Wednesday, 8 March 2017

ಮಾ.10 ರಂದು ಕೊಪ್ಪಳದಲ್ಲಿ ರಾಷ್ಟ್ರ ಮಟ್ಟದ ಸಿ.ಎಮ್.ಇ. ಕಾರ್ಯಕ್ರಮ

ಕೊಪ್ಪಳ, ಮಾ.08 (ಕರ್ನಾಟಕ ವಾರ್ತೆ):  ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಶರೀರಕ್ರಿಯಾ ಶಾಸ್ತ್ರ ವಿಭಾಗದ ವತಿಯಿಂದ ಪ್ರಪಥಮ ಬಾರಿಗೆ ಮಾ.10 ರಂದು ಕೊಪ್ಪಳದಲ್ಲಿ ರಾಷ್ಟ್ರ ಮಟ್ಟದ ಸಿ.ಎಮ್.ಇ.  (Continuing Medical Education) ಕಾರ್ಯಕ್ರಮವನ್ನು ಕಿಮ್ಸ್ ಆವರಣದಲ್ಲಿ ಆಯೋಜಿಸಿದೆ.
    ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯವೂ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ದೆಹಲಿ ಹಾಗೂ ಇತರೆ ರಾಜ್ಯಗಳಿಂದ ವೈದ್ಯರುಗಳು ಆಗಮಿಸಲಿದ್ದಾರೆ. ‘ತೆಳು ಮತ್ತು ದಪ್ಪ ಮಧುಮೇಹ’  (LEAN v/s OBESE DIABETES MELLITUS)  ವಿಷಯದ ಬಗ್ಗೆ ಚರ್ಚೆ, ಹಾಗೂ ನುರಿತ ತಜ್ಞರುಗಳಿಂದ ಬೋಧನೆ ನೀಡಲಾಗುವುದು. 
    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಉಪಕಾರ್ಯದರ್ಶಿಗಳು ಆಗಮಿಸುವರು.  ಕಾರ್ಯಕ್ರಮದ ಪೋಷಕರುಗಳಾಗಿ ಸಂಸದ ಕರಡಿ ಸಂಗಣ್ಣ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಕಿಮ್ಸ್ ನಿರ್ದೇಶಕ ಡಾ. ಶಂಕರ ಮಲಪುರೆ ಪಾಲ್ಗೊಳ್ಳುವರು.  ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಡಾ. ವಿಜಯನಾಥ ಇಟಗಿ, ಶರೀರಕ್ರಿಯಾ ಶಾಸ್ತ್ರ ವಿಭಾಗದ  ಸಂಘಟನಾ ಕಾರ್ಯದರ್ಶಿ ಹಾಗೂ ಮುಖ್ಯಸ್ಥ ಡಾ. ಪ್ರಕಾಶ್ ಎಸ್.ಬಿ. ಹಾಗೂ ವಿಭಾಗದ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮವನ್ನು ನಿರ್ವಹಿಸುವರು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment