Friday, 28 October 2016

ಬೆಣಕಲ್ ಗ್ರಾಮದಲ್ಲಿ ಜನಸಂಪರ್ಕ ಸಂವಾದ ಸಭೆ ಯಶಸ್ವಿ

ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ,  ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ “ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ ಕಾರ್ಯಕ್ರಮ ಯಲಬುರ್ಗಾ ತಾಲೂಕಿನ ಬೆಣಕಲ್ ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ  ಜರುಗಿತು.
        ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಜಗದೀಶ್ವರಯ್ಯ ಹಿರೇಮಠ ಮಾತನಾಡಿ, ಭಾರತ ದೇಶವು ಸಹ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ್ದು ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಅವರಿಗೆ ಒದಗಿಸಲು ಕಟಿಬದ್ದವಾಗಿದೆ. ಮಕ್ಕಳಿಗೆ ಬದಕುವ ಹಕ್ಕು, ಅಭಿವೃದ್ಧಿ ಮತ್ತು ವಿಕಾಸಹೊಂದುವ ಹಕ್ಕು, ಶೋಷಣೆಯ ವಿರುದ್ಧ ಸಂರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೇ ಈ ಹಕ್ಕುಗಳನ್ನು ಅವರಿಗೆ ತಲುಪಿಸಲು ಹಲವಾರು ಕಾನೂನುಗಳನ್ನು  ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆಂದು ಕಾನೂನು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಸ್ತುತ ಸಮಾಜದಲ್ಲಿ  ಮಕ್ಕಳ ಮೇಲೆ ನಡೆಯುತ್ತಿರುವ ದೌಜನ್ಯಕ್ಕೆ  ಸಂಬಂಧಿಸಿದಂತೆ ಸಭೆಯಲ್ಲಿ ಲೈಂಗಿಕ ದೌಜನ್ಯದಿಂದ ಮಕ್ಕಳ ಸಂರಕ್ಷಣೆ ಕಾಯ್ದೆ (ಪೋಸ್ಕೊ) ಬಗ್ಗೆ ಮಾಹಿತಿ ನೀಡಿದರು ಹಾಗೂ ಇತ್ತಿಚೀನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು, ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹೆಚ್ಚಿನ ಜವಬ್ದಾರಿ ಮೂಲತಃ ಕುಟುಂಬದ್ದು ಎಂದು  ತಿಳಿಸಿದರು. ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ-2000ರನ್ವಯ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ  ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರಪಡಿಸಬಹುದಾಗಿದೆ. ನಂತರ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುತ್ತದೆಂದು ತಿಳಿಸಿದರು.
     ಮಕ್ಕಳ ರಕ್ಷಣಾ ಘಟಕದ ಶಿವಲಿಲಾ ವನ್ನೂರು ಅವರು ಮಾತನಾಡಿ, ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿಶು ಮರಣ ಪ್ರಕರಣಗಳಿಗೆ, ಗರ್ಭಿಣಿ ತಾಯಂದಿರಲ್ಲಿ ರಕ್ತ ಹಿನ್ನತೆ ಕಾರಣವಾಗಿದೆ ಅಲ್ಲದೆ ಅಪೌಷ್ಠಿಕ ಮಕ್ಕಳು ಜನಿಸುವುದಕ್ಕೆ ಬಾಲ್ಯ ವಿವಾಹವು ಮುಖ್ಯ ಕಾರಣ. ಈ ಎಲ್ಲಾ ಅಂಶಗಳನ್ನು ಮನಗಂಡು ಭಾರತ ಸರ್ಕಾರವು “ಬಾಲ್ಯ ವಿವಾಹ ನಿಷೇಧ ಕಾಯ್ದೆ-2005”ನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿಯಲ್ಲಿ 18 ವರ್ಷದೂಳಗಿನ ಹೆಣ್ಣು ಮಕ್ಕಳಿಗೆ  ಹಾಗೂ 21 ವರ್ಷದೂಳಗಿನ ಗಂಡು ಮಕ್ಕಳಿಗೆ ವಿವಾಹವನ್ನು ಮಾಡುವುದು ಕಾನೂನು ಬಾಹಿರ. ಒಂದು ವೇಳೆ ಮದುವೆಯನ್ನು ಮಾಡಿದ್ದೆ ಆದಲ್ಲಿ ಮದುವೆಯನ್ನು ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರಿಗೆ ಎರಡು ವರ್ಷದ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ ದಂಡ ಅಥವಾ ಎರಡರಿಂದಲೂ ದಂಡಿಸಬಹುದಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಬಾಲ್ಯ ವಿವಾಹ ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರ ವಿರುದ್ಧ  ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದ್ದರಿಂದ ಬಾಲ್ಯ ವಿವಾಹಗಳನ್ನು ಮಾಡಬೇಡಿ ಎಂದು ವಿನಂತಿಸಿದರು. ಅಲ್ಲದೇ ಸಂಕಷ್ಠದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯನ್ನು ಆರಂಬಿಸಿದ್ದು ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ 1098 ಸಂಖ್ಯೆಗೆ ಕರೆಯನ್ನು ಮಾಡಿ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿಯು ಲಭ್ಯವಾದ 60 ನಿಮಿಷದೂಳಗಾಗಿ ಸದರಿ ಮಗುವನ್ನು ಸಹಾಯವಾಣಿಯ ಕಾರ್ಯಕರ್ತರು ರಕ್ಷಿಸಿ ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ ಅಗತ್ಯ ಪುರ್ನವಸತಿಯನ್ನು ಕಲ್ಪಸಲಾಗುತ್ತದೆಂದು ವಿವರಿಸಿದರು.
     ಕುಕನೂರು ಎಎಸ್‍ಐ ವಾಸನಗೌಡ ಮಾತನಾಡಿ ಜಿಲ್ಲೆಯಲ್ಲಿನ ಯಾವುದೇ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಂತಹ ಪ್ರಕರಣಗಳು ಕಂಡು ಬಂದಲ್ಲಿ ಶೋಷಿತರ ನೆರವಿಗೆ ಪೊಲೀಸ್ ಇಲಾಖೆ  ಸದಾ ಸಿದ್ದವಿರುತ್ತದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿ ಬಡಿಗೇರ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರವು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ ಎಚ್.ಐ.ವಿ ಭಾದಿತ ಹಾಗೂ ಸೋಂಕಿತ ಮಕ್ಕಳಿಗೆÉ ಆರೈಕೆ ಮತ್ತು ಪೋಷಣೆಗಾಗಿ “ವಿಶೇಷ ಪಾಲನಾ ಯೋಜನೆಯಡಿಯಲ್ಲಿ” ಪ್ರತಿ ಮಾಹೆ ರೂ.650 ರಂತೆ ಮತ್ತು ಮಗು ಶಾಲೆಗೆ ತೆರಳುತ್ತಿದ್ದಲ್ಲಿ ಶೈಕ್ಷಣಿಕ ವೆಚ್ಚವಾಗಿ ರೂ.500 ವಾರ್ಷಿಕವಾಗಿ ಅನುದಾವನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.  
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯ ವಿರುಪಣ್ಣ ಸಂಟೂರು ವಹಿಸಿದ್ದರು. ಗ್ರಾಮ ಪಂಚಾಯತ ಸದಸ್ಯರಾದ ಜಂಬಣ್ಣ ನಡುಲಮನಿ, ಸಾಂತ್ವನ ಕೇಂದ್ರದ ಸುನಿತಾ ಭಾಗವಹಿಸಿದ್ದರು. 

ದೀಪಾವಳಿ ಹಬ್ಬವನ್ನು ಪರಿಸರ ಪೂರಕವಾಗಿ ಆಚರಿಸಲು ಪರಿಸರ ಇಲಾಖೆ ಮನವಿ

ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಆಚರಿಸಿ, ಪರಿಸರ ಮಾಲಿನ್ಯ ಉಂಟಾಗುವುದನ್ನು ತಪ್ಪಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
     ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು ಇದು ಮನೆ ಮತ್ತು ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ನೀಡುವ ಹಬ್ಬ. ಈ ಹಬ್ಬವು ಮಕ್ಕಳ ನಲಿವಿನೊಂದಿಗೆ, ಅವರು ಬಳಸುವ ವಿವಿಧ ರೀತಿಯ ಪಟಾಕಿಗಳಿಂದ ಉಂಟಾಗುವ ಶಬ್ದದಿಂದ ಹೆಚ್ಚಿನ ಆನಂದ ಸಂತೋಷ ಪಡುತ್ತಾರೆ.  ಇದರ ಜೊತೆಯಲ್ಲಿಯೇ ಹಿರಿಯರಿಗೆ ಕಿರಿಕಿರಿಯಾದರೂ ಮಕ್ಕಳ ಸಂತೋಷಕ್ಕೆ ಅಡ್ಡಿಪಡಿಸದೆ ತಾವೂ ಪಾಲ್ಗೊಳ್ಳುವುದು ಅನಾದಿಕಾಲದಿಂದಲೂ ಬಂದಂತಹ ಸಂಪ್ರದಾಯವಾಗಿದೆ.      
ಭಾರತೀಯರು ದೀಪಾವಳಿಯ ಹಬ್ಬವನ್ನು ದೇಶದಾದ್ಯಂತ ಅತೀ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಈ ಸಂತೋಷದ ಸಮಯದಲ್ಲಿ ಉಂಟಾಗುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಘನ ತ್ಯಾಜ್ಯವು ವರ್ಷದಿಂದ  ವರ್ಷಕ್ಕೂ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಕಾರವು ವಿವಿಧ ರೀತಿಯ ಕಾನೂನುಗಳನ್ನು ಹೊರಡಿಸಿರುತ್ತದೆ. ಮತ್ತು ಪೂರಕವಾಗಿ ಮಂಡಳಿಯು ಸಾರ್ವಜನಿಕರಲ್ಲಿ ಅದರಲ್ಲಿಯೂ ಮುಖ್ಯವಾಗಿ ಮಕ್ಕಳಿಗೆ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.
      ಕಳೆದ ಐದು ವರ್ಷಗಳ ದೀಪಾವಳಿ ಹಬ್ಬಗಳ ಆಚರಣೆಗಳ ಸಮಯದಲ್ಲಿ ಉಂಟಾದ ಅವಘಡಗಳನ್ನು ಅವಲೋಕಿಸಿದಾಗ ಒಂದಿಲ್ಲ ಒಂದು ಪ್ರದೇಶದಲ್ಲಿ ಪಟಾಕಿಗಳ ಸುಡುವಿಕೆಯಿಂದಾಗಿ ಅನೇಕರ ಬಾಳು ಅಂಧಕಾರಕ್ಕೆ ಒಳಗಾಗಿದೆ.  ಅಲ್ಲದೇ ಸಮೀಕ್ಷೆಯನ್ವಯ ಇಂಥಹ ಅವಘಡಗಳ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿ. ಇಂತಹ ಅಬ್ಬರದ ಅಪಾಯಕಾರಿ ಪಟಾಕಿಗಳು ನಾಗರಿಕರ ಶಾಂತಿ ಕದಡುವುದರೊಂದಿಗೆ ಪರಿಸರ ಮಾಲಿನ್ಯ ಹಾಗೂ ವಿಷಕಾರಿ ರಸಾಯನಿಕ ತ್ಯಾಜ್ಯದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.
         ಇದರ ಜೊತೆಯಲ್ಲಿಯೇ ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪಟಾಕಿಗಳಿಗೆ ಸಂಬಂದಿಸಿದಂತೆ  ಹೊರಡಿಸಿದ ಮಾರ್ಗಸೂಚಿಯಂತೆ “125 ಡೆಸಿಬಲ್ಸ (ಎ.ಐ) ಅಥವಾ 145 ಡೆಸಿಬಲಸ (ಸಿ) ಪಿ.ಕೆ” ಗಿಂತ ಹೆಚ್ಚು ಶಬ್ದ ಮಾಲಿನ್ಯ ಉಂಟುಮಾಡುವ ಅದರಲ್ಲಿಯೂ 4 ಮೀಟರ ಅಂತರದಲ್ಲಿ ಬಳಸುವುದನ್ನು ನಿಷೇಧಿಸಲಾಗಿರುತ್ತದೆ.   ಇದನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
       ಮಾನ್ಯ ಸವ್ರೋಚ್ಚ ನ್ಯಾಯಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ 2005 ರಲ್ಲಿ ಹಲವಾರು ನಿರ್ದೇಶನಗಳನ್ನು ಸಹ ನೀಡಿರುತ್ತದೆ. ಅದರನ್ವಯ ರಾತ್ರಿ 10 ಘಂಟೆಯಿಂದ ಬೆಳಿಗ್ಗೆ 6 ಘಂಟೆಯೊಳಗೆ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇದಿಸಿರುತ್ತದೆ.
     ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿ ಹಬ್ಬದ ಶುಭಾಷಯಗಳನ್ನು ಸರ್ವರಿಗೂ ತಿಳಿಸುತ್ತಾ. ಈ ಮೂಲಕ ಕೋರಿಕೊಳ್ಳುವುದೇನೆಂದರೆ “ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮ ಸಂತೋಷದಿಂದ ಆಚರಿಸುವಾಗ ಅಬ್ಬರದ ಅಪಾಯಕಾರಿ ಪಟಾಕಿಗಳನ್ನು ಬಳಸದೇ ನಾಗರಿಕರ ಹಾಗೂ ಸುತ್ತಮುತ್ತಲಿನ ಪರಿಸರದ ಶಾಂತತೆಯನ್ನು ಕದಡದೆ, ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ನಿಗದಿ ಪಡಿಸಿದ 125 ಡೆಸಿಬಲ್ಸ ಗಳಿಗಿಂತ ಕಡಿಮೆ ಪ್ರಮಾಣದ ಶಬ್ದದಿಂದ ಕೂಡಿದ ಪಟಾಕಿಗಳ ಬಳಕೆಯನ್ನು ಮಾತ್ರ ಮಾಡುವುದು ಉತ್ತಮ.  ಕೇವಲ ಬೆಳಕು ಚೆಲ್ಲುವ ಮಿತಕಾರಿ ಪಟಾಕಿಗಳನ್ನು ಬಳಸಿ ಕುಟುಂಬದವರೊಂದಿಗೆ ಸಂತೋಷ ಹಂಚಿಕೊಳ್ಳಬೇಕೆಂದು ಮತ್ತೊಮ್ಮೆ ವಿನಂತಿಸುತ್ತಾ ಪ್ರಸಕ್ತ ಆಚರಿಸುವ ದೀಪಾವಳಿ ಹಬ್ಬವು ಎಲ್ಲರ ಬಾಳಿನ ಅಂದಕಾರವನ್ನು ಹೊಡೆದೋಡಿಸಿ ಬೆಳಕನ್ನು ಚೆಲ್ಲಲಿ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಪೂರ್ವಭಾವಿ ತರಬೇತಿ

ಕೊಪ್ಪಳ, ಅ.28.(ಕ.ವಾ.)-ಶಿಕ್ಷಕರ ಅರ್ಹತಾ ಪರೀಕ್ಷೆ-2016 (ಟಿ.ಇ.ಟಿ) ಡಿಸೆಂಬರ್ 18ರಂದು ನಿಗದಿಯಾಗಿದ್ದು, ಈ ಪರೀಕ್ಷೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವ 371(ಜೆ)ಗೆ ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ಕಳೆದ ವರ್ಷದಂತೆ ಈ ವರ್ಷವೂ ಸಹ ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆಯ ಬಿ.ಆರ್.ಸಿ.ಗಳಲ್ಲಿ ತರಬೇತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಈ ತರಬೇತಿಯು ನವೆಂಬರ್ 5ರಿಂದ ಡಿಸೆಂಬರ್ 15ರವರೆಗೆ ನಡೆಯಲಿದೆ. ಅರ್ಜಿ ನಮೂನೆಗಳನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಥವಾ ಕಲಬುರಗಿ ಶಿಕ್ಷಣ ಇಲಾಖೆಯ ಆಯುಕ್ತರ ವೆಬ್‍ಸೈಟ್‍ದಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು ಅಥವಾ ಬಿ.ಆರ್.ಸಿ.ಯಲ್ಲಿಯೂ ಲಭ್ಯವಿರುತ್ತವೆ. ಆಸಕ್ತಿಯುಳ್ಳ ಅಭ್ಯರ್ಥಿಗಳು 2016ರ ನವೆಂಬರ್ 5ರೊಳಗಾಗಿ ಸಂಬಂಧಿಸಿದ ಬಿ.ಆರ್.ಸಿ.ಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.
ಎಸ್.ಸಿ./ಎಸ್.ಟಿ., ಅಂಗವಿಕಲರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 250ರೂ. ಹಾಗೂ ಇತರರಿಗೆ 500 ರೂ.ಗಳ ನೋಂದಣಿ ಶುಲ್ಕವಿರುತ್ತದೆ. ಡಿ.ಡಿ.ಯನ್ನು ಕಾರ್ಯದರ್ಶಿಗಳು, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಲಬುರಗಿ ಇವರ ಹೆಸರಿನಲ್ಲಿ ಪಡೆದು ನಿಗದಿಪಡಿಸಿದ ಅರ್ಜಿಯೊಂದಿಗೆ ಬಿ.ಆರ್.ಸಿ.ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅಂದಾಜು 1000 ಪುಟಗಳ ಅಭ್ಯಾಸ ಸಾಹಿತ್ಯವನ್ನು ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.

ಯು.ಜಿ.ಸಿ. ಜೆ.ಆರ್.ಎಫ್./ನೆಟ್ ಹಾಗೂ ಕೆ. ಸೆಟ್ ಪರೀಕ್ಷೆಗೆ ಪೂರ್ವಭಾವಿ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಅ.28.(ಕ.ವಾ.)-ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಜಂಟಿ ಸಹಯೋಗದಲ್ಲಿ ಸ್ಥಾಪನೆಗೊಂಡ ಪ್ರಾದೇಶಿಕ ಅಧ್ಯಯನ ಹಾಗೂ ಅಭಿವೃದ್ಧಿ ಕೇಂದ್ರದಲ್ಲಿ ಡಿಸೆಂಬರ್ 2016ರಲ್ಲಿ ಜರುಗಲಿರುವ ಯು.ಜಿ.ಸಿ. ಜೆ.ಆರ್.ಎಫ್./ನೆಟ್ ಹಾಗೂ ಕರ್ನಾಟಕ ರಾಜ್ಯದ ಕೆ.ಎಸ್.ಇ.ಟಿ. ಪರೀಕ್ಷೆಯ ಪೇಪರ್-1 ಜನರಲ್ ಪೇಪರಿನ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ತರಬೇತಿಯು ವಿವಿಧ ಸಂಸ್ಥೆಗಳಿಂದ ಆಯ್ಕೆ ಮಾಡಿರುವ ಪರಿಣಿತ ವ್ಯಕ್ತಿಗಳಿಂದ ನೀಡಲಾಗುವುದು. ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ವಿಭಾಗ (ಪರೀಕ್ಷೆ ಭವನ) ದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಿಂದ ಅರ್ಜಿಯನ್ನು ಪಡೆದು ನವೆಂಬರ್ 5ರೊಳಗಾಗಿ ಖುದ್ದಾಗಿ ಸಲ್ಲಿಸಬೇಕು. ತರಬೇತಿಯು ನವೆಂಬರ್ 7 ರಿಂದ ಪ್ರಾರಂಭವಾಗಲಿದೆ. ಕೋರ್ಸ್ ಅವಧಿಯು 30 ದಿನ ಇರುತ್ತದೆ. ಈ ತರಬೇತಿಗಾಗಿ 371(ಜೆ) ಹೊಂದಿರುವ ಎಸ್.ಸಿ./ಎಸ್.ಟಿ., ಮಹಿಳೆಯರು, ಓಬಿಸಿ ಮತ್ತು ದೈಹಿಕ ಅಂಗವಿಕಲರಿಗೆ  250ರೂ., 371(ಜೆ) ಜೊತೆಗೆ ಎಲ್ಲ ಅಭ್ಯರ್ಥಿಗಳಿಗೆ ರೂ. 500 ಹಾಗೂ 371(ಜೆ) ಇಲ್ಲದ ಅಭ್ಯರ್ಥಿಗಳಿಗೆ 1000 ರೂ.ಗಳ ಶುಲ್ಕವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರೊ. ಛಾಯಾ ದೇಗಾಂವಕರ ಮೊಬೈಲ್ ಸಂಖ್ಯೆ 9342331301 ಅಥವಾ ಸೂರ್ಯಕಾಂತ ಮೊಬೈಲ್ ಸಂಖ್ಯೆ 9980665267ನ್ನು ಸಂಪರ್ಕಿಸಲು ಕೋರಿದೆ.

ಮಧುಮೇಹಕ್ಕೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ ಲಭ್ಯ : ಡಾ.ಯಮನಪ್ಪ ಶಿರವಾರ

ಕೊಪ್ಪಳ, ಅ.28 (ಕರ್ನಾಟಕ ವಾರ್ತೆ):  ಮಧುಮೇಹ ಖಾಯಿಲೆಗೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ ಲಭಿಸುತ್ತಿದ್ದು, ಮಧುಮೇಹಿ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯುರ್ವೇದ ವೈದ್ಯಾಧಿಕಾರಿ ಡಾ. ಯಮನಪ್ಪ ಜೆ. ಶಿರವಾರ ಹೇಳಿದರು.
      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಮಧುಮೇಹ ಇಂದು ಜಾಗತಿಕ ಸಮಸ್ಯೆಯಾಗಿದ್ದು ಇದನ್ನು ನಿಯಂತ್ರಣದಲ್ಲಿ ಇಡಲು ಆಯುರ್ವೇದಲ್ಲಿ ಹಲವಾರು ಪರಿಹಾರ ಮಾರ್ಗಗಳು ಇವೆ. ಮನೆಯಲ್ಲಿ ನಾವು ದಿನ ನಿತ್ಯ ಬಳಸುವ ಹಲವಾರು ಪದಾರ್ಥಗಳಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು. ಕರಿಬೇವು ಹಾಗೂ ಅಮೃತ ಬಳ್ಳಿಯಂತಹ ಎಲೆಗಳು ತುಂಬಾ ಪರಿಣಾಮಕಾರಿಯಾಗಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಅಲ್ಲದೇ ಯೋಗದಿಂದಲೂ ಕೂಡ ಮಧುಮೇಹವನ್ನ ನಿಯಂತ್ರಣದಲ್ಲಿಡಬಹುದಾಗಿದೆ ಎಂದು ಹೇಳಿದರು.
     ಡಾ.ಗುರುರಾಜ ಉಮಚಗಿ ಮಾತನಾಡಿ ಕೇಂದ್ರ ಸರ್ಕಾರ ಧನ್ವಂತರಿ ದಿನಾಚರಣೆಯನ್ನು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನಾಗಿ ಮಾಡಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಆಯುರ್ವೇದವು ಭಾರತದ ಪುರಾತನ ಪಾರಂಪರಿಕ ಕೊಡುಗೆಯಾಗಿದ್ದು ಇದರ ಮಹತ್ವ ಇಡೀ ದೇಶಕ್ಕೆ ತಿಳಿಸಲು ಈ ದಿನಾಚರಣೆ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.
     ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸಪ್ಪ ವಾಲಿಕಾರ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಕವಿತಾ ಎಚ್,ಎಸ್, ಗಣ್ಯರಾದ ಶಿವಾನಂದ ಹೊದ್ಲೂರ ಉಪಸ್ಥಿತರಿದ್ದರು. ಎಚ್. ಆರ್. ನಿಂಗಾಪೂರ ಸ್ವಾಗತಿಸಿದರು,  ರಾಜಶೇಖರ ನಾರಿನಾಳ ನಿರೂಪಿಸಿ, ವಂದಿಸಿದರು.

ವಿವಿಧ ವಸತಿ ಶಾಲೆಗಳ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ, ಅ.28 (ಕರ್ನಾಟಕ ವಾರ್ತೆ):  ಸಮಾಜ ಕಲ್ಯಾಣ ಇಲಾಖೆಯಿಂದ 2017-18 ನೇ ಸಾಲಿಗೆ ಪ.ಜಾತಿ ಹಾಗೂ ಪ.ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ  ಮೊರಾರ್ಜಿ ದೇಸಾಯಿ, ಕಿತ್ತೂರರ ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ವಸತಿ ಶಾಲೆಗಳಲ್ಲಿ 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾದ್ಯಮಗಳಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
     ಅರ್ಜಿ ಸಲ್ಲಿಸುವ ಪ.ಜಾತಿ ಮತ್ತು ಪ.ಪಂಗಡ, ಹಿಂದುಳಿದ ವರ್ಗದ ಪ್ರವರ್ಗ-1 ರ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ವರಮಾನ ರೂ.2.5 ಲಕ್ಷದೊಳಗಿರಬೇಕು. ಪ್ರವರ್ಗ-2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯ ರೂ.1 ಲಕ್ಷದೊಳಗಿರಬೇಕು.
     ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದಲ್ಲಿ ಮತ್ತು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಲ್ಲಿ ನ. 2 ರಿಂದ ನ.25 ರೊಳಗಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಯಾ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ 15 ರ ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬಹುದು.
ಪ್ರವೇಶ ಪತ್ರಗಳನ್ನು ಡಿಸೆಂಬರ್ 22 ರಿಂದ 30 ರೊಳಗಾಗಿ ಪಡೆಯಬಹುದು. 2017 ರ ಜನೇವರಿ 29   ರಂದು ಬೆಳಿಗ್ಗೆ 11 ರಿಂದ ಮ.1 ಗಂಟೆಯವರಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು.
     ತಾಲೂಕು ಪ್ರವೇಶ ಪರೀಕ್ಷಾಧಿಕಾರಿಗಳ ವಿವರ ಇಂತಿದೆ: ಸವಿತಾ ಬೊರಟ್ಟಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕೊಪ್ಪಳ ಮೊ-8495812456. ಸಿದ್ದಲಿಂಗಪ್ಪ ತಳವಾರ, ಪ್ರಾಚಾರ್ಯರು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳೂಟಗಿ ಮೊ-7829956092. ತಿಮ್ಮಣ್ಣ ಪ್ರಾಚಾರ್ಯರು, ಕಿತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಿಕ್ಕಬೆಣಕಲ್ ತಾ.ಗಂಗಾವತಿ ಮೊ-9964608057. ಗುರುವಸಪ್ಪ ಮುಡಪಲದಿನ್ನಿ, ಪ್ರಾಚಾರ್ಯರು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಟಾಪೂರ ತಾ.ಕುಷ್ಟಗಿ ಮೊ-9740915347.
     ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಘದ ಅಧಿಕೃತ ವೆಬ್‍ಸೈಟ್  www.kreis.kar.nic.in ಇಲ್ಲಿ ಪಡೆಯಬಹುದು. ಈ ಸಾಲಿನಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಅಲ್ಪ ಬದಲಾವಣೆ ತರಲು ಉದ್ದೇಶಿಸಲಾಗಿದು,್ದ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಗತ್ಯ ಮಾಹಿತಿಗಾಗಿ ತಾಲೂಕ ಪ್ರವೇಶ ಪರೀಕ್ಷಾಧಿಕಾರಿಗಳ  ಸಂಪರ್ಕಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನೈರ್ಮಲ್ಯ ವೃತ್ತಿಯ ಪೋಷಕರ ಮಕ್ಕಳಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ಕೊಪ್ಪಳ, ಅ.28 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಯಲಬುರ್ಗಾ ತಾಲೂಕಿನಲ್ಲಿ ವಾಸವಿರುವ ಪ್ರಸ್ತುತ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್, ಚರ್ಮ ಹದಮಾಡುವುದು/ ಚರ್ಮ ಸುಲಿಯುವುದು ಹಾಗೂ ಚಿಂದಿ ಆಯುವುದು/ ಶೇಖರಣೆ ಮಾಡುವ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ಭಾರತ ಸರ್ಕಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುವುದು. ಅರ್ಜಿ ಸಲ್ಲಿಸುವವರು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್  www.sw.kar.nic.in ಇಲ್ಲಿ ಪ್ರಿ ಮೆಟ್ರಿಕ್ ಸ್ಕಾಲರ್‍ಶಿಪ್‍ಗೆ ಅರ್ಜಿ ಸಲ್ಲಿಸಬೇಕು.  3 ರಿಂದ 10 ನೇ ತರಗತಿಯ ನಿಲಯಾರ್ಥಿಗಳಿಗೆ(ಹಾಸ್ಟಲರ್) ಮಾಸಿಕ ಮೊತ್ತ ರೂ.700 (10 ತಿಂಗಳಿಗೆ). 1000 ವಾರ್ಷಿಕ  ಗ್ರಾಂಟ್. ಹಾಗೂ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಡೇ ಸ್ಕಾಲರ್ ಮಾಸಿಕ ರೂ-110, ವಾರ್ಷಿಕ   ಗ್ರಾಂಟ್ 750 ನಿಗದಿಪಡಿಸಿದೆ.
     ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಭಾರತದ ಯಾವುದೇ ಜನಾಂಗ ಹಾಗೂ ಧರ್ಮದವರು ವಿದ್ಯಾರ್ಥಿವೇತನಕ್ಕೆ ಅರ್ಹರು. ಪ್ರಸ್ತುತ ಅನೈರ್ಮಲ್ಯ ವೃತ್ತಿಯಲ್ಲಿ ಪೋಷಕರು ತೊಡಗಿರುವುದಕ್ಕೆ ಪುರಾವೆಯಾಗಿ ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾತಯಿತಿ ಯಿಂದ ದೃಢೀಕರಣ ಪತ್ರ ಪಡೆದು ಲಗತ್ತಿಸಬೇಕು. ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವವರು ದತ್ತು ತೆಗೆದುಕೊಂಡಿದ್ದಲ್ಲಿ ಅಂತಹ ಮಕ್ಕಳಿಗೆ ಸಹ ವಿದ್ಯಾರ್ಥಿವೇತನ ನೀಡಲಾಗುವುದು. (ದತ್ತು ಪಡೆದು 3 ವರ್ಷ ಆಗಿರಬೇಕು ಹಾಗೂ ಪೂರಕ ದಾಖಲೆ ಒದಗಿಸಬೇಕು). ಆದಾಯ ಮಿತಿ ಇರುವುದಿಲ್ಲ. ಸ್ವೀಪರ್ ವೃತ್ತಿಯಲ್ಲಿ ತೊಡಗಿರುವವರು ಇದಕ್ಕೆ ಅರ್ಹರಿರುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಯಲಬುರ್ಗಾ ತಾಲೂಕ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪಡಯಬಹುದು ಎಂದು ಸಹಾಯಕ ನಿರ್ದೇಶಕರು (ಗ್ರೇಡ್-2) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ : ವಿವಿಧ ವೃತ್ತಿಗಳಲ್ಲಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆಯು ಪ್ರಸಕ್ತ ಸಾಲಿನ ನಲ್ಮ್ ಯೋಜನೆಯ ಇ.ಎಸ್.ಟಿ. & ಪಿ ಉಪಯೋಜನೆಯ ಅಡಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಅಭ್ಯರ್ಥಿಗಳಿಗೆ ವಿವಿಧ ವೃತ್ತಿಗಳ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸಲು ಕನಿಷ್ಟ 5 ನೇ ತರಗತಿ ಪಾಸಾಗಿರಬೇಕು ಹಾಗು ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.  ಬಿ.ಪಿ.ಎಲ್. ಕುಟುಂಬಗಳಾಗಿರಬೇಕು.   ವಿವಿಧ ವೃತ್ತಿ ತರಬೇತಿಗಳ ವಿವರ ಇಂತಿದೆ.  ಗಣಕಯಂತ್ರ ತರಬೇತಿ ವಿಷಯದಲ್ಲಿ ಕಂಪ್ಯೂಟರ್ ಫಂಡಮೆಂಟಲ್, ಎಂ.ಎಸ್. ಆಫೀಸ್, ಇಂಟರ್‍ನೆಟ್, ಡಿಟಿಪಿ., ಅಕೌಂಟಿಂಗ್ ಮತ್ತು ಟ್ಯಾಲಿ.  ಇಂಟರಾಕ್ಟೀವ್ ವೆಬ್ ಡಿಸೈನಿಂಗ್, ಕಂಪ್ಯೂಟರ್ ಹಾರ್ಡ್‍ವೇರ್ ಅಂಡ್ ನೆಟ್‍ವರ್ಕಿಂಗ್, ಸಾಫ್ಟ್ ಸ್ಕಿಲ್ ಸ್ಪೋಕನ್ ಇಂಗ್ಲಿಷ್, ಕಾಲ್ ಸೆಂಟರ್ ಟ್ರೈನಿಂಗ್.  ಐಟಿಐ ತರಬೇತಿ ವಿಷಯದಲ್ಲಿ ಟೂ ಅಂಡ್ ಫೋರ್ ವೀಲರ್ ಬೇಸಿಕ್ ಆಟೋಮೋಟಿವ್ ಸರ್ವೀಸ್ ಅಂಡ್ ಓರಾಲಿಂಗ್. ವೆಲ್ಡಿಂಗ್.  ಕೆಎಸ್‍ಆರ್‍ಟಿಸಿ ತರಬೇತಿಯಲ್ಲಿ ಬಸ್ ಡ್ರೈವಿಂಗ್ ಟ್ರೈನಿಂಗ್.  ಲಘು ವಾಹನ ಚಾಲನಾ ತರಬೇತಿ. 
     ಗರಿಷ್ಟ ವಯೋಮಿತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.  ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಭಾವಚಿತ್ರವಿರುವ ಕಾರ್ಡ್, ಬಿ.ಪಿ.ಎಲ್. ರೇಶನ್ ಕಾರ್ಡ್, ಆಧಾರ ಕಾರ್ಡ್‍ಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು. 
     ಆಸಕ್ತರು, ಅರ್ಜಿಗಳನ್ನು ಕಾರ್ಯಾಲಯದ ನಲ್ಮ್ ವಿಭಾಗದಲ್ಲಿ ಪಡೆದು ಭರ್ತಿ ಮಾಡಿ, ನ. 30 ರಂದು ಸಾಯಂಕಾಲ 5-00 ಗಂಟೆಯೊಳಗಾಗಿ ಗಂಗಾವತಿ ನಗರಸಭೆ ಕಾರ್ಯಾಲಯದಲ್ಲಿ ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು..  ಹೆಚ್ಚಿನ ಮಾಹಿಗಾಗಿ ಸಂಜಯ ಕೋರೆ, ಸಿಡಿಇ -9880652783 ಅಥವಾ ಸರಸ್ವತಿ ಸಮುದಾಯ ಸಂಘಟಕರು ಮೊ: 9900475927 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Thursday, 27 October 2016

ನ.14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ

ಕೊಪ್ಪಳ, ಅ.27 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಇವರಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜಿಲ್ಲೆಯಾದ್ಯಂತ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನ.14 ರಿಂದ ನ.30 ರವರೆಗೆ ಹಮ್ಮಿಕೊಳ್ಳಲಾಗಿದೆ.
ಮಕ್ಕಳ ಗ್ರಾಮ ಸಭೆಯ ಉದ್ದೇಶ ಇಂತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸೇವಾ ನಿರ್ವಾಹಕರು ಒಗ್ಗೂಡಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಹಂಚಿಕೊಳ್ಳುವುದು. ನಿರ್ದಿಷ್ಟ ಮಕ್ಕಳ ಅಭಿವೃದ್ಧಿ ಯೋಜನೆಯ ನಿರ್ಮಾಣ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯಲ್ಲಿ ಭೌತಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಗಮನ ನೀಡುವುದರ ಜೊತೆಗೆ, ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆಗೆ ಆದ್ಯತೆ ನೀಡುವುದು ಮಾತ್ರವಲ್ಲದೆ, ಮಕ್ಕಳ ಹಕ್ಕುಗಳ ರಕ್ಷಣೆಗೆ ವ್ಯಾಪಕ ಚರ್ಚೆ ಹಾಗೂ ಪ್ರಚಾರ ನೀಡುವುದು ಕೂಡಾ ಮಕ್ಕಳ ಗ್ರಾಮ ಸಭೆಯ ಉದ್ದೇಶವಾಗಿದೆ.
ವಿವಿಧ ಗ್ರಾಮಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯುವ ದಿನಾಂಕ ಮತ್ತು ಗ್ರಾಮಗಳ ವಿವರ ಇಂತಿದೆ.
ಕುಷ್ಟಗಿ ತಾಲೂಕು :
************ ನ. 14 ರಂದು ಮಾಲಗಿತ್ತಿ, ಹಿರೇಗೊನ್ನಾಗರ, ಜಾಗೀರ್-ಗುಡದೂರು, ನ.15 ರಂದು ಯರಗೇರಾ, ಹುಮಸಾಗರ, ತುಗ್ಗಲದೋಣಿ. ನ.16 ರಂದು ಕಬ್ಬರಗಿ, ಕಾಟಾಪುರ, ಲಿಂಗದಹಳ್ಳಿ. ನ.18 ರಂದು ಹೂಲಗೇರ, ಅಡವಿಭಾವಿ, ನಿಲೋಗಲ್. ನ.19 ಚಳಗೇರಾ, ತಾವರಗೇರಾ, ಶಿರಗುಂಪಿ. ನ.21 ರಂದು ಕೊರಟಕೇರಾ, ಹಿರೇಬನ್ನಿಗೋಳ, ಕೇಸೂರು. ನ.22 ರಂದು ಕಂದಕೂರು, ಬಿಜಕಲ್, ಹನುಮನಾಳ. ನ.23 ರಂದು ದೋಟಿಹಾಳ, ಕ್ಯಾದಿಗುಪ್ಪಾ, ಹಿರೇನಂದಿಹಾಳ. ನ.24 ರಂದು ಹಿರೇಮನ್ನಾಪುರ, ಮುದೇನೂರು. ತುಮರಿಕೊಪ್ಪ. ನ.25 ರಂದು ಮೆಣೆದಾಳ, ಜುಮಲಾಪುರ. ನ.26 ರಂದು ಕಿಲ್ಲಾರಹಟ್ಟಿ, ಸಂಗನಹಾಳ, ಬೆನಕನಹಾಳ. ನ.28 ರಂದು ಅಂಟರಟಾಣಾ, ಬಿಲೇಕಲ್, ಗುಮಗೇರಿ, ಹಾಬಲಕಟ್ಟಿ.
ಗಂಗಾವತಿ ತಾಲೂಕು:
*************ನ.14 ರಂದು ಯರಢೋಣಿ, ಮರಳಿ, ಬರಗೂರು. ನ.15 ರಂದು ಚಿಕ್ಕಡಂಕನಕಲ್, ಹಿರೇಖೇಡ, ಕರಡೋಣ. ನ.16 ರಂದು ಗೌರಿಪುರ, ಮುಸಲಾಪುರ, ಹೊಸಕೇರಾ. ನ.18 ರಂದು ಮೈಲಾಪುರ, ಆಗೋಲಿ, ಹಣವಾಳ. ನ.19 ರಂದು ಚಿಕ್ಕ ಮಾದಿನಾಳ, ವೆಂಕಟಗಿರಿ, ಹೇರೂರು. ನ.21 ರಂದು ಮರ್ಲಾನಹಳ್ಳಿ, ಸಾಣಾಪುರ, ಕೆಸರಹಟ್ಟಿ. ನ.22 ರಂದು ಬಸಾಪಟ್ಟಣ, ಮಲ್ಲಾಪುರ. ನ.23 ರಂದು ವಡ್ಡರಹಟ್ಟಿ, ಚಿಕ್ಕಜಂತಕಲ್, ಬಸರಿಹಾಳ. ನ.24 ರಂದು ಜೀರಾಳ, ಚಿಕ್ಕಬೆಣಕಲ್, ಹುಲಿಹೈದರ್. ನ.25 ರಂದು ಉಳ್ಕಿಹಾಳ, ಢಣಾಪುರ, ಶ್ರೀರಾಮನಗರ. ನ.26 ರಂದು ಬೂದಗುಂಪಾ, ಸುಳೇಕಲ್, ನವಲಿ. ನ.28 ಮುಷ್ಟೂರು, ಬೇವಿನಹಾಳ, ಚಳ್ಳೂರು. ನ.29 ರಂದು ಸಿದ್ದಾಪುರ, ಉಳೇನೂರು, ಸಂಗಾಪುರ. ನ.30 ರಂದು ಬೆನ್ನೂರು, ಗುಂಡೂರು, ಆನೆಗುಂದಿ, ಜಂಗಮರಕಲ್ಗುಡಿ.
ಯಲಬುರ್ಗಾ ತಾಲೂಕು:
**************ನ.14 ರಂದು ಬನ್ನಿಕೊಪ್ಪ, ರಾಜೂರು, ಹಿರೇ ಮ್ಯಾಗೇರಿ. ನ.15 ರಂದು ಸಂಗನಹಾಳ, ಭೂದೂರು, ಶಿರೂರು. ನ.16 ರಂದು ಭಾನಾಪುರ, ಬಳಗೇರಿ, ಚಿಕ್ಕ ಮ್ಯಾಗೇರಿ. ನ. 18 ರಂದು ಮಸಬಹಂಚಿನಾಳ, ಮಂಡಲಿಗಿರಿ, ಹಿರೇವಂಕಲಕುಂಟಾ. ನ.19 ರಂದು ಯರೇಹಂಚಿನಾಳ, ತುಮ್ಮರಗುದ್ದಿ, ಮುಧೋಳ. ನ.21 ರಂದು ಕರಮುಡಿ, ಹಿರೇಬೀಡ್ನಾಳ, ವಣಗೇರಿ. ನ.22 ರಂದು ಮುರಡಿ, ಸಂಕನೂರು, ಬಂಡಿ. ನ.23 ರಂದು ಬಳೂಟಗಿ, ಬೇವೂರು, ತಾಳಕೇರಿ. ನ.24 ರಂದು ಕಲ್ಲೂರು, ಮಾಟಲದಿನ್ನಿ, ಇಟಗಿ. ನ.25 ರಂದು ಮಂಗಳೂರು, ಹಿರೇಅರಳಿಹಳ್ಳಿ, ನೆಲಜೇರಿ. ನ.26 ರಂರು ಗದಗೇರಿ, ಕುದರಿಮೋತಿ, ಬೆಣಕಲ್. ನ.28 ರಂದು ಗಾಣದಾಳ, ಗುನ್ನಾಳ, ತಳಕಲ್, ವಜ್ರಬಂಡಿ.
ಕೊಪ್ಪಳ ತಾಲೂಕು:
************ನ.14 ರಂದು ಬೆಟಗೇರಿ, ಇಂದರಗಿ. ನ.15 ರಂದು ಗಿಣಿಗೇರಾ, ಕವಲೂರು, ಹಾಸಗಲ್. ನ.16 ರಂದು ಕುಣಿಕೇರಿ, ಗೊಂಡಬಾಳ, ಕಲಕೇರಾ. ನ.18 ರಂದು ಬಹದ್ದೂರ ಬಂಡಿ, ಇರಕಲ್‍ಗಡಾ, ಬೇವಿನಹಳ್ಳಿ. ನ.19 ರಂದು ಹುಲಿಗಿ, ಹೊಸಳ್ಳಿ, ಕೋಳೂರು. ನ.21 ರಂದು ಸಿಂದೋಗಿ, ಹಟ್ಟಿ, ಬೋಚನಹಳ್ಳಿ. ನ.22 ರಂದು ಬಿಸರಳ್ಳಿ, ಕಿನ್ನಾಳ, ಚಿಕ್ಕಬೊಮ್ಮನಾಳ. ನ. 23 ರಂದು ಮಾದಿನೂರು, ಹಿರೇಬಗನಾಳ, ಅಳವಂಡಿ. ನ.24 ರಂದು ಹಲಗೇರಿ, ಬಂಡಿಹರ್ಲಾಪುರ, ಕಾತರಕಿ-ಗುಡ್ಲಾನೂರು. ನ 25 ರಂದು ಮುನಿರಾಬಾದ, ಅಗಳಕೇರಾ, ಶಿವಪೂರ. ನ.26 ಮತ್ತೂರು, ಬೂದಗುಂಪಾ, ಲೇಬಗೇರಿ. ನ.28 ರಂದು ಹಾಲವರ್ತಿ, ಗುಳದಳ್ಳಿ, ವಣಬಳ್ಳಾರಿ, ಓಜಿನಹಳ್ಳಿ. ನ.29 ರಂದು ಕಲ್‍ತಾವರಗೇರಾ, ಹಿಟ್ನಾಳ.
ನಿಗದಿತ ದಿನ ಹಾಗೂ ಗ್ರಾಮಗಳಲ್ಲಿ ತಪ್ಪದೇ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಕಡ್ಡಯವಾಗಿ ಹಮ್ಮಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋಟಾರ್ ರೀವೈಂಡಿಗ್ ಮತ್ತು ಪಂಪ್‍ಸೆಟ್ ರಿಪೇರಿ ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ, ಅ.27 (ಕರ್ನಾಟಕ ವಾರ್ತೆ):  ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಯುವಕರಿಗೆ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‍ಸೆಟ್ ರಿಪೇರಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿ ಅವಧಿ 30 ದಿನಗಳು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಜಿ ಸಲ್ಲಿಸಲು ಹಾಗೂ ಸ್ವೀಕರಿಸಲು ನ.12 ಕೊನೆಯ ದಿನ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನ.14 ಬೆಳಿಗ್ಗೆ 10.30 ಗಂಟೆಗೆ ಸಂದರ್ಶನ ನಡೆಸಲಾಗುವುದು. ನ.15 ರಿಂದ ತರಗತಿಗಳು ಪ್ರಾರಂಭವಾಗಲಿವೆ.
     ಅರ್ಜಿ ಸಲ್ಲಿಸುವವರು 18 ರಿಂದ 45 ವರ್ಷದೊಳಗಿರಬೇಕು. ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು. ಕೊಪ್ಪಳ ಜಿಲ್ಲೆಯವರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು. ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ.ಸಂ: 08539-231038 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನ.12 ರಂದು ಮೆಗಾ ಲೋಕ ಅದಾಲತ್ : ಸದುಪಯೋಗಕ್ಕೆ ಸೂಚನೆ

ಕೊಪ್ಪಳ, ಅ.27 (ಕರ್ನಾಟಕ ವಾರ್ತೆ):  ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮುಖಾಂತರ ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದ್ದು, ನ.12 ರಂದು ನಡೆಯಲಿರುವ ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.
ರಾಜೀಯಾಗುವಂತಹ ಕ್ರಿಮಿನಲ್ ಪ್ರಕರಣಗಳು, ಇತ್ಯರ್ಥವಾಗುವಂತಹ ಸಿವಿಲ್ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪ್ರಕರಣ, ಭೂಸ್ವಾಧೀನ ಪ್ರಕರಣ, ಅರಣ್ಯ ಇಲಾಖೆ ಪ್ರಕರಣಗಳು ಬ್ಯಾಂಕ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು ಚಕ್‍ಬೌನ್ಸ್ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ಲೋಕ ಅದಾಲತ್‍ನಲ್ಲಿ ನಿಮ್ಮ ವ್ಯಾಜ್ಯವನ್ನು ರಾಜೀ ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳಲು ಪ್ರತಿ ನಿತ್ಯ ಜನತಾ ನ್ಯಾಯಾಲಯವನ್ನು ಏರ್ಪಡಿಸಲಾಗಿದೆ.  ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯ ಉಳಿದು ವಿವಾದ ಇತ್ಯರ್ಥಗೊಳ್ಳುವುದು. ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ವವಾಗಿ ಮರುಪಾವತಿಸಲಾಗುವುದು. ಆದ್ದರಿಂದ ಕಡಿಮೆ ಖರ್ಚು ಶೀಘ್ರ ವಿಲೇವಾರಿಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಜಿ ಸೈನಿಕರು/ಅವಲಂಬಿತರು ಜೀವಿತಾ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ಕೊಪ್ಪಳ, ಅ.27 (ಕರ್ನಾಟಕ ವಾರ್ತೆ):  ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ ಇವರು ಮಾಸಿಕ ಗೌರವಧನ ಪಡೆಯುತ್ತಿರುವ ಮಾಜಿ ಸೈನಿಕರು/ಅವಲಂಬಿತರ ಜೀವಿತಾ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
     ಬ್ಯಾಂಕ್‍ನಿಂದ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರಿಂದ ಪ್ರತಿ ವರ್ಷ ನವಂಬರ್ ತಿಂಗಳಿನಲ್ಲಿ ಜೀವಿತ ಪ್ರಮಾಣ ಪತ್ರವನ್ನು ಬ್ಯಾಂಕ್ ಪ್ರಾಧಿಕಾರಗಳು ಪಡೆಯುವ ಪ್ರಕ್ರಿಯೆಯಂತೆ, ಪ್ರಪಂಚದ ಎರಡನೇ ಮಹಾಯುದ್ಧದ ಮಾನಿಕ ಗೌರವ ಧನ ಪಡೆಯುತ್ತಿರುವ ಮಾಜಿ ಸೈನಿಕರ, ಅವಲಂಬಿತರು ತಮ್ಮ ಜೀವಿತ ಪ್ರಮಾಣ ಪತ್ರವನ್ನು ಪ್ರತಿವರ್ಷ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಪ್ರಪಂಚದ ಎರಡನೇ  ಮಹಾಯುದ್ಧದ ಮಾಸಿಕ ಗೌರವ ಧನ ಪಡೆಯುತ್ತಿರುವ ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯಲ್ಲಿರುವ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು  ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು. ಜೀವಿತ ಪ್ರಮಾಣ ಪತ್ರದ ನಿಗದಿತ ಅರ್ಜಿಯನ್ನು ಉಪನಿರ್ದೇಶಕರು, ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ ಕಾರ್ಯಲಯದಿಂದ ನ.25 ರೊಳಗಾಗಿ ಪಡೆದು ಸೂಕ್ತ ಸಮಯದಲ್ಲಿ ಸಲ್ಲಿಸಬೇಕು ಪ್ರಮಾಣ ಪತ್ರ ಸಲ್ಲಿಸದಿರುವ ಫಲಾನುಭವಿಗಳ ಮಾಸಿಕ ಗೌರವ ಧನ ಸ್ಥಗಿತಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ ದೂ.ಸಂ: 08354-235434 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಯಲಬುರ್ಗಾ ಪಟ್ಟಣದ ವಾರ್ಡ್‍ಗಳ ಪುನರ್ ವಿಂಗಡಣೆ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ, ಅ.27 (ಕರ್ನಾಟಕ ವಾರ್ತೆ):  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪಟ್ಟಣ ಪಂಚಾಯಿತಿಯ ವಾರ್ಡ್‍ಗಳ ಪುನರ್ ವಿಂಗಡಣೆ ಮಾಡಿ ಉಪವಿಭಾಗಾಧಿಕಾರಿ ಇಸ್ಮಾಯಿಲ್‍ಸಾಬ ಶಿರಹಟ್ಟಿ ಅವರು ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಕರಡು ಅಧಿಸೂಚನೆ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.
     ಕರಡು ಅಧಿಸೂಚನೆ ಪ್ರಕಾರ ವಾರ್ಡ್‍ಗಳ ಪುನರ್ ವಿಂಗಡಣೆಯ ವಿವರ ಇಂತಿದೆ:  ವಾರ್ಡ್ ನಂ-01 : ಹರ್ತಿಯವರ ಓಣಿ, ಕರಂಡಿಯವರ ಓಣಿ, ಗಾಳಿಯವರ ಓಣಿ, ಮಗ್ಗಿ ಬಸವೇಶ್ವರ ದೇವಸ್ಥಾನ. ವಾರ್ಡ್ ನಂ-02 : ಮಂಕಾದಾರ ಓಣಿ, ಕುಂಬಾರ ಓಣಿ, ಹಣಗಿಯವರ ಓಣಿ, ಕಂಡೇರ ಓಣಿ, ಹೂಗಾರ ಓಣಿ, ಮಣಿಗಾರ ಓಣಿ, ಕಲಾಲರ ಮನೆಗಳು, ಮುಂದುವರೆದು ಬಸವಣ್ಣ ದೇವರ ಗುಡಿಯವರೆಗೆ. ವಾರ್ಡ್ ನಂ-03 : ಪ್ರಶಾಂತ ನಗರ, ಜನತಾ ಕಾಲೋನಿ. ವಾರ್ಡ್ ನಂ-04 : ಕುಂಚಿಕೊರವರ ಓಣಿ, ಲಮಾಣಿ ತಾಂಡಾ, ಭಜಂತ್ರಿ ಓಣಿ, ನೀಲಗಾರ ಓಣಿ, ಬಾರಕೇರ ಓಣಿ, ತಾಸೇದಾರ ಓಣಿ, ದಂಡಿನವರ ಓಣಿ, ಗೋದಾಮಿನ ಹತ್ತಿರ. ವಾರ್ಡ್ ನಂ-05 : ಛಲವಾದಿಯವರ ಓಣಿ, ಕುರುಬರ ಓಣಿ, ಜೋಗೀನವರ ಓಣಿ, ಶೇಲ್ಲೇದವರ ಓಣಿ, ಉಪ್ಪಾರ ಓಣಿ, ಕಂಡೇರ ಓಣಿ ಎಡಭಾಗ. ವಾರ್ಡ್ ನಂ-06 : ಗೌಡರ ಓಣಿ, ಗಾಣಿಗೇರ ಓಣಿ, ದಫೇದಾರ ಓಣಿ, ಶ್ಯಾನುಭೋಗರ ಓಣಿ, ಉಪ್ಪಾರ ಓಣಿ, ಗಾಂಜಿಯವರ ಓಣಿ ಬಲಭಾಗ ಮತ್ತು ಕಂಡಿಯವರ ಮನೆಗಳು. ವಾರ್ಡ್ ನಂ-07 : ಮೊರಗೇರ ಓಣಿ, ಪುರೋಹಿತ ಓಣಿ, ಹಡಪದವರ ಓಣಿ, ಹಾಂಜಿಯವರ ಓಣಿ, ಗೌಡರ ಓಣಿ, ಬಸಪ್ಪಗೌಡರ ಓಣಿ, ಹಿರೇಮಠದ ಮುಂದಿನ ರಸ್ತೆ. ವಾರ್ಡ್ ನಂ-08 :  ಅರಕೇರಿ ಓಣಿ, ಬಡಿಗೇರ ಓಣಿ, ಕೊಪ್ಪಳದವರ ಓಣಿ, ಅಧಿಕಾರಿಯವರ ಓಣಿ, ಬೇಲೇರಿಯವರ ಓಣಿ, ಹಳ್ಳಿಕೇರಿ ಓಣಿ, ದೇಶಪಾಂಡೆ ವಠಾರ. ವಾರ್ಡ್ ನಂ-09 :  ಜೋಶಿ ಓಣಿ, ಗಂಧದವರ ಓಣಿ, ಖಾಜಿಯವರ ಓಣಿ, ಅಧಿಕಾರಿಯವರ ಪ್ಲಾಟ್‍ಗಳು, ಬನ್ನಿಕೊಪ್ಪದವರ ಓಣಿ, ಹುಬ್ಬಳ್ಳಿಯವರ ಓಣಿ, ಹಳ್ಳಿಯವರ ಮನೆಗಳು, ಗಡಾದವರ ಓಣಿ. ವಾರ್ಡ್ ನಂ-10 : ಮುಧೋಳ ರಸ್ತೆ ಆಶ್ರಯ ಕಾಲೋನಿ ಮತ್ತು ನಾಗನಗೌಡ್ರ ಓಜನಹಳ್ಳಿಯವರ ಪ್ಲಾಟಗಳು. ವಾರ್ಡ್ ನಂ-11 : ಕೆ.ಇ.ಬಿ ಕ್ವಾಟ್ರಸ್, ಪೋಸ್ಟ್ ಆಫೀಸ್ ಹಿಂದಿನ ಭಾಗ, ವಿದ್ಯಾಸಾಗರ ಕಾಲೋನಿ, ಡಾ.ಬಾಬುಜಗಜೀವನರಾಂ ನಗರ, ಅಧಿಕಾರಿಯವರ ಬಡಾವಣೆ, ಬಿ.ಆರ್.ಸಿ ಕಛೇರಿ ವರೆಗೆ. ವಾರ್ಡ್ ನಂ-12 : ಬೇವೂರ ರಸ್ತೆ, ಆಶ್ರಯ ಕಾಲೋನಿ, ತಹಶೀಲ್ ಕ್ವಾಟ್ರಸ್, ರಾಘವೇಂದ್ರ ಕಾಲೋನಿ, ಬಿ.ಟಿ.ಓ ಕ್ವಾಟ್ರಸ್, ಎನ್.ಜಿ.ಓ ಕ್ವಾಟ್ರಸ್, ಬಸಪ್ಪಗೌಡ್ರ ಬಡಾವಣೆ, ಲಕ್ಷ್ಮೀ ನಗರ. ವಾರ್ಡ್ ನಂ-13 : ರಾಮನಗರ, ಬಸವೇಶ್ವರ ನಗರ, ಕೊತ್ವಾಲರ ಪ್ಲಾಟ್, ಪೊಲೀಸ್ ಕ್ವಾಟ್ರಸ್, ಪಟ್ಟಣ ಪಂಚಾಯಿತಿ, ಜಿ.ಪಂ ಕಛೇರಿ. ವಾರ್ಡ್ ನಂ-14 : ಕೆ.ಎಚ್.ಬಿ ಕಾಲೋನಿ, ಶ್ರೀ ಸಿದ್ದರಾಮಯ್ಯ ನಗರ, ಮೀನಾಕ್ಷಿ ನಗರ, ಗೌಂಡಿ ಸಂಘದ ಪ್ಲಾಟುಗಳು, ಶಿವನಗೌಡರ ಬಡಾವಣೆ, ಬಸ್ ಡಿಪೋ ಭರಮಗೌಡರ ಅಡ್ಡೆದ ಪ್ಲಾಟುಗಳು. ವಾರ್ಡ್ ನಂ-15 : ಭೂಸನೂರಮಠದವರ ಪ್ಲಾಟಗಳು, ಕುದ್ರಿಕೊಟಗಿ ರಸ್ತೆ ಆಶ್ರಯ ಕಾಲೋನಿ, ಉಳ್ಳಾಗಡ್ಡಿಯವರ ಬಡಾವಣೆ, ಕೆ.ಸಿ ನಗರ, ಪತ್ತಾರ ಬಡಾವಣೆ, ಡಾ. ಇಟಗಿಯವರ ಬಡಾವಣೆ ಕಲಬುರಗಿಯವರ ಸ್ಟೋನ್ ಪಾಲಿಸಿಂಗ್ ಯುನಿಟ್ ವರೆಗೆ.
     ವಾರ್ಡುಗಳ ಪುನರ್ ವಿಂಗಡಣೆಯ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಯಾವುದೇ ಆಕ್ಷೇಪಣೆಗಳು, ಸಲಹೆ ಸೂಚನೆಗಳಿದ್ದಲ್ಲಿ ನ.10 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಪೂರ್ಣ ವಿಳಾಸದೊಂದಿಗೆ ಲಿಖಿತ ರೂಪದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್‍ಸಾಬ ಶಿರಹಟ್ಟಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ವಾಹನ ತರಬೇತಿ ನೀಡಲು ನೋಂದಾಯಿತ ತರಬೇತಿ ಶಾಲೆಗಳಿಂದ ಅರ್ಜಿ ಆಹ್ವಾನ

ಕೊಪ್ಪಳ, ಅ.27 (ಕರ್ನಾಟಕ ವಾರ್ತೆ):  ಕೊಪ್ಪಳ ನಗರಸಭೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಪ್ರಸಕ್ತ ಸಾಲಿಗಾಗಿ ವಾಹನ ತರಬೇತಿ ನೀಡಲು ನೋಂದಾಯಿತ ತರಬೇತಿ ಶಾಲೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕೇಂದ್ರ ಪುರಸ್ಕøತ ಯೋಜನೆಯಾದ ರಾಷ್ಟ್ರೀಯ ನಗರ ಜೀವನೋಪಾಯ ಅಭೀಯಾನದಡಿ ಪ್ರಸಕ್ತ ಸಾಲಿಗೆ ನಗರ ಪ್ರದೇಶಗಳಲ್ಲಿನ 18 ವರ್ಷ ಮೇಲ್ಪಟ್ಟ ವಯೋಮಿತಿಯ ಫಲಾನುಭವಿಗಳಿಗೆ ಅಧಿಕೃತ ವಾಹನ ತರಬೇತುದಾರರಿಂದ ತರಬೇತಿ ನೀಡಲು ಕ್ರಿಯಾ ಯೋಜನೆ ಮಂಜೂರಾಗಿರುತ್ತದೆ.  ತರಬೇತಿ ನೀಡಲು ರಸ್ತೆ ಸಾರಿಗೆ ಇಲಾಖೆ (ಆರ್‍ಟಿಓ) ಯಿಂದ ನೋಂದಾವಣೆಯಾಗಿರುವ ವಾಹನ ಚಾಲನಾ ತರಬೇತಿ ಶಾಲೆ/ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.   ಆಸಕ್ತರು ಲಿಖಿತ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ನ.10 ರೊಳಗಾಗಿ ಸ್ಪರ್ಧಾತ್ಮಕ ದರಪಟ್ಟಿ ಸಲ್ಲಿಸುವಂತೆ ನಗರಸಭೆ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.28 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಕೊಪ್ಪಳ, ಅ.27 (ಕರ್ನಾಟಕ ವಾರ್ತೆ):  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಅ.28 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪ್ರಗತಿ ನಗರದಲ್ಲಿರುವ (ಕಿನ್ನಾಳ ರಸ್ತೆ) ಸರಕಾರಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಗವಿಮಠ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು.   ಜಿ.ಪಂ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್.ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಆಯುಷ್ ನಿರ್ದೇಶನಾಲಯದ ನಿರ್ದೇಶಕ ರಾಜ ಕಿಶೋರ ಸಿಂಗ್ ಅವರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸಪ್ಪ ವಾಲಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಸ್ಯಾತ್ಮಕ ಗ್ರಾಮಗಳಿಗೆ ಸಿಇಓ ರಾಮಚಂದ್ರನ್ ಭೇಟಿ ನೀಡಿ ಪರಿಶೀಲನೆ


ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಕುಷ್ಟಗಿ ತಾಲೂಕಿನ ಬಿಳೇಕಲ್ ಹಾಗೂ ಗುಡ್ಡದ ದೇವಲಾಪುರ ಗ್ರಾಮಕ್ಕೆ ಗುರುವಾರದಂದು ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಖುದ್ದು ಪರಿಶೀಲನೆ ನಡೆಸಿದರು.
     ಕುಷ್ಟಗಿ ತಾಲೂಕಿನ ಬಿಳೇಕಲ್ ಗ್ರಾಮಕ್ಕೆ ಭೇಟಿ ನೀಡಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಇಲ್ಲಿನ ಓಲೇಕಾರ ಇವರ ಹೊಲಕ್ಕೆ ಭೇಟಿ ನೀಡಿ ಅದರಲ್ಲಿರುವ ಖಾಸಗಿ ಬೋರ್‍ವೆಲ್‍ನ್ನು ಸಾರ್ವಜನಿಕರ ಕುಡಿಯುವ ನೀರಿಗಾಗಿ ಉಪಯೋಗಿಸಲು ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.  ನಂತರ ಗುಡ್ಡದ ದೇವಾಲಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಸಾರ್ವಜನಿಕರೊಂದಿಗೆ ಬೆರೆತು, ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.  ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Wednesday, 26 October 2016

ಜಿಲ್ಲೆಯಲ್ಲಿ ನ.14 ರಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆ ಆಚರಿಸಲು ಸೂಚನೆ

ಕೊಪ್ಪಳ,ಅ 26 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಸ್ಥಿತಿಗತಿಗಳನ್ನು ಚರ್ಚಿಸಿ ವಿಶ್ಲೇಷಿಸಿ ಪಂಚಾಯತ್ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ  ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಇದೇ ನ.14 ರಿಂದ ನ.30 ರವರೆಗೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಳ್ಳಲಾಗಿದ್ದು ವಿವಿಧ ಅಂಶಗಳ ಬಗ್ಗೆ ಚರ್ಚಿಸಲು ಸಂಬಂಧಿಸಿದ ಗ್ರಾ.ಪಂ. ಪಿಡಿಓ/ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989 ರಲ್ಲಿ ಜಾರಿಯಾಗಿ 27 ವರ್ಷಗಳನ್ನು ಪೂರೈಸುತ್ತಿದೆ. ಈ ಒಡಂಬಡಿಕೆಗೆ ಭಾರತ ಸರ್ಕಾರವು 1992ರಲ್ಲಿ ಸಹಿ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆಯನ್ನು ಸೂಚಿಸಿ ಮಕ್ಕಳ ಪರವಾದ ಹಲವಾರು ನಿಯಮ, ಕಾಯ್ದೆ, ಯೋಜನೆ, ಕಾರ್ಯಕ್ರಮಗಳನ್ನು ದೇಶದಾದ್ಯಂತ ಜಾರಿಗೊಳಿಸುತ್ತಾ ಬಂದಿದೆ. ಮಕ್ಕಳು ನಮ್ಮ ಸಮಾಜದ ಅವಿಭಾಜ್ಯ ಅಂಗ. ಅವರ ಉಳಿವು, ರಕ್ಷಣೆ ಮತ್ತು ಅಭಿವೃದ್ಧಿ ಎಲ್ಲಾ ಸಮುದಾಯಗಳ ಕರ್ತವ್ಯ. ಆಡಳಿತ ವಿಕೇಂದ್ರೀಕರಣದ ಪ್ರಮುಖ ಹಂತವಾದ ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿಯೇ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಗುರುತಿಸಿ ಅಂತಹವುಗಳನ್ನು ತಡೆದು ಮಕ್ಕಳನ್ನು ರಕ್ಷಿಸುವಲ್ಲಿ ಗ್ರಾಮ ಪಂಚಾಯತಿಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳ ಮಹತ್ತರ ಜವಾಬ್ದಾರಿಯಾಗಿದೆ.
ವಿವಿಧ ಅಂಶಗಳಾದ ಶಿಶು ಮರಣ ತಡೆಯುವುದು, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಠಿಕ ಆಹಾರವನ್ನು ಒದಗಿಸುವುದು, ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವುದು, ಎಲ್ಲಾ 3 ವರ್ಷದಿಂದ 6 ವರ್ಷದ ಮಕ್ಕಳು ಅಂಗನವಾಡಿಗಳಲ್ಲಿ, 6 ರಿಂದ 14 ವರ್ಷದ ಮಕ್ಕಳು ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣವನ್ನು ಪಡೆಯುವುದು ಮತ್ತು 14 ರಿಂದ 18 ವರ್ಷದ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಇರುವಂತೆ ಮಾಡುವುದು. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಆಟಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು. ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಜೀತ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಮತ್ತು ಅವುಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು. ಹೆಣ್ಣು ಮಕ್ಕಳ ಪೋಷಣೆ ಹಾಗೂ ರಕ್ಷಣೆ. ಮಕ್ಕಳ ಭಾಗವಹಿಸುವ ಹಕ್ಕನ್ನು ಖಾತರಿ ಪಡಿಸಬೇಕು.  ಹೆಚ್‍ಐವಿ ಬಾಧಿತ ಮಕ್ಕಳಿಗೆ ಪುನರ್ವಸತಿ, ವಲಸೆ ತಡೆಗಟ್ಟುವುದು, ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಯ ಅರಿವು ಮೂಡಿಸುವುದು, ಅಂಗವಿಕಲ ಮಕ್ಕಳಿಗೆ, ದೇವದಾಸಿ ಕುಟುಂಬದ ಮಕ್ಕಳ ರಕ್ಷಣೆ ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮತ್ತು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು.
ಮಕ್ಕಳ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಇಲಾಖೆಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು, ಪಾಲಕರು, ಗ್ರಾಮಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಸಮುದಾಯ ಸಂಘಟಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂಧಿಗಳು, ಬಾಲ ಕಾರ್ಮಿಕ ಯೋಜನಾ ಸಂಘಧ ಸಿಬ್ಬಂಧಿಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಪೊಲೀಸ್ ಅಧಿಕಾರಿಗಳು, ಸ್ಥಳೀಯ ಗ್ರಾಮ ಲೆಕ್ಕಿಗರು, ಆರೋಗ್ಯ ಕಾರ್ಯಕರ್ತರು ಹಾಗೂ ಇತರರೊಂದಿಗೆ ಗ್ರಾಮ ಸಭೆಯನ್ನು ಆಯೋಜಿಸಬೇಕು.
ಗ್ರಾಮಸಭೆಯನ್ನು ನಡೆಸಬೇಕಾದ ಪೂರ್ವ ತಯಾರಿ ಸಭೆಯಲ್ಲಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿ.ಡಿ.ಒ/ಕಾರ್ಯದರ್ಶಿ ಮತ್ತು ಎಲ್ಲಾ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳನ್ನು ಸೇರಿಸಿ ಆಯೋಜಿಸಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು ಗ್ರಾಮ ಪಂಚಾಯತ್‍ನ ಮುಂದಿಡುವ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರೈಸಬೇಕು. ಅಗತ್ಯವಿದ್ದರೆ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸುವುದು ಮತ್ತು ಅವುಗಳನ್ನು ಪಂಚತಂತ್ರ ತಂತ್ರಜ್ಞಾನದಲ್ಲಿ ಅಳವಡಿಸಬೇಕು. ಪೂರ್ವ ತಯಾರಿ ಸಭೆಯ ವರದಿ, ಗ್ರಾಮ ಸಭೆಯ ನಡಾವಳಿ ಮುಂತಾದ ವರದಿಗಳನ್ನು ಗ್ರಾಮ ಸಭೆ ಮುಗಿದ 10 ದಿನದ ಒಳಗೆ ಆಯಾ ತಾಲ್ಲೂಕುಗಳ ತಾಲ್ಲೂಕ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿಗಳ ಮುಖಾಂತರ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯಿಂದ ಬೆಳೆ ಹಾನಿ ಸಮೀಕ್ಷೆ ಕಾರ್ಯ ಪರಿಶೀಲನೆ


ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಹಾನಿಗೀಡಾಗಿರುವ ಬೆಳೆಗಳ ಸಮೀಕ್ಷಾ ಕಾರ್ಯ ಜರುಗುತ್ತಿದ್ದು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷಾ ಕಾರ್ಯದ ಪರಿಶೀಲನೆ ನಡೆಸಿದರು.

     ಬುಧವಾರದಂದು ಬೆಳಿಗ್ಗೆ ಯಲಬುರ್ಗಾ ತಾಲೂಕಿನ ಭಾನಾಪುರ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಮಳೆಯ ಕೊರತೆಯಿಂದ ನಷ್ಟಕ್ಕೀಡಾಗಿರುವ ಮೆಕ್ಕೆಜೋಳ, ತೊಗರಿ, ಸಜ್ಜೆ ಬೆಳೆಗಳ ಹೊಲಗಳಲ್ಲಿ ಪರಿಶೀಲನೆ ನಡೆಸಿದರು.  ನಂತರ ತಳಕಲ್ ಗ್ರಾಮದ ಬಳಿ ಮೆಕ್ಕೆಜೋಳ, ಬನ್ನಿಕೊಪ್ಪಳ ಗ್ರಾಮದಲ್ಲಿ ಈರುಳ್ಳಿ ಮುಂತಾದ ಬೆಳೆಗಳು ಮಳೆಯ ಕೊರತೆಯಿಂದ ಒಣಗುತ್ತಿದ್ದು, ಬೆಳೆ ಹಾನಿ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದರು. 


     ಜಿ.ಪಂ. ಸದಸ್ಯ ಹನುಮಂತಪ್ಪ ಚಂಡೂರ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ,  ಯಲಬುರ್ಗಾ ತಹಸಿಲ್ದಾರ್ ರಮೇಶ್ ಅಳವಂಡಿಕರ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಿ.ದೇವರಾಜ ಅರಸು ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆ ಫಲಾನುಭವಿಗಳ ಆಯ್ಕೆ

ಕೊಪ್ಪಳ, ಅ.26 (ಕರ್ನಾಟಕ ವಾರ್ತೆ):  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಎಸ್.ನಿ.ಸಿ.ಎಫ್.ಡಿ.ಸಿ ಹಾಗೂ ಅವಧಿಸಾಲ ಯೋಜನೆಯಡಿ ಫಲಾನುಭವಿಗಳನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರ ಅಧ್ಯಕ್ಷತೆಯ ಜಿಲ್ಲಾ ಆಯ್ಕೆ ಸಮಿತಿ ಸಭೆಯಲ್ಲಿ ಬುಧವಾರದಂದು ಆಯ್ಕೆ ಮಾಡಲಾಯಿತು.
ಡಿ. ದೇವರಾಜ ಅರಸು ನಿಗಮ : ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಕೊಠಡಿಯಲ್ಲಿ ಜರುಗಿದ ಸಭೆಯಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಅವಧಿಸಾಲ ಯೋಜನೆಯಲ್ಲಿ ನಿಗಧಿಪಡಿಸಿದ ಆರ್ಥಿಕ ಗುರಿ 37.01 ಲಕ್ಷ ಗಳನ್ವಯ ವಿವಿಧ ವಲಯಗಳಲ್ಲಿ ಮತಕ್ಷೇತ್ರವಾರು, ಪ್ರವರ್ಗವಾರು, ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.  ಅರಿವು/ಶೈಕ್ಷಣಿಕ ಸಾಲ ಯೋಜನೆಯಲ್ಲಿ ನಿಗದಿಪಡಿಸಿದ ಆರ್ಥಿಕ ಗುರಿ 6 ಲಕ್ಷ ಗಳನ್ವಯ ಅರ್ಜಿ ಸಲ್ಲಿಸಿರುವ 37 ಅಭ್ಯರ್ಥಿಗಳ ಪೈಕಿ ಸಂಪೂರ್ಣ ದಾಖಲಾತಿ ಸಲ್ಲಿಸಿರುವ 10 ಅಭ್ಯರ್ಥಿಗಳನ್ನು ವಿಧಾನಸಭಾ ಕ್ಷೇತ್ರದನ್ವಯ ಆಯ್ಕೆ ಮಾಡಿ ಬಾಕಿ ಉಳಿದಿರುವ 37 ಅಭ್ಯರ್ಥಿಗನ್ನು ಸಹ ಹೆಚ್ಚುವರಿಯಾಗಿ ಅನುಮೋದನೆ ನೀಡಲಾಯಿತು.  ಅಲೆಮಾರಿ ಜನಾಂಗದವರ ವಿದ್ಯಾರ್ಥಿಗಳಿಗೆ ಅರಿವು/ಶೈಕ್ಷಣಿಕ ಸಾಲ ಯೋಜನೆಯಡಿ ನಿಗದಿಪಡಿಸಿದ ಗುರಿ 5 ಲಕ್ಷ ಅನ್ವಯ ಅರ್ಜಿ ಸಲ್ಲಿಸಿರುವ ಗೊಲ್ಲ ಜನಾಂಗಕ್ಕೆ ಸೇರಿದ 01 ಫಲಾನುಭವಿಯನ್ನು ಆಯ್ಕೆ ಮಾಡಲು ಸಮಿತಿ ತೀರ್ಮಾನಿಸಿತು.  ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಲ್ಲಿ ನಿಗದಿಪಡಿಸಿದ ಆರ್ಥಿಕ ಗುರಿ 31.50 ಲಕ್ಷದನ್ವಯ ಈಗಾಗಲೇ 33 ಫಲಾನುಭವಿಗಳಿಗೆ ಒಟ್ಟು 8.88 ಲಕ್ಷ ಪ್ರಸ್ತಾವನೆಗಳಿಗೆ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಯಿತು.
     ಮಹಿಳಾ ಸಮೃದ್ಧಿ ಯೋಜನೆಯಡಿ ನಿಗದಿಪಡಿಸಿದ ಆರ್ಥಿಕ ಗುರಿ 35.64 ರನ್ವಯ ಅರ್ಜಿ ಸಲ್ಲಿಸಿರುವ ಮಹಿಳಾ ಸಂಘಗಳನ್ನು ಆಯ್ಕೆ ಮಾಡಲು ತೀರ್ಮಾನಿಲಾಯಿತು.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ : ಈ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಾದ ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಡಿ ನಿಗಮದಿಂದ ಆರ್ಥಿಕ ಗುರಿ 2.40 ಲಕ್ಷ ರೂ ಅನ್ವಯ ಈಗಾಗಲೇ 07 ಫಲಾನುಭವಿಗಳಿಗೆ ಒಟ್ಟು ರೂ.1.50 ಲಕ್ಷ ಪ್ರಸ್ತಾವನೆಗಳಿಗೆ ಆಯ್ಕೆ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚೈತನ್ಯ ಸ್ವಯಂ ಉದ್ಯೋಗ ಯೋಜನೆಯಡಿ ಆರ್ಥಿಕ ಗುರಿ 4.80 ಲಕ್ಷ ರೂ ಅನ್ವಯ 16 ಫಲಾನುಭವಿಗಳ ಆಯ್ಕೆ ಮಾಡಿ ಉಳಿದ ಫಲಾನುಭವಿಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಯಿತು. ಪಂಚವೃತ್ತಿ ಯೋಜನೆಯಡಿ ನಿಗದಿಪಡಿಸಿದ ಆರ್ಥಿಕ ಗುರಿ 18.80 ಲಕ್ಷ ರೂ ಅನ್ವಯ 30 ಫಲಾನಿಭವಿಗಳನ್ನು ಮತಕ್ಷೇತ್ರವಾರು ಆಯ್ಕೆ ಮಾಡಿ ಉಳಿದ ಫಲಾನುಭವಿಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಯಿತು. ಅರಿವು/ಶೈಕ್ಷಣಿಕ ಸಾಲ ಯೋಜನೆಯಡಿ ನಿಗದಿಪಡಿಸಿದ ಆರ್ಥಿಕ ಗುರಿ ರೂ.2.50 ಲಕ್ಷಗಳನ್ವಯ ಅರ್ಜಿ ಸಲ್ಲಿಸಿರುವ 01 ಸ್ವ-ಸಹಾಯ ಗುಂಪನ್ನು ಆಯ್ಕೆ ಮಾಡಲಾಯಿತು. ಕೇಂದ್ರ ಸರ್ಕಾರದ ಯೋಜನೆಗಳಾದ ಅವಧಿಸಾಲ, ನ್ಯೂಸ್ವರ್ಣಿಮಾ, ಶಿಲ್ಪಿ ಸಂಪದ, ಕೃಷಿ ಸಂಪದ, ಹಾಗೂ ಮೈಕ್ರೋ ಫೈನಾನ್ಸ್ ಯೋಜನೆಗಳಲ್ಲಿ ಒಟ್ಟು ಆರ್ಥಿಕ ಗುರಿ 6.25 ಲಕ್ಷಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಎಲ್ಲಾ ಫಲಾನುಭವಿಗಳನ್ನು ಲಾಟರಿ ಮೂಲಕ (ಚೀಟಿ ಎತ್ತುವ ಮೂಲಕ) ಆಯ್ಕೆ ಮಾಡಲಾಯಿತು.
     ಸಭೆಯಲ್ಲಿ ಆಯ್ಕೆ ಸಮಿತಿ ಸದಸ್ಯರುಗಳಾದ ಲೀಡ್ ಬ್ಯಾಂಕ್ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಆಯ್ಕೆ ಸಮಿತಿಗೆ ನಾಮನಿರ್ದೇಶನಗೊಂಡ ರಾಮಚಂದ್ರಪ್ಪ ಬಡಿಗೇರ, ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಕುರಿ ಮತ್ತು ಆಡು ಸಾಕಾಣಿಕೆ ಉಚಿತ ತರಬೇತಿಗೆ ಶಿಬಿರ : ಅರ್ಜಿ ಆಹ್ವಾನ

ಕೊಪ್ಪಳ, ಅ.26 (ಕರ್ನಾಟಕ ವಾರ್ತೆ):  ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಇವರು  ಕುರಿ ಮತ್ತು ಆಡು ಸಾಕಾಣಿಕೆಗಾಗಿ ಮೂರು ದಿನಗಳ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿ ಶಿಬಿರವು ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು.  ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತ ರೈತರು ಸ್ವ-ಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ನ.5 ರೊಳಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103. ಮೊ-9482630790 ಇಲ್ಲಿ ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ದಾಖಲೆ ರಹಿತ ಗ್ರಾಮಗಳ ದಾಖಲೀಕರಣವಾಗುವುದು ಅವಶ್ಯವಾಗಿದೆ- ಶಿವಮೂರ್ತಿ ನಾಯಕ್

ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ದಾಖಲೆ ರಹಿತವಾಗಿರುವ ಹಲವು ಜನವಸತಿ ಪ್ರದೇಶಗಳಿದ್ದು, ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಕರ್ಯ ಸಮರ್ಪಕವಾಗಿಸಲು ಅಂತಹ ಗ್ರಾಮಗಳನ್ನು ದಾಖಲೆ ಸಹಿತದ ಗ್ರಾಮಗಳನ್ನಾಗಿಸುವುದು ಅವಶ್ಯವಾಗಿದೆ ಎಂದು ಕರ್ನಾಟಕ ವಿಧಾನಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಶಿವಮೂರ್ತಿ ನಾಯಕ್ ಅವರು ಹೇಳಿದರು.
     ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಖಾಸಗಿ, ಅರಣ್ಯ ಮತ್ತು ಸರ್ಕಾರಿ ಜಾಗಗಳಲ್ಲಿ ಹಲವಾರು ವರ್ಷಗಳಿಂದ ವಾಸವಿರುವವರ ಮನೆಗಳಿಗೆ ಇದುವರೆಗೂ ಯಾವುದೇ ಅಧಿಕೃತ ದಾಖಲೆಗಳಿಲ್ಲ.  ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.  ಜಿಲ್ಲೆಯಲ್ಲಿ ಇಂತಹ ಸುಮಾರು 36 ಗ್ರಾಮಗಳಿವೆ.  ಕ್ಯಾಂಪ್, ದೊಡ್ಡಿ, ಹಟ್ಟಿ, ಕಾಲೋನಿ, ತಾಂಡಾ ಮುಂತಾದ ಹೆಸರುಗಳಿಂದ ಇಂತಹ ಗ್ರಾಮಗಳನ್ನು ಕರೆಯಲಾಗುತ್ತಿದೆ.  ದಾಖಲೆರಹಿತ ಗ್ರಾಮಗಳಾಗಿರುವುದರಿಂದ ಸರ್ಕಾರದ ಯೋಜನೆಗಳ ಮೂಲಕ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಇಲ್ಲಿ ಒದಗಿಸಲು ತೊಂದರೆಯಾಗುತ್ತಿದೆ.  ಎಲ್ಲರಿಗೂ ಬದುಕುವ ಹಕ್ಕನ್ನು ನಮ್ಮ ದೇಶದ ಸಂವಿಧಾನ ನೀಡಿದೆ.  ಈ ನಿಟ್ಟಿನಲ್ಲಿ ಇಂತಹ ಪ್ರದೇಶಗಳಿಗೆ ಸಮರ್ಪಕ ದಾಖಲೆಗಳನ್ನು ಸೃಷ್ಟಿಸಿ, ಅರ್ಹ ಜನರಿಗೆ ದಾಖಲೆಗಳನ್ನು ಒದಗಿಸುವ ಮೂಲಕ ಅವರ ಬದುಕಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ.  ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೆ ಸರ್ಕಾರವೂ ಕ್ರಮ ಕೈಗೊಂಡಿದೆ.  ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವ ತಾಂಡಾಗಳಿಗೆ ಈಗ ಯಾವ ಹೆಸರಿದೆಯೋ, ಪರಂಪರಾಗತವಾಗಿ ಅದೇ ಹೆಸರು ಉಳಿಯುವಂತಾಗಬೇಕು.  ಈ ಕುರಿತು ಜಿಲ್ಲಾಧಿಕಾರಿಗಳು ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶೋಷಿತ ಜನರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಶಿವಮೂರ್ತಿ ನಾಯಕ್ ಅವರು ಹೇಳಿದರು.
     ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರಿಗೆ ರುದ್ರಭೂಮಿಯ ಕೊರತೆಯಿಂದಾಗಿ ತೊಂದರೆಗೆ ಒಳಗಾದ ಬಗ್ಗೆ ದೂರುಗಳು ಬಂದಲ್ಲಿ, ಕೂಡಲೆ ಜಿಲ್ಲಾಡಳಿತ ಸ್ಪಂದಿಸಬೇಕು.  ಒಬ್ಬ ವ್ಯಕ್ತಿ ಮರಣದ ನಂತರ ಗೌರವಯುತವಾಗಿ ಅಂತ್ಯಕ್ರಿಯೆ ಲಭಿಸುವುದು ಸಂವಿಧಾನಬದ್ಧ ಹಕ್ಕಾಗಿದೆ.  ರುದ್ರಭೂಮಿ ಲಭ್ಯವಿಲ್ಲದಿರುವ ಗ್ರಾಮಗಳ ವಿವರವಾದ ಮಾಹಿತಿಯನ್ನು ಸಮಿತಿಗೆ ಒದಗಿಸಬೇಕು.  ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದಲ್ಲಿ, ಅಂತಹ ಶಾಲೆಗಳ ವಿವರವನ್ನು ಒದಗಿಸಿದಲ್ಲಿ, ದುರಸ್ತಿಗೆ ಅನುದಾನ ಒದಗಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದರು.
     ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Tuesday, 25 October 2016

ಅಕ್ಟೋಬರ್ ತಿಂಗಳ ಸೀಮೆಎಣ್ಣೆ ಬಿಡುಗಡೆ

ಕೊಪ್ಪಳ, ಅ.25 (ಕರ್ನಾಟಕ ವಾರ್ತೆ):  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ  ಇಲಾಖೆಯು ಕೊಪ್ಪಳ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಅಕ್ಟೋಬರ್ ತಿಂಗಳಿಗಾಗಿ ಸೀಮೆಎಣ್ಣೆ ಬಿಡುಗಡೆ ಮಾಡಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ (ಅನೌಪಚಾರಿಕ ಪಡಿತರ ಪ್ರದೇಶ/ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  1 ಮತ್ತು 2 ಸದಸ್ಯರಿಗೆ ಮತ್ತು 3 ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ 03 ಲೀಟರ್. ಬಿಪಿಎಲ್ ಅನಿಲ ರಹಿತ ಕುಟುಂಬಗಳಿಗೆ (ಅನೌಪಚಾರಿಕ ಪಡಿತರ ಪ್ರದೇಶ/ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ) 1 ಮತ್ತು 2 ಜನ ಸದಸ್ಯರಿಗೆ ಹಾಗೂ 3 ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ 3 ಲೀಟರ್ ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ.  ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎ.ಪಿ.ಎಲ್ ಪಡಿತರದಾರರಿಗೆ (1 ಮತ್ತು 2 ಜನ ಸದಸ್ಯರಿಗೆ ಹಾಗೂ 3 ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ) 2 ಲೀಟರ್ ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.  ಸೀಮೆಎಣ್ಣೆ ದರ ಪರಿಷ್ಕರಿಸಲಾಗಿದ್ದು, ಪ್ರತಿ ಲೀಟರ್‍ಗೆ ರೂ.20 ರಂತೆ ದರ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ : ದೀಪಾವಳಿ ಹಬ್ಬದ ಅಂಗವಾಗಿ ಪೂಜಾ ಸಾಮಗ್ರಿಗಳ ಮಾರಾಟಕ್ಕೆ ಸ್ಥಳ ನಿಗದಿ

ಕೊಪ್ಪಳ, ಅ.25 (ಕರ್ನಾಟಕ ವಾರ್ತೆ):  ದೀಪಾವಳಿ ಹಬ್ಬದ ನಿಮಿತ್ಯ ಅ.29 ಹಾಗೂ 30 ರಂದು ಕೊಪ್ಪಳ ನಗರದಲ್ಲಿ ಪೂಜಾ ಸಾಮಗ್ರಿಗಳನ್ನು ನಗರದ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜು ಮುಂದುಗಡೆಯ ಸಾರ್ವಜನಿಕ ಮೈದಾನದಲ್ಲಿ ಮಾರಾಟ ಮಾಡಲು ಸ್ಥಳ ನಿಗದಿಪಡಿಸಲಾಗಿದ್ದು, ವ್ಯಾಪಾರಸ್ಥರು ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಬೇಕು ಎಂದು ನಗರಸಭೆ ಪೌರಾಯುಕ್ತರು ಸೂಚನೆ ನೀಡಿದ್ದಾರೆ.
       ವ್ಯಾಪಾರಸ್ಥರು ಹೊಸಬಸ್ ಸ್ಟ್ಯಾಂಡ್ ಎದುರುಗಡೆ, ಅಶೋಕ ಸರ್ಕಲ್, ಗಂಜ್ ಸರ್ಕಲ್, ಮತ್ತು ಜವಾಹರ ರಸ್ತೆ, ಹಾಗೂ ಟಾಂಗಾ ಕೂಟದ ಬಳಿ ವ್ಯಾಪಾರ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಲಿದೆ. ಅಲ್ಲದೇ ವ್ಯಾಪಾರಸ್ಥರು ವ್ಯಾಪಾರ ಮುಗಿಸಿಕೊಂಡು ನಂತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವುದರಿಂದ ಪರಿಸರ ಮಾಲಿನ್ಯ ಉಂಟಾಗಲಿದೆ.  ಆದ್ದರಿಂದ ದೀಪಾವಳಿ ಹಬ್ಬದ ನಿಮಿತ್ಯ ಹೂವು, ಹಣ್ಣು, ಬಾಳೆಗೊನೆ, ಕಬ್ಬು ಇನ್ನಿತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲು ನಗರದ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜು ಮುಂದುಗಡೆಯ ಸಾರ್ವಜನಿಕ ಮೈದಾನದಲ್ಲಿ ಕೊಪ್ಪಳ ನಗರಸಭೆ ಸ್ಥಳ ನಿಗದಿಪಡಿಸಿದ್ದು, ವ್ಯಾಪಾರಸ್ಥರು ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕು.
 ದೀಪಾವಳಿ ಹಬ್ಬದ ದಿನಗಳಾದ ಅ.29 ಹಾಗೂ 30 ರಂದು ಹಬ್ಬದ ಪ್ರಯುಕ್ತ ಯಾವುದೇ ವ್ಯಾಪಾರ ಮಾಡುವುದಿದ್ದಲ್ಲಿ ನಿಗದಿಪಡಿಸಲಾಗಿರುವ ನಗರದ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜು ಮುಂದುಗಡೆಯ ಸಾರ್ವಜನಿಕ ಮೈದಾನದಲ್ಲಿ ತಮ್ಮ ವ್ಯಾಪಾರ ಮಾಡಿಕೊಳ್ಳಬೇಕು ಹಾಗೂ ವ್ಯಾಪಾರ ಮುಗಿದ ನಂತರ ತ್ಯಾಜ್ಯ ವಸ್ತುಗಳನ್ನು ತಾವೇ ಖುದ್ದಾಗಿ ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತವರ ವಿರುದ್ದ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಕಾಶವಾಣಿಯಲ್ಲಿ ಭಾಗ್ಯವಾಣಿ: ತಳಸಮುದಾಯದ ಅಭಿವೃದ್ಧಿ ಮುಖ್ಯ ವಾಹಿನಿಗೆ ತರಲು ಸರ್ಕಾರದ ಅವಿರತ ಯತ್ನ

ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ದೇಶದ ಸ್ವಾತಂತ್ರ್ಯಕ್ಕಿಂತ ಮುಂಚೆಯೇ ಭಾರತೀಯ ಸಮಾಜದಲ್ಲಿರುವ ತಳವರ್ಗದ ಜನರ ಜೀವನ ಮಟ್ಟ ಸುಧಾರಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆದಿದ್ದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಸಾಂವಿಧಾನಿಕ ಸ್ವರೂಪ ನೀಡಿದ್ದು ಸರ್ಕಾರಗಳು ಯೋಜನಾವೆಚ್ಚದಲ್ಲೇ ನಿಗದಿತ ಮೊತ್ತ ಆ ವರ್ಗದವರ ಅಭಿವೃದ್ಧಿಗಾಗಿ ಉಪಯೋಗಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಈಗ ಕರ್ನಾಟಕ ರಾಜ್ಯ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಮೊತ್ತ ಉಳಿದರೂ ಅದನ್ನು ಖರ್ಚು ಮಾಡುವವರೆಗೂ ಉಳಿಸಿಕೊಂಡು  ಮುಂದಿನ ವರ್ಷಗಳ ಅನುದಾನದ ಜೊತೆ ಬಳಸಲು ಮತ್ತು ನಿಗದಿತ ಅವಧಿಯಲ್ಲಿ ಅನುದಾನ ಬಳಸದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವ ಅವಕಾಶ ಇರುವ ಕಾನೂನನ್ನೆ ಜಾರಿಗೊಳಿಸಿ ದೇಶದ ಇತಿಹಾಸದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ವಿಶಿಷ್ಟ ಆಯಾಮವನ್ನೇ ನೀಡಿದೆ.
     ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ ಸರ್ಕಾರದ ಮಹತ್ವದ ಜನಹಿತ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನದ ಭಾಗ್ಯವಾಣಿ ಸರಣಿಯಲ್ಲಿ ಭಾನುವಾರದಂದು ರಾಜ್ಯಾದ್ಯಂತ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ತಳ ಸಮುದಾಯ ಏಳಿಗೆ-ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗಾಗಿ ನೆರವು, ಯೋಜನೆಗಳ ಮಾಹಿತಿ ಪ್ರಸಾರವಾಯಿತು.
     ಪರಿಶಿಷ್ಟರಿಗಾಗಿ ಇರುವ ಸ್ವಯಂ ಉದ್ಯೋಗ ಯೋಜನೆಯಡಿ ಎರಡು ಲಕ್ಷ ಸಹಾಯಧನದಲ್ಲಿ ಟ್ರ್ಯಾಕ್ಟರ ಖರೀದಿಸಿ ಸಧ್ಯ ನೆಮ್ಮದಿ ಜೀವನ ಕಂಡುಕೊಂಡಿರುವ ರಾಂiÀiಚೂರು ಜಿಲ್ಲೆ ಸಿಂಧನೂರು ತಾಲುಕಿನ ರಾಮಾಪುರದ ಕೃಷ್ಣಾ ದೊಡ್ಡೋರಿಗೆ ಇನ್ನು ದೊಡ್ಡೋರಾಗಾಕ ಸಾಲಾ ಸಿಗೋದು ಕೇಳಿದ್ವಿ ನೋಡಿದ್ವಿರಿ ಆದ್ರ ಈಗ ಸಣ್ಣೋರಿಗೂ ದೊಡ್ಡೋರಾಗಾಕ ಸಹಾಯಧನ ಸಾಲಾ ನೀಡಿ ರಾಜ್ಯ ಸರ್ಕಾರ ದೊಡ್ಡ ಕೆಲಸಾ ಮಾಡೇತಿ ಎಂದಿದ್ದು  ಒಟ್ಟಾರೆ ಈ ತಳಸಮುದಾಯದ ಭಾವನೆಯನ್ನು ವ್ಯಕ್ತಪಡಿಸಿತೆಂಬುದು ಅತಿಶಯೋಕ್ತಿ ಆಗಲಿಕ್ಕಿಲ್ಲ.
     ರಾಯಚೂರು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ. ರಾಯಚೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಶೇ.20 ಪರಿಶಿಷ್ಟ ಪಂಗಡದವರು ಶೇ.19ರಷ್ಟು ಒಟ್ಟಾರೆ ಶೇ.39ರಷ್ಟಿದ್ದು ಇದು ದೇಶದ ಸರಾಸರಿ ಶೇ.20ಕ್ಕಿಂತ ಹೆಚ್ಚಿದೆ. ಅಲ್ಲದೇ ದೊಡ್ಡಿ, ತಾಂಡೆ, ಹಳ್ಳಿಗಳ್ಳಲಿನ ವಾಸದಿಂದಾಗಿ ಅವರನ್ನು ಸಂಪರ್ಕಿಸುವುದು ಒಂದು ಸವಾಲಿನ ಕೆಲಸವೇ ಆಗಿದೆ. ರಾಜ್ಯ ಸರ್ಕಾರ ಇವರುಗಳ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ, ವಿವಿಧ ಇಲಾಖೆಗಳ ಯೋಜನಾ ಅನುದಾನದಲ್ಲಿ  ಇವರಿಗಾಗಿಯೇ ನಿಗದಿತ ಅನುದಾನ ತೆಗೆದಿರಿಸುವ ಮೂಲಕ ಹಾಗೂ ವೈಯಕ್ತಿಕ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿಯವರಿಗೆ ಡಾ.ಬಿ.ಆರ್.ಅಂಬೇಡ್ಕರ, ಪಂಗಡದವರಿಗಾಗಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪರಿಶಿಷ್ಟರ ವಾಸಿಸುವ ಸ್ಥಳಗಳಲ್ಲಿ ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಭೂತ ಸೌಕರ್ಯಗಳನ್ನು ಜೊತೆಗೆ ಆರೋಗ್ಯ,ಮಕ್ಕಳ, ತಾಯಂದಿರ ಪೌಷ್ಠಿಕಾಂಶ ಮತ್ತು ನೈರ್ಮಲ್ಯಕ್ಕಾಗಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಂದ ವಿಶೇಷ ಜಾಗೃತಿ ಹಾಗೂ ವೈದ್ಯಕೀಯ ಪರೀಕ್ಷೆ ಚಿಕಿತ್ಸೆಗಾಗಿ ಸಂಚಾರಿ ಕ್ಲಿನಿಕ್,  ಶಿಕ್ಷಣಕ್ಕಾಗಿ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಲಯಗಳು ಸೇರಿದಂತೆ ಅವಶ್ಯಕತೆಗನುಗುಣವಾಗಿ ಒದಗಿಸುತ್ತಿರುವ ವಿವಿಧ ಶೈಕ್ಷಣಿಕ ಸೌಲಭ್ಯಗಳ ಮಾಹಿತಿ ನೀಡಿದರು. ಜಿಲ್ಲೆಯ ದೇವದುರ್ಗ ಸೇರಿದಂತೆ ರಾಜ್ಯದ ಒಟ್ಟು ಎರಡು ತಾಲೂಕುಗಳಲ್ಲಿ ಪರಿಶಿಷ್ಟರ ಪೌಷ್ಠಿಕಾಂಶ ಹೆಚ್ಚಿಸುವ ಪ್ರಾಯೋಗಿಕ ಪ್ರಯತ್ನ ನಡೆದಿದೆ ಅದೇ ರೀತಿ ವಿಶ್ವವ್ಯಾಪಿ ಆರೋಗ್ಯ ರಕ್ಷಣೆ ಯೋಜನೆಯು ದೇಶದ ಒಂದು ತಾಲೂಕ ಲಿಂಗಸ್ಗೂರನಲ್ಲಿ ಜಾರಿಯಾಗಿದೆ. ಪರಿಶಿಷ್ಟರ ಅಭಿವೃದ್ಧಿ ಯೋಜನೆ ಮಾಹಿತಿ ಪ್ರತಿ ಮನೆಗೂ ತಲುಪುವ ಆಶಯದೊಂದಿಗೆ ಜಿಲ್ಲೆಯಲ್ಲಿ ರಾಯಚೂರು ಆಕಾಶವಾಣಿ ಮೂಲಕ 20 ಕಾರ್ಯಕ್ರಮಗಳನ್ನು ಎರ್ಪಡಿಸಲಾಗಿತ್ತು ಎಂದು ಕೂರ್ಮಾರಾವ್ ನುಡಿದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಅ. 25 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿ ಬಸವರಾಜ ರಾಯರಡ್ಡಿ ಅವರು ಅ. 27 ರಿಂದ 29 ರವರೆಗೆ ಹಾಗೂ ನ. 01 ರಿಂದ 02 ರವರೆಗೆ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಉನ್ನತ ಶಿಕ್ಷಣ ಮಂತ್ರಿಗಳು ಅ. 27 ರಂದು ಬೆಳಿಗ್ಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ನಂತರ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ / ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಅಂದು ಹರಿಶಂಕರಬಂಡಿ, ಚನ್ನಪ್ಪನಹಳ್ಳಿ, ಸೇವಾಲಾಲ್ ನಗರ, ಕೋನಾಪುರ, ಬಳಿಗೇರಿ, ಬೂದಗುಂಪಿ, ರ್ಯಾವಣಕಿ, ಕವಳಕೇರಿ, ಲಕಮನಗುಳೆ, ಚಿಕ್ಕಮ್ಯಾಗೇರಿ, ರಾಯಪುರ, ಕುಡಗುಂಟಿ, ಮಲಕಸಮುದ್ರ ಗ್ರಾಮಗಳಿಗೆ ಭೇಟಿ ನೀಡಿ ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.  ಅ. 28 ರಂದು ಬೆಳಿಗ್ಗೆ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ / ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಅಂದು ವೀರಾಪುರ, ಭಾನಾಪುರ, ಲಕಮಾಪುರ, ತಳಬಾಳ, ಕೋಮಲಾಪುರ, ಚಿತ್ತಾಪುರ, ಅಡವಿಹಳ್ಳಿ, ಸೋಂಪುರ, ಮಾಳೆಕೊಪ್ಪ, ಮನ್ನಾಪುರ ಮತ್ತು ನಿಂಗಾಪುರ ಗ್ರಾಮಗಳಿಗೆ ಭೇಟಿ ನೀಡಿ ಯಲಬುರ್ಗಾದಲ್ಲಿ ವಾಸ್ತವ್ಯ ನಡೆಸುವರು.  ಅ. 29 ರಂದು ಹೊನ್ನುಣಸಿ, ಚಿಕ್ಕಬಿಡನಾಳ, ಕದರಳ್ಳಿ, ಹಿರೇಬಿಡನಾಳ, ಶಿರೂರ, ಮುತ್ತಾಳ, ಬೆದವಟ್ಟಿ, ವಿಜಯನಗರ, ಯಡಿಯಾಪುರ, ತಿಪ್ಪರಸನಾಳ, ಗುದ್ನೆಪ್ಪನಮಠ ಗ್ರಾಮಗಳಿಗೆ ಭೇಟಿ ನೀಡಿ ರಾತ್ರಿ ಕೊಪ್ಪಳದಿಂದ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
     ನ. 01 ರಂದು ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಳಿಗ್ಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಮಟ್ಟದ ಬರ ಪರಿಹಾರ ಕಾಮಗಾರಿ ಹಾಗೂ ಕುಡಿಯುವ ನೀರು ಪೂರೈಕೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು.  ನಂತರ ಯಲಬುರ್ಗಾ ತಾಲೂಕಿನ ಚಿಕ್ಕೇನಕೊಪ್ಪ, ಸಿದ್ನೆಕೊಪ್ಪ, ಬಿನ್ನಾಳ, ಯರೇಹಂಚಿನಾಳ, ತೊಂಡಿಹಾಳ ಮತ್ತು ಬಂಡಿಹಾಳ ಗ್ರಾಮಗಳಿಗೆ ತೆರಳಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ / ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಂದು ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.  ನ. 02 ರಂದು ಇಟಗಿ, ಬನ್ನಿಕೊಪ್ಪ, ಮಂಡಲಮರಿ, ಭಟಪನಹಳ್ಳಿ ಮತ್ತು ಮಂಗಳೂರು ಗ್ರಾಮಗಳಿಗೆ ತೆರಳಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ / ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ರಾತ್ರಿ 8 ಗಂಟೆಗೆ ಕೊಪ್ಪಳದಿಂದ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

Monday, 24 October 2016

ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ : ಎಂ. ಕನಗವಲ್ಲಿ


ಕೊಪ್ಪಳ ಅ. 24 (ಕರ್ನಾಟಕ ವಾರ್ತೆ): ಪ್ರತಿ ವರ್ಷದಂತೆ ಈ ವರ್ಷ ಕೂಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.  ರಾಜ್ಯೋತ್ಸವದ ಅಂಗವಾಗಿ ನವೆಂಬರ್ 01 ರಂದು ಬೆಳಿಗ್ಗೆ 7 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ತಹಸಿಲ್ದಾರರ ಕಚೇರಿಯಿಂದ ಹೊರಡಲಿದೆ.  ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಇದೇ ಸಂದರ್ಭದಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿ, ಅಭಿವೃದ್ಧಿ ಬಿಂಬಿಸುವ ಸ್ಥಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.  ಈ ಬಾರಿ ಕೊಪ್ಪಳ ಜಿಲ್ಲೆಯ ಹಿರಿಮೆಯನ್ನು ಬಿಂಬಿಸುವ ವಿಶೇಷ ಸ್ತಬ್ಧ ಚಿತ್ರಗಳನ್ನು ಸಿದ್ಧಪಡಿಸಲು ಸೂಕ್ತ ವಿಷಯವನ್ನು ಜಿಲ್ಲಾಡಳಿತಕ್ಕೆ ಒದಗಿಸುವಂತೆ ವಿವಿಧ ಸಂಘಟನೆಗಳಿಗೆ ಮನವಿ ಮಾಡಿದರು.
     ನವೆಂಬರ್ 01 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ವಿಧ್ಯುಕ್ತವಾಗಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.  ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ರಾಯರಡ್ಡಿ ಅವರು ಧ್ವಜಾರೋಹಣ ನೆರವೇರಿಸುವರು.  ಕಾರ್ಯಕ್ರಮದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಕಲಾವಿದರು, ಸಾಹಿತಿಗಳನ್ನು ಸನ್ಮಾನಿಸಲಾಗುವುದು.  ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಹಾಗೂ ಶೇ. 100 ರಷ್ಟು ಫಲಿತಾಂಶ ಪಡೆದಿರುವ ಶಾಲೆಗಳ ಮುಖ್ಯಗುರುಗಳನ್ನು ಸನ್ಮಾನಿಸಲಾಗುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಒಟ್ಟು 17 ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಲ್ಯಾಪ್‍ಟಾಪ್ ವಿತರಿಸಲಾಗುವುದು.   ಅದೇ ದಿನ ಸಂಜೆ 6 ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮೈದಾನದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲು ವ್ಯವಸ್ಥೆ ಮಾಡಲಾಗಿದೆ.  ರಾಜ್ಯೋತ್ಸವ ಆಚರಣೆಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿವರಿಸಿದರು.
     ರಾಜ್ಯೋತ್ಸವದ ಹಿಂದಿನ ದಿನ ನಗರದ ಪ್ರಮುಖ ರಸ್ತೆ ಮತ್ತು ಜಿಲ್ಲಾ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.  ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವೇದಿಕೆ ಮತ್ತು ಸನ್ಮಾನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಾಂಸ್ಕøತಿಕ ಸಮಿತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಅಧ್ಯಕ್ಷತೆಯಲ್ಲಿ ಸ್ತಬ್ಧಚಿತ್ರಗಳ ಸಮಿತಿ ಹಾಗೂ  ಈ ಸಂದರ್ಭದಲ್ಲಿ ರಚಿಸಲಾಯಿತು.
      ಕೊಪ್ಪಳ ಜಿಲ್ಲೆಯ ಹಲವು ನಗರ ಮತ್ತು ಪಟ್ಟಣಗಳಲ್ಲಿ ಹಲವು ಮಹನೀಯರ ಹೆಸರಿನಲ್ಲಿ ವೃತ್ತಗಳಿವೆ.  ಆದರೆ ಯಾವುದೇ ವೃತ್ತಗಳಿಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ವೃತ್ತ ಎಂದು ನಾಮಕರಣವಾಗಿಲ್ಲ.  ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳ ನಿರ್ದಿಷ್ಟ ವೃತ್ತಗಳಿಗೆ ಭುವನೇಶ್ವರಿ ದೇವಿ ವೃತ್ತ ಎಂದು ನಾಮಕರಣ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡಪರ ಸಂಘಟನೆಗಳು ಮನವಿ ಮಾಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ,  ಡಿಡಿಪಿಐ ಶ್ಯಾಮಸುಂದರ್, ನಗರಸಭೆ ಪೌರಾಯುಕ್ತ ಪರಮೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರುಗಳಾದ ಶಿವಾನಂದ ಹೊದ್ಲೂರ್ ಮಂಜುನಾಥ ಗೊಂಡಬಾಳ,  ರಾಕೇಶ್ ಕಾಂಬ್ಳೆಕರ್, ಪಂಪಣ್ಣ ನಾಯಕ್, ಸುಮಂತರಾವ್ ಪಟವಾರಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಮನುಷ್ಯ ಮಾನಸಿಕವಾಗಿ ಸದೃಢನಾಗಿದ್ದರೆ ಮಾತ್ರ ದೈಹಿಕವಾಗಿ ಸದೃಢನಾಗಿರುತ್ತಾನೆ: ಡಾ. ಓಂಕಾರ

ಕೊಪ್ಪಳ, ಅ.24 (ಕರ್ನಾಟಕ ವಾರ್ತೆ): ಪ್ರತಿಯೊಬ್ಬ ಮನುಷ್ಯ ಮಾನಸಿಕವಾಗಿ ಸದÀೃಢನಾಗಿದ್ದರೆ ಮಾತ್ರ ದೈಹಿಕವಾಗಿ ಸದೃಢನಾಗಿರಲು ಸಾಧ್ಯ ಎಂದು ಮಾನಸಿಕ ತಜ್ಞ ಡಾ. ಕೃಷ್ಣ ಓಂಕಾರ ಹೇಳಿದರು.
        ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸೋಮವಾರ ಕೊಪ್ಪಳ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಸ್ವಸ್ಥ ರೋಗಿಗಳ ಕುರಿತು ಒಂದು ದಿನದ  ಕಾನೂನು ಕಾರ್ಯಾಕಾರದಲ್ಲಿ ಉಪನ್ಯಾಸಕರಾಗಿ ಭಾವವಹಿಸಿ ಅವರು ಮಾತನಾಡಿದರು.
     ಹಳ್ಳಿಗಳಲ್ಲಿ ಮಾನಸಿಕ ಅಸ್ವಸ್ಥತೆಯ ಕುರಿತು ಜಾಗೃತಿ ಮೂಡಿಸಬೇಕು. ಖಾಯಿಲೆಗೆ ತುತ್ತಾದವರನ್ನ ಗುಡಿ, ಚರ್ಚ್, ಮಸೀದಿಗೆ ಕರೆದೊಯ್ಯುವ ಬದಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಬೇಕು. ಮಾನಸಿಕ ಅಸ್ವಸ್ಥರಿಗೂ ಗೌರವಯುತವಾಗಿ ಚಿಕಿತ್ಸೆ ದೊರೆಯುವಂತಾಗಬೇಕು. ಮಾನಸಿಕ ಅಸ್ವಸ್ಥತೆಯನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಅವರೂ ಕೂಡ ಸಮಾಜದಲ್ಲಿ ಎಲ್ಲರಂತೆ ಜೀವನ ನಡೆಸುವರು. ಈಗಿನ ಒತ್ತಡದ ಜೀವನಶೈಲಿ ಹಾಗೂ ಆಹಾರ ಪದ್ದತಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದಲ್ಲದೆ ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತಿದೆ. ಈ ಖಾಯಿಲೆಯ ಕುರಿತು ಶಿಬಿರ ಹಾಗೂ ಆರೋಗ್ಯ ಕ್ಯಾಂಪ್‍ಗಳ ಮೂಲಕ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಡಾ. ಕೃಷ್ಣ ಓಂಕಾರ್ ಹೇಳಿದರು.
      ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ.ದಶರಥ ಅವರು ಮಾತನಾಡಿ, ಮಾನಸಿಕ ರೋಗವು ಇತರೆ ರೋಗಗಳಂತೆ ಗುಣಮುಖವಾಗಲು ಸಾಧ್ಯವಿರುವ ರೋಗವಾಗಿದೆ.  ಆದರೆ ಸಕಾಲಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಭಾರತದಲ್ಲಿ ಮಾನಸಿಕ ಅಸ್ವಸ್ಥ ರೋಗಿಗಳಿಗೆ ಕಾನೂನಿನ ಪ್ರಕಾರ ಸೂಕ್ತ ನೆರವು ನೀಡಲಾಗುವುದು. ಹಾಗೂ ಅವರ ಹಕ್ಕುಗಳನ್ನು ಕಾಪಾಡಲು ಹಲವಾರು ಕಾಯಿದೆಗಳು ಜಾರಿಯಲ್ಲಿವೆ ಎಂದರು.
     ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್.ಉಪನಾಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ ಕನ್ನೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ದಾನರಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ  ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲೀ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ ಪಾನಘಂಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ವಕೀಲರಾದ ನೇತ್ರಾ ಬಿ.ಪಾಟೀಲ್ ಮಾನಸಿಕ ಅಸ್ವಸ್ಥ ಮತ್ತು ವಿಕಲತೆ ಮನೋ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಗೂ ಬಂದಿಖಾನೆಯಲ್ಲಿ ಕಾನೂನು ನೆರವು ದೊರೆಯುವ ಕುರಿತು ಹಾಗೂ ವಕೀಲರಾದ ಶಿಲ್ಪಾ ಜಂತಕಲ್ ನಿರ್ಗತಿಯುಳ್ಳ ಅಲೆಮಾರಿ ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಕಾನೂನು ಸೌಲಭ್ಯ ಕುರಿತು ವಿಶೇಷ ಉಪನ್ಯಾನ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ : ವೇಳಾಪಟ್ಟಿ ಪ್ರಕಟ

ಕೊಪ್ಪಳ, ಅ.24  (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕಾರಟಗಿ, ಕುಷ್ಟಗಿ ಹಾಗೂ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರ ಸ್ಥಾನಗಳನ್ನು ಚುನಾವಣೆ ಮೂಲಕ ಭರ್ತಿ ಮಾಡುವ ಸಲುವಾಗಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
     ವೇಳಾಪಟ್ಟಿಯನ್ವಯ ನಾಮಪತ್ರಗಳನ್ನುü ನ. 04 ರಿಂದ ನ. 11 ರವರೆಗೆ ಸಲ್ಲಿಸಬಹುದಾಗಿದೆ.  ನ. 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ನ. 14 ಕೊನೆಯ ದಿನವಾಗಿದೆ.  ಮತದಾನದ ಅವಶ್ಯವಿದ್ದರೆ ಮತದಾನ ನ. 24 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ನಡೆಯಯಲಿದೆ.  ಮತಗಳ ಎಣಿಕೆ ನ. 26 ರಂದು ನಡೆಯಲಿದ್ದು, ನ. 27 ರೊಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
     ಚುನಾವಣೆಗೆ ಸ್ಪರ್ಧಿಸಲು ಇಚ್ಛೆಯುಳ್ಳ ಉಮೇದುವಾರರು ನಾಮಪತ್ರಗಳನ್ನು ಆಯಾ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯಾಲಯದಲ್ಲಿ, ಉಮೇದುವಾರ ಅಥವಾ ಸೂಚಕರು ಚುನಾವಣಾಧಿಕಾರಿಗಳಿಗೆ ನ. 04 ರಿಂದ 11 ರವರೆಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆಯ ಒಳಗಾಗಿ (ಸಾರ್ವಜನಿಕ ರಜೆ ದಿನಗಳನ್ನು ಹೊರತುಪಡಿಸಿ) ನಾಮಪತ್ರಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯುತ್ತಮ ನಾಗರೀಕರಿಗೆ ಪ್ರಶಸ್ತಿ : ಪ್ರಸ್ತಾವನೆ ಸಲ್ಲಿಸಲು ಸೂಚನೆ

ಕೊಪ್ಪಳ ಅ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ನ. 01 ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ನಾಗರೀಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ಉದ್ದೇಶಿಸಲಾಗಿದ್ದು, ಅರ್ಹರು ತಮ್ಮ ಪ್ರಸ್ತಾವನೆಗಳನ್ನು ಅ. 27 ರ ಒಳಗಾಗಿ ಸಲ್ಲಿಸಬಹುದಾಗಿದೆ.
     ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ತಲಾ ಒಬ್ಬರು ಸಾಹಿತಿ, ಕವಿ ಹಾಗೂ ಕಲಾವಿದರು ಸೇರಿದಂತೆ ಒಟ್ಟು ಮೂವರು ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ಉದ್ದೇಶಿಸಲಾಗಿದೆ.  ಅರ್ಹರು ಪ್ರಶಸ್ತಿಗಾಗಿ ತಮ್ಮ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಇವರಿಗೆ ಅ. 27 ರ ಸಂಜೆ 05 ಗಂಟೆಯ ಒಳಗಾಗಿ ಖುದ್ದಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರ್ಶ ವಿವಾಹ ಯೋಜನೆ ಸದುಪಯೋಗಪಡಿಸಿಕೊಳ್ಳಿ- ಎಂ.ಕನಗವಲ್ಲಿ

ಕೊಪ್ಪಳ, ಅ.24  (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಸರಳ ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸಲು ಪ್ರತಿ ವಿವಾಹಕ್ಕೆ 2 ವರ್ಷದ ಠೇವಣಿ ರೂಪದಲ್ಲಿ, ವಿವಾಹವಾದ ಜೋಡಿಯ ಹೆಸರಿನಲ್ಲಿ 10 ಸಾವಿರ ರೂ.ಗಳ ನಿಶ್ಚಿತ ಠೇವಣಿ ಇಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುವಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.
     ಆದರ್ಶ ವಿವಾಹ ಯೋಜನೆಯಡಿ ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನಲ್ಲಿ-18, ಯಲಬುರ್ಗಾ-93, ಕುಷ್ಟಗಿ-153 ಹಾಗೂ ಗಂಗಾವತಿ ತಾಲೂಕಿನಲ್ಲಿ 174 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 664 ಜೋಡಿ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. 
     ಆದರ್ಶ ವಿವಾಹ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರಾಮಾಂತರ ಮತ್ತು ಹೋಬಳಿ ಮಟ್ಟದಲ್ಲಿ ಏರ್ಪಡಿಸುವ ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 10 ಜೋಡಿ ಹಾಗೂ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 25 ಜೋಡಿಗಳ ವಿವಾಹ ಇರಬೇಕು.  ಸಾಮೂಹಿಕ ವಿವಾಹ ಆಯೋಜಿಸುವ ಖಾಸಗಿ ಟ್ರಸ್ಟ್, ಸಂಘ, ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳು ಹಾಗೂ ಇತರರು ಜಿಲ್ಲಾ ನೋಂದಣಿ ಕಚೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.  ಸಾಮೂಹಿಕ ವಿವಾಹಗಳನ್ನು ಆಯೋಜಿಸಲು ವಿವಾಹ ಸ್ಥಳದ ಸಂಬಂಧಿಸಿದ ತಹಸಿಲ್ದಾರರಿಂದ ಅನುಮತಿ ಪಡೆಯಬೇಕು.   ಇಂತಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಜೋಡಿಯಲ್ಲಿ ವಧುವಿನ ಹೆಸರಲ್ಲಿ 10 ಸಾವಿರ ರೂ. ಗಳನ್ನು 2 ವರ್ಷಗಳ ನಿಶ್ಚಿತ ಠೇವಣಿಯಲ್ಲಿ ಇಡಲಾಗುವುದು. ಅಂತರ್‍ಜಾತಿ ವಿವಾಹಗಳಿಗೆ ಯೋಜನೆಯಡಿ ಅವಕಾಶವಿದ್ದು, ಎರಡು ಪ್ರೋತ್ಸಾಹ ಧನಗಳನ್ನು ಒಟ್ಟಿಗೆ ನೀಡಲಾಗುವುದು. ಸಾಮೂಹಿಕ ವಿವಾಹಗಳ ಸಂಘಟನಾಕಾರರಿಗೆ ಪ್ರತಿ ಜೋಡಿಗೆ ರೂ.100 ರಂತೆ ಪ್ರೋತ್ಸಾಹಧನ ನೀಡಲಾಗುವುದು.  ವಿವಾಹಕ್ಕೆ ಸರ್ಕಾರದ ಕಾನೂನಿನನ್ವಯ ಅರ್ಹವಾದ ವಯಸ್ಸಿನವರಾಗಿದ್ದು (ಕನಿಷ್ಠ ವಯೋಮಿತಿ) ಈ ಮೊದಲೇ ಮದುವೆಯಾಗಿ, ಜೀವಂತ ಪತಿ ಅಥವಾ ಪತ್ನಿ ಇರಬಾರದು. ಪ್ರೋತ್ಸಾಹಧನ ಪಡೆಯಲು ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯ.  ಪ್ರತಿ ಅರ್ಜಿಯ ಜೊತೆ ಅಗತ್ಯ ಪ್ರಮಾಣ ಪತ್ರ, ವಿವಾಹದ ಭಾವಚಿತ್ರದ ಪಾಸಿಟಿವ್ ನೆಗೆಟಿವ್ ಮುಂತಾದವುಗಳನ್ನು ಲಗತ್ತಿಸಬೇಕು.  ವಿವಾಹ ಮುಗಿದ 6 ತಿಂಗಳೊಳಗಾಗಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಬೇಕು.
     ಆದರ್ಶ ವಿವಾಹ ಯೋಜನೆಗೆ ಅರ್ಜಿ ಸಲ್ಲಿಸಲು ವಯಸ್ಸಿನ ಪ್ರಮಾಣ ಪತ್ರ, ವಿವಾಹ ಪ್ರಮಾಣ ಪತ್ರ, ಸಂಘಟನಾಕಾರರ ಪ್ರಮಾಣ ಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಸಾವಯವ ಕೃಷಿ ತಾಂತ್ರಿಕತೆ ತರಬೇತಿ ಕಾರ್ಯಕ್ರಮ

ಕೊಪ್ಪಳ ಅ. 24 (ಕರ್ನಾಟಕ ವಾರ್ತೆ): ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಕೃಷಿ ಇಲಾಖೆ ಹಾಗೂ ಸಾವಯವ ಕೃಷಿ ಭಾಗ್ಯ ಯೋಜನೆಯ ಸಹಯೋಗದೊಂದಿಗೆ ಸಾವಯವ ಕೃಷಿ ಭಾಗ್ಯ ಯೋಜನೆಯ ಕ್ಷೇತ್ರಾಧಿಕಾರಿಗಳಿಗೆ ಕೃಷಿ ಒಂದು ದಿನದ “ಸಾವಯವ ಕೃಷಿ ತಾಂತ್ರಿಕತೆಗಳು” ಎಂಬ ತರಬೇತಿ ಕಾರ್ಯಕ್ರಮ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಯಿತು.
     ಜಂಟಿ ಕೃಷಿ ನಿರ್ದೇಶಕ ಡಾ. ಎ. ರಾಮದಾಸ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೊಪ್ಪಳ ಭಾಗದ ಸಾವಯವ ಕೃಷಿ ಬಗ್ಗೆ ಅವಲೋಕಿಸುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆನೀಡಿದರು.  ಡಾ. ಚಿತ್ತಾಪುರ, ಮುಖ್ಯ ವಿಜ್ಞಾನಿಕ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯ, ರಾಯಚೂರು ರವರು ರಾಸಾಯನಿಕ ಕೃಷಿಯಿಂದ ಆಗುವ ಹಾನಿಗಳ ಬಗ್ಗೆ ತಿಳಿಸುತ್ತಾ ಸಾವಯವ ಕೃಷಿಯ ಬಗ್ಗೆ ರೈತರಿಗೆ ಆಸಕ್ತಿ ಮೂಡಿಸಲು ತಿಳಿಸಿದರು.  ಡಾ. ಎಮ್.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಇವರು ಉದ್ಘಾಟನಾ ಭಾಷಣ ಮಾಡುತ್ತಾ ಕಾರ್ಯಕ್ರಮದ ಸದುಪಯೋಗ ಪಡೆಯಲು ತಿಳಿಸಿದರು.  ತಾಂತ್ರಿಕ ಕಾರ್ಯಕ್ರಮದಲ್ಲಿ ಡಾ. ಬಿ.ಎಮ್. ಚಿತ್ತಾಪುರ ಇವರು ಮಣ್ಣಿನ ಫಲವತ್ತತೆ ಮತ್ತು ಎರೆಹುಳ ಗೊಬ್ಬರದ ಬಗ್ಗೆ,  ಡಾ. ಎಮ್.ಬಿ. ಪಾಟೀಲ ಇವರು ಜೈವಿಕ ಗೊಬ್ಬರ ಮತ್ತು ಪೀಡೆನಾಶಕಗಳ ಬಗ್ಗೆ ಹಾಗೂ ಶ್ರೀಮತಿ ಕವಿತಾ ವೈ ಉಳ್ಳಿಕಾಶಿ ಇವರು ಕಿರುಧಾನ್ಯಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಸೂರ್ಯಕಾಂತಿ ಬೆಳೆಯಲ್ಲಿ ಸಸ್ಯ ಸಂರಕ್ಷಣಾ ಮುಂಜಾಗ್ರತಾ ಕ್ರಮಗಳ ಕುರಿತು ರೈತರಿಗೆ ಸಲಹೆ

ಕೊಪ್ಪಳ ಅ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಾದ್ಯಾಂತ ಸೂರ್ಯಕಾಂತಿ ಬೆಳೆಯು ಈಗಾಗಲೇ ಬಿತ್ತನೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಬಿತ್ತನೆ ತಯಾರಿ ನಡೆದಿದೆ.  ಈ ಸಂದರ್ಭದಲ್ಲಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ರೈತರಿಗೆ ಕೆಲವು ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದೆ.
ಕೀಟಗಳ ನಿರ್ವಹಣೆ :
1. ರಸ ಹೀರುವ ಕೀಟಗಳು (ಹಸಿರು ಜಿಗಿ ಹುಳು / ಥ್ರಿಪ್ಸ್‍ನುಶಿ/ಬಿಳಿನೊಣ) :  ಈ ಕೀಟಗಳು ಎಲೆಯಿಂದ ರಸ ಹೀರುತ್ತವೆ, ರಸ ಹೀರಿದ ಭಾಗದಲ್ಲಿ ಹಳದಿ ಬಣ್ಣದ ಬೆಳವಣಿಗೆಯಾಗಿ ನಂತರ ಎಲೆ ಮುದುಡಿಕೊಂಡು ಸುಟ್ಟಂತೆ ಕಾಣುತ್ತವೆ. ಇದರ ನಿರ್ವಹಣೆಗೆ  ಪ್ರತಿ ಕಿ.ಗ್ರಾಂ. ಬೀಜಕ್ಕೆ 2 ಮಿ.ಲೀ. ಕ್ಲೋರ್‍ಪೈರಿಫಾಸ್ 20 ಇ.ಸಿ. ನಿಂದ ಅಥವಾ ಥಯಾಮೆಥಾಕ್ಸಾಮ್ ಶೇ. 30 ಎಫ್.ಎಸ್. 10 ಮಿ.ಲೀ. ಪ್ರತಿ 3 ಕಿ.ಗ್ರಾಂ ಬೀಜಕ್ಕೆ ಬೀಜೋಪಚಾರ ಮಾಡಿ ಬಿತ್ತಬೇಕು.  ಪ್ರತಿ ಲೀ. ನೀರಿನಲ್ಲಿ 1.5 ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ. ಅಥವಾ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಬೆರೆಸಿ ಸಿಂಪರಣೆ ಮಾಡಬೇಕು.
2. ಎಲೆ ತಿನ್ನುವ ಕೀಟಗಳು (ಸ್ಪೋಡೊಪ್ಟೆರಾ ಕೀಡೆ, ಕಂಬಳಿ ಹುಳು, ಮಿಡತೆಗಳು) : ಈ ಕೀಟಗಳು ಎಲೆಯನ್ನು ತಿನ್ನುತ್ತವೆ ಹಾಗೂ ಅತಿಯಾದ ಹಾನಿ ಆದಾಗ ಸಂಪೂರ್ಣ ಎಲೆ ಭಾಗವನ್ನು ತಿನ್ನುತ್ತವೆ.  ದೇಟನ್ನು ಮಾತ್ರ ಬಿಡುತ್ತವೆ.  ಇದರ ನಿರ್ವಹಣೆ ನಿಟ್ಟಿನಲ್ಲಿ, ಎಲೆ ತಿನ್ನುವ ಹುಳುಗಳ ಹತೋಟಿಗಾಗಿ ಸ್ಪೊಡೊಪ್ಟೆರಾ ಮತ್ತು ಕಂಬಳಿ ಹುಳುಗಳ ತತಿಗಳ ಹಾಗೂ ಮರಿ ಕೀಟಗಳ ಗುಂಪನ್ನು ಎಲೆಯಿಂದ ತೆಗೆದು ನಾಶಪಡಿಸಬೇಕು.  ಎಲೆ ತಿನ್ನುವ ಕೀಟದ ಬಾಧೆಯಿಂದ ಒಟ್ಟು ಎಲೆಯ ಸುಮಾರು ಶೇ. 30 ರಷ್ಟು ಭಾಗವು ನಾಶಕ್ಕೊಳಗಾದಲ್ಲಿ ಶೇ.2 ರ ಮಿಥೈಲ್ ಪ್ಯಾರಾಥಿಯಾನ್ ಅಥವಾ ಶೇ. 5 ರ ಮೆಲಾಥಿಯಾನ್ ಪುಡಿಯನ್ನು ಹೆಕ್ಟೇರಿಗೆ 20 ಕಿ.ಗ್ರಾಂ ನಂತೆ ಗಿಡಗಳ ಮೇಲೆ ಧೂಳೀಕರಿಸಬೇಕು ಅಥವಾ ಪ್ರತಿ ಲೀ. ನೀರಿನಲ್ಲಿ 2 ಮಿ.ಲೀ. ಕ್ಷಿನಾಲ್‍ಫಾಸ್ 25 ಇ.ಸಿ. ಅಥವಾ 0.3 ಮಿ.ಲೀ. ಇಂಡಾಕ್ಸಾಕಾರ್ಬ್ 14.5 ಎಸ್.ಸಿ. ಅಥವಾ 0.1 ಮಿ.ಲೀ. ಸ್ಪೈನೋಸ್ಸಾಡ್ 45 ಎಸ್.ಸಿ. ಪ್ರತಿ ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
3. ಎಲೆ ತಿನ್ನು ಕೀಟ (ಹೆಲಿಕೋವರ್ಪಾ) : ಈ ಕೀಟಗಳು ಮೊಗ್ಗು ಬರುವ ಹಾಗೂ ಕಾಳು ಕಟ್ಟುವ ಹಂತದಲ್ಲಿ ಹುಳುಗಳು ತೆನೆಯಲ್ಲಿನ ಬಲಿಯುತ್ತಿರುವ ಕಾಳುಗಳನ್ನು ತಿನ್ನುತ್ತವೆ.  ಇದರ ನಿರ್ವಹಣೆಗಾಗಿ ಮೊಗ್ಗು ಬರುವ ಸಮಯದಲ್ಲಿ ಎನ್‍ಪಿವಿ 250 ಎಲ್.ಇ. ಪ್ರತಿ ಹೆಕ್ಟೇರಿಗೆ ಹಾಗೂ 15 ದಿವಸಗಳ ನಂತರ 2 ಮಿ.ಲೀ. ಫೋಸಲೋನ್ 35 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ರೋಗಗಳು :
1. ಆಲ್ಟರ್‍ನೇರಿಯಾ (ಎಲೆ ಚುಕ್ಕೆ ರೋಗ) :  ಹಳದಿ ಉಂಗುರದಿಂದ ಸುತ್ತುವರೆದ ಕಂಡು ಬಣ್ಣದ ಚುಕ್ಕೆಗಳು ಕೆಳಗಿನ ಎಲೆಗಳಿಂದ ಆರಂಭವಾಗುತ್ತವೆ.  ಒಂದಕ್ಕೊಂದು ಕೂಡಿಕೊಂಡು ದೊಡ್ಡ ಮಚ್ಚೆಗಳಾಗುತ್ತವೆ ನಂತರ ಕಾಂಡ ಹಾಗೂ ಎಲೆಗಳ ಮೇಲೂ ಕಾಣಿಸಿಕೊಂಡು ಆ ಭಾಗಗಳು ಒಣಗುತ್ತವೆ.  ಇದರ ನಿರ್ವಹಣೆಗಾಗಿ ಬೀಜ ಬಿತ್ತುವುದಕ್ಕಿಂತ ಮೊದಲು ಒಂದು ಕಿ.ಗ್ರಾ ಬೀಜಕ್ಕೆ 2 ಗ್ರಾಂ ಕಾರ್ಬಾಕ್ಸಿನ್ 75 ಡಬ್ಲೂ.ಪಿ. ಅಥವಾ ಕ್ಯಾಪ್ಟಾನ್ 80 ಡಬ್ಲೂ.ಪಿ. ಅಥವಾ ಮ್ಯಾಂಕೋಜೆಬ್ 75 ಡಬ್ಲೂ.ಪಿ ನಿಂದ ಬೀಜೋಪಚಾರ ಮಾಡಬೇಕು.  2 ಗ್ರಾಂ ಜೈನೆಬ್ 80 ದಬ್ಲೂ.ಪಿ. ಅಥವಾ ಮ್ಯಾಂಕೋಜೆಬ್ 75 ಡಬ್ಲೂ.ಪಿ. ಅಥವಾ 1 ಮಿ.ಲೀ. ಹೆಕ್ಸಾಕೋನೋಜೋಲ್ 5 ಇ.ಸಿ. ಶಿಲೀಂಧ್ರನಾಶಕವನ್ನು 1 ಲೀ. ನೀರಿನಲ್ಲಿ ಬೆರೆಸಿ ಬಿತ್ತನೆಯಾದ 40, 55, 65ನೆಯ ದಿವಸಗಳಲ್ಲಿ ಬೆಳೆಗೆ ಸಿಂಪಡಿಸಬೇಕು.
2. ತುಕ್ಕು ರೋಗ (ಕುಂಕುಮ ರೋಗ) : ಎಲೆಗಳ ಕೆಳಭಾಗದಲ್ಲಿ ಕಬ್ಬಿಣದ ತುಕ್ಕು ಬಣ್ಣದ ಬೊಕ್ಕೆಗಳ ರೂಪದಲ್ಲಿ ರೋಗ ಲಕ್ಷಣಗಳು ಆರಂಭಗೊಂಡು ನಂತರ ಎಲೆ ಹಾಗೂ ಕಾಂಡಗಳ ಬಹು ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ.  ಸೋಂಕು ಉಂಟಾದ ಎಲೆ, ದೇಟು, ಹೂ, ಕಾಂಡದ ಭಾಗಗಳು ಒಣಗುತ್ತವೆ.  ಇದರ ನಿರ್ವಹಣೆಗೆ 2 ಗ್ರಾಂ ಜೈನೆಬ್ 80 ಡಬ್ಲೂ.ಪಿ. ಅಥವಾ ಮ್ಯಾಂಕೋಜೆಬ್ 75 ಡಬ್ಲೂ.ಪಿ. ಪ್ರತಿ ಲೀ. ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ 2-3 ಬಾರಿ ಸಿಂಪರಣೆ ಕೈಗೊಳ್ಳಬೇಕು.
3. ಕೇದಿಗೆ ರೋಗ : ಎಲೆಗಳ ಕೆಳಭಾಗದಲ್ಲಿ ಹತ್ತಿಯಂತೆ ಬಿಳಿ ಶಿಲೀಂಧ್ರದ ಬೆಳವಣಿಗೆ ಕಂಡು ಬಂದು ಗಿಡದ ಬೆಳವಣಿಗೆ ಕುಂಠಿತವಾಗಿರುತ್ತದೆ.  ಎಲೆಯ ನರಗಳು ತಿಳಿ ಹಳದಿ ವರ್ಣಕ್ಕೆ ತಿರುಗುತ್ತವೆ.  ಗಿಡಗಳು ಗಿಡ್ಡವಾಗಿ ತೆನೆಯಲ್ಲಿ ಕಾಳು ತುಂಬುವುದಿಲ್ಲ.  ಇದರ ನಿರ್ವಹಣೆಗೆ ಬೀಜ ಬಿತ್ತುವುದಕ್ಕೆ ಮೊದಲು ಪ್ರತಿ ಕಿ.ಗ್ರಾಂ. ಬೀಜಕ್ಕೆ 6 ಗ್ರಾಂ ಶೇ. 8 ರ ಮೆಟಲಾಕ್ಸಿಲ್ ನೀರಿನಲ್ಲಿ ಕರಗುವ ಪುಡಿಯಿಂದ ಬೀಜೋಪಚಾರ ಮಾಡಬೇಕು.  ರಿಡೋಮಿಲ್ ಎಮ್.ಝಡ್. 72 ಡಬ್ಲೂ.ಪಿ. 3 ಗ್ರಾಂ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆಯನ್ನು 20, 40 ಹಾಗೂ 60ನೇ ದಿನದಲ್ಲಿ ಮಾಡಬೇಕು.  ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು.
4. ಬೂದಿ ರೋಗ : ಗಿಡದ ಕೊನೆಯ ಎಲೆಗಳ ಮೇಲ್ಬಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದ ತುಕಡಿಗಳು ಕಾಣಿಸುತ್ತದೆ.  ತದನಂತರ ಈ ಲಕ್ಷಣಗಳು ಸಸ್ಯಗಳ ಟೊಂಗೆ ಮತ್ತು ತೆನೆಗಳ ಮೇಲೆ ಗೋಚರಿಸುವವು.  ಈ ಲಕ್ಷಣಗಳು ತದನಂತರ ಒಂದಕ್ಕೊಂದು ಕೂಡಿಕೊಂಡು ಎಲೆಕಾಂಡ ಮತ್ತು ತೆನೆಯ ಮೇಲೆ ಹರಡಿ ಪೂರ್ತಿ ಸಸ್ಯಗಳು ಬಿಳಿ ಬೂದಿ ಬಣ್ಣದಿಂದ ಆವೃತಗೊಂಡಂತೆ ಕಾಣಿಸುತ್ತದೆ.  ಇದರ ನಿರ್ವಹಣೆಗೆ ಬೂದಿ ರೋಗದ ನಿರ್ವಹಣೆಗಾಗಿ ಡೈಫೆನ್‍ಕೊನಾಜೋಲ್ 25 ಇ.ಸಿ. 1 ಮಿ.ಲೀ. ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮತ್ತು 15 ದಿವಸಗಳ ನಂತರ ಸಿಂಪರಣೆ ಮಾಡಬೇಕು.
5. ನೆಕ್ರೋಸಿಸ್ (ನಂಜಾಣು ರೋಗ) : ಎಲೆಗಳ ಅಂಚಿನಿಂದ ಒಣಗುವಿಕೆ ಆರಂಭಗೊಂಡು ಕಾಂಡದ ಮೂಲಕ ಬೆಳೆಯುವ ಚಿಗುರಿಗೆ ವ್ಯಾಪಿಸಿಕೊಳ್ಳುತ್ತದೆ.  ಗಿಡಗಳು ಮುರುಟಾಗಿ ಬೆಳವಣಿಗೆ ನಿಂತು ಬಿಡುತ್ತದೆ.  ಗಿಡದಲ್ಲಿ ಕಾಳು ಕಟ್ಟುವುದಿಲ್ಲ.  ಇದರ ನಿರ್ವಹಣೆಗಾಗಿ, ಬಿತ್ತನೆಗೆ ಮುಂಚೆ ಇಮಿಡಾಕ್ಲೋಪ್ರಿಡ್ 70 ಡಬ್ಲೂಎಸ್ ಕೀಟನಾಶಕದಿಂದ ಪ್ರತಿ ಕಿ.ಗ್ರಾಂ. ಬೀಜಕ್ಕೆ 5 ಗ್ರಾಂ ನಂತೆ ಬೀಜೋಪಚಾರ ಮಾಡಬೇಕು.  ಇದರಿಂದ ಥ್ರಿಪ್ಸ್‍ನುಸಿಯ ಹತೋಟಿಯಾಗುವುದರಿಂದ ರೋಗ ಪ್ರಸಾರ ಕಡಿಮೆಯಾಗುವುದು.
    ಹೊಲದ ಸುತ್ತಲೂ 3-4 ಸಾಲು ಎತ್ತರಕ್ಕೆ ಬೆಳೆಯುವ ಜೋಳ ಅಥವಾ ಮೆಕ್ಕೆಜೋಳ ಅಥವಾ ಸಜ್ಜೆಯನ್ನು 15 ದಿನಗಳ ಮುಂಚೆ ಬಿತ್ತಬೇಕು.  ಬಿತ್ತಿದ 30 ದಿನಗಳ ನಂತರ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಕೀಟನಾಶಕವನ್ನು 0.25 ಮಿ.ಲೀ ಅಥವಾ ಆಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ. 1.5 ಮಿ.ಲೀ ಪ್ರತಿ ಲೀಟರ್‍ನೀರಿಗೆ ಬೆರೆಸಿ ಸಿಂಪಡಿಸಬೇಕು.  ಹೊಲವನ್ನು ಕಳೆರಹಿತವಾಗಿ (ಮುಖ್ಯವಾಗಿ ಪಾರ್ಥೇನಿಯಂ ಮತ್ತು ಕ್ಸಾಂಥಿಯಂ) ಸ್ವಚ್ಛವಾಗಿಡಬೇಕು.
    ರೋಗಗ್ರಸ್ತ ಗಿಡಗಳು ಕಂಡುಬಂದಲ್ಲಿ ಅವುಗಳನ್ನು ಕಿತ್ತು ನಾಶಪಡಿಸಬೇಕು.  ಹೂ ಬಿಡುವ ಸಮಯದಲ್ಲಿ ಕೀಟನಾಶಕ ಸಿಂಪರಣೆ ಅಥವಾ ಧೂಳೀಕರಿಸುವುದನ್ನು ಮಾಡಬಾರದು.  ಸೂರ್ಯಕಾಂತಿಯ ನಂತರ ಮತ್ತೆ ಸೂರ್ಯಕಾಂತಿ ಬೆಳೆಯಬಾರದು.  ಸವಳು ಭೂಮಿಯಲ್ಲಿ (5 ಡಿ.ಎಸ್./ಮೀ.) ಸೂರ್ಯಕಾಂತಿಯನ್ನು ಬೋದುಗಳಲ್ಲಿ ಬಿತ್ತನೆ ಮಾಡಿ ಶಿಫಾರಸ್ಸು ಮಾಡಿದ ಸಾರಜನಕದ ಪ್ರಮಾಣಕ್ಕಿಂತ 20 ಕಿ.ಗ್ರಾಂ ಹೆಚ್ಚಿಗೆ ಸಾರಜನಕವನ್ನು ಕೊಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದೂರವಾಣಿ ಸಂಖ್ಯೆ: 08539-220305 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಮುದಾಯ ಆಧಾರಿತ ಸಂಪೂರ್ಣ ಸ್ವಚ್ಛತಾ ಶಿಬಿರಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ

ಕೊಪ್ಪಳ, ಅ.24 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಸಮುದಾಯ ಆಧಾರಿತ ಸಂಪೂರ್ಣ ಸ್ವಚ್ಛತೆ ತರಬೇತಾರ್ಥಿಗಳು ಹಾಗೂ ಜಿ.ಪಂ ಅಧ್ಯಕ್ಷ ಎಸ್.ಬಿ ನಾಗರಳ್ಳಿ ಹಾಗೂ ಜಿಪಂ ತಂಡ ಹಾಗೂ ದೆಹಲಿಯ ಫೀಡ್ ಬ್ಯಾಕ್ ಫೌಡೇಶನ್ ಸಂಸ್ಥೆಯ ತಂಡಗಳು ಆಯ್ದ ಹಳ್ಳಿಗಳಿಗೆ ಬೆಳ್ಳಂಬೆಳಿಗ್ಗೆ ಕೋಳೂರು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಪ್ರೇರೇಪಿಸಿದರು.
     ಐದು ದಿನಗಳವರೆಗೆ ಹಮ್ಮಿಕೊಳ್ಳಲಾಗಿದ್ದ ಸಮುದಾಯ ಆಧಾರಿತ ಸಂಪೂರ್ಣ ಸ್ವಚ್ಛತ ತರಬೇತಿ ಕಾರ್ಯಕ್ರಮದ 4 ನೇ ದಿನದಂದು ಜಿ.ಪಂ ಅಧ್ಯಕ್ಷ ಎಸ್.ಬಿ ನಾಗರಳ್ಳಿ ಅವರು ಕೋಳೂರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಗಳ ಸ್ವಚ್ಛತೆ ಬಗ್ಗೆ ಇಲ್ಲಿ ನೀಡಲಾಗುವ ತರಬೇತಿಯನ್ನು ಪಡೆದು ನಿಮ್ಮ ಗ್ರಾಮಗಳಲ್ಲಿ ತಿಳಿಸಬೇಕು. ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಿಗೆ ಪ್ರೇರೇಪಣೆ ಮಾಡಿ, ಬದಲಾವಣೆ ತರಬೇಕು. ಬಯಲು ಶೌಚಾಲಯದಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ ಎನ್ನುವುದನ್ನ ಅವರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
     ಜಿ.ಪಂ ಅಧ್ಯಕ್ಷರೊಂದಿಗೆ ಫೀಡ್‍ಬ್ಯಾಕ್ ಸಂಸ್ಥೆಯ ತಂಡ ಹಾಗೂ ಜಿ.ಪಂ ಉಪ ಕಾರ್ಯದರ್ಶಿ ನರೇಂದ್ರನಾಥ ತೊರವಿ, ನೋಡಲ್ ಅಧಿಕಾರಿ ರವಿ ಬಸರಿಹಳ್ಳಿ ಸೇರಿದಂತೆ ತರಬೇತಾರ್ತಿಗಳ ತಂಡ ಬೆಳ್ಳಂಬೆಳಿಗ್ಗೆ ಕೋಳೂರು, ಚಿಲವಾಡಿಗಿ, ಹನುಮನಹಳ್ಳಿ, ಲೇಬಗೇರಿ, ಮಂಗಳಾಪೂರ, ಟಣಕನಕಲ್, ಹನುನಹಟ್ಟಿ ಹಾಗೂ ಮಾದಿನೂರು ಗ್ರಾಮಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.

Saturday, 22 October 2016

ಕನ್ನಡ ರಾಜ್ಯೋತ್ಸವ : ಅ. 24 ರಂದು ಪೂರ್ವಭಾವಿ ಸಭೆ

ಕೊಪ್ಪಳ ಅ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಇದೇ ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯನ್ನು ಅ. 24 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು.  ಈ ಸಭೆಗೆ ಎಲ್ಲ ಸಮಾಜದ ಮುಖಂಡರು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.

ಅ.24 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾರಣೆ ಅಂಗವಾಗಿ ಕಾನೂನು ಕಾರ್ಯಾಗಾರ

ಕೊಪ್ಪಳ, ಅ.22 (ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಅಸ್ವಸ್ಥ ರೋಗಿಗಳ ಕುರಿತು ಒಂದು ದಿನದ  ಕಾನೂನು ಕಾರ್ಯಾಕಾರ ಅ.24 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. 
     ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್.ಉಪನಾಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಅವರು ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ. ದಶರಥ, ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ ಕನ್ನೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಎಚ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ದಾನರಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ  ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲೀ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ ಪಾನಘಂಟಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಡಾ. ಕೃಷ್ಣ ಓಂಕಾರ ಅವರು ಮಾನಸಿಕ ಅಸ್ವಸ್ಥ ರೋಗಿಗಳ ಚಿಕಿತ್ಸೆ ಕುರಿತು. ವಕೀಲರಾದ ನೇತ್ರಾ ಬಿ.ಪಾಟೀಲ್ ಮಾನಸಿಕ ಅಸ್ವಸ್ಥ ಮತ್ತು ವಿಕಲತೆ ಮನ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಗೂ ಬಂದಿಖಾನೆಯಲ್ಲಿ ಕಾನೂನು ನೆರವು ದೊರೆಯುವ ಕುರಿತು ಹಾಗೂ ಶಿಲ್ಪಾ ಜಂತಕಲ್ ಅವರು ನಿರ್ಗತಿಯುಳ್ಳ ಅಲೆಮಾರಿ ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಕಾನೂನು ಸೌಲಭ್ಯ ಕುರಿತು ವಿಶೇಷ ಉಪನ್ಯಾನ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಪ.ಜಾತಿ ಹಾಗೂ ಪ.ಪಂಗಡದ ವಿದ್ಯಾರ್ಥಿಗಳಿಗೆ ಸಹಾಯಧನ: ಅರ್ಜಿ ಆಹ್ವಾನ

ಕೊಪ್ಪಳ, ಅ.22 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಅನುದಾನದಲ್ಲಿ ಶೇ.24.10 ರ ಯೋಜನೆಯಡಿ ಪ.ಜಾತಿ ಹಾಗೂ ಪ.ಪಂಗಡದ ವಿದ್ಯಾರ್ಥಿಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಪರಿಶಿಷ್ಟ ಪಂಗಡದ  12- ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ, ಐಟಿಐ/ಇತರೆ ವೃತ್ತಿಪರ-12, ಪಿಯುಸಿ, ಉದ್ಯೋಗಾಧಾರಿತ, ಡಿಪ್ಲೋಮಾ-12 ವಿದ್ಯಾರ್ಥಿಗಳಿಗೆ ರೂ.3000 ಸಹಾಯಧನ ಹಾಗೂ ಪ್ಯಾರಾಮೆಡಿಕಲ್ ಡಿಪ್ಲೋಮಾ/ ಐಟಿಯ/ ಸಿವಿಲ್ ಇತರೆ ತಾಂತ್ರಿಕ -04, ಬಿಎ, ಬಿಎಸ್‍ಎಸ್ಸಿ, ಬಿಕಾಂ, ಎಂಎಸ್‍ಡಬ್ಲೂ, ಎಂಸಿಎ, ಬಿಇ-04 ವಿದ್ಯಾರ್ಥಿಗಳಿಗೆ ರೂ.4500 ಸಹಾಯಧನ ಒದಗಿಸಲಾಗುವುದು.
     ಪರಿಶಿಷ್ಟ ಜಾತಿಯ ಎಸ್‍ಎಸ್‍ಎಲ್‍ಸಿ-28 ಹಾಗೂ ಐಟಿಐ ಇತರೆ ವೃತ್ತಿಪರ 10 ವಿದ್ಯಾರ್ಥಿಗಳಿಗೆ ರೂ.3000 ಹಾಗೂ ಪಿಯುಸಿ/ಉದ್ಯೋಗಾಧಾರಿತ/ ಡಿಪ್ಲೋಮಾ ವ್ಯಾಸಂಗಮಾಡುತ್ತಿರುವ 17 ವಿದ್ಯಾರ್ಥಿಗಳಿಗೆ ರೂ.4500 ಸಹಾಯಧನ ಒದಗಿಸಲಾಗುವುದು.
     ಅರ್ಜಿ ಸಲ್ಲಿಸಿಸುವವರು ಈ ಹಿಂದೆ ಸಹಾಯಧನದ ಸೌಲಭ್ಯ ಪಡೆದಿರಬಾರದು. ಕೊಪ್ಪಳ ನಗರದ ಖಾಯಂ ನಿವಾಸಿಯಾಗಿರಬೇಕು. ನಿಗದಿತ ಅರ್ಜಿ ನಮೂನೆಯೊಂದಿಗೆ ಚಾಲ್ತಿ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ, ಆಧಾರ ಕಾರ್ಡ್, ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜಾತಿ ಮತ್ತು ಚಾಲ್ತಿ ಸಾಲಿನ ಆದಾಯ ಪ್ರಮಾಣ ಪತ್ರ, ಹಾಗೂ ಇತ್ತೀಚಿನ 03 ಭಾವಚಿತ್ರದೊಂದಿಗೆ ನ.03 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಕೊಪ್ಪಳ ನಗರಸಭೆ ಕಾರ್ಯಲಯದಿಂದ ಪಡೆಯಬಹುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ.ಜಾತಿಯ ಸಣ್ಣ ಉದ್ದಿಮೆದಾರರಿಗೆ ಸಹಾಯಧನ: ಅರ್ಜಿ ಆಹ್ವಾನ

ಕೊಪ್ಪಳ, ಅ.22 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಅನುದಾನದ ಶೇ.24.10 ರ ಯೋಜನೆಯಡಿ ಪ.ಜಾತಿಯ ಸಣ್ಣ ಉದ್ದಿಮೆದಾರರಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ನಗರ ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳು ಸೌಲಭ್ಯಕ್ಕಾಗಿ ನ.8 ರೊಳಗಾಗಿ ಅರ್ಜಿ ಸಲ್ಲಿಸಬಹುದು.  ನಿಗದಿತ ಅರ್ಜಿ ನಮೂನೆಯೊಂದಿಗೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಉದ್ದಿಮೆ ನಡೆಸುತ್ತಿರುವ ಬಗ್ಗೆ ದೃಢೀಕರಣ ಮತ್ತು ಭಾವಚಿತ್ರ, ಎಸ್‍ಎಎಸ್ ತೆರಿಗೆ ಚಾಲ್ತಿ ಸಾಲಿನವರೆಗೆ ಪಾವತಿಸಿದ ರಸೀದಿ, ಚಾಲ್ತಿ ಸಾಲಿನ ವರೆಗೆ ನೀರಿನ ತೆರಿಗೆ ಪಾವತಿಸಿದ ರಸಿದಿಯ ಜರಾಕ್ಸ್ ಪ್ರತಿ ಹಾಗೂ 03 ಫೋಟೊಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಕೊಪ್ಪಳ ನಗರಸಭೆ ಕಾರ್ಯಲಯದಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ.ಪಂಗಡದ ಅಭ್ಯರ್ಥಿಗಳಿಗೆ ಅಡುಗೆ ಅನಿಲ ಸಂಪರ್ಕ: ಅರ್ಜಿ ಆಹ್ವಾನ

ಕೊಪ್ಪಳ, ಅ.22 (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ಎಸ್‍ಎಫ್‍ಸಿ ಅನುದಾನದ ಶೇ.24.10 ರ ಯೋಜನೆಯಡಿ ಪ.ಪಂಗಡದ 14 ಅಭ್ಯರ್ಥಿಗಳಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
     ನಿಗದಿತ ಅರ್ಜಿ ನಮೂನೆಯೊಂದಿಗೆ ಚಾಲ್ತಿ ಸಾಲಿನ ಆಸ್ತಿಕರ ಪಾವತಿಸಿದ ರಸೀದಿ ಮತ್ತು ಸಮೂನೆ-3 ( ಅರ್ಜಿದಾರರು ಸ್ವಂತ ಮನೆ ಹೊಂದಿರಬೇಕು), ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಜರಾಕ್ಸ್ ಪ್ರತಿ ಹಾಗೂ 3 ಭಾವಚಿತ್ರದೊಂದಿಗೆ ನ.02 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಕೊಪ್ಪಳ ನಗರಸಭೆ ಕಾರ್ಯಲಯದಿಂದ ಪಡೆಯಬಹುದು ಎಂದು ನಗರಸಭೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೊಪ್ಪಳದ ವಿಲಾಸ್ ಭೋಸ್‍ಲೆ ಅವರಿಗೆ ರಾಷ್ಟ್ರಪತಿ ಪೊಲೀಸ್ ಪದಕ ಪ್ರದಾನ

ಕೊಪ್ಪಳ ಅ. 22 (ಕರ್ನಾಟಕ ವಾರ್ತೆ): ಕೊಪ್ಪಳದ ಸಂಚಾರ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಲಾಸ್ ಭೋಸಲೆ ಅವರಿಗೆ 2013 ನೇ ಸಾಲಿನ ರಾಷ್ಟ್ರಪತಿ ಪೊಲೀಸ್ ಪದಕ ಲಭಿಸಿದ್ದು, ಅ. 20 ರಂದು ರಾಜ್ಯಪಾಲರು ಬೆಂಗಳೂರಿನಲ್ಲಿ ವಿಲಾಸ್ ಭೋಸಲೆ ಅವರಿಗೆ ಪದಕ ಪ್ರದಾನ ಮಾಡಿದರು.
     ವಿಲಾಸ್ ಭೋಸಲೆ ಅವರು ಈ ಹಿಂದೆ ಲೋಕಾಯುಕ್ತ ಪೊಲಿಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಅವರ ಉತ್ತಮ ಸೇವೆಗಾಗಿ 2013 ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕ ಪ್ರಶಸ್ತಿ ಘೋಷಿಸಲಾಗಿತ್ತು.  ಇದೀಗ ಈ ಪದಕವನ್ನು ಅ. 20 ರಂದು ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ರಾಜ್ಯಪಾಲರು ವಿಲಾಸ್ ಭೋಸ್‍ಲೆ ಅವರಿಗೆ ಪ್ರದಾನ ಮಾಡಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Friday, 21 October 2016

ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಸಿಇಓ ರಾಮಚಂದ್ರನ್

ಕೊಪ್ಪಳ, ಅ.21  (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಟಣಕನಕಲ್ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಮಕ್ಕಳ ಹಿತದೃಷ್ಟಿಯಿಂದ ಸಮರ್ಪಕವಾಗಿ ನಿರ್ವಹಿಸುವಂತೆ ಅಲ್ಲಿನ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ತಾಲೂಕಿನ ಟಣಕನಕಲ್ ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಿದ್ಯಾರ್ಥಿನಿಲಯದಲ್ಲಿ ಜರುಗುತ್ತಿರುವ ಸಮುದಾಯ ಆಧಾರಿತ ಸಂಪೂರ್ಣ ಸ್ವಚ್ಛತೆ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ, ಮಾರ್ಗ ಮಧ್ಯದಲ್ಲಿನ ಟಣಕನಕಲ್ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು.  ನಂತರ ಅಲ್ಲಿನ ಅವ್ಯವಸ್ಥೆಯನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು, ಅಂಗನವಾಡಿ ಕೇಂದ್ರದಲ್ಲಿ ಅಕ್ಕಿ ತುಂಬುವ ಪ್ಲಾಸ್ಟಿಕ್ ಚೀಲದ ಮೇಲೆ ಮಕ್ಕಳು ಮಲಗಿರುವುದನ್ನು ಕಂಡು ಅಲ್ಲಿನ ಸಿಬ್ಬಂದಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.  ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೂಲಭೂತ ವ್ಯವಸ್ಥೆಗಳಾದ ಕುಡಿಯುವ ನೀರು, ಉಪಹಾರ ತಯಾರಿಸಲು ಗ್ಯಾಸ್ ವ್ಯವಸ್ಥೆ, ಶೌಚಾಲಯ, ವಿದ್ಯುತ್ ಸಂಪರ್ಕ, ಮಕ್ಕಳು ಕೂಡಲು ಕನಿಷ್ಟ ಚಾಪೆಯೂ ಇಲ್ಲದ ಸ್ಥಿತಿಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಅಲ್ಲದೆ ಕೂಡಲೆ ವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು.  ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಸಮರ್ಪಕವಾಗಿ ಇಲ್ಲದಿರುವುದನ್ನು ಕಂಡ ಅವರು, ಅಂಗನವಾಡಿ ಕಟ್ಟಡ ನಿರ್ಮಾಣದ ಕ್ರಿಯಾ ಯೋಜನೆ ವಿವರಗಳನ್ನು ಕೂಡಲೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಕರೆ ಮಾಡಿ ಸೂಚನೆ ನೀಡಿದರು.  ಆಯಾ ವೃತ್ತದ ಮೇಲ್ವಿಚಾರಕಿಯರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾಲ ಕಾಲಕ್ಕೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಕೀತು ಮಾಡಿದರು.

ಗ್ರೂಪ್-ಡಿ ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕೊಪ್ಪಳ, ಅ.21  (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಡಿ ವೃಂದದ ಅಡುಗೆಯವರ ಒಟ್ಟು 41 ಹುದ್ದೆಗಳಿಗೆ  ಅರ್ಜಿ ಆಹ್ವಾನಿಸಿದ್ದು, ಹೈದರಾಬಾದ-ಕರ್ನಾಟಕ ವೃಂದದಲ್ಲಿ 35 ಹುದ್ದೆ, ಉಳಿಕೆ ಮೂಲವೃಂದದ 6 ಹುದ್ದೆಗಳು ಮೀಸಲಿವೆ.  ಅಡುಗೆ ಸಹಾಯಕರ ಒಟ್ಟು 32 ಹುದ್ದೆಗಳಲ್ಲಿ ಹೈ-ಕ ವಿಭಾಗಕ್ಕೆ 78, ಉಳಿಕೆ ಮೂಲ ವೃಂದ್ದಕ್ಕೆ 14 ಹುದ್ದೆಗಳು ಮೀಸಲಿವೆ.   ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳನ್ನು ನಿಯಮಾನುಸಾರ ನೇರ Àನೇಮಕಾತಿ ಮುಖಾಂತರ ಭರ್ತಿ ಮಾಡಲಾಗುವುದು.  
     ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.  ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 18 ವರ್ಷ.  ಗರಿಷ್ಠ ವಯಸ್ಸು ಅಭ್ಯರ್ಥಿಯು ಅರ್ಜಿ ಸ್ವೀಕರಿಸಲು ನಿಗಧಿಪಡಿಸಲಾಗಿರುವ ಕೊನೆಯ ದಿನಾಂಕದಂದು ಪ.ಜಾತಿ ಹಾಗೂ ಪ.ಪಂಗಡದ/ ಪ್ರ ವರ್ಗ-1 ಅಭ್ಯರ್ಥಿಗಳ ವಯಸ್ಸು 40 ವರ್ಷ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳ ವಯಸ್ಸು 38 ವರ್ಷ, ಸಾಮಾನ್ಯ ಅಭ್ಯರ್ಥಿಗಳ ವಯಸ್ಸು 35 ವರ್ಷ.
     ಆನ್‍ಲೈನ್ ಮೂಲಕ ಅರ್ಜಿಯನ್ನು   www.koppal.nic.in  ಇಲ್ಲಿ ಅ.25 ರಿಂದ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನ.19 ಕೊನೆಯ ದಿನ. ಶುಲ್ಕ ಪಾವತಿಗೆ ನ.21 ಕೊನೆಯ ದಿನವಾಗಿದೆ.
     ಅರ್ಜಿ ಶುಲ್ಕ ಅಡುಗೆಯವರ ಹುದ್ದೆಗೆ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ-150 ಹಾಗೂ ಸಾಮಾನ್ಯ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ. 250 ನಿಗದಿಪಡಿಸಲಾಗಿದೆ.  ಅಡುಗೆ ಸಹಾಯಕರ ಹುದ್ದೆಗೆ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100. ಸಾಮಾನ್ಯ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ-200 ನಿಗದಿಪಡಿಸಿದೆ.  ಅಭ್ಯರ್ಥಿಯು ಎರಡೂ ಹುದ್ದೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದಾದಲ್ಲಿ ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕು.  ಅರ್ಜಿ ಶುಲ್ಕವನ್ನು ಅಂಚೆ ಕಛೇರಿಯ ಕೆಲಸದ ವೇಳೆಯಲ್ಲಿ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಛೇರಿಗಳಲ್ಲಿ ( ಇ ಪೇಮೆಂಟ್ ಪೋಸ್ಟ್ ಆಫೀಸ್) ನಿಗದಿಪಡಿಸಿರುವ ದಿನಾಂಕದೊಳಗಾಗಿ ಪಾವತಿ ಮಾಡಬೇಕು. ಇದನ್ನು ಹೊರತುಪಡಿಸಿ ಡಿ.ಡಿ ಪೋಸ್ಟಲ್ ಆರ್ಡರ್, ಮನಿ ಆರ್ಡರ್‍ಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಆಯುಷ್ ವೈದ್ಯರ ನೇಮಕ: ಅರ್ಹ ವೈದ್ಯರಿಂದ ಅರ್ಜಿ ಆಹ್ವಾನ

ಕೊಪ್ಪಳ, ಅ.21  (ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಅಧಿಕಾರಿಗಳ ಕಾರ್ಯಾಲಯದಿಂದ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳ ಎದುರು ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
     ಗ್ರಾಮೀಣ ಪ್ರದೇಶದ ಪಾ.ಆ.ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 17 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಎದುರು,  ಬಿಎಎಂಎಸ್ ವಿದ್ಯಾರ್ಹತೆ ಹೊಂದಿರುವ ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ನೇಮಕ ಮಾಡಲಾಗುವುದು.  ಮಾಸಿಕ   ರೂ.26000 ಸಂಚಿತ ವೇತನ ನಿಗದಿಪಡಿಸಿದೆ ಹಾಗೂ ಯಾವುದೇ ಭತ್ಯೆಗಳಿಗೆ ಅರ್ಹರಿರುವುದಿಲ್ಲ.
     ಹೈದರಾಬಾದ-ಕರ್ನಾಟಕ ವಿಭಾಗದ ಸಾಮಾನ್ಯ ಅಭ್ಯರ್ಥಿ ವಿಭಾಗದಲ್ಲಿ ಸಾ.ಅ-03 ಪ.ಜಾತಿ-01, ಪ.ಪಂ-01, ಪ್ರವರ್ಗ1-01, 2ಎ-01, 2ಬಿ-01 ಒಟ್ಟು-08 ಹುದ್ದೆ ಹಾಗೂ ಮಹಿಳಾ ಅಭ್ಯರ್ಥಿ-02 ಪ.ಜಾತಿ-01, 2ಎ-01 ಒಟ್ಟು-04 ಹುದ್ದೆ. ಗ್ರಾಮೀಣ ಅಭ್ಯರ್ಥಿ ವಿಭಾಗದಲ್ಲಿ ಸಾ.ಅ-02 ಒಟ್ಟು 02 ಹುದ್ದೆ. ಹೈ-ಕ ವಿಭಾಗದಲ್ಲಿ 14 ಹಾಗೂ ಹೈ-ಕ ಹೊರತುಪಡಿಸಿ-03, ಒಟ್ಟು 17 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
    ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಆಯುಷ್ ವೈದ್ಯರನ್ನು ಯಾವುದೇ ಕಾರಣಕ್ಕೂ ಸರ್ಕಾರಿ ಸೇವೆಗೆ ಸಕ್ರಮಗೊಳಿಸಲಾಗುವುದಿಲ್ಲ. ಖಾಯಂ ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳುವವರೆಗೆ ಈ ನೇಮಕಾತಿ ಜಾರಿಯಲ್ಲಿರುತ್ತದೆ. ಹಾಗೂ ಕೌನ್ಸಿಲಿಂಗ್ ಸಂದರ್ಭದಲ್ಲಿ ಸದರಿ ಹುದ್ದೆಗಳನ್ನು ಖಾಲಿ ಹುದ್ದೆಗಳೆಂದು ಪ್ರಚುರಪಡಿಸಿ ಅರ್ಹ ಖಾಯಂ ವೈದ್ಯರಿಗೆ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಕೆಲಸ ಕಳೆದುಕೊಳ್ಳುವ ಗುತ್ತಿಗೆ ಆಯುಷ್ ವೈದ್ಯಾಧಿಕಾರಿಗಳನ್ನು ಅದೇ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಮುಂದುವರೆಸಲಾಗುವುದು. ಒಂದು ವೇಳೆ ಖಾಲಿಯಿಲ್ಲದಿದ್ದಲ್ಲಿ ಅವರ ಗುತ್ತಿಗೆ ಸೇವೆಯನ್ನು ಮೊಟಕುಗೊಳಿಸಲಾಗುವುದು.
     ಆಸಕ್ತರು ತಮ್ಮ ಎಲ್ಲಾ ಶೈಕ್ಷಣಿಕ (ಎಸ್‍ಎಸ್‍ಎಲ್‍ಸಿ, ಆಯುಷ್ ಪದವಿಯ ಎಲ್ಲಾ ಅಂಕ ಪಟ್ಟಿಗಳು, ರಜಿಸ್ಟ್ರೇಷನ್ ಪತ್ರ, ಇಂಟರ್ನಶಿಪ್ ಪ್ರಪತ್ರ, ಕೆ.ಎಂ.ಸಿ ಯಿಂದ ನೋಂದಣಿ ಪತ್ರ ಹಾಗೂ ಜಾತಿ ಪಮಾಣ ಪತ್ರ)  ಮೂಲ ಹಾಗೂ ಜರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ 02 ಭಾವಚಿತ್ರಗಳೊಂದಿಗೆ ಅ.27 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ದೂ ಸಂ: 08539-221660 ಇಲ್ಲಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರೂಪ್ ಡಿ ಹಾಗೂ ಅಡುಗೆ ಸಹಾಯಕರು ಹಾಗೂ ಕಾವಲುಗಾರ ಹುದ್ದೆಗೆಳಿಗೆ ಅರ್ಜಿ ಆಹ್ವಾನ

ಕೊಪ್ಪಳ, ಅ.21 (ಕರ್ನಾಟಕ ವಾರ್ತೆ): ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಗ್ರೂಪ್ ಡಿ ವೃಂದದ ಅಡುಗೆ ಸಹಾಯಕರ ಹಾಗೂ ಕಾವಲುಗಾರರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಡಿ ವೃಂದದ  ಅಡುಗೆ ಸಹಾಯಕರ ಹುದ್ದೆಗಳ ಪೈಕಿ ಹೈದರಾಬಾದ-ಕರ್ನಾಟಕ ವಿಭಾಗದ ವೃಂದಕ್ಕೆ 25 ಹುದ್ದೆ, ಉಳಿಕೆ ಮೂಲವೃಂದದ 4 ಹುದ್ದೆಗಳು ಮೀಸಲಿವೆ.  ಕಾವಲುಗಾರರ ಹುದ್ದೆಗಳ ಪೈಕಿ ಹೈ-ಕ ವಿಭಾಗದ ವೃಂದಕ್ಕೆ 21 ಹುದ್ದೆ, ಉಳಿಕೆ ಮೂಲ ವೃಂದ್ದಕ್ಕೆ 03 ಹುದ್ದೆಗಳು ಮೀಸಲಿವೆ.   ಈ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲಾಗುವುದು. ಅರ್ಜಿ ಸಲ್ಲಿಸುವವರು ಎಸ್‍ಎಸ್‍ಎಲ್‍ಸಿ/ಐಸಿಎಸ್‍ಇ/ ಸಿಬಿಎಸ್‍ಇ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 18 ವಷರ್. ಗರಿಷ್ಠ ವಯಸ್ಸು ಅಭ್ಯರ್ಥಿಯು ಅರ್ಜಿ ಸ್ವೀಕರಿಸಲು ನಿಗಧಿಪಡಿಸಲಾಗಿರುವ ಕೊನೆಯ ದಿನಾಂಕದಂದು ಪ.ಜಾತಿ ಹಾಗೂ ಪ.ಪಂಗಡದ/ ಪ್ರ ವರ್ಗ-1 ಅಭ್ಯರ್ಥಿಗಳ ವಯಸ್ಸು 40 ವರ್ಷ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳ ವಯಸ್ಸು 38 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ನಿಗಡಿಪಡಿಸಿದೆ.
     ಆನ್‍ಲೈನ್ ಮೂಲಕ ಅರ್ಜಿಯನ್ನು   www.koppal.nic.in ಇಲ್ಲಿ ಅ.25 ರಿಂದ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನ.19 ಕೊನೆಯ ದಿನ. ಶುಲ್ಕ ಪಾವತಿಗೆ ನ.21 ಕೊನೆಯ ದಿನವಾಗಿದೆ.
     ಅರ್ಜಿ ಶುಲ್ಕ ಅಡುಗೆ ಸಹಾಯಕರು ಹಾಗೂ ಕಾವಲುಗಾರರ ಹುದ್ದೆಗೆ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ-100 ಹಾಗೂ ಸಾಮಾನ್ಯ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ-200. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. (ಶೇ.40ಕ್ಕಿಂತ ಅಂಗವಿಕಲತೆ ಹೊಂದಿರುವವರು ಮತ್ತು ಸಂಬಂದಿಸಿದಂತೆ ಸಕ್ಷಮ ಪ್ರಾಧಿಕಾರಿಯಿಂದ ಪ್ರಮಾಣ ಪತ್ರ ಹೊಂದಿರಬೇಕು) ಅಭ್ಯರ್ಥಿಯು ಎರಡೂ ಹುದ್ದೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವುದಾದಲ್ಲಿ ಆಯಾ ಹುದ್ದೆಗಳಿಗೆ ನಿಗಧಿಪಡಿಸಿರುವ ಅರ್ಜಿ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಅಂಚೆ ಕಛೇರಿಯ ಕೆಲಸದವೇಳೆಯಲ್ಲಿ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಛೇರಿಗಳಲ್ಲಿ ( ಇ ಪೇಮೆಂಟ್ ಪೋಸ್ಟ್ ಆಫೀಸ್) ನಿಗಧಿ ಪಡಿಸಿರುವ ದಿನಾಂಕದೊಳಗಾಗಿ ಪಾವತಿ ಮಾಡಬೇಕು. ಇದನ್ನು ಹೊರತುಪಡಿಸಿ ಡಿ.ಡಿ ಪೋಸ್ಟಲ್ ಆರ್ಡರ್, ಮನಿ ಆರ್ಡರ್‍ಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಅ.24, 25 ರಂದು ಗದಗನಲ್ಲಿ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆ

ಕೊಪ್ಪಳ, ಅ.21  (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜ್ಯ ಮಟ್ಟದ ಹತ್ತನೆಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ ಶಿಪ್ ಹಾಗೂ ಪ್ರಸಕ್ತ ಸಾಲಿನ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಅ.24 ಮತ್ತು 25 ರಂದು ಗದುಗಿನ ಕೆ.ಎಚ್.ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
     ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಜರುಗಲಿರುವ ಸೈಕ್ಲಿಂಗ್ ಸ್ಪರ್ಧೆಗೆ ಜಿಲ್ಲೆಯ ಆಸಕ್ತ 14 ರಿಂದ 23 ವರ್ಷದೊಳಗಿನ ಸ್ಪರ್ಧಾಳುಗಳು (ಬಾಲಕ/ಬಾಲಕಿಯರು) ವಿವಿಧ ವಿಭಾಗಗಳ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಗದಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೆ.ಎಚ್.ಪಾಟೀಲ್ ಕ್ರೀಡಾಂಗಣ ದೂ.ಸಂ:08372-238345 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಕ್ಫ್ ಸಂಸ್ಥೆಗಳಿಗೆ ಅನುದಾನ ಮಂಜೂರಾತಿ: ಪ್ರಸ್ತಾವನೆ ಸಲ್ಲಿಕೆಗೆ ಅ.25 ಕೊನೆಯ ದಿನ

ಕೊಪ್ಪಳ, ಅ.21  (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 37 ವಕ್ಫ್ ಸಂಸ್ಥೆಗಳಿಗೆ ಮಂಜೂರಾದ ಅನುದಾನ ಬಿಡುಗಡೆಗಾಗಿ ಇದುವರೆಗೂ ಪ್ರಸ್ತಾವನೆಯಲ್ಲಿ ಸಲ್ಲಿಸದಿರುವ ವಕ್ಫ್ ಸಂಸ್ಥೆಗಳು ತಮ್ಮ ಪ್ರಸ್ತಾವನೆಯನ್ನು ಅ.25 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
     ರಾಜ್ಯ ಸರ್ಕಾರವು 2010-11, 11-12, 13-14, 14-15 ಮತ್ತು 2015-16 ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ 37 ವಕ್ಫ್ ಸಂಸ್ಥೆಗಳಿಗೆ ಆಸ್ತಿಗಳ ರಕ್ಷಣೆಗಾಗಿ ಕಂಪೌಂಡ್ ಗೋಡೆ ನಿರ್ಮಾಣ, ದುರಸ್ತಿ ಮತ್ತು ಜೀರ್ಣೋದ್ದಾರಕ್ಕಾಗಿ ಅನುದಾನ ಮಂಜೂರು ಮಾಡಿದೆ. ಆದರೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಛೇರಿಯಿಂದ ಹಲವು ಬಾರಿ ಮನವಿ ಕಳುಹಿಸಲಾಗಿದ್ದರೂ ಈವರಗೂ ಜಿಲ್ಲೆಯ 37 ವಕ್ಫ ಸಂಸ್ಥೆಗಳು ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿರುವುದಿಲ್ಲ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಅ.31 ರ ನಂತರ ಅನುದಾನವನ್ನು ಸರಕಾರಕ್ಕೆ ಅಧ್ಯಾರ್ಪಣೆಗೊಳಿಸಲು ಸೂಚಿಸಿದೆ.  ಆದ್ದರಿಂದ ಜಿಲ್ಲೆಯಲ್ಲಿ ಇದುವರೆಗೂ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸದೇ ಇರುವ 37 ವಕ್ಫ್ ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಅ.25 ರೊಳಗಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಛೇರಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗಿದೆ.
       ತಪ್ಪಿದಲ್ಲಿ ಅನುದಾನವನ್ನು ಸರಕಾರಕ್ಕೆ ಅಧ್ಯಾರ್ಪಣೆಗೊಳಿಸಿದರೆ ಅದಕ್ಕೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 20 October 2016

ಪೊಲೀಸ್ ವಿರುದ್ಧ ದೂರಿದ್ದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಿ

ಕೊಪ್ಪಳ, ಅ.20  (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆ 2012 ರ ತಿದ್ದುಪಡಿ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ದೂರುಗಳ ವಿಚಾರಣೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರಗಳನ್ನು ರಚಿಸಿದ್ದು, ಜಿಲ್ಲೆಯ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ದೂರುಗಳಿದ್ದಲ್ಲಿ, ಸಾರ್ವಜನಿಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜ್ ತಿಳಿಸಿದ್ದಾರೆ.
    ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿಎಸ್‍ಪಿ ಮತ್ತು ಅದಕ್ಕಿಂತ ಕೆಳದರ್ಜೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ಆರೋಪ ಅಂದರೆ ಯಾವುದೇ ಸಾರ್ವಜನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ, ಪೊಲೀಸ್ ವಶದಲ್ಲಿದ್ದಾಗ ಮರಣ, ಐಪಿಸಿ ಸೆಕ್ಷನ್-320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ, ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಇಲ್ಲವೇ ವಶದಲ್ಲಿರಿಸಿಕೊಳ್ಳುವುದು, ಇತರ ಗಂಭೀರ ದುರ್ನಡತೆ ದೂರುಗಳ ವಿಚಾರಣೆ ಮಾಡಲಿದೆ.
    ಪೊಲೀಸ್ ಉಪಾಧೀಕ್ಷರು ಮತ್ತು ಅದಕ್ಕಿಂತ ಕೆಳ ಹಂತದ ಅಧಿಕಾರಿ/ಸಿಬ್ಬಂಧಿಗಳ ವಿರುದ್ದದ ದೂರುಗಳನ್ನು, ಸಾರ್ವಜನಿಕರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಛೇರಿ, ಅಶೋಕ ಸರ್ಕಲ್, ಕೊಪ್ಪಳ, ದೂರವಾಣಿ-08539-230111 ಇಲ್ಲಿಗೆ ಸಲ್ಲಿಸಬಹುದು.
     ಡಿಎಸ್‍ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ವಿರುದ್ದದ ದೂರುಗಳನ್ನು ಅಧ್ಯಕ್ಷರು, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ಕೊಠಡಿ ಸಂ.36, ನೆಲಮಹಡಿ, ವಿಕಾಸ ಸೌಧ, ಬೆಂಗಳೂರು-01, ದೂರವಾಣಿ- 080-22386063 ಅಥವಾ 22034220 ಇಲ್ಲಿಗೆ ಸಲ್ಲಿಸಬಹುದಾಗಿದೆ.   
     ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗಾಗಿ ವೆಬ್‍ಸೈಟ್ ಪ್ರಾರಂಭಿಸಿದೆ  www.karntaka.gov.in/spcablr@ ಸಾರ್ವಜಿನಿಕರು ವೀಕ್ಷಿಸಬಹುದು. ಹಾಗೂ ಕೊಪ್ಪಳ ಪೊಲೀಸ್ ದೂರು ಪ್ರಾಧಿಕಾರದ ಇ-ಮೇಲ್  dpcakpl@karnataka.gov.in ಮೂಲಕ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ವಿಶೇಷ ಬೋಧನೆ- ಸಿಇಓ ರಾಮಚಂದ್ರನ್ ಶ್ಲಾಘನೆ


ಕೊಪ್ಪಳ ಅ. 20 (ಕರ್ನಾಟಕ ವಾರ್ತೆ): ಕೊಪ್ಪಳದ ಬನ್ನಿಕಟ್ಟೆ     ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಸರಾ ರಜೆಯ ವಿಶೇಷ ಬೋಧನೆ ತರಗತಿಗಳಿಗೆ ಗುರುವಾರದಂದು ಆಕಸ್ಮಿಕ ಭೇಟಿ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹಾಗೂ ಶಿಕ್ಷಕರ ಬೋಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
      ಈ ಬಾರಿ ಕೊಪ್ಪಳದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗದ 09 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ದಸರಾ ರಜೆಯಲ್ಲಿ ವಿಶೇಷ ಬೋಧನೆಗಾಗಿ ಕ್ರಮ ಕೈಗೊಳ್ಳಲಾಗಿತ್ತು.  ಅದರಂತೆ ಗುರುವಾರದಂದು ವಿಶೇಷ ಬೋಧನಾ ಕೇಂದ್ರಗಳಿಗೆ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ರವರು ಬೇಟಿ ನೀಡಿ ತರಗತಿಗಳನ್ನು ಪರಿಶೀಲಿಸಿದರು.  10 ನೇ ತರಗತಿ ವಿಶೇಷ ಬೋಧನಾ ಕೇಂದ್ರ ಸಂದರ್ಶಿಸಿ ವಿದ್ಯಾರ್ಥಿಗಳಿಗೆ ರಸಾಯನಾ ಶಾಸ್ತ್ರದ ಬೋಧನೆಯು ಮಕ್ಕಳಿಗೆ ಪರಿಣಾಮಕಾರಿಯಾಗಿ ಮೂಡಿಬರುತ್ತಿದೆ. ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿರುವುದನ್ನು ಶ್ಲಾಘಿಸಿದರು. ತರುವಾಯ, 9 ನೇ ತರಗತಿಯಲ್ಲಿ ಇಂಗ್ಲೀಷ ವ್ಯಾಕರಣದ ಪಾಠ ಬೋಧನೆ ಮಾಡುತ್ತಿದ್ದ ತರಗತಿಗೆ ಬೇಟಿ ನೀಡಿ, ಪುನರಾವರ್ತನೆ ಹಾಗೂ ವ್ಯಾಕರಣದ ಮನನ ಮತ್ತು ವ್ಯಾಕರಣದ ಅವಶ್ಯಕತೆ ಕುರಿತು ವಿದ್ಯಾರ್ಥಿಗಳಿಗೆ ಖುದ್ದು ಮಾರ್ಗದರ್ಶನ ಮಾಡಿದರು.
              ಕಂಪ್ಯೂಟರ ವಿಭಾಗದಲ್ಲಿ ಪ್ರೊಜೆಕ್ಟರ ಮೂಲಕ ವಿಜ್ಞಾನಿಗಳ ಪರಿಚಯ ಮಾಡಿಕೊಡುವ ತರಗತಿ ಅವಲೋಕಿಸಿ, ವಿದ್ಯಾರ್ಥಿಗಳೊಂದಿಗೆ ಪ್ರಸಕ್ತ ವಿಷಯಗಳ ಕುರಿತು ಸಂವಾದ ನಡೆಸಿದರು.  ಅಲ್ಲದೆ ವಿದ್ಯಾರ್ಥಿಗಳಿಗೆ ಈ ತರಬೇತಿಯ ಅವಶ್ಯಕತೆ ಮತ್ತು ಮಹತ್ವ ತಿಳಿಸಿದರು. 
               ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕ ( ಮುನಿರಾಬಾದ್ ಡಯಟ್) ಪರಮೇಶಪ್ಪ, ಜಿಲ್ಲಾ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ) ಪರಸಪ್ಪ ಭಜಂತ್ರಿ , ಡಯಟ್ ಉಪನ್ಯಾಸಕ ಶಾಂತಪ್ಪ, ಸಮನ್ವಯ ಅಧಿಕಾರಿ ಶರಣಪ್ಪ ಗೌರಿಪುರ ಹಾಗೂ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಭೂ ಒಡೆತನ ಯೋಜನೆ ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ

ಕೊಪ್ಪಳ, ಅ.20  (ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತೀಯ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕಾರ್ಮಿಕರಿಗೆ ಜಮೀನು ಒದಗಿಸಲು 139 ಫಲಾನುಭವಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಈ ಪಟ್ಟಿ ಕುರಿತು ದೂರು/ಅಹವಾಲುಗಳನ್ನು ಆಹ್ವಾನಿಸಲಾಗಿದೆ.
    ಮತೀಯ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕೂಲಿ ಕಾರ್ಮಿಕರಿಗೆ, ತಲಾ ಎರಡು ಎಕರೆ ಖುಷ್ಕಿ ಜಮೀನು ಅಥವಾ ಒಂದು ಎಕರೆ ತರಿ ಜಮೀನು ಒದಗಿಸಲು ಯೋಜನೆಯ ಘಟಕ ವೆಚ್ಚದ ಶೇ.50 ರಷ್ಟು ಸಹಾಯಧನ ಹಾಗೂ ಶೇ.50 ರಷ್ಟು ಮೊತ್ತವನ್ನು ಶೇ.6 ರ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ಭೂಮಿ ಒದಗಿಸಲಾಗುವುದು.
     ಭೂ ಒಡೆತನ ಯೋಜನೆ ಅನುಷ್ಠಾನ ಸಮಿತಿ ಸಭೆಯು ಈಗಾಗಲೇ ಹಲವಾರು ಸಭೆಗಳ ಮೂಲಕ ಭೂ ಮಾಲಿಕರ ಜಮೀನುಗಳನ್ನು ಖರೀದಿಸಲು ನೋಂದಣಿ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಿ, ಯೋಜನೆಯನ್ನು ಅನುಷ್ಠಾನಗೊಳಿಸಲು ಕೂಲಂಕಷವಾಗಿ ಪರಿಶೀಲಿಸಿ ಭೂ ಮಾಲಕರಿಂದ ಭೂಮಿ ಖರೀದಿಸಿದೆ.   ಮತೀಯ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕೂಲಿ ಕಾರ್ಮಿಕರಿಗೆ ಭೂಮಿ ಒದಗಿಸಲು ಫಲಾನುಭವಿಗಳನ್ನು ಚಿಲವಾಡಗಿ, ನರೆಗಲ್, ಓಜನಹಳ್ಳಿ, ಹುಚ್ಚೀರೇಶ್ವರ ಕ್ಯಾಂಪ್, ಬೆಟಗೇರಿ, ಬಿಸರಹಳ್ಳಿ, ಬೋಚನಹಳ್ಳಿ, ಕಂಪ್ಲಿ-ಅಳವಂಡಿ, ಬೆಳಗಟ್ಟಿ, ಬಹದ್ದೂರಬಂಡಿ, ಮತ್ತೂರು, ಹಂದ್ರಾಳ, ಹಲಗೇರಾ, ಮುದ್ದಾಬಳ್ಳಿ, ಗಿಣಿಗೇರಾ, ಗುಡ್ಲಾನೂರು, ಕಾತರಕಿ ಮತ್ತು ಹಾದರಮಗ್ಗಿ ಗ್ರಾಮಗಳಲ್ಲಿ ಗ್ರಾಮ ಸಭೆ ಮೂಲಕ ಒಟ್ಟು-139 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.  ಆಯ್ಕೆ ಪಟ್ಟಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಭವನ ಕೊಪ್ಪಳ ಇಲ್ಲಿ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ದೂರು/ಅಹವಾಲುಗಳಿದ್ದಲ್ಲಿ ನ.4 ರೊಳಗಾಗಿ ಸಲ್ಲಿಸಬಹುದು. ಅವಧಿ ಮೀರಿ ಬಂದ ದೂರು/ಅಹವಾಲುಗಳಿಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂ.ಸಂ: 08539-225008 ಇಲ್ಲಿಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 24 ರಿಂದ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಲಸಿಕಾ ಕಾರ್ಯಕ್ರಮ

ಕೊಪ್ಪಳ ಅ. 20 (ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ ಅ. 24 ರಿಂದ ನ. 15 ರವರೆಗೆ ಹಮ್ಮಿಕೊಳ್ಳಲಾಗಿದೆ.
     ಕೇಂದ್ರ ಪುರಸ್ಕøತ ಯೋಜನೆಯಾದ ಎಫ್.ಎಂ.ಡಿ. ಸಿ.ಪಿ-11 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಅ. 24 ರಿಂದ ನ. 15 ರವರೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ಹಮ್ಮಿಕೊಳ್ಳಲಾಗಿದೆ.  ಕಾಲು ಬಾಯಿ ರೋಗದ ನಿಯಂತ್ರಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿ/ಸಿಬ್ಬಂದಿ ಹಾಗೂ ಹಾಲು ಒಕ್ಕೂಟದ ಸಿಬ್ಬಂದಿಯ ಲಸಿಕಾ ತಂಡದೊಂದಿಗೆ ಗ್ರಾಮಗಳಿಗೆ ತೆರಳಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ಧ ಲಸಿಕೆಯನ್ನು ಉಚಿತವಾಗಿ ಹಾಕುವರು.  ಈ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರೈತ ಬಾಂಧವರು, ಜಾನುವಾರುಗಳ ಮಾಲೀಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.