Thursday, 9 March 2017

ಪ.ಜಾ. ಕಲಾವಿದರಿಗೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ, ಮಾ.09 (ಕರ್ನಾಟಕ ವಾರ್ತೆ): ಕೊಪ್ಪಳ ಕನ್ನಡ ಮತ್ತು ಸಂಸ್ಕøತಿಕ ಇಲಾಖೆಯ ವಿಶೇಷ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿ ಕಲಾವಿದರಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ತರಬೇತಿಯಲ್ಲಿ 20 ಜನ ಯುವ ಕಲಾವಿದರಿಗೆ ನಗಾರಿ ವಾದನ, 20 ಜನರಿಗೆ ಡೊಳ್ಳು ವಾದನ, 25 ಜನರಿಗೆ ಹಲಿಗೆ ವಾದನ, ಹಾಗೂ ಭಜನಾ ಕಲಾ ಪ್ರಕಾರದಲ್ಲಿ 5 ಜನರಿಗೆ ತರಬೇತಿ ನೀಡಲಾಗುವುದು.  ಆಸಕ್ತ ಕಲಾವಿದರು ಮಾ.14 ರೊಳಗಾಗಿ ತಮ್ಮ ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಕನ್ನಡ ಮತ್ತು ಸಂಸ್ಕøತಿಕ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಸಲ್ಲಿಸಲು ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment