Friday, 17 March 2017

ಕಾರಟಗಿ : ಮೊಬೈಲ್ ಆ್ಯಪ್ ಮೂಲಕ ದೂರು ದಾಖಲಿಸಿ


ಕೊಪ್ಪಳ, ಮಾ.15 (ಕರ್ನಾಟಕ ವಾರ್ತೆ): ಕಾರಟಗಿ ಸಂಬಂಧಪಟ್ಟ ದೂರುಗಳನ್ನು ದಾಖಲಿಸಲು ಜನಹಿತ ತಂತ್ರಾಂಶವನ್ನು ಅನುಷ್ಠಾನಗೊಳಿಸಿದ್ದು, ಈ  ತಂತ್ರಾಂಶವು ಈಗಾಗಲೇ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ.  ನಾಗರಿಕರಿಗೆ ಇನ್ನು ಹತ್ತಿರವಾಗುವ ದೃಷ್ಟಿಯಿಂದ ಜನಹಿತ ಮೊಬೈಲ್ ತಂತ್ರಾಂಶವನ್ನು (ಮೊಬೈಲ್ ಆ್ಯಪ್) ಕರ್ನಾಟಕ ಮುನ್ಸಿಪಲ್ ಸೊಸೈಟಿ ಯಿಂದ ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಗರೀಕರು ಮೊಬೈಲ್ ತಂತ್ರಾಂಶದ ಮೂಲಕ ಬೀದಿ ದೀಪಗಳ ರಿಪೇರಿ, ಚರಂಡಿ ಸ್ವಚ್ಛತೆ, ನೀರು ಸರಬರಾಜಿಗೆ ಸಂಬಂಧಿಸಿದ ಹಾಗೂ ಇತರೆ ದೂರುಗಳನ್ನು ದಾಖಲಿಸಬಹುದು.  ಹಾಗೂ ದೂರಗಳ ಸ್ಥಿತಿಯನ್ನು ತಿಳಿಯಬಹುದಾಗಿದೆ.
ನಾಗರೀಕರು ಈ ಮೊಬೈಲ್ ತಂತ್ರಾಂಶವನ್ನು ಪೌರ ಸುಧಾರಣಾ ಕೋಶದ ವೆಬ್‍ಸಟ್  www.mrc.gov.in ನಿಂದ ಅಥವಾ ಗೂಗಲ್ ಪ್ಲೆಸ್ಟೋರ್ ನಿಂದ ಡೌನ್‍ಲೋಡ್ ಮಾಡಿಕೊಂಡು ಮೊಬೈಲ್ ತಂತ್ರಾಂಶ  (http://play.google.com/store/apps/details?=com.kmds.janahitha)  ದ ಮೂಲಕ ದೂರುಗಳನ್ನು ನೀಡಬಹುದಾಗಿದೆ.  ಸಾರ್ವಜನಿಕರು ಈ ತಂತ್ರಾಂಶದ ಅನುಕೂಲತೆಯನ್ನು ಪಡೆಯಬಹುದಾಗಿದೆ ಎಂದು ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment