Friday, 15 July 2016

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನ

ಕೊಪ್ಪಳ ಜು. 15 (ಕರ್ನಾಟಕ ವಾರ್ತೆ): ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು, ಇಚ್ಛೆ ಹೊಂದಿರುವವರು ತಮ್ಮ ಇಚ್ಛಾಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಬಹುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
     ಸರ್ಕಾರದ ಜಂಟಿ ಕಾರ್ಯದರ್ಶಿ ದರ್ಜೆ ಹುದ್ದೆಗಿಂತ ಕಡಿಮೆ ಅಲ್ಲದ ದರ್ಜೆಯ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಅಧಿಕಾರಿಗಳು ಮಾತ್ರ ತಮ್ಮ ಇಚ್ಛಾಪತ್ರವನ್ನು ಸಲ್ಲಿಸಬಹುದಾಗಿದೆ. ಆಸಕ್ತರು ಇಚ್ಛಾಪತ್ರವನ್ನು ಇ-ಮೇಲ್- ವಿಳಾಸ  deo.koppal@gmail.com ವಿಳಾಸಕ್ಕೆ ಜುಲೈ 22 ರ ಒಳಗಾಗಿ ಕಳುಹಿಸಿಕೊಡಬೇಕು.  ಹೆಚ್ಚಿನ ಮಾಹಿತಿಗೆ 08539-220844 ಕ್ಕೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment