Thursday, 21 July 2016

ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ : ಅರ್ಜಿ ಆಹ್ವಾನ

ಕೊಪ್ಪಳ ಜು.21 (ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿನ ಸಾಧನ ಸಲಕರಣೆ ಯೋಜನೆಯಡಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ವಿಕಲಚೇತನರು ಟ್ರೈಸಿಕಲ್, ವ್ಹೀಲ್‍ಚೇರ್ ಸೌಲಭ್ಯಕ್ಕಾಗಿ.  ಅಂಧರು,  ಬ್ರೈನ್ ವಾಚ್, ವಾಟರ್ ಬೆಡ್, ಕ್ರಚ್ಚರ್ಸ್, ಸ್ಟಿಕ್, ವಾಕರ್, ಶ್ರವಣ  ಸಾಧನ ಸೌಲಭ್ಯಕ್ಕಾಗಿ ಹಾಗೂ ಹಿರಿಯ ನಾಗರಿಕರು ಸ್ಟಿಕ್ ಹಾಗೂ  ಕೇನ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು.
     ನಿಗದಿತ ಅರ್ಜಿ ನಮೂನೆಯನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪಡೆದು ಇತ್ತೀಚಿನ ಎರಡು ಭಾವಚಿತ್ರ, ಅಂಗವಿಕಲರ ಗುರುತಿನ ಚೀಟಿ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸ್ಥಳೀಯ ಸಂಸ್ಥೆಗಳಿಂದ ಸಾಧನ ಸಲಕರಣೆ ಪಡೆಯದಿರುವ ಬಗ್ಗೆ ದೃಢೀಕರಣ, ಸಕ್ಷಮ ಪ್ರಾಧಿಕಾರದಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರದ ದೃಢೀಕೃತ ಪ್ರತಿಯನ್ನು ಲಗತ್ತಿಸಿ ಅ.16 ರೊಳಗಾಗಿ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ದೂ.ಸಂ : 08539-220596 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment