Friday, 17 March 2017

ಉದ್ಯೋಗಖಾತ್ರಿಯಡಿ ಕೆಲಸ ಮಾಡುವ ಸ್ಥಳದಲ್ಲಿಯೇ ಬ್ಯಾಂಕ್ ಖಾತೆ ಅಭಿಯಾನ

ಕೊಪ್ಪಳ ಮಾ. 17 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗಂಗಾವತಿ ತಾಲೂಕಾ ಪಂಚಾಯತಿ ವ್ಯಾಪ್ತಿಯ ಮರ್ಲಾನಹಳ್ಳಿ ಮತ್ತು ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮ ಪಂಚಾಯತಿಯ 250 ಕೂಲಿಕಾರರಿಗೆ ಬರಗಾಲದ ನಿಮಿತ್ಯ ಕೆಲಸವನ್ನು ನೀಡಲಾಗಿದೆ.
      ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಡಿ ಫಲಾನುಭವಿಗಳಿಗೆ ಇಎಫ್‍ಎಂಎಸ್ ಮುಖಾಂತರ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಪಾವತಿಸಲು ಸರಳೀಕರಣಗೊಳಿಸುವ ಸಲುವಾಗಿ ಪ್ರತಿ ಕೂಲಿಕಾರರು ವೈಯಕ್ತಿಕ ಬ್ಯಾಂಕ್ ಖಾತೆಯನ್ನು ತೆರೆಯಲು ಅಭಿಯಾನವನ್ನು ಮಾಡಲಾಯಿತು.  ಮರ್ಲಾನಹಳ್ಳಿ ಮತ್ತು ಬಿಸರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರು ಮರ್ಲಾನಹಳ್ಳಿ ಮತ್ತು ಬಿಸರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದ ಕೆರೆ ಅಭಿವೃಧ್ದಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸುಮಾರು 130 ಜನ ಕೂಲಿಕಾರರಿಂದ ಅರ್ಜಿಯನ್ನು ಪಡೆಯಲಾಯಿತು. ಮತ್ತು ಪ್ರಾಥಮಿಕ ಆರೋಗ್ಯಾಧಿಕಾರಿಗಳಿಂದ ಕೂಲಿಕಾರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀನಿವಾಸ ಜಿಲ್ಲಾ ಐ.ಇ.ಸಿ ಸಂಯೋಜಕರು ಮಾತನಾಡಿ ಬ್ಯಾಂಕ್ ಅಧಿಕಾರಿಗಳು ತಿಳಿಸಿರುವ ಸೂಕ್ತ ದಾಖಲೆಗಳನ್ನು ಒದಗಿಸಿ ತಾವು ನಿರ್ವಹಿಸಿದ ಕೆಲಸಕ್ಕೆ ಕೂಲಿ ಹಣ ಪಡೆಯಲು ಅನುಕೂಲವಾಗುತ್ತದೆಯೆಂದು ಕೂಲಿಕಾರರಲ್ಲಿ ಅರಿವು ಮೂಡಿಸಿದರು.
     ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಗ್ರಾಮ ಪಂಚಾಯತ ಸದಸ್ಯರು, ಕೃಷ್ಣನಾಯಕ ತಾಲ್ಲೂಕು ಐ.ಇ.ಸಿ ಸಂಯೋಜಕರು,   ಅರ್ಚನಾ ತಾಲ್ಲೂಕು ತಾಂತ್ರಿಕ ಸಂಯೋಜಕರು ತಾಲೂಕು ಪಂಚಾಯಿತಿ ಹಾಗೂ ಪಂಚಾಯತ ಅಭಿವೃಧ್ದಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು ರವರು ಹಾಜರಿದ್ದರು.
Post a Comment