Friday, 22 July 2016

ಕುಷ್ಟಗಿ ತಾಲೂಕು ಕ್ಯಾದಿಗುಪ್ಪ ಮತ್ತು ಮುದೇನೂರಿನಲ್ಲಿ ಕಲಾಜಾಥಾ ಯಶಸ್ವಿಕೊಪ್ಪಳ ಜು. 22 (ಕರ್ನಾಟಕ ವಾರ್ತೆ) : ಸರ್ಕಾರಿ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಲ್ಲಿ ಆಯೋಜಿಸಿರುವ ಕಲಾಜಾಥಾ ವಿಶೇಷ ಪ್ರಚಾರಾಂದೋಲನ ಅಂಗವಾಗಿ ಕುಷ್ಟಗಿ ತಾಲೂಕು ಕ್ಯಾದಿಗುಪ್ಪ ಮತ್ತು ಮುದೇನೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮ ಜನರ ಗಮನ ಸೆಳೆಯಿತು.
     ರಾಜ್ಯ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ  ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಮೈತ್ರಿ-ಮನಸ್ವಿನಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಜನಸಾಮಾನ್ಯರ ಶ್ರೇಯೋಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಜಾರಿಗೊಳಿಸಿದೆ.  ಈ ಯೋಜನೆಗಳ ಬಗ್ಗೆ  ಜಿಲ್ಲೆಯ ರಂಗಚೇತನ ಸಾಂಸ್ಕøತಿಕ ಕಲಾತಂಡದವರು ಕ್ಯಾದಿಗುಪ್ಪ ಮತ್ತು ಮುದೇನೂರು ಗ್ರಾಮಗಳಲ್ಲಿ ಜಾನಪದ ಗೀತೆಗಳ ಮೂಲಕ ಹಾಗೂ ಬೀದಿನಾಟಕಗಳ ಮೂಲಕ  ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸಿದ ಕಾರ್ಯಕ್ರಮ  ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಕಾರ್ಯಕ್ರಮವು ಜಿಲ್ಲೆಯಲ್ಲಿ ಆಗಸ್ಟ್ 06 ರವರೆಗೂ ಜಿಲ್ಲೆಯಾದ್ಯಂತ ಮುಂದುವರೆಯಲಿದ್ದು, ದಿನಕ್ಕೆ ಎರಡು ಗ್ರಾಮಗಳಂತೆ ಕಲಾಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ, ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದೆ.
Post a Comment