Friday, 17 March 2017

ಇಟಗಿಯಲ್ಲಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಹಾಗೂ ಬ್ಯಾಂಕ್ ಖಾತೆ ಅಭಿಯಾನ

ಕೊಪ್ಪಳ ಮಾ. 17 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಲಬುರ್ಗಾ ತಾಲೂಕು ಇಟಗಿ ಗ್ರಾಮ ಪಂಚಾಯತಿಯ ಕೂಲಿಕಾರರಿಗೆ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಡಿ ಫಲಾನುಭವಿಗಳಿಗೆ ಇಎಫ್‍ಎಂಎಸ್ ಮುಖಾಂತರ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಪಾವತಿಸಲು ಸರಳೀಕರಣಗೊಳಿಸುವ ಸಲುವಾಗಿ ಪ್ರತಿ ಕೂಲಿಕಾರರು ವೈಯಕ್ತಿಕ ಬ್ಯಾಂಕ್ ಖಾತೆಯನ್ನು ತೆರೆಯಲು ಅಭಿಯಾನವನ್ನು ಮಾಡಲಾಯಿತು.
     ಪ್ರಾಥಮಿಕ ಆರೋಗ್ಯಾ ಕೇಂದ್ರ ಇಟಗಿ ಸಿಬ್ಬಂದಿಗಳಿಂದ ಕೂಲಿಕಾರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ  ಶ್ರೀನಿವಾಸ ಜಿಲ್ಲಾ ಐ.ಇ.ಸಿ ಸಂಯೋಜಕರು ಮಾತನಾಡಿ ಬ್ಯಾಂಕ್ ಅಧಿಕಾರಿಗಳು ತಿಳಿಸಿರುವ ಸೂಕ್ತ ದಾಖಲೆಗಳನ್ನು ಒದಗಿಸಿ ತಾವು ನಿರ್ವಹಿಸಿದ ಕೆಲಸಕ್ಕೆ ಕೂಲಿ ಹಣ ಪಡೆಯಲು ಅನುಕೂಲವಾಗುತ್ತದೆ ಎಂಬುದಾಗಿ ಕೂಲಿಕಾರರಲ್ಲಿ ಅರಿವು ಮೂಡಿಸಿದರು.   ಲಕ್ಷ್ಮಣ ತಾಲ್ಲೂಕು ಐ.ಇ.ಸಿ ಸಂಯೋಜಕರು, ರವಿರಾಜ ತಾಲ್ಲೂಕು ತಾಂತ್ರಿಕ ಸಹಾಯಕರು ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು/ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಇಟಗಿ ಇವರು ಹಾಜರಿದ್ದರು.
Post a Comment