Saturday, 16 July 2016

ತಾವರಗೇರಾ: ಸರ್ವರಿಗೂ ಸೂರು ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು.16 (ಕರ್ನಾಟಕ ವಾರ್ತೆ) : ತಾವರಗೇರಾ ಪಟ್ಟಣ ಪಂಚಾಯತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹೌಸಿಂಗ್ ಫಾರ್ ಆಲ್ (ಸರ್ವರಿಗೂ ಸೂರು) ಯೋಜನೆಯಡಿ ಪ.ಜಾತಿ ಪ.ಪಂಗಡ ಹಾಗೂ ಇತರೆ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಸತಿ/ ನಿವೇಶನದ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ತಾವರಗೇರಾ ಪ.ಪಂಚಾಯತಿ ವ್ಯಾಪ್ತಿಯ ಪ.ಜಾತಿ ಪ.ಪಂಗಡ ಹಾಗೂ ಇತರೆ ಜನಾಂಗದ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಹಾಯ ಧನ/ ಸಾಲ ಸೌಲಭ್ಯ/ಸಬ್ಸಿಡಿ ನೆರವು ದೊರೆಯಲಿದೆ.  ಗುಡಿಸಲುವಾಸಿಗಳು, ತಾತ್ಕಾಲಿಕ ಶೆಡ್, ಶಿಥಿಲಗೊಂಡ ಮನೆ ಅಥವಾ ಕಚ್ಚಾ ಮನೆಗಳನ್ನು ಹೊಂದಿದವರಿಗೆ,  ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಸೌಲಭ್ಯ ದೊರೆಯಲಿದೆ. 
     ನಿವೇಶನ ರಹಿತ ಕುಟುಂಬಗಳಿಗೂ ಮನೆ ನಿರ್ಮಿಸಿಕೊಳ್ಳಲು ಸೌಲಭ್ಯ ಕಲ್ಪಿಸಲಾಗುವುದು.  ಈ ಯೋಜನೆಯಡಿ ಸೌಲಭ್ಯ ಪಡೆಯಲು, ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ರಾಜ್ಯದ ಯಾವುದೇ ಪ್ರದೇಶದಲ್ಲಿ ಸ್ವಂತ ಮನೆ ಹೊಂದಿರಬಾರದು.
     ಅರ್ಜಿಯೊಂದಿಗೆ ಪಟ್ಟಣ ಪಂಚಾಯತ ಉತಾರ (ವಸತಿ ರಹಿತ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು.
     ಅರ್ಜಿಯೊಂದಿಗೆ ನಿಗದಿಪಡಿಸಿದ ದಾಖಲಾತಿಗಳನ್ನು ಲಗತ್ತಿಸಬೇಕು. ಅಪೂರ್ಣ ಮತ್ತು ಅವಧಿ ಮೀರಿಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸಾಲವನ್ನು ಬ್ಯಾಂಕುಗಳ ವ್ಯವಸ್ಥಾಪಕರು ಮಂಜೂರು ಮಾಡುವುದರಿಂದ ಫಲಾನುಭವಿಯ ಆಯ್ಕೆ ಬ್ಯಾಂಕ್ ವ್ಯವಸ್ಥಾಪಕರ ವಿವೇಚನೆಗೆ ಬಿಡಲಾಗಿರುತ್ತದೆ.   
     ನಿಗದಿತ ಅರ್ಜಿ ನಮೂನೆಯನ್ನು ಪಟ್ಟಣ ಪಂಚಾಯತಿ, ತಾವರಗೇರಾ ಇಲ್ಲಿ ಪಡೆದು ಭರ್ತಿ ಮಾಡಿ ಜು.25 ರೊಳಗಾಗಿ ಸಲ್ಲಿಸಬಹುದು ಎಂದು ತಾವರಗೇರಾ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment