Friday, 7 October 2016

ಭಾಗ್ಯನಗರ : ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ಅ.07 (ಕರ್ನಾಟಕ ವಾರ್ತೆ): ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಅನುದಾನದಲ್ಲಿ ಪ.ಜಾತಿ ಹಾಗೂ ಪ.ಂಗಡದ ಅಭ್ಯರ್ಥಿಗಳಿಗೆ ಶೇ. 24.10, ಇತರೆ ಜನಾಂಗದ ಅಭ್ಯರ್ಥಿಗಳಿಗೆ ಶೇ. 7.25 ಹಾಗೂ ವಿಕಲ ಚೇತನ ಅಭ್ಯರ್ಥಿಗಳಿಗಾಗಿ ಶೇ. 3 ರ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 24.10 ರ ಕಾರ್ಯಕ್ರಮದಡಿ ಎಲ್‍ಪಿಜಿ ಗ್ಯಾಸ್ ಸಂಪರ್ಕ ಸೌಲಭ್ಯಕ್ಕಾಗಿ ಪ.ಜಾತಿಯ 45 ಹಾಗೂ ಪ.ಪಂಗಡದ 18 ಜನರಿಗೆ ಸೌಲಭ್ಯ ಒದಗಿಸಲಾಗುವುದು. ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗಾಗಿ ಶೈಕ್ಷಣಿಕ ಸಹಾಯಧನ ಸೌಲಭ್ಯ ಮಂಜೂರು ಮಾಡಲಾಗುತ್ತಿದ್ದು, ಎಸ್‍ಎಸ್‍ಎಲ್‍ಸಿ ಪಾಸಾದ ಪ.ಜಾತಿ-23 ಪ.ಪಂ-09.  ಐಟಿಐ ಮತ್ತು ಇತರೆ ವೃತ್ತಿಪರ ತರಗತಿಯ ಪ.ಜಾತಿ-10 ಹಾಗೂ ಪ.ಪಂ-5.  ಪಿಯುಸಿ/ಉದ್ಯೋಗ ಆಧಾರಿತ/ಡಿಪ್ಲೋಮಾ ಪ.ಜಾತಿ-10 ಹಾಗೂ ಪ.ಪಂ-5, ಪ್ಯಾರಾ ಮೆಡಿಕಲ್ ಕೋರ್ಸ್/ ಡಿಪ್ಲೋಮಾ / ಡಿಇಡಿ/ ಸಿಪಿಇಡಿ/ ಇತರೆ ತಾಂತ್ರಿಕ ತರಗತಿಯ ಪ.ಜಾ-5 ಅಭ್ಯರ್ಥಿಗಳಿಗೆ. ಬಿಎ/ಬಿ.ಎಸ್‍ಸಿ/ಬಿ.ಕಾಂ/ಇತರೆ ಪದವಿ ಪಡೆದ ಪ.ಜಾತಿ-10 ಪ.ಪಂ-4. ಎಂಎ/ ಎಂ.ಎಸ್‍ಸಿ/ ಎಂ.ಕಾಂ/ ಎಂಎಸ್‍ಡಬ್ಲೂ ಪ.ಜಾತಿ-5 ಪ.ಪಂ-4, ಎಂಬಿಬಿಎಸ್/ ಬಿಡಿಎಸ್/ ಎಂಟೆಕ್/ ಎಂಎಸ್/ಎಂಡಿ/ ಎಂಇ  ಪ.ಜಾತಿ-1 ಹಾಗೂ ಇತರೆ ಯಾವುದೇ ಸ್ನಾತಕೋತ್ತರ ಪದವಿ ಪಡೆದ ಪ.ಜಾತಿ-3 ಅಭ್ಯರ್ಥಿಗಳು ಒಟ್ಟು ಪ.ಜಾತಿಯ 67 ಹಾಗೂ ಪ.ಪಂಗಡದ 45 ಅಭ್ಯರ್ಥಿಗಳಿಗೆ ವಿವಿಧ ಸೌಲಭ್ಯಕ್ಕಾಗಿ ಭೌತಿಕ ಗುರಿ ನಿಗದಿಪಡಿಸಲಾಗಿದೆ.
     ಇತರೆ ಬಡ ಜನರಿಗೆ ಶೇ.7.25 ಕಾರ್ಯಕ್ರಮದಡಿ ಎಲ್‍ಪಿಜಿ ಗ್ಯಾಸ್ ಸಂಪರ್ಕ ಕಲ್ಪಿಸಲು 40 ಭೌತಿಕ ಗುರಿ ನಿಗದಿ ಪಡಿಸಲಾಗಿದೆ.   ಅಂಗವಿಕಲರಿಗೆ ಶೇ. 3 ರ ಕಾರ್ಯಕ್ರಮದಡಿ ಅಂಗವಿಕಲರ ಕುಟುಂಬಗಳು ಎಲ್‍ಪಿಜಿ ಗ್ಯಾಸ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಭಾಗ್ಯನಗರ ನಿವಾಸಿಯಾಗಿರಬೇಕು (ಅಗತ್ಯ ದಾಖಲೆ ಒದಗಿಸಬೇಕು), ಜಾತಿ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಗುರುತಿನ ಚೀಟಿ, ಶಾಲಾ ವಿದ್ಯಾಭ್ಯಾಸ ಪ್ರಮಾಣ ಪತ್ರ ಹಾಗೂ ಹಿಂದಿನ ವರ್ಷದ ಅಂಕಪಟ್ಟಿ, ಯಾವುದೇ ಇಲಾಖೆಯಿಂದ ಪ್ರೋತ್ಸಾಹಧನ ಪಡೆದಿಲ್ಲವೆಂಬ ಬಗ್ಗೆ ಪತ್ರ, ಅನಿಲ ಸಂಪರ್ಕ ಪಡೆದಿಲ್ಲ/ ಸೌಲಭ್ಯ ಪಡೆದಿಲ್ಲವೆಂಬ ಕುರಿತ ಪತ್ರದೊಂದಿಗೆ ಅ.30 ರೊಳಗಾಗಿ ಭಾಗ್ಯನಗರ ಪ.ಪಂ ಕಾರ್ಯಲಯಕ್ಕೆ ಅರ್ಜಿ ಸಲ್ಲಿಸಬಹುದು.  ನಿಗದಿಪಡಿಸಿದ ಗುರಿಗಿಂತ ಹೆಚ್ಚು ಅರ್ಜಿ ಬಂದಲ್ಲಿ ಶೈಕ್ಷಣಿಕ ಸೌಲಭ್ಯಕ್ಕಾಗಿ ಮೆರಿಟ್ ಆಧಾರದ ಮೇಲೆ ಹಾಗೂ ಅನಿಲ ಸಂಪರ್ಕ ಸೌಲಭ್ಯಕ್ಕಾಗಿ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.08539-234243 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment