Tuesday, 21 March 2017

ಉದ್ಯೋಗ ಖಾತ್ರಿ ಯೋಜನೆ : ಬಹದ್ದೂರಬಂಡಿ ಗ್ರಾ.ಪಂ. ಶೇ.100 ಕ್ಕಿಂತ ಹೆಚ್ಚು ಪ್ರಗತಿ

ಕೊಪ್ಪಳ, ಮಾ.21 (ಕರ್ನಾಟಕ ವಾರ್ತೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿ ಶೇ.100% ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ.
    2016-17ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿಯ ಬಿ. ಹೊಸಳ್ಳಿ ಗ್ರಾಮದ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ನಿರಂತರವಾಗಿ 2 ತಿಂಗಳಿನಿಂದ ಕೈಗೊಂಡಿದ್ದು ಅಂದಾಜು ಮೊತ್ತ ರೂ. 20.00 ಲಕ್ಷ ಅನುದಾನ ಒದಗಿಸಿದೆ. ಇಲ್ಲಿಯವರೆಗೆ ಕಾಮಗಾರಿಗೆ ರೂ. 18.44 ಲಕ್ಷ ಖರ್ಚಾಗಿದೆ.   ಕೂಲಿಕಾರರ ಹಾಜರಾತಿ ಪಡೆದುಕೊಳ್ಳಲು 6 ಕಾಯಕಬಂಧುಗಳನ್ನು ನಿಯೋಜಿಸಿ ಅವರ ಮುಖಾಂತರ ಹಾಜರಾತಿ ಪಡೆದು ಕಾಮಗಾರಿ ನಿರ್ವಹಿಸಲಾಗಿದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ 1961 ಜಾಬಕಾರ್ಡ ಹೊಂದಿದ ಕುಟುಂಬಗಳಿದ್ದು, ಮಾನವ ದಿನಗಳ ಸೃಜನೆಯ ಗುರಿ 16107 ಇದ್ದು, ಇಲ್ಲಿಯವರೆಗೆ 18754 ಮಾನವ ದಿನಗಳ ಕೆಲಸ ನೀಡಿ ಶೇ.100 ಕ್ಕಿಂತ ಹೆಚ್ಚು ಸಾಧನೆ ಮಾಡಿದೆ.  ಒಟ್ಟು ರೂ.32.71 ಲಕ್ಷಗಳು ಖರ್ಚಾಗಿದೆ.  ಪ.ಜಾತಿ-33, ಪ.ಪಂಗಡ-47 ಇತರೆ-419 ಸೇರಿದಂತೆ ಒಟ್ಟು 499 ಕುಟುಂಬಗಳಿಗೆ ಸಕಾಲದಲ್ಲಿ ಉದ್ಯೋಗ ಒದಗಿಸಿ ಅವರ ಬ್ಯಾಂಕ್ ಖಾತೆಗೆ ಕೂಲಿ ಹಣವನ್ನು ಪಾವತಿಸಲಾಗಿದೆ.
ವಿವಿಧ ವಸತಿ ಫಲಾನುಭವಿಗಳಿಗೆ 90 ಮಾನವ ದಿನಗಳ ಕೂಲಿ ಕೆಲಸಕ್ಕೆ ಅವಕಾಶ ನೀಡಿರುವದರಿಂದ 102 ಫಲಾನುಭವಿಗಳಿಗೆ ಅವರು ನಿರ್ಮಿಸಿದ ಮನೆಗಳಿಗೆ ಹಂತವಾರು ಕೂಲಿ ಹಣವನ್ನು ಅವರ ವೈಯಕ್ತಿಕ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ.  ಸಾರ್ವಜನಿಕರಲ್ಲಿ ಯೋಜನೆಯ ಅರಿವು ಮೂಡಿಸಲು ತಾಲೂಕ ಪಂಚಾಯತಿ ವತಿಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುಳೆ ತಡೆ ಅಭಿಯಾನದ ಮೂಲಕ ಜನಜಾಗೃತಿ, ಪ್ರತಿ ತಿಂಗಳು 2ನೇ ಗುರುವಾರ ಜರುಗುವ ರೋಜಗಾರ ದಿವಸ ಆಚರಣೆ, ಕರಪತ್ರಗಳ ಹಂಚಿಕೆ, ಮನೆ ಭೇಟಿ ನೀಡಿ ಮಾಡುವುದರ ಪರಿಣಾಮ ಯೋಜನೆಯೆಡಿ ಕೂಲಿಕಾರರು ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಸಕಾಲದಲ್ಲಿ ಅವರಿಗೆ ಕೂಲಿ ಕೆಲಸ ಒದಗಿಸಲಾಗಿದೆ.  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿ ಶೇ.100% ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ ಗ್ರಾಮಗಳಲ್ಲಿ ಬಹದ್ದೂರಬಂಡಿ 7ನೇ ಗ್ರಾಮ ಪಂಚಾಯತಿಯಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
Post a Comment