Wednesday, 5 October 2016

ಅ.6 ರಂದು ಫಸಲ್ ಬೀಮಾ (ವಿಮಾ) ಯೋಜನೆಯ ತಂತ್ರಾಂಶ ತರಬೇತಿ ಕಾರ್ಯಕ್ರಮ

ಕೊಪ್ಪಳ, ಅ.05 (ಕರ್ನಾಟಕ ವಾರ್ತೆ): ಸ್ಮಾರ್ಟ್ ಫೋನ್ ಬಳಸಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಅಭಿವೃದ್ಧಿ ಪಡಿಸಿರುವ ಮೊಬೈಲ್ ಆಪ್ ತಂತ್ರಾಂಶದ ಬಳಕೆ ಕುರಿತು ಸ್ಯಾಟ್ಕಾಂ ಆಧಾರಿತ ತರಬೇತಿ ಅ.6 ರಂದು ಆಯಾ ತಾಲೂಕಿನ ತಾಲೂಕ ಪಂಚಾಯಿತಿಯ ಸಾಮರ್ಥ ಸೌಧದಲ್ಲಿ ಆಯೋಜಿಸಲಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ(ವಿಮಾ) ಬೆಳೆ ಅಂದಾಜು ಸಮೀಕ್ಷೆ ಯೋಜನಾ ಪಟ್ಟಿಯನ್ನು ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆಯಾದ ವಿವಿಧ ಬೆಳೆಗಳ ಯೋಜನಾ ಪಟ್ಟಿ ತಯಾರಿಸಿ ತಂತ್ರಾಂಶದ ಮುಲಕ ಕಳುಹಿಸಬೇಕಾಗಿರುತ್ತದೆ. ಈ ಕುರಿತಂತೆ ಅಧಿಕಾರಿಗಳಿಗೆ ಅ.6 ರಂದು ತಂತ್ರಾಂಶದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.
ಸಂಬಂಧಿಸಿದವರಿಗೆ ಯೋಜನಾ ಪಟ್ಟಿಯನ್ನು ಹಂಚಿಕೆ ಮಾಡಿ, ಯಾವುದೇ ಕಾರಣಕ್ಕೂ ಪ್ರಯೋಗಗಳು ನಷ್ಟವಾಗದಂತೆ ಕ್ರಮವಹಿಸಬೇಕು. ಹಾಗೂ ಯೋಜನೆಗೆ ಆಯ್ಕೆಯಾಗುವ ಗ್ರಾಮಗಳಲ್ಲಿನ ಬೆಳೆ ಕಟಾವು ಪ್ರಯೋಗಗಳು, ಮೇಲ್ವಿಚಾರಕರಿಗೆ ಗ್ರಾಮಗಳಲ್ಲಿ ಬೆಳೆ ಕಟಾವು ಪ್ರಯೋಗಗಳು, ಮೇಲ್ವಿಚಾರಕರಿಗೆ ಕಟಾವು ದಿನಾಂಕವನ್ನು ಒಂದು ವಾರ ಮುಂಚಿತವಾಗಿ ತಿಳಿಸಬೇಕು. ಯೋಜನೆಯ ಎಲ್ಲಾ ಕಾರ್ಯಗಳನ್ನು ಕಡ್ಡಾಯವಾಗಿ ಮೊಬೈಲ್ ಆಪ್ ಮೂಲಕ ಮಾಡಬೇಕಾಗಿದ್ದು, ಈ ಕುರಿತು ಮೂಲ ಕಾರ್ಯಕರ್ತರಿಗೆ ಹಾಗೂ ಮೇಲ್ವಿಚಾರಕರಿಗೆ ಸ್ಯಾಟ್‍ಕಾಂ ಮೂಲಕ ಈಗಾಗಲೇ ತರಬೇತಿ ನೀಡಲಾಗಿದೆ. ಇದೀಗ ಅ.6 ರಂದು ಪುನಃ ಸ್ಯಾಟ್ಕಾಂ ಬಳಸಿ ಮೊಬೈಲ್ ಆಪ್ ಮೂಲಕ ಬೆಳೆ ಕಟಾವು ವಿವರಗಳ ದಾಖಲಾತಿ ಇತ್ಯಾದಿ ಮಾಹಿತಿ ಕುರಿತಂತೆ ಆಯಾ ತಾಲೂಕಿನ ಸಾಮರ್ಥ ಸೌಧದಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿಗೆ ಮೂಲ ಕಾರ್ಯಕರ್ತರು ಹಾಗೂ ಮೇಲ್ವಿಚಾರಕರು ಕಡ್ಡಾಯವಾಗಿ ಹಾಜರಾಗಬೇಕು.
     ತರಬೇತಿಯ ವಿವರ ಇಂತಿದೆ : ಜಿಲ್ಲೆಯ ಆಯಾ ತಾಲೂಕುಗಳಲ್ಲಿ ಬೆಳಿಗ್ಗೆ 10 ರಿಂದ ಮ.1.30 ರವರೆಗೆ  ತಹಸೀಲ್ದಾರ, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪತಹಸೀಲ್ದಾರರು, ಪ್ರಗತಿ ಸಹಾಯಕ, ಕಬ್ಬು ಅಧಿಕಾರಿಗಳು, ಸಾಂಖ್ಯಿಕ ಇಲಾಖೆ ಅಧಿಕಾರಿಗಳು/ಸಿಬ್ಬಂದಿ ವರ್ಗ ಇವರಿಗೆ ತರಬೇತಿ ನೀಡಲಾಗುವುದು. ಹಾಗೂ ಮದ್ಯಾಹ್ನ 2 ರಿಂದ 5.30 ರವರೆಗೆ ಆಯಾ ತಾಕೂಕಿನ ಕೃಷಿ ಇಲಾಖೆ, ತೋಟಗಾಗಿಕೆ ಎಲ್ಲಾ ಅಧಿಕಾರಿ ವರ್ಗ/ ಮೂಲ ಕಾರ್ಯಕರ್ತರು, ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿ ಇವರಿಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
Post a Comment