Friday, 7 October 2016

ಅ. 09 ರಂದು ಆಕಾಶವಾಣಿಯಲ್ಲಿ ವಿಜಯನಗರದ ಐಸಿರಿ

ಕೊಪ್ಪಳ ಅ. 07 (ಕರ್ನಾಟಕ ವಾರ್ತೆ): ಆಕಾಶವಾಣಿ ಹೊಸಪೇಟೆ ಕೇಂದ್ರವು ಪ್ರಾರಂಭಿಸಿರುವ ‘ವಿಜಯನಗರದ ಐಸಿರಿ’ ಸರಣಿ ಕಾರ್ಯಕ್ರಮದಡಿ ಇದೇ ರವಿವಾರ ಅ. 09 ರಂದು ಸಂಜೆ 05 ಗಂಟೆಗೆ ಹಲವು ಮಹತ್ವದ ವಿಷಯಗಳು ಮೂಡಿ ಬರಲಿವೆ.
       ಸಂಗೀತ ಸಿರಿ:- ಕೊಪ್ಪಳದ ಗೌಡೇಶ ಪವಾರ ಅವರಿಂದ ಸುಗಮ ಸಂಗೀತ.  ವಿದ್ಯಾಸಿರಿ : - ಶಿಕ್ಷಣ ಮತ್ತು ಅಭಿವೃದ್ಧಿ ಕುರಿತು ಮಾತನಾಡುತ್ತಾರೆ ಡಾ|| ಪ್ರಶಾಂತ ಹೆಚ್.ಡಿ.   ಪ್ರತಿಭಾ ಸಿರಿ:- ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆ ಪಾಸು ಮಾಡಿದ ಹೊಸಪೇಟೆಯ ಕೀರ್ತಿ ಕಿರಣ ಪೂಜಾರ ಅವರೊಂದಿಗೆ ಸಂದರ್ಶನ.  ಸಂಸ್ಕøತಿ ಸಿರಿ :- ತುಂಗಭದ್ರೆ ನಮಗಿತ್ತ ಸಂಸ್ಕøತಿ ಈ ಕುರಿತು ಮಾತನಾಡುತ್ತಾರೆ ಪರಿಸರ ತಜ್ಞ ಕುರೇಕೊಪ್ಪದ ಡಾ|| ಜೆ. ಅಶ್ವಥಕುಮಾರ. ಇದಲ್ಲದೆ, ವಾರದ ವರದಿ, ಸಂದೇಶ ಮತ್ತು ಅಮೃತವಾಣಿ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಆಕಾಶವಾಣಿ ಕಾರ್ಯಕ್ರಮಗಳ ಮುಖ್ಯಸ್ಥೆ ಡಾ|| ಅನುರಾಧಕಟ್ಟಿ ತಿಳಿಸಿದ್ದಾರೆ.
Post a Comment