Tuesday, 4 October 2016

ಜಿಲ್ಲಾ ಉಸ್ತುವಾರಿ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

\ಕೊಪ್ಪಳ ಅ. 04 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಅ. 06 ರಿಂದ 08 ರವರೆಗೆ ಮತ್ತು ಅ. 14 ರಿಂದ 17 ರವರೆಗೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅ. 06 ರಂದು ಬೆಳಿಗ್ಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ಅ. 06 ರಿಂದ 08 ರವರೆಗೆ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನಾನಾ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಜಿಲ್ಲಾ ಉಸ್ತುವಾರಿ ಸಚಿವರು ಅ. 06 ರಂದು  ಚಿಕ್ಕವಂಕಲಕುಂಟಾ, ಉಚ್ಚಲಕುಂಟ, ಬುಕನಕಟ್ಟಿ, ತಿಮ್ಮನಾಳ, ಕಟಗಿಹಳ್ಳಿ, ಹಿರೇವಡ್ಡರಕಲ್, ಗಾಣದಾಳ, ಮರಕಟ್, ಚೌಡಾಪುರ, ವನಜಭಾವಿ, ಗುಳೆ, ಚಿಕ್ಕಮನ್ನಾಪುರ, ಶಿಡ್ಲಬಾವಿ, ಕೃಷ್ಣಾಪುರ, ಬೋದೂರ, ಗುಂತಮಡುವು ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಅಂದು ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.
     ಅ. 07 ರಂದು ಕಲ್ಲುರು, ಸಂಗನಾಳ, ರಾಜೂರು, ಆಡೂರು, ದ್ಯಾಂಪುರ, ಗೊರ್ಲೆಕೊಪ್ಪ, ಗಾವರಾಳ, ಚಂಡೂರು, ಅರಕೇರಿ, ಬೆಣಕಲ್, ನಿಟ್ಟಾಲಿ ಮತ್ತು ಮಸಬಹಂಚಿನಾಳ ಗ್ರಾಮದಲ್ಲಿ ಪ್ರವಾಸ ಕೈಗೊಂಡು ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.  ಅ. 08 ರಂದು ಹಿರೇಅರಳಿಹಳ್ಳಿ, ಮಾಟರಂಗಿ, ಕಲಕಬಂಡಿ, ಲಂಗನಬಂಡಿ, ಹೊಸೂರ, ಮಂಡಲಮರಿ, ಗುತ್ತೂರ, ವಣಗೇರಿ, ನೆಲಜೇರಿ, ವಟಪರವಿ, ಬೈರನಾಯಕನಹಳ್ಳಿ, ಕುದರಿಮೋತಿ ಮತ್ತು ಚನ್ನಿನಹಾಳ ಗ್ರಾಮದಲ್ಲಿ ಪ್ರವಾಸ ಕೈಗೊಂಡು ಅದೇ ದಿನ ರಾತ್ರಿ ಕೊಪ್ಪಳದಿಂದ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.    
     ಸಚಿವರು ಅ. 13 ರಂದು ರಾತ್ರಿ 11 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಅ. 14 ರಿಂದ 16 ರವರೆಗೆ ಮೂರು ದಿನಗಳ ಕಾಲ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನಾನಾ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಅ. 14 ರಂದು ಲಿಂಗಾಪುರ, ಇಟಗಿ, ಮಂಡಲಮರಿ, ಬಟಪನಹಳ್ಳಿ, ಚಿಕೇನಕೊಪ್ಪ, ಸಿದ್ನೆಕೊಪ್ಪ, ಬಿನ್ನಾಳ, ಯರೇಹಂಚಿನಾಳ, ತೊಂಡಿಹಾಳ, ಬಂಡಿಹಾಳ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಅ. 15 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದಲ್ಲಿ ಜರುಗುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ನಂತರ ಯಲಬುರ್ಗಾ ತಾಲೂಕಿನ ತರಲಕಟ್ಟಿ, ನಿಲೋಗಲ್, ಯಾಪಲದಿನ್ನಿ, ನರಸಾಪುರ, ಹುಣಸಿಹಾಳ, ಮುರಡಿ, ನಾರಾಯಣಪುರ ಮತ್ತು ಬೇವೂರ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.  ಅ. 16 ರಂದು ಕಡಬಲಕಟ್ಟಿ, ಬಂಡಿ, ಜೂಲಕಟ್ಟಿ, ಬೂನಕೊಪ್ಪ, ಹಗೆದಾಳ, ದಮ್ಮೂರು, ಮಾರನಾಳ, ತುಮ್ಮರಗುದ್ದಿ, ಬಸಾಪುರ ಮತ್ತು ಬಳ್ಳೂಟಗಿ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.
     ಅ. 17 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.  ಸಚಿವರು ಅದೇ ದಿನ ರಾತ್ರಿ 8-15 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
Post a Comment