Wednesday, 20 July 2016

ಜು.21 ರಂದು ಮಾನಸಿಕ ಅಸ್ವಸ್ಥ್ಯತೆ ಕುರಿತು ಕಾನೂನು ಕಾರ್ಯಾಗಾರ

ಕೊಪ್ಪಳ, ಜು.20 (ಕರ್ನಾಟಕ ವಾರ್ತೆ) : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾನಸಿಕ ಅಸ್ವಸ್ತ ರೋಗಿಗಳ ಕುರಿತ ಒಂದು ದಿನದ ಕಾನೂನು ಕಾರ್ಯಾಗಾರ ಜು.21 ರಂದು ಬೆಳಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
    ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಅಧ್ಯಕ್ಷರಾದ ವಿಜಯಲಕ್ಷ್ಮಿ ಎಸ್ ಉಪನಾಳ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀಕಾಂತ ಬಾಸೂರು ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ, ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಲಕ್ಷ್ಮಿನಾರಾಯಣರಾವ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಎಸ್.ಕೆ. ದೇಸಾಯಿ,  ತಹಸೀಲ್ದಾರ ಪುಟ್ಟರಾಮಯ್ಯ, ಜಿಲ್ಲಾ ಸರ್ಕಾರಿ ವಕೀಲ ಅಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ ಪಾನಘಂಟಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಯು.ಎ. ಮಾಳೇಕೊಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಕಾರ್ಯಗಾರದ ಅಂಗವಾಗಿ ಜಿಲ್ಲಾ ಆಸ್ಪತ್ರೆ ಮಾನಸಿಕ ತಜ್ಞ ಡಾ. ಕೃಷ್ಣ ಓಂಕಾರ ಅವರು ಮಾನಸಿಕ ಅಸ್ವಸ್ಥ ರೋಗಿಗಳ ಚಿಕಿತ್ಸೆ ಕುರಿತು.  ವಕೀಲರಾದ ಗಾಯತ್ರಿ ಆರ್ ಕಠಾರೆ ಅವರು ಮಾನಸಿಕ ಅಸ್ವಸ್ಥತೆ ಮತ್ತು ವಿಕಲತೆ ಮನೋ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಗೂ ಬಂದಿಖಾನೆಯಲ್ಲಿ ಕಾನೂನು ನೆರವು ದೊರೆಯುವ ಕುರಿತು ಹಾಗೂ ಎಂ.ಹನುಮಂತರಾವ್ ಅವರು ನಿರ್ಗತಿಯುಳ್ಳ ಅಲೆಮಾರಿ ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಕಾನೂನು ಸೌಲಭ್ಯ ಕುರಿತು ವಿಶೇಷ ಉಪನ್ಯಾನ ನೀಡುವರು.
Post a Comment