Friday, 22 July 2016

ತಮಾಷಾ ನಾಟಕ ಪ್ರದರ್ಶನಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ

ಕೊಪ್ಪಳ ಜು,20 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಡಿಯಲ್ಲಿ ನಿರ್ಮಿಸಲಾಗುವ ಜಾನಪದ ರಂಗಪ್ರಯೋಗ ‘ತಮಾಷಾ’ ನಾಟಕಕ್ಕೆ ಸ್ತ್ರೀ ಮತ್ತು ಪುರುಷ ಕಲಾವಿದರು ತಮ್ಮ ರಂಗಾನುಭವದೊಂದಿಗೆ ಅರ್ಜಿಯನ್ನು ಹಾಕಲು ಕೋರಲಾಗಿದೆ.
ನಾಟಕದ ತಾಲೀಮು ಧಾರವಾಡದಲ್ಲಿ ಅಂದಾಜು 25 ದಿನಗಳವರೆಗೆ ನಡೆಯುವುದು. ತದನಂತರ ನಾಟಕದ ಪ್ರಯೋಗಗಳು. 25 ರಿಂದ 30 ವಯೋಮಾನದ 4 ಮಹಿಳಾ ಕಲಾವಿದೆಯರು ಮತ್ತು 8 ಜನ ಪುರುಷ ಕಲಾವಿದರು, ತಲಾ ಒಬ್ಬರು ಹಾಡು ಮತ್ತು ಸಂಗೀತಗಾರರು, ಒಬ್ಬರು ಧ್ವನಿ ಬೆಳಕಿನ ನಿರ್ವಾಹಕರು ಹಾಗೂ ಒಬ್ಬರು ರಂಗಾನುಭವದೊಂದಿಗೆ ಮ್ಯಾನೇಜರ್‍ರು ಅರ್ಜಿ ಹಾಕಬಹುದು. ಪ್ರತಿದಿನ ಭತ್ಯೆ ಮತ್ತು ಊಟ, ವಸತಿ ನೀಡಿ ರಂಗತಾಲೀಮು ನೀಡಲಾಗುವುದು. ಆಯ್ಕೆ ಪ್ರಕ್ರಿಯೆ ಧಾರವಾಡದಲ್ಲಿ ನಡೆಯುವುದು.  ಆಯ್ಕೆಯ ಸಂದರ್ಶನಕ್ಕೆ ತಮ್ಮ ಖರ್ಚಿನಲ್ಲಿ ಬರಬೇಕು.

ಎನ್.ಎಸ್.ಡಿ ಸೇರಿದಂತೆ ಕರ್ನಾಟಕದ ಪ್ರಮುಖ ರಂಗಶಾಲೆಗಳಲ್ಲಿ ತರಬೇತಿ ಹೊಂದಿದ, ತತ್ಸಮ ಪದವಿ ಪಡೆದ ಅನುಭವಿ ಕಲಾವಿದರು ಈ ಮೇಲಿನ ವಯೋಮಿತಿ ಉಳ್ಳವರಾಗಿರಬೇಕು. ಹಾಗೂ ಸ್ತ್ರೀ ಕಲಾವಿದರು ನೃತ್ಯ ಬಲ್ಲವರಾಗಿದ್ದರೆ ಆದ್ಯತೆ ನೀಡಲಾಗುವುದು. ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಕಲಾವಿದರ ಪರಿಚಯ, eನ್ಮ ದಿನಾಂಕ, ರಂಗಾನುಭವ, ಮೊಬೈಲ್ ಸಂಖ್ಯೆ, ಈ ಮೇಲ್, ಅಂಚೆವಿಳಾಸ ಹಾಗೂ ಇತರ ಮಾಹಿತಿಯ ವಿವರಗಳೊಂದಿಗೆ ಇದೇ ಜುಲೈ 31, 2016 ರ ಒಳಗೆ ಡಾ.ಡಿ.ಎಸ್.ಚೌಗಲೆ ಸಂಚಾಲಕರು, ಪ್ಲಾಟ್ ನಂ:716, ‘ಚೌರಂಗ’ ರಾಮತೀರ್ಥನಗರ, ಬೆಳಗಾವಿ-590015 ಈ ವಿಳಾಸಕ್ಕೆ ಅರ್ಜಿಯನ್ನು ಹಾಕಬಹುದು. ಈಮೇಲ್- chouranga@gmail.com  ಗೆ ಡಿಟಿಪಿ ಮಾಡಿಸಿ ಮೇಲ್ ಮಾಡಬಹುದು.  ಹೆಚ್ಚಿನ ಮಾಹಿತಿಗಾಗಿ  ಮೊ: 9448231748 ಸಂಖ್ಯೆಗೆ ಕರೆಮಾಡಬಹುದೆಂದು ಪ್ರಕಟಣೆ ತಿಳಿಸಿದೆ.
Post a Comment