Monday, 20 March 2017

ಮಾ.24 ರಂದು ಮಹಿಳೆಯರಿಗೆ ವಿವಿಧ ಸ್ಪರ್ಧೆ

ಕೊಪ್ಪಳ, ಮಾ.20 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕಿನ ಮಹಿಳೆಯರಿಗೆ ವಿವಿಧ ಸ್ಪರ್ದೆಗಳನ್ನು ಮಾ.24 ರಂದು ಕೊಪ್ಪಳದ ಕೋಟೆ ರಸ್ತೆಯಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
    ಮಾ.24 ರಂದು ರಂಗೋಲಿ ಸ್ಪರ್ಧೆ, ಬಟ್ಟೆ ಕಸೂತಿ, ವಿವಿಧ ತರಕಾರಿಗಳ ಕೆತ್ತನೆ, ಕಸದಿಂದ ರಸ, ಮ್ಯೂಸಿಕಲ್ ಚೇರ್, ಬಕೇಟ್ ಇನ್ ಬಾಲ್ ಮತ್ತು ಲೆಮನ್ & ಸ್ಪೂನ್ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಗಿದೆ.  ಅದೇ ರೀತಿ ಭಾವಗೀತೆ ಹಾಗೂ ಜಾನಪದ ಗೀತೆ   ಪ್ರತಿ ತಾಲೂಕಿನಿಂದ 10 ಜನ.  ವೇಷಭೂಷಣ ಸ್ಪರ್ಧೆ.  ಜಾನಪದ ನೃತ್ಯ ಪ್ರತಿ ತಾಲೂಕಿನಿಂದ 15 ಜನ.  ಹಾಗೂ ಕವನ ರಚನೆ, ವಾಚನ ಸ್ಪರ್ದೆಗಳನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment