Thursday, 6 October 2016

ಮಾವು ಬೆಳೆ ಕುರಿತು ಅ. 08 ರಂದು ಬಾಗಲಕೋಟೆಯಲ್ಲಿ ಕಾರ್ಯಾಗಾರ

ಕೊಪ್ಪಳ ಅ. 06 (ಕರ್ನಾಟಕ ವಾರ್ತೆ): ಬಾಗಲಕೋಟೆ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಸಂಯುಕ್ತ ಆಶ್ರಯದಲ್ಲಿ ಮಾವಿನ ಬೆಳೆಯ ಬೃಹತ್ ಕಾರ್ಯಗಾರ ಅ. 08 ರಂದು ಬೆಳಿಗ್ಗೆ 8 ಗಂಟೆಗೆ ಬಾಗಲಕೋಟೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ಮಾವಿನ ಉತ್ಪಾದನೆಯ ತಾಂತ್ರಿಕತೆ, ಮಾವಿನ ಬೆಳೆ ಕ್ಷೇತ್ರ ವಿಸ್ತರಣೆಗೆ ಅವಕಾಶಗಳು ಹಾಗೂ ಎದುರಿಸುತ್ತಿರುವ ಸವಾಲುಗಳು, ಮಾರುಕಟ್ಟೆ, ನಿರ್ಯಾತ ಕುರಿತು ನುರಿತ ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ, ಚರ್ಚೆ ಹಾಗೂ ಬೆಳೆಯ ಸಂಪೂರ್ಣ ಮಾಹಿತಿ ಒಳಗೊಂಡ ತಾಂತ್ರಿಕ ಗೋಷ್ಠಿಗಳು ಹಾಗೂ ಇತರೆ ಮಾಹಿತಿಯನ್ನು ಭಾಗವಹಿಸುವ ಎಲ್ಲಾ ಕೃಷಿಕ ಬಾಂದವರು ಪಡೆದುಕೊಳ್ಳಬಹುದು. ಕಾರ್ಯಾಗಾರವು ಬಾಗಲಕೋಟ ಶಹರದ, ನವನಗರದ 37ನೇ ಸೆಕ್ಟರ್‍ನ ಎಲ್.ಐ.ಸಿ. ಕಛೇರಿ ಹತ್ತಿರವಿರುವ ಡಾ|| ಬಿ.ಆರ್. ಅಂಬೇಡ್ಕರ ಭವನದಲ್ಲಿ  ಅ. 08 ರಂದು ಬೆಳಿಗ್ಗೆ 10.00 ಘಂಟೆಗೆ ಪ್ರಾರಂಭವಾಗಲಿದ್ದು, ತೋಟಗಾರಿಕೆ ಸಚಿವ ಎಸ್‍ಎಸ್. ಮಲ್ಲಿಕಾರ್ಜುನ ಅವರು ಕಾರ್ಯಗಾರ ಉದ್ಘಾಟಿಸುವರು. ಅಬಕಾರಿ ಸಚಿವ  ಎಚ್. ವಾಯ್. ಮೇಟಿ ಅವರು ಅಧ್ಯಕ್ಷತೆ ವಹಿಸುವರು.  ತಾಂತ್ರಿಕ ಉಪನ್ಯಾಸ ಮಾಲಿಕೆಯಲ್ಲಿ, ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ|| ವಿ. ನಾಚೇಗೌಡ, ಪ್ರಾಧ್ಯಾಪಕರುಗಳಾದ ಡಾ|| ಕುಲಪತಿ ಹಿಪ್ಪರಗಿ, ಡಾ|| ಜೆ.ಬಿ. ಗೋಪಾಲಿ, ಡಾ|| ಎಸ್. ಎಲ್. ಜಗದೀಶ, ಡಾ|| ಶ್ರೀಪಾದ, ವಿ. ಹಾಗೂ ತೋಟಗಾರಿಕಾ ಇಲಾಖೆ ನಿವೃತ್ತ, ಅಪರ ನಿರ್ದೇಶಕ ಡಾ|| ಎಸ್. ವಿ. ಹಿತ್ತಲಮನಿ ಅವರಿಂದ ಸಂಪೂರ್ಣ ಸಮಗ್ರ ತಾಂತ್ರಿಕ ವಿಷಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ. 
 ಆಸಕ್ತ ಕೃಷಿಕರು ಭಾಗವಹಿಸಿ, ಕಾರ್ಯಾಗಾರದ ಲಾಭ ಪಡೆಯುವಂತೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕ ಜಿ. ಎಸ್. ಗೌಡರ,  ಹಾಗೂ ತೋಟಗಾರಿಕೆ ವಿವಿಯ ವಿಸ್ತರಣಾ ನಿರ್ದೇಶಕ ಡಾ|| ವೈ. ಕೆ. ಕೋಟಿಕಲ್ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Post a Comment