Monday, 18 July 2016

ಗಂಗಾವತಿ : ಸರ್ವರಿಗೂ ಸೂರು ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ಜು.18 (ಕರ್ನಾಟಕ ವಾರ್ತೆ) :  ಗಂಗಾವತಿ ನಗರಸಭೆ ವ್ಯಾಪ್ತಿಯ ಕೊಳಚೇತರ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಸರ್ವರಿಗೂ ಸೂರು ಯೋಜನೆಯಡಿ ಬೇಡಿಕೆ ಸಮೀಕ್ಷೆಗಾಗಿ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮಾರ್ಗದರ್ಶನದಲ್ಲಿ ಗಂಗಾವತಿ ನಗರಸಭೆ ವ್ಯಾಪ್ತಿಯ ಕೊಳಚೇತರ ಪ್ರದೇಶಗಳಲ್ಲಿ (ಕೊಳಚೆ ಪ್ರದೇಶ ಹೊರತುಪಡಿಸಿ) ವಾಸಿಸುವ ಪ್ರದೇಶಗಳ ಬೇಡಿಕೆ ಸಮೀಕ್ಷೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
    ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‍ನಿಂದ ಸಾಲ ಪಡೆದಲ್ಲಿ ಶೇ.6 ರಷ್ಟು ಬಡ್ಡಿ ರಿಯಾಯತಿ ನೀಡಲಾಗುವುದು. ಆಫಾರ್ಡಬಲ್ ಹೌಸಿಂಗ್ ಇನ್ ಪಾರ್ಟನರ್‍ಶಿಪ್‍ನಲ್ಲಿ ಖಾಸಗಿ ಸಂಸ್ಥೆಯೊಡನೆ ಭೂಮಿ, ಕಟ್ಟಡ ಪಾಲುದಾರಿಕೆ ಯೋಜನೆಂiÀiಡಿ ಸೌಲಭ್ಯ ಕಲ್ಪಿಸಲಾಗುವುದು. ಸ್ವತಃ ಫಲಾನುಭವಿಯೇ ತನ್ನ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.1. 5 ಲಕ್ಷ ಹಾಗೂ ಪ.ಜಾತಿ ಪ.ಪಂಗಡದ ಅಭ್ಯರ್ಥಿಗಳಿಗೆ ರೂ.1. 80 ಲಕ್ಷ ಸಬ್ಸಿಡಿ ನೀಡಲಾಗುವುದು.
    ಅರ್ಜಿ ಸಲ್ಲಿಸುವವರು ಗಂಗಾವತಿ ನಗರಸಭೆ ವ್ಯಾಪ್ತಿಯ ಕೊಳಚೇತರ ಪ್ರದೇಶದ ನಿವಾಸಿಯಾಗಿರಬೇಕು. ದೇಶದ ಯಾವುದೇ ಪ್ರದೇಶದಲ್ಲಿ ಮನೆ ಹೊಂದಿರಬಾರದು. ಈಗಾಗಲೇ ಸರ್ಕಾರದ ಇತರೆ ಯಾವುದೇ ಯೋಜನೆಗಳಲ್ಲಿ ವಸತಿ ಸಂಬಂಧಿತ ಸೌಲಭ್ಯ ಪಡೆದಿರಬಾರದು. ತಪ್ಪು ಮಾಹಿತಿ ನೀಡಿದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ನಗರಸಭೆ ಕಾರ್ಯಾಲಯದಲ್ಲಿ ಪಡೆದು ಭರ್ತಿ ಮಾಡಿ ಭಾವಚಿತ್ರ, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,  ಪಡಿತರ ಚೀಟಿ ಹಾಗೂ ನಿವೇಶನ ಸಂಬಂಧಿತ ದಾಖಲಾತಿಗಳ ದೃಢೀಕೃತ ನಕಲು ಪ್ರತಿಗಳೊಂದಿಗೆ ಜು.30 ರೊಳಗಾಗಿ ಕಾರ್ಯಾಲಕ್ಕೆ ಸಲ್ಲಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment