Friday, 10 March 2017

ಗ್ರಾಮೀಣ ಪ್ರದೇಶದಲ್ಲೂ ಪಡಿತರಕ್ಕೆ ಕೂಪನ್ ಕಡ್ಡಾಯ

ಕೊಪ್ಪಳ, ಮಾ.10 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಆಯ್ಕೆಯಾದ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರ್ಚ್ ತಿಂಗಳ ಆಹಾರಧಾನ್ಯ ಪಡೆಯಲು ಕೂಪನ್ ಕಡ್ಡಾಯವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಸಿ.ಡಿ. ಗೀತಾ ಅವರು ಸೂಚನೆ ನೀಡಿದ್ದಾರೆ.
     ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಆಯ್ಕೆಯಾದ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರ್ಚ್ ತಿಂಗಳ ಪಡಿತರ ಆಹಾರಧಾನ್ಯಗಳನ್ನು ಪಡೆಯಲು ಕೂಪನ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.  ಗ್ರಾಮ ಪಂಚಾಯತಿ, ಫೋಟೋ ಬಯೋ ಸೇವಾಕೇಂದ್ರ, ಅಟಲ್‍ಜಿ ಜನಸ್ನೇಹಿ ಕೇಂದ್ರಗಳಲ್ಲಿ ಪಡಿತರ ಚೀಟಿದಾರರು ಯಾವುದೇ ಹಣ ನೀಡದೆ ಮಾರ್ಚ್ ತಿಂಗಳಿಗಾಗಿ ಮಾತ್ರ ಉಚಿತವಾಗಿ ಕೂಪನ್ ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment