Tuesday, 30 May 2017

ಕನಕಗಿರಿ ಪ.ಪಂ. ವತಿಯಿಂದ ವಿವಿಧ ಯೋಜನೆ ಅರ್ಜಿ ಆಹ್ವಾನ


ಕೊಪ್ಪಳ, ಮೇ. 29 (ಕರ್ನಾಟಕ ವಾರ್ತೆ): ಕನಕಗಿರಿ ಪಟ್ಟಣ ಪಂಚಾಯತಿಯಿಂದ ಪ್ರಸಕ್ತ ಸಾಲಿಗೆ  ಎಸ್.ಎಫ್.ಸಿ/ ಪಟ್ಟಣ ಪಂಚಾಯತಿ ನಿಧಿ ಅನುದಾನ ಪ.ಜಾ/ ಪ.ಪಂ ಬಡ ಜನಾಂಗದವರಿಗೆ/ ಇತರೆ ಜನಾಂಗದವರಿಗೆ/ ವಿಕಲಚೇತನರ ಕಲ್ಯಾಣಕ್ಕಾಗಿ ಶೇ. 24.10%, 7.25%, 3% ಘಟಕದಡಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
    ವೈಯಕ್ತಿಕ ಶೌಚಾಲಯಕ್ಕಾಗಿ ಮತ್ತು ವಿಧ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ಶೈಕ್ಷಣಿಕ ಸಹಾಯಧನ, ಕಲ್ಯಾಣ ಕಾರ್ಯಕ್ರಮಗಳಿಗೆ, ಶೇಕಡಾ 3 ರಲ್ಲಿ ತ್ರಿಚಕ್ರ ಮೋಟಾರ ವಾಹನಕ್ಕಾಗಿ ಆಡಳಿತ್ಮಾತಕ ಮಂಜೂರಾತಿ ನೀಡಲಾಗಿದೆ. 
    ಅರ್ಜಿ ಸಲ್ಲಿಸಲು ಕನಕಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ, ಆರ್ಥಿಕವಾಗಿ ದುರ್ಬಲರಿರುವ, ಪಟ್ಟಣದ ಖಾಯಂ ನಿವಾಸಿಯಾಗಿರಬೇಕು.  ಪ.ಜಾ/ ಪ.ಪಂ ಬಡ ಜನಾಂಗದವವರು ಹಾಗೂ ಇತರೆ ಜನಾಂಗದ ವಿಕಲಚೇತನರು ಸೂಕ್ತ ದಾಖಲೆಗಳೊಂದಿಗೆ ಜೂ. 15 ರೊಳಗಾಗಿ ಪ.ಪಂ ಮುಖ್ಯಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕನಕಗಿರಿ ಪಟ್ಟಣ ಪಂಚಾಯತಿ ಕಚೇರಿಯಿಂದ ಪಡೆಯಬಹುದು ಎಂದು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Post a Comment