Thursday, 16 March 2017

ಕನಕಗಿರಿ ಹಾಗೂ ಯಮನೂರಿಗೆ ಜಾತ್ರಾ ವಿಶೇಷ ಬಸ್ ಸಂಚಾರ


ಕೊಪ್ಪಳ ಮಾ. 16 (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವತಿಯಿಂದ ಕನಕಗಿರಿ ಹಾಗೂ ಯಮನೂರು ಗ್ರಾಮಗಳಿಗೆ ಮಾ. 20 ರವರೆಗೆ ಜಾತ್ರಾ ವಿಶೇಷ ಬಸ್ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ.
     ಕನಕಗಿರಿಯಲ್ಲಿ ಜರುಗುವ ಕನಕಾಚಲಪತಿ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆ ಹಾಗೂ ಯಮನೂರು ಗ್ರಾಮದಲ್ಲಿ ಜರುಗುವ ಚಾಂಗದೇವ ಉರ್ಫ್ ರಾಜಾಭಾಗಸವಾರ ದೇವರ ಜಾತ್ರೆ ಅಂಗವಾಗಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ ಹಾಗೂ ಕುಕನೂರು ಘಟಕದಿಂದ ಜಾತ್ರಾ ವಿಶೇಷ ಬಸ್ ಸಂಚಾರ ಸೌಲಭ್ಯವನ್ನು ಮಾ. 20 ರವರೆಗೆ ಒದಗಿಸಿದ್ದು, ಜಿಲ್ಲೆಯ ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬೋರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment