಾಲೀಕರಿಗೆ ಪರಿಹಾರ ಮೊತ್ತ ಪಾವತಿಸಲು ಒಟ್ಟು 7 ಕೋಟಿ ರೂ. ಅನುದಾನದ ಅವಶ್ಯಕತೆಯಿದ್ದು, ಸರ್ಕಾರ 02 ಕೋಟಿ ರೂ. ಬಿಡುಗಡೆ ಮಾಡಿದೆ.  ಇನ್ನೂ  5 ಕೋಟಿ ರೂ. ಅನುದಾನ ಬಿಡುಗಡೆ ಆಗಬೇಕಿದೆ.  ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾದರೆ, ಪ್ರಕ್ರಿಯೆ ಪೂರ್ಣಕ್ಕೆ ಸುಮಾರು 2-3 ವರ್ಷ ಬೇಕಾಗುತ್ತದೆ.  ಹೀಗಾಗಿ ಸರ್ಕಾರದ ಸೂಚನೆಯಂತೆ ಭೂ ಮಾಲೀಕರಿಂದ ಮಾತುಕತೆ ಮೂಲಕ ನೇರವಾಗಿ ಖರೀದಿಸಲಾಗುತ್ತಿದೆ.  ಯಾವುದೇ ಕಾರಣಕ್ಕೂ ಜಿಲ್ಲಾಡಳಿತದಿಂದ ಭೂ ವಶಕ್ಕೆ ಪಡೆಯುವಲ್ಲಿ ವಿಳಂಬ ಆಗುತ್ತಿಲ್ಲ.  ಗದಗ-ವಾಡಿ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ಸುಮಾರು 625 ಎಕರೆ ಭೂಮಿಯನ್ನು ರೈತರ ಒಪ್ಪಿಗೆ ಮುಖಾಂತರವೇ ಸ್ವಾಧೀನ ಮಾಡಿಕೊಳ್ಳಲಾಗಿದೆ.  ಅದೇ ರೀತಿ ಗಿಣಿಗೇರಾ-ಮೆಹಬೂಬ್‍ನಗರ ರೈಲ್ವೆ ಮಾರ್ಗದಲ್ಲಿ ಗಂಗಾವತಿ ತಾಲೂಕಿನಲ್ಲಿ 76 ಎಕರೆ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗಿದ್ದು,  ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿನ ರೈಲ್ವೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಭೂಮಿಯನ್ನು ಪಡೆಯುವಲ್ಲಿ ಪ್ರಾಮಾಣಿಕ ಯತ್ನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ರೈಲ್ವೆ ಇಲಾಖೆ ಸೆಕ್ಷನ್ ಅಧಿಕಾರಿ ಸುಧಾಕರ್ ಅವರು, ಭಾಗ್ಯನಗರ ರೈಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ 100 ಮೀ. ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದಲ್ಲಿ, 05 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.  ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಬೇಕಿರುವ ಭೂಮಿ/ಕಟ್ಟಡ ಮಾಲೀಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ಕೈಗೊಂಡರು.

ಪ್ರಧಾನಮಂತ್ರಿ ಫಸಲ್ ಭೀಮಾ ಹಾಗೂ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಜೂ. 15 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಮಾನಾಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಆಸಕ್ತ ರೈತರು ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. 
    ಕೊಪ್ಪಳ ತಾಲೂಕಿನ ಅಳವಂಡಿ, ಹಿಟ್ನಾಳ, ಇರಕಲ್ಲಗಡ ಹಾಗೂ ಕೊಪ್ಪಳ ಹೋಬಳಿಗಳಲ್ಲಿ ದ್ರಾಕ್ಷಿ, ದಾಳಿಂಬೆ, ಮಾವು, ಹಸಿಮೆಣಸಿನಕಾಯಿ(ನೀರಾವರಿ), ಪಪ್ಪಾಯ, ಈರುಳ್ಳಿ(ನೀರಾವರಿ),  ಟೋಮೆಟೊ ಮತ್ತು ಬದನೆ.  ಗಂಗಾವತಿ ತಾಲೂಕಿನ ಹುಲಿಹೈದರ್, ಕನಕಗಿರಿ, ನವಲಿ, ವೆಂಕಟಗಿರಿ, ಸಂಗಾಪೂರ, ಮರಳಿ, ಕಾರಟಗಿ ಹಾಗೂ ಸಿದ್ದಾಪುರ ಹೋಬಳಿಗಳಲ್ಲಿ ದ್ರಾಕ್ಷಿ, ದಾಳಿಂಬೆ, ಮಾವು, ಹಸಿಮೆಣಸಿನಕಾಯಿ, ಪಪ್ಪಾಯ, ಈರುಳ್ಳಿ (ನೀರಾವರಿ), ಟೋಮೆಟೊ, ಈರುಳ್ಳಿ (ಮಳೆಆಶ್ರಿತ), ಮತ್ತು ಬದನೆ.  ಕುಷ್ಟಗಿ ತಾಲೂಕಿನ ಹನುಮನಾಳ, ಹನುಮಸಾಗರ, ಕುಷ್ಟಗಿ ಹಾಗೂ ತಾವರಗೇರಾ ಹೋಬಳಿಗಳಲ್ಲಿ ದ್ರಾಕ್ಷಿ, ದಾಳಿಂಬೆ, ಮಾವು, ಹಸಿಮೆಣಸಿನಕಾಯಿ (ನೀರಾವರಿ), ಪಪ್ಪಾಯ, ಈರುಳ್ಳಿ(ನೀರಾವರಿ), ಮತ್ತು ಟೋಮೆಟೊ.  ಯಲಬುರ್ಗಾ ತಾಲೂಕಿನ ಕುಕನೂರು, ಮಂಗಳೂರು, ಯಲಬುರ್ಗಾ ಹಾಗೂ ಹಿರೇವಂಕಲಕುಂಟಾ ಹೋಬಳಿಗಳಲ್ಲಿ ದ್ರಾಕ್ಷಿ, ದಾಳಿಂಬೆ, ಮಾವು, ಹಸಿಮೆಣಸಿನಕಾಯಿ(ನೀರಾವರಿ), ಪಪ್ಪಾಯ, ಈರುಳ್ಳಿ(ಮಳೆಆಶ್ರಿತ),  ಟೋಮೆಟೊ ಮತ್ತು ಬದನೆ.  ಬೆಳೆಗಳಿಗೆ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ (ಪಿ.ಎಂ.ಎಫ್.ಬಿ.ವೈ) ಮತ್ತು ಹವಮಾನಾಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ರೂಪರೇಷಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಹವಮಾನಾಧಾರಿತ ಬೆಳೆ ವಿಮಾ ಯೋಜನೆ :
************* ಹಸಿಮೆಣಸಿನಕಾಯಿ (ನೀ) ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 69821-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 3491-05 ರೂಗಳು.  ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 126471-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 6323-55 ರೂಗಳು.  ಮಾವು ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 73820-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 3691-00 ರೂಗಳು.  ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 261941-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 13097-05 ರೂಗಳು.  ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 133625-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 6681-25 ರೂಗಳು.  ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಜೂ. 30 ಕೊನೆಯ ದಿನವಾಗಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ :
*********** ಟೋಮ್ಯಾಟೊ (ನೀ) ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 115000-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 5750-00 ರೂಗಳು.  ಈರುಳ್ಳಿ (ನೀ) ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 74000-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 3700-00 ರೂಗಳು.  ಈರುಳ್ಳಿ (ಮ.ಆ) ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 74000-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 3700-00 ರೂಗಳು.  ಬದನೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 56000-00 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ 2800-00 ರೂಗಳು.   ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅರ್ಜಿ ಸಲ್ಲಿಸಲು ಜುಲೈ. 31 ಕೊನೆಯ ದಿನವಾಗಿದೆ.
    ಅರ್ಜಿ ಸಲ್ಲಿಸಲು ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ.  ಬೆಳೆ ಸಾಲ ಪಡೆಯದ ರೈತರು ವಿಮೆ ಕಟ್ಟಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನಿಗದಿತ ಅರ್ಜಿಗಳೊಂದಿಗೆ ಭೂಮಿ ಹಿಂದಿರಲು ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಸಂಪರ್ಕಿಸಬೇಕು.  ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ಹಾಗೂ ಸಮೀಪದ ಯಾವುದೇ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ರೈತ ಬಾಂಧವರಿಗೆ ಪ್ರಕಟಣೆ ತಿಳಿಸಿದೆ.

ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ


ಕೊಪ್ಪಳ, ಜೂ. 15 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ, ಶೇ. 100 ಫಲಿತಾಂಶ ಪಡೆದ ಪ್ರೌಢಶಾಲಾ ಮುಖ್ಯೋಪಾಧ್ಯಯರಿಗೆ ಹಾಗೂ ಜಿಲ್ಲಾ ಟಾಪ್   ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಜೂ. 17 ರಂದು ಬೆಳಿಗ್ಗೆ 9-30 ಗಂಟೆಗೆ ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. 
    ಕಾರ್ಯಗಾರಕ್ಕೆ ಜಿಲ್ಲೆಯ ಎಲ್ಲಾ ಸರಕಾರಿ/ ಅನುದಾನಿತ/ ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು   ಪ್ರತಿನಿಧಿಯನ್ನು ನಿಯೋಜಿಸದೆ ತಾವೆ ಖುದ್ದಾಗಿ ಮತ್ತು ಕಡ್ಡಾಯವಾಗಿ ಹಾಜರಾಗಬೇಕು.  ಕಾರ್ಯಕ್ರಮಕ್ಕೆ ಬರುವಾಗ ತಮ್ಮ ಶಾಲೆಯ 2017ರ ಎಸ್.ಎಸ್.ಎಲ್.ಸಿ ಫಲಿತಾಂಶದ ವಿವರ ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಸಿದ್ದಪಡಿಸಲಾದ ಕ್ರಿಯಾ ಯೋಜನೆಯೊಂದಿಗೆ ಹಾಜರಾಗಬೇಕು.  100% ಫಲಿತಾಂಶ ಪಡೆದ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಹಾಗೂ ಜಿಲ್ಲಾ ಟಾಪ್ ಟೆನ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸಂಬಂಧಿಸಿದ ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಶೇ. 100 ಫಲಿತಾಂಶ ಪಡೆದ ಶಾಲೆಗಳು :
************** ಸರ್ಕಾರಿ ಪ್ರೌಢ ಶಾಲೆ ಚಿಕ್ಕಮಾದಿನಾಳ,  ಸರ್ಕಾರಿ ಪ್ರೌಢ ಶಾಲೆ (ಆರ್.ಎಂ.ಎಸ್.ಸಿ) ಗೌರಿಪುರ, ಸರ್ಕಾರಿ ಪ್ರೌಢ ಶಾಲೆ ಮಾಳೇಕೊಪ್ಪ, ಮೋರಾರ್ಜಿ ವಸತಿ ಶಾಲೆ ಹನಕುಂಟಿ, ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ವಡ್ಡರಹಟ್ಟಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಚಿಕ್ಕಬೆಣಕಲ್, ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ ಕಾಟಾಪೂರ, ಕಿತ್ತೂರರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ ತಾವರಗೇರಾ, ಮುರಾರ್ಜಿ ದೇಸಾಯಿ ವಸತಿ ಶಾಲೆ ಸಿದ್ದಾಪುರ, ಮುರಾರ್ಜಿ ದೇಸಾಯಿ ವಸತಿ ಶಾಲೆ ಕನಕಗಿರಿ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಯಲಬುರ್ಗಾ, ಮೋರಾರ್ಜಿ ದೇಸಾಯಿ ಶಾಲೆ ಹಿರೇವಂಕಲಕುಂಟಾ, ಗ್ರೀನ್ ವ್ಯಾಲಿ ರೂರಲ್ ಕಾರಟಗಿ, ನ್ಯಾಷನಲ್ ಪ್ರೌಢಶಾಲೆ ಭಾಗ್ಯನಗರ, ಕ್ರೈಸ್ತ್ ದ ಕಿಂಗ್ ಪ್ರೌಢ ಶಾಲೆ ಕುಷ್ಟುಗಿ, ಬರೂಕಾ ಪ್ರೌಢ ಶಾಲೆ ಶಿವಪೂರ, ಎಸ್.ಎಫ್.ಎಸ್ ಪ್ರೌಢ ಶಾಲೆ ಕೊಪ್ಪಳ, ಎಸ್.ಎಫ್.ಎಸ್ (ಆಂಗ್ಲ) ಪ್ರೌಢ ಶಾಲೆ ಕುಕನೂರು, ರಡ್ಡಿ ವೀರಣ್ಣ ಪ್ರೌಢ ಶಾಲೆ ಮರ್ಲಾನಹಳ್ಳಿ, ವಿಜ್ಞಾನ ಜ್ಯೋತಿ ಪ್ರೌಢ ಶಾಲೆ ಕಾರಟಗಿ, ಶಿಕ್ಷಾಯತನ ಮುನಿರಾಬಾದ ಆರ್.ಎಸ್, ಕೇಂದೋಳೆ ರಾಮಣ್ಣ ಪ್ರೌಢ ಶಾಲೆ (ಆಂಗ್ಲ ಮಾಧ್ಯಮ), ಗುಡ್ ಶಫರ್ಡ ಪ್ರೌಢ ಶಾಲೆ ಯಲಬುರ್ಗಾ, ಶಾಂತಿನಿಕೇತನ ಪಬ್ಲೀಕ್ ಸ್ಕೂಲ್ ಕಾರಟಗಿ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೇಸರಟ್ಟಿ, ಸೇಂಟ್ರಲ್ ಪಬ್ಲೀಕ್ ಸ್ಕೂಲ್ ಕಾರಟಗಿ, ಸಿದ್ದರಾಮೇಶ್ವರ ಆಂಗ್ಲ ಪ್ರೌಢ ಶಾಲೆ ಯಲಬುರ್ಗಾ, ಒಟ್ಟು ಕೊಪ್ಪಳ ಜಿಲ್ಲೆಯ 27 ಶಾಲೆಗಳು ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 100% ಫಲಿತಾಂಶ ಪಡೆದಿವೆ.
ಜಿಲ್ಲಾ ಟಾಪ್ ವಿದ್ಯಾರ್ಥಿಗಳು :
********** ಕೊಪ್ಪಳದ ವರ್ಷಾ ಜಿ.ಭೀಮರಡ್ಡಿ (620),  ಕುಕನೂರಿನ ಅದಿತ್ಯಾ ಎಸ್.ಚಂಗಲಿ (619), ಕಾರಟಗಿಯ ಬಸಮ್ಮ (618), ದೊಟಿಹಾಳದ ಪವನ್ ಕುಮಾರ (617), ಕೊಪ್ಪಳದ ಅಫೀಯಾ ನಾಜ್ (617), ಗಂಗಾವತಿಯ ರಘುನಾನಂದನ ಗುಡುಗುಂಟಿ (617), ಕೊಪ್ಪಳದ ಶ್ರೀಪ್ರಿಯಾ ಎಸ್.ಆರ್ (617), ತಳವಗೇರಾದ ಧರ್ಮೇಶ ಜಿ.ಕುಡತಿನಿ (616), ಗಂಗಾವತಿಯ ಅವಾನಿ ಅಯೋಧ್ಯ (616), ಕೊಪ್ಪಳದ ವೈಷ್ಣವಿ (615), ಕುರುಬನಾಳದ ವಿಶ್ವೇಶ್ವರ ವೀರೆಶಿ ಅಕ್ಕಿ (615), ಕೊಪ್ಪಳ ಜಿಲ್ಲೆಯ ಒಟ್ಟು 11 ವಿದ್ಯಾರ್ಥಿಗಳು ಟಾಪ್ ಟೆನ್ ಲಿಸ್ಟ್‍ನಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.