Friday, 22 July 2016

ವಿಶೇಷ ನ್ಯೂನತೆವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ

ಕೊಪ್ಪಳ ಜು.22 (ಕರ್ನಾಟಕ ವಾರ್ತೆ) : ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನದಡಿ ವಿಶೇಷ ನ್ಯೂನತೆವುಳ್ಳ ಮಕ್ಕಳಿಗೆ ಪ್ರಸಕ್ತ ಸಾಲಿನ ತಾಲೂಕ ಮಟ್ಟದ ವೈದ್ಯಕೀಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
     ತಪಾಸಣಾ ಶಿಬಿರ ಅ. 1 ರಿಂದ 4 ರವರೆಗೆ ಪ್ರತಿದಿನ ಒಂದು ತಾಲೂಕಿನಲ್ಲಿ ನಡೆಯಲಿದೆ.  ಅ. 01 ರಂದು ಸ.ಮಾ.ಹಿ ಪಾಥಮಿಕ ಶಾಲೆ ಗಂಗಾವತಿ. ಅ 02 ರಂದು ಸ.ಹಿ.ಪ್ರಾಥಮಿಕ ಶಾಲೆ ಕುಷ್ಟಗಿ.  ಅ.03 ರಂದು ಬಿ ಆರ್ ಸಿ ಕೇಂದ್ರ ಯಲಬುರ್ಗಾ. ಅ.04 ರಂದು ಸ.ಹಿ.ಪ್ರಾಥಮಿಕ ಶಾಲೆ ಸರ್ದಾರಗಲ್ಲಿ ಕೊಪ್ಪಳ ಇಲ್ಲಿ ವೈದ್ಯಕೀಯ ಶಿಬಿರ ನಡೆಯಲಿದೆ.
     ಆಯಾ ತಾಲೂಕಿನ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಾಖಲಾಗಿರುವ ವಿಶೇಷ ನ್ಯೂನತೆವುಳ್ಳ ಶೇ.40 ಕ್ಕಿಂತ ಹೆಚ್ಚಿನ ನ್ಯೂನ್ಯತೆ ಹೊಂದಿದ ಮಕ್ಕಳನ್ನು ಸಂಬಂಧಿಸಿದ ಸಿ.ಆರ್.ಪಿ, ಐ.ಇ.ಆರ್.ಟಿಗಳು ಹಾಗೂ ವಿಶೇಷ ಶಿಕ್ಷಕರು, ನಿಗದಿಪಡಿಸಿದ ಸ್ಥಳದಲ್ಲಿ ಜರುಗುವ ವೈದ್ಯಕೀಯ ಶಿಬಿರಕ್ಕೆ ಕರೆತರಬೇಕು. ಹಾಗೂ ನಿಗದಿತ ದಿನಾಂಕಗಳಂದು ಸಂಬಂಧಿಸಿದ ಬಿ.ಇ.ಓ/ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿಗಳು, ಐ.ಇ.ಆರ್.ಟಿಗಳು ಹಾಗೂ ವಿಶೇಷ ಶಿಕ್ಷಕರು ಶಿಬಿರದಲ್ಲಿ ಹಾಜರಿರಬೇಕು. ವಿಶೇಷ ಅಗತ್ಯತೆವುಳ್ಳ ಮಕ್ಕಳ ಪಾಲಕರು ಮಕ್ಕಳೊಂದಿಗೆ ಶಿಬಿರಕ್ಕೆ ಹಾಜರಾಗಿ ಪ್ರಯೋಜನೆ ಪಡೆದುಕೊಳ್ಳುವಂತೆ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ ಕೊಪ್ಪಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment