Friday, 17 March 2017

ಮಾ. 20 ರಂದು ಕನಕಾಚಲ ಲಕ್ಷ್ಮೀನರಸಿಂಹ ಸ್ವಾಮಿ ಮಹಾರಾಥೋತ್ಸವ

ಕೊಪ್ಪಳ ಮಾ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕು ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದ  ವಾರ್ಷಿಕ ಜಾತ್ರೆ ಅಂಗವಾಗಿ ಮಾ. 20 ರಂದು ಸಂಜೆ 04 ಗಂಟೆಗೆ ಕನಕಾಚಲ ಲಕ್ಷ್ಮೀನರಸಿಂಹ ದೇವರ ಮಹಾರಥೋತ್ಸವ ನೆರವೇರಲಿದೆ.
      ಕನಕಾಚಲಪತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಈಗಾಗಲೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಮಾ. 24 ರವರೆಗೂ ಜರುಗಲಿದೆ.   ವಾರ್ಷಿಕ ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ಇಂತಿದೆ.  ಮಾ. 18 ರಂದು  ರಂದು ಶನಿವಾರ ಗರುಡೋತ್ಸವ(ಕಲ್ಯಾಣೋತ್ಸವ).  ಮಾ. 20  ರಂದು ಸೋಮವಾರ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ದೇವರ ಮಹಾರಥೋತ್ಸವ ನಡೆಯಲಿದೆ.
       ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು.  ಭಕ್ತಾದಿಗಳು ತಾವು ಸಲ್ಲಿಸುವ ಕಾಣಿಕೆ, ಮುಡುಪು, ಬೆಳ್ಳಿ, ಬಂಗಾರ, ದವಸ-ಧಾನ್ಯಗಳನ್ನು ಮತ್ತು ಜಾನುವಾರುಗಳನ್ನು ದೇವಸ್ಥಾನಕ್ಕೆ ಸಲ್ಲಿಸಿ  ಸೇವಾ ಕೌಂಟರ್‍ನಲ್ಲಿ  ಸೂಕ್ತ ರಶೀದಿಯನ್ನು ಪಡೆಯಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Post a Comment