Monday, 3 October 2016

ಅಧಿಕಾರ ಸ್ವೀಕಾರ

ಕೊಪ್ಪಳ ಅ. 03 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಪ್ಪಳ ಸಹಾಯಕ ನಿರ್ದೇಶಕರ ಹುದ್ದೆಯ  ಹೆಚ್ಚುವರಿ ಪ್ರಭಾರವನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ವಹಿಸಿಕೊಂಡಿದ್ದಾರೆ.
     ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕಿ ನಿರ್ದೇಶಕರಾಗಿದ್ದ ಟಿ. ಕೊಟ್ರಪ್ಪ ಅವರು ಬಡ್ತಿ ಪಡೆದು ವರ್ಗಾವಣೆಗೊಂಡ ಕಾರಣದಿಂದ ಹುದ್ದೆ ತೆರವಾಗಿತ್ತು.  ನಂತರ ಬಳ್ಳಾರಿ ಜಿಲ್ಲೆಯ ಸಹಾಯಕ ನಿರ್ದೇಶಕ ನಾಗರಾಜ್ ಅವರು ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿದ್ದರು.  ಇದೀಗ ನಾಗರಾಜ್ ಅವರು ಹುದ್ದೆಯ ಪ್ರಭಾರವನ್ನು ಕೃಷ್ಣಮೂರ್ತಿ ದೇಸಾಯಿ ಅವರಿಗೆ ಅ. 01 ರಂದು ಹಸ್ತಾಂತರಿಸಿದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ತಮ್ಮ ಹುದ್ದೆಯ ಕರ್ತವ್ಯದ ಜೊತೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದರು.
Post a Comment