Thursday, 16 March 2017

ಗಂಗಾವತಿ : ವಯಕ್ತಿಕ ಶೌಚಾಲಯ ಮರುಸಮೀಕ್ಷೆಗೆ ಆಹ್ವಾನ


ಕೊಪ್ಪಳ ಮಾ. 16 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆಗೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವಯಕ್ತಿಕ ಶೌಚಾಲಯಗಳ ಕುರಿತು ನಿಗಧಿತ ನಮೂನೆಯಲ್ಲಿ ಮರುಸಮೀಕ್ಷೆ ಮಾಡಿಸುವುದು ಅಗತ್ಯವಾಗಿದ್ದು, ಆಸಕ್ತ ಅಧಿಕೃತ ಎನ್.ಜಿ.ಓ ಗಳಿಂದ ದರಪಟ್ಟಿ ಆಹ್ವಾನಿಸಲಾಗಿದೆ.  ಆಸಕ್ತ ಎನ್‍ಜಿಓ ಗಳು ಏಪ್ರಿಲ್ 03 ರ ಒಳಗೆ ಗಂಗಾವತಿ ನಗರಸಭೆಗೆ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಯನ್ನು ಕಚೇರಿಯಿಂದ ಪಡೆಯಬಹುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.
Post a Comment