Sunday, 2 October 2016

ಧಾರ್ಮಿಕ ಪುಣ್ಯ ಕ್ಷೇತ್ರ ಹುಲಿಗಿಯ ಸಮಗ್ರ ಅಭಿವೃದ್ಧಿಗೆ ಕ್ರಮ- ಬಸವರಾಜ ರಾಯರಡ್ಡಿ


ಕೊಪ್ಪಳ ಅ. 02 (ಕರ್ನಾಟಕ ವಾರ್ತೆ) : ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವ ಹುಲಿಗಿ ಗ್ರಾಮದ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ ರಸ್ತೆ, ಮೂಲಭೂತ ಸೌಕರ್ಯ ಹಾಗೂ ಸುಸಜ್ಜಿತ ಯಾತ್ರಿ ನಿವಾಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕೊಪ್ಪಳ ತಾಲೂಕು ಹುಲಿಗಿ ಗ್ರಾಮದಲ್ಲಿ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಶನಿವಾರದಂದು ಚಾಲನೆ ನೀಡಿ ಅವರು ಮಾತನಾಡಿದರು.

     ನವರಾತ್ರಿ ಆಚರಣೆ ನಮ್ಮ ದೇಶದಷ್ಟೇ ಅಲ್ಲ, ವಿವಿಧ ದೇಶಗಳಲ್ಲೂ ಹಲವು ಹೆಸರುಗಳಲ್ಲಿ ಆಚರಿಸಲಾಗುತ್ತಿದೆ.  ಧಾರ್ಮಿಕವಾಗಿ ಹೇಗೆ ಬದುಕಬೇಕು ಎನ್ನುವುದನ್ನು ಇಂತಹ ಉತ್ಸವಗಳು ಸಂದೇಶ ನೀಡುತ್ತವೆ.  ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವೈಷ್ಣೋದೇವಿ, ಮಹಾಕಾಳಿ, ಕೊಲ್ಲಾಪುರದ ಮಹಾಲಕ್ಷ್ಮಿ, ಸವದತ್ತಿ ಎಲ್ಲಮ್ಮ, ಹುಲಿಗೆಮ್ಮ ಹೀಗೆ ಅನೇಕ ಶಕ್ತಿಪೀಠಗಳು ಇವೆ.  ತಾಯಿಯನ್ನು ಶಕ್ತಿ ದೇವತೆಗೆ ಹೋಲಿಸುತ್ತಾರೆ.  ಈ ಹಿನ್ನೆಲೆಯಲ್ಲಿಯೇ ಶಕ್ತಿ ದೇವತೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ.  ನವರಾತ್ರಿ ಸಮಯವನ್ನು ರಾಮಾಯಣ ಮತ್ತು ಮಹಾಭಾರತಗಳಲ್ಲಿ ದುಷ್ಟ ಶಕ್ತಿಗಳು, ದುರಾಸೆ, ವ್ಯಾಮೋಹದ ವಿರುದ್ಧ ಗೆಲುವನ್ನು ಸಾಧಿಸಿದ ಸಮಯವಾಗಿರುವ ಬಗ್ಗೆ ಐತಿಹ್ಯಗಳಿವೆ.  ಜನರು ಸನ್ಮಾರ್ಗದಲ್ಲಿ ನಡೆಯಲಿ ಎನ್ನುವ ಉದ್ದೇಶದಿಂದ ಇಂತಹ ಉತ್ಸವಗಳು ಸಂದೇಶವನ್ನು ನೀಡುತ್ತವೆ.  ಹುಲಿಗೆಮ್ಮ ದೇವಾಲಯಕ್ಕೆ ಬರುವ ಭಕ್ತರಲ್ಲಿ ಹೆಚ್ಚಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಭಕ್ತರ ಸಂಖ್ಯೆಯೇ ಹೆಚ್ಚಿದೆ.  ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದಲೇ ಇವರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಮುಂದಾಗಬೇಕು.  ಸುಸಜ್ಜಿತ ಯಾತ್ರಿ ನಿವಾಸ, ಡಾರ್ಮೆಟರಿ ವ್ಯವಸ್ಥೆಯನ್ನು ಹೆಚ್ಚು ಒದಗಿಸಬೇಕು.  ದೇವಾಲಯದಲ್ಲೂ ಸುಮಾರು 30 ಕೋಟಿ ರೂ. ಗಳಿಗೂ ಅಧಿಕ ಹಣ ಸಂಗ್ರಹವಿದೆ.  ಇದನ್ನು ದೇವಾಲಯದ ಅಭಿವೃದ್ಧಿಗೆ ಬಳಸಬಹುದಾಗಿದೆ.  ಹುಲಿಗಿ ಗ್ರಾಮದಲ್ಲಿನ ರೈಲ್ವೆ ಗೇಟ್‍ಗೆ ರಾಜ್ಯ ಮತ್ತು ರೈಲ್ವೆ ಇಲಾಖೆಯ ಸಹಭಾಗಿತ್ವದಲ್ಲಿ ಶೇ. 50 ರಷ್ಟು ಅನುದಾನ ಹಂಚಿಕೆಯಡಿ ಮೇಲ್ಸೇತುವೆ ನಿರ್ಮಿಸಲು, ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.


     ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ದಸರಾ ಮಹೋತ್ಸವಕ್ಕೆ ಹೆಚ್ಚಿನ ಮಹತ್ವವಿದೆ.  ಈ ಹಿನ್ನೆಲೆಯಲ್ಲಿ ಈ ಭಾಗದ ದಸರಾ ಹೆಚ್ಚು ಮಹತ್ವ ಪಡೆದುಕೊಂಡಿದೆ.  ಸಾಂಸ್ಕøತಿಕ ಕಾರ್ಯಕ್ರಮಗಳು, ಉತ್ಸವಗಳು ನಮ್ಮ ದೇಶದ ಸಂಸ್ಕøತಿಯನ್ನು ಬಿಂಬಿಸಲು ಹಾಗೂ ಸಮಾಜವನ್ನು ಬೆಸೆಯುವ ವೇದಿಕೆಗಳಾಗಿವೆ.  ಹುಲಿಗಿಯ ರೈಲ್ವೆ ಗೇಟ್‍ಗೆ ಕೆಳಸೇತುವೆ ಸಾಧುವಲ್ಲ ಎಂಬುದಾಗಿ ರೈಲ್ವೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಶೇ. 50 ರಷ್ಟು ಅನುದಾನ ಒದಗಿಸಿದಲ್ಲಿ, ಸೇತುವೆ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
     ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಹುಲಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಅಭಿವೃದ್ಧಿಗೆ ತಾವು ಅಗತ್ಯ ಅನುದಾನ ಒದಗಿಸುವುದಾಗಿ ತಿಳಿಸಿದರು.
     ಹುಲಿಗೆಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ, ಗಣ್ಯರಾದ ಬಿ.ಡಿ. ದೇಸಾಯಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ರಾಮಣ್ಣ, ಜಿ.ಪಂ. ಸದಸ್ಯೆ ಗಾಯಿತ್ರಿ ವೆಂಕಟೇಶ್, ತಾ.ಪಂ. ಸದಸ್ಯ ಪಾಲಾಕ್ಷಪ್ಪ ಗುಂಗಾಡಿ,
Post a Comment