Thursday, 21 July 2016

ತಾಯಿ-ಮಗುವಿನ ರಕ್ಷಣೆಗಾಗಿ ಜನನಿ ಸುರಕ್ಷಾ ಅಭಿಯಾನದ ಸಹಾಯವಾಣಿ


ಕೊಪ್ಪಳ ಜುಲೈ 21 (ಕ.ವಾ) : ಕೊಪ್ಪಳ ಜಿಲ್ಲೆಯು ತಾಯಿ ಮತ್ತು ಶಿಶು ಮರಣ ಮುಕ್ತ ಜಿಲ್ಲೆಯಾಗಬೇಕೆಂಬ ಗುರಿಯನ್ನಿಟ್ಟುಕೊಂಡು ಜನನಿ ಸುರಕ್ಷಾ ಅಭಿಯಾನದ ಜಿಲ್ಲಾ ಘಟಕವು ಜಿಲ್ಲೆಯಲ್ಲಿ ರಕ್ತದಾನಿಗಳ ಸೇನೆಯನ್ನು ಹುಟ್ಟುಹಾಕಿರುವುದಲ್ಲದೆ, ಸಹಾಯವಾಣಿಯನ್ನು ಸಹ ಸ್ಥಾಪಿಸಿ ನಿರ್ವಹಣೆ ಮಾಡಲಾಗುತ್ತಿದ್ದು, ಈವರೆಗೆ 764 ತಾಯಿ ಹಾಗೂ ಶಿಶುವಿನ ರಕ್ಷಣೆಗೆ ಸಕಾಲದಲ್ಲಿ ರಕ್ತ ದೊರಕಿಸಿಕೊಟ್ಟು, ಮಹತ್ವದ ಕಾರ್ಯ ನಿರ್ವಹಿಸಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.

     ಕೊಪ್ಪಳ ಜಿಲ್ಲೆಯ ಜನನಿ ಸುರಕ್ಷಾ ಅಭಿಯಾನ ಜಿಲ್ಲಾ ಘಟಕದ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದು,  ಕೊಪ್ಪಳ ಜಿಲ್ಲೆಯಲ್ಲಿ ತಾಯಿ ಮಗುವಿನ ಜೀವ ರಕ್ಷಣೆಯಲ್ಲಿ 2012ರಿಂದಲೂ ಸೇವಾ ನಿರತವಾಗಿರುವ ಜನನಿ ಸುರಕ್ಷಾ ಅಭಿಯಾನದÀ ಜಿಲ್ಲಾ ಘಟಕವು ಸಮೂಹ ಸಂಸ್ಥೆಯ ಸಹಯೋಗದೊಂದಿಗೆ ಈವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಗರ್ಭಿಣಿ, ಬಾಣಂತಿ ಮತ್ತು ಮಗುವಿನ ಜೀವ ರಕ್ಷಣೆಗಾಗಿ ರಕ್ತದ ಬೇಡಿಕೆಗಾಗಿ ಸಮೂಹ ಸಹಾಯವಾಣಿ 9480887861 ಸ್ಥಾಪಿಸಿದ್ದು, ಈವರೆಗೆ 800 ಕ್ಕೂ ಹೆಚ್ಚು ಕರೆ ಬಂದಿರುವದು ದಾಖಲಾಗಿದೆ. 764 ಜನರಿಗೆ ರಕ್ತದ ವ್ಯವಸ್ಥೆ ಮಾಡುವ ಮೂಲಕ ಜೀವ ರಕ್ಷಿಸಿದ ಅಭೂತಪೂರ್ವ ಸಾಧನೆಗೈದಿದೆ.  ಇದುವರೆಗೆ 12 ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, 360 ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿ, ಅಗತ್ಯವಿರುವವರಿಗೆ ಪೂರೈಸಲಾಗಿದೆ.


            ಜನನಿ ಸುರಕ್ಷಾ ಅಭಿಯಾನ ಕಾರ್ಯಕ್ರಮವು ಜಿಲ್ಲೆಯ ತಾಯಿ ಮತ್ತು ಶಿಶು ಮರಣ, ಅಪೌಷ್ಠಿಕ ಮಕ್ಕಳ ಇಳಿಕೆ, ಸುರಕ್ಷಿತ ಹೆರಿಗೆ ಮತ್ತುಪ್ರತಿ ಶಿಶುವಿಗೆ ಲಸಿಕೆ ಸಿಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿದಿನ ಜಿಲ್ಲೆಯಲ್ಲಿ ಆಗುತ್ತಿರುವ ತಾಯಿ ಮತ್ತು ಶಿಶು ಮರಣಗಳನ್ನು ತಡೆಯಲು ಅಭಿಯಾನವು 3 ಪ್ರಮುಖ ಸಮಸ್ಯೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ರಕ್ತಯಿನತೆಯಿಂದ ಬಳಲುವ ಗರ್ಭಿಣಿ - ಬಾಣಂತಿಯರು, ಬಾಲ್ಯವಿವಾಹ ತಡೆಯುವುದು ಹಾಗೂ ವೈದ್ಯಕೀಯ ಸೇವೆಗಳು ಸಿಗುವಂತೆ ಸಮುದಾಯದ ಮಧ್ಯ ಕೆಲಸ ಮಾಡುವುದು.  ಜಿಲ್ಲೆಯಲ್ಲಿ ಸಂಭವಿಸುವ ಗರ್ಭಿಣಿಯರ ಸಾವು, ಶಿಶು ಮರಣ, ಅಪೌಷ್ಠಿಕ ಮಕ್ಕಳ ಮರಣ ಗಣನೀಯವಾಗಿ ಸಂಭವಿಸುತ್ತಿದ್ದು. ಇಂತಹ ಘಟನೆಗಳನ್ನೆ ಆಧಾರವಾಗಿಟ್ಟುಕೊಂಡು ಕೊಪ್ಪಳ ಜಿಲ್ಲಾಡಳಿತ ಮತ್ತು ಸಮೂಹ ಜಂಟಿಯಾಗಿ ಅನುಷ್ಠಾನ ಮಾಡುತ್ತಿವೆ.  ಗರ್ಭಿಣಿಯರಿಗೆ ರಕ್ತಹೀನತೆ ಇದ್ದಾಗ, ಬಾಣಂತಿಗೆ ರಕ್ತಸ್ರಾವ ಆಗಿ, ಸಾವು ಬದುಕಿನ ಮಧ್ಯೆ ಹೋರಾಟzಲ್ಲಿ ಜಯ ಸಾಧಿಸಲು ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಮಯದಲ್ಲಿ ಜನನಿ ಸುರಕ್ಷಾ ಅಭಿಯಾನದ ಸಹಾಯವಾಣಿ 9480887861 ಕ್ಕೆ ಕರೆ ಮಾಡಿದರೆ, ಜಿಲ್ಲೆಯ ರಕ್ತಭಂಡಾರ ಮತ್ತು ಈಗಾಗಲೆ ಹೆಸರು ನೊಂದಾಯಿಸಿರುವ ರಕ್ತದಾನಿಗಳಿಗೆ ಸಮೂಹ ಸಹಾಯವಾಣಿಯಿಂದ ತುರ್ತಾಗಿ ರಕ್ತ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.  
       ಅಭಿಯಾನವು ರಕ್ತದ ವ್ಯವಸ್ಥೆಯ ಜೊತೆಗ ರಕ್ತದಾನಿಗಳಿಗೆ ಸನ್ಮಾನ, ಗರ್ಭಿಣಿಯರಿಗೆ ಸೀಮಂತ, ಪೌಷ್ಟಿಕ ಆಹಾರ ಶಿಬಿರ, ಯುವತಿಯರಿಗೆ ರಂಗೋಲಿ ಸ್ಪರ್ಧೆ, ಮಹಿಳೆಯರಿಗೆ ಸ್ವಸಹಾಯ ಗುಂಪುಗಳ ರಚನೆ ಹಾಗೂ ಮಹಿಳಾ ಮತ್ತು ಪರಿಸರ ದಿನಚರಣೆ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮವು  ಜಿಲ್ಲೆಯ ಜನ ಪ್ರತಿನಿಧಿಗಳು, ರಕ್ತ ಭಂಡಾರ ಘಟಕ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತಿ, ಯುವಕ ಸಂಘಗಳು, ಗ್ರಾಮೀಣ ಸಮುದಾಯ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಹಕಾರದಿಂದ ಜಿಲ್ಲೆಯಲ್ಲಿ ಯಶಸ್ವಿಯ ಹಾದಿಯಲ್ಲಿ ನಡೆದಿದೆ.
       ಈ ಪ್ರಯತ್ನವನ್ನು ಬಲಗೊಳಿಸಲು ಜಿಲ್ಲೆಯಲ್ಲಿ ಜನನಿ ಸುರಕ್ಷಾ ಅಭಿಯಾನದ ಪ್ರಗತಿಯಿಂದ ಕಳೆದ ಜೂನ್ ತಿಂಗಳಿನಲ್ಲಿ “ಕೊಪ್ಪಳ ಜಿಲ್ಲಾ ರಕ್ತದಾನಿಗಳ ವೇದಿಕೆ”ಎಂಬ ಸಂಘಟನೆ ರಚಿನೆಯಾಗಿದ್ದು, ಅಪಾಯದ ಅಂಚಿನಲ್ಲಿರುವ ತಾಯಿ - ಮಗುವಿನ ಜೀವ ಉಳಿಸಲು ತುರ್ತು ಸಂದರ್ಭದಲ್ಲಿ ರಕ್ತ ದೊರೆಯುವಂತೆ ಸಮಾಜಮುಖಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ತಾಯಿ ಮಗುವಿನ ರಕ್ಷಣೆಯಲ್ಲಿ ಸರ್ಕಾರದ ಜವಾಬ್ದಾರಿಯ ಜೊತೆಗೆÉ ಸಮುದಾಯದ ಜವಾಬ್ದಾರಿಯು ಸಹ ಮುಖ್ಯವಾಗಿದೆ ಎನ್ನುತ್ತಾರೆ ಜನನಿ ಸುರಕ್ಷಾ ಅಭಿಯಾನದ ಜಿಲ್ಲಾ ಸಂಚಾಲಕರುಗಳಾದ ಉಮೇಶ ಬೆಳದಡಿ ಹಾಗೂ ಎಂ. ಜಯಂತಿ ಅವರು.
Post a Comment