Tuesday, 18 October 2016

ಬಾಲಕ ಅಪಹರಣ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ, ಅ.18 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಪ್ರಜ್ವಲ್ (4) ತಂದೆ ಪಿಡ್ಡೇಶ ಕುರಿ ಎಂಬ ನಾಲ್ಕು ವರ್ಷದ ಬಾಲಕ ಅಪಹರಣಕ್ಕೊಳಗಾಗಿದ್ದು ಪತ್ತೆಗೆ ಸಹಕರಿಸುವಂತೆ ಮುನಿರಾಬಾದ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ಅ.16 ರಂದು ಸಂಜೆ 4 ಗಂಟೆ ಸುಮಾರಿಗೆ ಹುಲಿಗಿ ಗ್ರಾಮದಲ್ಲಿ ತಮ್ಮ ಮನೆ ಹತ್ತಿರದಿಂದ ಯಾರೋ ದುಷ್ಕರ್ಮಿಗಳು ತಮ್ಮ ಮೊಮ್ಮಗ ಪ್ರಜ್ವಲ್ (4) ನನ್ನು ಅಪಹರಣ ಮಾಡಿದ್ದಾರೆ ಎಂದು ವಿರುಪಾಕ್ಷಪ್ಪ ತಂದೆ ಭರಮಪ್ಪ ಇಟಗಿ ಅವರು  ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
     ಈ ಭಾವಚಿತ್ರದಲ್ಲಿರುವ ಬಾಲಕನ ಬಗ್ಗೆ ಯಾರಿಗಾದರು ಸುಳಿವು ಸಿಕ್ಕರೆ ದೂರವಾಣಿ ಸಂಖ್ಯೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ-08539-230111, ಡಿಎಸ್‍ಪಿ ಕೊಪ್ಪಳ-08539-222433, ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ-08539-221333 ಅಥವಾ ಪಿಎಸ್‍ಐ ಮುನಿರಾಬಾದ-08539-270333 ಇಲ್ಲಿಗೆ ಮಾಹಿತಿ ನೀಡಿ, ಬಾಲಕನ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
Post a Comment