Thursday, 30 June 2016

ರೈಲ್ವೆ ಹಾಗೂ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರಾರಂಭಕ್ಕೆ ಚಿಂತನೆ- ಬಸವರಾಜ ರಾಯರಡ್ಡಿ

ಕೊಪ್ಪಳ ಜೂ. 30 (ಕರ್ನಾಟಕ ವಾರ್ತೆ): ರಾಜ್ಯದ ಆಯ್ದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಹಾಗೂ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಚಿಂತನೆ ನಡೆದಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಸಹಕಾರ ಕೋರಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
     ರಾಜ್ಯದಲ್ಲಿ ಬಹಳಷ್ಟು ರೈಲ್ವೆ ಯೋಜನೆಗಳು ಜಾರಿಯಲ್ಲಿವೆ.  ಆದರೆ ಇದಕ್ಕಾಗಿ ಅಗತ್ಯವಿರುವ ರೈಲ್ವೆ ಇಂಜಿನಿಯರ್‍ಗಳು ನಮಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ.  ಅದೇ ರೀತಿ ರಾಜ್ಯದಲ್ಲಿ ವೈಮಾನಿಕ ಕ್ಷೇತ್ರ ವ್ಯಾಪಕವಾಗಿ ಅಭಿವೃದ್ಧಿಯಾಗುತ್ತಿದೆ.  ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣಗೊಂಡು, ವಿಮಾನಗಳ ಸಂಚಾರವೂ ಹೆಚ್ಚಾಗುವುದರಿಂದ ಪೈಲಟ್‍ಗಳ ಬೇಡಿಕೆಯೂ ಹೆಚ್ಚಾಗಲಿದೆ.  ಇದನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ರಾಜ್ಯದ ಆಯ್ದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಹಾಗೂ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್ ಅನ್ನು ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಗಂಭೀರ ಚಿಂತನೆ ನಡೆದಿದೆ.  ಇದಕ್ಕಾಗಿ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಾಗಿದ್ದು, ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರನ್ನು ಖುದ್ದು ಭೇಟಿಯಾಗಿ, ಅವರ ಸಹಕಾರ ಕೋರಲಾಗುವುದು.  ರೈಲ್ವೆ ಸಚಿವರು ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆಂಬ ವಿಶ್ವಾಸ ತಮಗಿದೆ.  ಅದೇ ರೀತಿ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್ ಅನ್ನು ಬೆಂಗಳೂರಿನಲ್ಲಿಯೇ ಪ್ರಾರಂಭಿಸುವ ಯೋಜನೆ ಇದೆ.  ಅಂತರರಾಷ್ಟ್ರೀಯ ಗುಣಮಟ್ಟದ ಸ್ಕೂಲ್ ಆಫ್ ಎಕನಾಮಿಕ್ಸ್ ಇದುವರೆಗೂ ನಮ್ಮ ರಾಜ್ಯದಲ್ಲಿ ಇಲ್ಲ,  ಇದೀಗ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
      ರಾಜ್ಯದಲ್ಲಿ ಒಟ್ಟು 23 ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಕನಿಷ್ಟ 02 ದಿನಗಳ ಶೃಂಗಸಭೆ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಜುಲೈ 04 ರಂದು ರಾಜ್ಯಪಾಲರನ್ನು ಭೇಟಿಯಾಗಿ ಆಹ್ವಾನಿಸಲಾಗುವುದು.  ಗುಣಮಟ್ಟದ ಶಿಕ್ಷಣ, ವಿವಿಗಳ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ಸೌಲಭ್ಯ ಮುಂತಾದ ವಿಷಯಗಳ ಕುರಿತು ಶೃಂಗಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
      ರಾಜ್ಯದ ಬಹಳಷ್ಟು ಪದವಿ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರು ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವಲ್ಲಿ ತೊಂದರೆ ಉಂಟಾಗಿದೆ.  ಅತಿಥಿ ಉಪನ್ಯಾಸಕರುಗಳಿಗೆ ಸಂಬಂಧಿಸಿದಂತೆ ಕಾನೂನಿನ ಚೌಕಟ್ಟಿನಲ್ಲಿ ಮಾನವೀಯತೆಯ ದೃಷ್ಟಿಯಿಂದ ಯಾವ ರೀತಿ ಸಹಾಯ ಮಾಡಬಹುದು ಎನ್ನುವುದನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ. ನಾಗರಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೃಷಿಹೊಂಡ ಫಲಾನುಭವಿಗಳ ಆಯ್ಕೆ ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಬೇಕು- ಬಸವರಾಜ ರಾಯರಡ್ಡಿ

ಕೊಪ್ಪಳ ಜೂ. 30 (ಕರ್ನಾಟಕ ವಾರ್ತೆ): ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕೃಷಿ ಭಾಗ್ಯ ಯೋಜನೆಯಡಿ, ಕೃಷಿಕರ ಪಾಲಿಗೆ ವರದಾನವಾಗಿರುವ ಕೃಷಿ ಹೊಂಡಗಳ ಫಲಾನುಭವಿಗಳ ಆಯ್ಕೆಯನ್ನು ಜುಲೈ 31 ರೊಳಗೆ ಅಂತಿಮಗೊಳಿಸಿ, ಕೃಷಿ ಹೊಂಡಗಳ ನಿರ್ಮಾಣ ಪ್ರಾರಂಭವಾಗಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
              ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೊದಲ ಬಾರಿಗೆ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಗುರುವಾರದಂದು ನಡೆಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
       ಕೊಪ್ಪಳ ಜಿಲ್ಲೆಯ ಹೆಚ್ಚಿನ ರೈತರು ಮಳೆ ಆಶ್ರಿತ ಕೃಷಿಯನ್ನು ಅವಲಂಬಿಸಿದ್ದು, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳು ರೈತರ ಪಾಲಿಗೆ ವರದಾನವಾಗಿವೆ.  ಜಿಲ್ಲೆಯಲ್ಲಿ ಇಲ್ಲಿಯವರೆಗೆ 3432 ಕೃಷಿಹೊಂಡ ಕಾಮಗಾರಿಗಳು ಪೂರ್ಣಗೊಂಡಿದ್ದು, ಇತ್ತೀಚಿನ ಉತ್ತಮ ಮಳೆಯಿಂದ ಕೃಷಿಹೊಂಡಗಳು ತುಂಬಿ ರೈತರಿಗೆ ಹರ್ಷ ಮೂಡಿಸಿವೆ.  ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಖುಷ್ಕಿ ಪ್ರದೇಶವನ್ನು ಹೊಂದಿದ್ದು, ಮಳೆಯನ್ನೇ ಆಶ್ರಯಿಸಿ, ಕೃಷಿ ನಡೆಸುತ್ತಿದ್ದಾರೆ.  ಇಂತಹ ರೈತರನ್ನು ಗುರಿಯಾಗಿಟ್ಟುಕೊಂಡೇ, ಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಿದೆ.  ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕಿನ ಕನಕಗಿರಿ ಭಾಗದ ಪ್ರದೇಶಗಳ ರೈತರು ಮಳೆಯನ್ನೇ ಆಶ್ರಯಿಸಿದ್ದಾರೆ.  ಈ ಭಾಗಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಹೊಂಡಗಳನ್ನು ಮಂಜೂರು ಮಾಡಬೇಕಿದೆ.  ಪ್ರಸಕ್ತ ಸಾಲಿಗೆ ಸರ್ಕಾರ ಕೊಪ್ಪಳ ಜಿಲ್ಲೆಗೆ ನೀಡಿರುವ ಕೃಷಿ ಹೊಂಡಗಳ ಗುರಿಯ ಜೊತೆಗೆ ಹೆಚ್ಚುವರಿಯಾಗಿ ಹೆಚ್ಚು ಕೃಷಿ ಹೊಂಡಗಳನ್ನು ಮಂಜೂರು ಮಾಡಲು ಅಗತ್ಯ ಪ್ರಸ್ತಾವನೆಯನ್ನು ತಯಾರಿಸಿ, ಸಲ್ಲಿಸಿದಲ್ಲಿ, ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸಲಾಗುವುದು.  ಪ್ರಸಕ್ತ ವರ್ಷದ ಕೃಷಿ ಹೊಂಡಗಳ ಫಲಾನುಭವಿಗಳ ಆಯ್ಕೆ ಪಟ್ಟಿ ಜುಲೈ ತಿಂಗಳ ಅಂತ್ಯದೊಳಗೆ ಅಂತಿಮಗೊಳ್ಳಬೇಕು.  ಮಂಜೂರಾದ ಕೃಷಿ ಹೊಂಡಗಳು ಆಗಸ್ಟ್ 15 ರೊಳಗೆ ನಿರ್ಮಾಣಕಾರ್ಯ ಪೂರ್ಣಗೊಳ್ಳಬೇಕು.  ಆಗಸ್ಟ್ ತಿಂಗಳಿನಲ್ಲಿಯೂ ಉತ್ತಮ ಮಳೆಯಾಗುವುದರಿಂದ, ಆಗಸ್ಟ್ ಅಂತ್ಯದೊಳಗಾಗಿ ಎಲ್ಲ ಕೃಷಿ ಹೊಂಡಗಳು ತುಂಬುವಂತಾಗಬೇಕು.  ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು.  ಕೃಷಿ ಇಲಾಖೆಯ ಜಂಟಿಕೃಷಿ ನಿರ್ದೇಶಕರಿಂದ ಮೊದಲುಗೊಂಡು, ಕೃಷಿ ಇಲಾಖೆಯ ಎಲ್ಲ ಅಧಿಕಾರಿಗಳು ನಿತ್ಯ, ರೈತರ ಹೊಲಗಳಿಗೆ ಭೇಟಿ ನೀಡಬೇಕು.  ಹೀಗಾದಾಗ ಮಾತ್ರ ರೈತರ ನಿಜವಾದ ಸಮಸ್ಯೆಗಳು ಅರಿವಿಗೆ ಬರಲಿದೆ.  ಕೃಷಿಯ ಸಾಧಕ-ಬಾಧಕಗಳ ಬಗ್ಗೆ ಕೃಷಿ ತಜ್ಞರು ಹಾಗೂ ಆಯ್ದ ಪ್ರಗತಿಪರ ರೈತರೊಂದಿಗೆ ವಿಶೇಷ ವಿಚಾರಸಂಕಿರಣವನ್ನು ಆಯೋಜಿಸಬೇಕು.  ಇದರಿಂದ ಹೊಸ ಹೊಸ ರೈತೋಪಯೋಗಿ ವಿಷಯಗಳು ಹೊರಬರಲು ಸಾಧ್ಯ ಎಂದು ಕೃಷಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಹಿಂಗಾರು ಪರಿಹಾರ ಸಮರ್ಪಕವಾಗಿ ವಿತರಿಸಿ : ಹಿಂಗಾರು ಹಂಗಾಮಿನಲ್ಲಿ ಮಳೆ ವಿಫಲವಾಗಿ ಜಿಲ್ಲೆಯಲ್ಲಿ ಹೆಚ್ಚು ರೈತರು ನಷ್ಟ ಅನುಭವಿಸಿದ್ದಾರೆ.  ಈಗಾಗಲೆ ಪರಿಹಾರಕ್ಕಾಗಿ ಜಿಲ್ಲೆಗೆ 35. 66 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.  15 ದಿನಗಳ ಒಳಗಾಗಿ ಸಂಬಂಧಿಸಿದ ಎಲ್ಲ ರೈತರಿಗೆ ಪರಿಹಾರ ಹಣ ತಲುಪಬೇಕು.  ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿರುವುದು, ಖಾತೆ ಸಂಖ್ಯೆ ತಪ್ಪಾಗಿರುವುದು, ಐಎಫ್‍ಎಸ್‍ಸಿ ಕೋಡ್ ತಪ್ಪಾಗಿರುವುದು, ಹೀಗೆ ಯಾವುದೇ ಸಮಸ್ಯೆಗಳಿರಲಿ, ಸಂಬಂಧಿಸಿದ ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸಹಾಯಕರು ಆಯಾ ರೈತರನ್ನು ಖುದ್ದಾಗಿ ಸಂಪರ್ಕಿಸಿ, ಸಮಸ್ಯೆ ಸರಿಪಡಿಸಿ, ರೈತರ ಖಾತೆಗೆ ಹಣ ಜಮಾ ಆಗುವಂತೆ ನೋಡಿಕೊಳ್ಳಬೇಕು.  ಇದರ ಮೇಲುಸ್ತುವಾರಿಯನ್ನು ಸಹಾಯಕ ಆಯುಕ್ತರು ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೊಪ್ಪಳ ಪಿಜಿ ಸೆಂಟರ್‍ಗೆ ಸ್ಥಳ ಗುರುತಿಸಿ : ಕೊಪ್ಪಳದಲ್ಲಿ ಸ್ನಾತಕೋತ್ತರ ಅಧ್ಯಯನ (ಪಿಜಿ) ಕೇಂದ್ರವನ್ನು ಈಗಾಗಲೆ ಪ್ರಾರಂಭಿಸಲು ಮಂಜೂರಾತಿ ದೊರೆತಿದೆ.  ರಾಜ್ಯದಲ್ಲಿಯೇ ಇದನ್ನು ಮಾದರಿ ಪಿಜಿ ಕೇಂದ್ರವನ್ನಾಗಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಕೊಪ್ಪಳದ ಸುತ್ತಮುತ್ತ ಕನಿಷ್ಟ 15-20 ಎಕರೆ ಸ್ಥಳವನ್ನು ಗುರುತಿಸಿ, ಒದಗಿಸಬೇಕು.  ಇದಕ್ಕಾಗಿ ಇಲಾಖೆಯಿಂದ ಪ್ರತ್ಯೇಕವಾಗಿ ಅನುದಾನ ಒದಗಿಸಲಾಗುವುದು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದಿನ ವರ್ಷದಿಂದ ಗಂಗಾವತಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭ : 2017-18 ನೇ ಶೈಕ್ಷಣಿಕ ಸಾಲಿನಿಂದ ಗಂಗಾವತಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಕಾರ್ಯಾರಂಭವಾಗಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಇದಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪ್ರಾರಂಭಿಸಲಾಗುವುದು.  ತಳಕಲ್‍ನಲ್ಲಿ ಪ್ರಾರಂಭಿಸಬೇಕಿರುವ ಹೊಸ ಇಂಜಿನಿಯರಿಂಗ್ ಕಾಲೇಜನ್ನು ರಾಜ್ಯದಲ್ಲಿಯೇ ಮಾದರಿ ಇಂಜಿನಿಯರಿಂಗ್ ಕಾಲೇಜನ್ನಾಗಿ ನಿರ್ಮಾಣ ಮಾಡಲಾಗುವುದು.  ಇದಕ್ಕಾಗಿ ಕಾಲೇಜು ಪ್ರಾರಂಭಕ್ಕೆ ಇನ್ನೆರಡು ವರ್ಷ ಕಾಯಬೇಕು.  ಜಿಲ್ಲೆಗೆ ಹೊಸ ಪಾಲಿಟೆಕ್ನಿಕ್ ಕಾಲೇಜು ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು.  ಕೊಪ್ಪಳದ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ 03 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಇಲಾಖಾವಾರು ಕ್ರಿಯಾ ಯೋಜನೆ ಮಾಹಿತಿ ಸಲ್ಲಿಸಿ : ಎಲ್ಲ ಇಲಾಖೆಗಳು ಕಳೆದ 2015-16 ನೇ ವರ್ಷದಲ್ಲಿ ಯೋಜನಾವಾರು ಸಾಧಿಸಿದ ಪ್ರಗತಿ, ಅನುದಾನ ಬಿಡುಗಡೆ, ಖರ್ಚು, ವೆಚ್ಚಗಳ ಭೌತಿಕ ಮತ್ತು ಆರ್ಥಿಕ ಸಾಧನೆಯ ವಿವರದ ಜೊತೆಗೆ ಪ್ರಸಕ್ತ 2016-17 ನೇ ಸಾಲಿನ ಕ್ರಿಯಾ ಯೋಜನೆಯ ಸಮಗ್ರ ವಿವರವುಳ್ಳ ಬುಕ್‍ಲೆಟ್ ತಯಾರಿಸಿ, ಒಂದು ವಾರದೊಳಗಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ಸದಸ್ಯರುಗಳು, ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಜನರ ನಿರೀಕ್ಷೆ ಬಹಳಷ್ಟಿದೆ, ಅವರಿಗೆ ನಿರಾಸೆಯಾಗದ ರೀತಿ ಕೆಲಸ ಮಾಡಲು ಸಹಕರಿಸಿ- ಬಸವರಾಜ ರಾಯರಡ್ಡಿ


ಕೊಪ್ಪಳ ಜೂ. 30 (ಕರ್ನಾಟಕ ವಾರ್ತೆ): ನಮ್ಮ ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಬಹಳಷ್ಟು ದೊಡ್ಡದಿದೆ.  ಅವರಿಗೆ ನಿರಾಸೆ ಆಗದ ರೀತಿಯಲ್ಲಿ ಜನಪ್ರತಿನಿಧಿಗಳಾದ ನಾವು ಕೆಲಸ ಮಾಡಬೇಕಿದೆ.  ಜನರಿಗೆ ಸೌಲಭ್ಯಗಳನ್ನು ತಲುಪಿಸಬೇಕಾದ ಸರ್ಕಾರಿ ಅಧಿಕಾರಿಗಳ ಸಹಕಾರ ಇದಕ್ಕೆ ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಮಾರ್ಮಿಕವಾಗಿ ಸೂಚನೆ ನೀಡಿದರು.
       ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೊದಲ ಬಾರಿಗೆ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಗುರುವಾರದಂದು ನಡೆಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
       ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಸರ್ಕಾರದ ಬಗ್ಗೆ ಜನರ ನಿರೀಕ್ಷೆ ದೊಡ್ಡದಿದೆ.  ಅವರಿಗೆ ನಿರಾಸೆ ಆಗದ ರೀತಿಯಲ್ಲಿ, ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಉದ್ದೇಶ ಹೊಂದಿದ್ದೇನೆ.  ಸದ್ಯದ ಸರ್ಕಾರಕ್ಕೆ ಇನ್ನೆರಡು ಆರ್ಥಿಕ ವರ್ಷ ಬಾಕಿ ಉಳಿದಿದೆ.  ಜನರಿಗೆ ಸೌಲಭ್ಯ ತಲುಪಿಸಬೇಕಾದ ಕೆಲಸವನ್ನು ನಿರೀಕ್ಷೆಗೆ ಮೀರಿ ಮಾಡಬೇಕಿದೆ.  ‘ಬ್ಯಾಟ್ಸ್‍ಮ್ಯಾನ್ ಆಗಿ ಲೇಟಾಗಿ ಬಂದಿದ್ದೇನೆ.  ಈಗ ಪಂದ್ಯ ಗೆಲ್ಲಲು ಹೆಚ್ಚು, ಹೆಚ್ಚು ಸಿಕ್ಸರ್‍ಗಳನ್ನು ಹೊಡಯಬೇಕಿದೆ’ ಎಂದು ಆಡಳಿತವನ್ನು ಕ್ರಿಕೆಟ್ ಪಂದ್ಯಕ್ಕೆ ಹೋಲಿಸಿಕೊಂಡು ಮಾರ್ಮಿಕವಾಗಿ ನುಡಿದ ಸಚಿವರು, ಇದಕ್ಕೆ ಎಲ್ಲ ಅಧಿಕಾರಿಗಳ ಸಹಕಾರ ಬೇಕಿದೆ.  ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ, ಸಮನ್ವಯತೆಯಿಂದ ಮುಂದುವರಿದಾಗ ಮಾತ್ರ ನಿಗದಿತ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯ.  ಇನ್ನಾದರೂ ಅಧಿಕಾರಿಗಳು ಮಾನಸಿಕವಾಗಿ ಬದಲಾವಣೆ ಮಾಡಿಕೊಳ್ಳಬೇಕಿದೆ.  ಅಧಿಕಾರಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೇಕಿದೆ.  ಅವ್ಯವಹಾರ, ಭ್ರಷ್ಟಾಚಾರ ಪ್ರಕರಣಗಳು ಆಗದ ರೀತಿಯಲ್ಲಿ, ಸ್ವಚ್ಛ ಹಾಗೂ ಪ್ರಾಮಾಣಿಕ ಆಡಳಿತ ನೀಡುವ ಉದ್ದೇಶವಿದೆ.  ಇದಕ್ಕೆ ಎಲ್ಲರೂ ಕೈಜೋಡಿಸಬೇಕು.  ಬರುವ 06 ತಿಂಗಳಲ್ಲಿ ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಸ್ಪಷ್ಟ ಬದಲಾವಣೆ ಗೋಚರಿಸುವಂತಾಗಬೇಕು ಎಂದರು.
       ಕೊಪ್ಪಳದ ಜಿಲ್ಲಾಧಿಕಾರಿಗಳು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರ ಚಿಂತನೆ ಹಾಗೂ ಕಳಕಳಿ ಕೆಳ ಹಂತದ ಅಧಿಕಾರಿಗಳಿಗೂ ಪ್ರೇರಣೆಯಾಗಬೇಕು.  ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ನಿಯಮಿತವಾಗಿ ತಹಸಿಲ್ದಾರರ ಕಚೇರಿಗಳು, ಆಸ್ಪತ್ರೆಗಳು, ಹಾಸ್ಟೆಲ್‍ಗಳು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಪರಾಮರ್ಶಿಸಬೇಕು.  ಇದರಿಂದ, ಅಧಿಕಾರಿಗಳೂ ಸಹ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ.  ಕುಡಿಯುವ ನೀರು, ಕಟ್ಟಡ, ರಸ್ತೆ, ಸೇತುವೆಗಳ ನಿರ್ಮಾಣ ಕಾಮಗಾರಿಗಳು ಗುಣಮಟ್ಟದ್ದಾಗಬೇಕು.  ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿ ಕಾರ್ಯಗಳು ಆಗಬೇಕು ಎನ್ನುವ ನಿರೀಕ್ಷೆ ಹೊಂದಿದ್ದೇನೆ ಎಂದರು.
      ಮುಖ್ಯಮಂತ್ರಿಗಳ ಆಶಯದಂತೆ ಇನ್ನು ಮುಂದೆ ಪ್ರತಿ ತಿಂಗಳು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗುವುದು.  ಜನಸಾಮಾನ್ಯರ ಸಮಸ್ಯೆಗಳಿಗೆ, ಸ್ಥಳೀಯ ಮಟ್ಟದಲ್ಲೇ ಪರಿಹಾರ ದೊರಕುವಂತೆ ಮಾಡಲು ಪ್ರಾಮಾಣಿಕ ಯತ್ನ ಮಾಡಲಾಗುವುದು.  ಅದಕ್ಷ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುವಲ್ಲಿ ತಾವು ಹಿಂಜರಿಯುವುದಿಲ್ಲ.  ಮಾಧ್ಯಮಗಳೂ ಸಹ ಆಡಳಿತ ವ್ಯವಸ್ಥೆಯಲ್ಲಿನ ಲೋಪ-ದೋಷಗಳ ಬಗ್ಗೆ ಸತ್ಯವಾದ ಹಾಗೂ ನಿಷ್ಠುರವಾಗಿ ವರದಿ ಮಾಡಿ ತಮ್ಮ ಗಮನಕ್ಕೆ ತನ್ನಿ, ಮಾಧ್ಯಮಗಳ ಸಲಹೆಗಳನ್ನು ನಮ್ಮ ಸ್ವಾಗತವಿದೆ.  ಸಮಾಜದಲ್ಲಿ ಸುಧಾರಣೆ ಆಗಬೇಕೆನ್ನುವುದು ನಮ್ಮ ಬಯಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ಸದಸ್ಯರುಗಳು, ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿ ವೇತನಕ್ಕಾಗಿ ಆಧಾರ್ ಹಾಗೂ ಬ್ಯಾಂಕ್ ಖಾತೆ ವಿವರ ಸಲ್ಲಿಸಲು ಸೂಚನೆ

ಕೊಪ್ಪಳ ಜೂ.30: (ಕರ್ನಾಟಕ ವಾರ್ತೆ): ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಪ್ರಸಕ್ತ ಸಾಲಿನಿಂದ ಆನ್‍ಲೈನ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳ ಪಾಲಕರು/ಪೋಷಕರು, ವಿದ್ಯಾರ್ಥಿಯ ಆಧಾರ್ ಸಂಖ್ಯೆ, ಜಾತಿ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆ ವಿವರವನ್ನು ಆಯಾ ಶಾಲೆಗಳಿಗೆ ಸಲ್ಲಿಸಬೇಕು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿ ವೇತನ ಪಡೆಯಲು, ಹಿಂದುಳಿದ ವರ್ಗಗಳ ಪ್ರವರ್ಗ-1 ರ ವಿದ್ಯಾರ್ಥಿಗಳ ವಾರ್ಷಿಕ ಆದಾಯ ರೂ.1 ಲಕ್ಷದೊಳಗಿರಬೇಕು ಹಾಗೂ ಪ್ರವರ್ಗ-2ಎ, 3ಎ, 3ಬಿ, ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಾರ್ಷಿಕ ಆದಾಯ ರೂ.44,500 ರೊಳಗಿರಬೇಕು.   1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರಸಕ್ತ ಸಾಲಿನಿಂದ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳ/ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿ/ವಿದ್ಯಾರ್ಥಿಯ ತಾಯಿಯ ಹೆಸರಿನಲ್ಲಿ ಜಂಟಿಯಾಗಿ/ ತಾಯಿ ಇಲ್ಲದಿದ್ದಲ್ಲಿ ತಂದೆ ಅಥವಾ ಪೋಷಕರ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಬೇಕು. 
ವಿದ್ಯಾರ್ಥಿ ಹಾಗೂ ಪಾಲಕರರ ಹೆಸರಿನಲ್ಲಿ ತೆರೆಯಲಾದ ಜಂಟಿ ಖಾತೆಯ ಬ್ಯಾಂಕಿನ ಐಎಫ್‍ಎಸ್‍ಸಿ ಕೋಡ್, ಬ್ಯಾಂಕ್ ಖಾತೆ ಸಂಖ್ಯೆ ಇರುವ ಪಾಸ್ ಬುಕ್‍ನ ಝರಾಕ್ಸ್ ಪ್ರತಿ, ಆಧಾರ ಕಾರ್ಡ್, ವಿದ್ಯಾರ್ಥಿ/ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಗಳನ್ನು ಕೂಡಲೇ ಸಂಬಂಧಿಸಿದ ಶಾಲೆಯ ಮುಖ್ಯೋಪಾದ್ಯಾಯರಲ್ಲಿ ಸಲ್ಲಿಸಬೇಕು. 
ಸಂಬಂಧಿಸಿದ ಶಾಲೆಯ ಮುಖ್ಯೋಪಾದ್ಯಾರುಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ನಮೂನೆಯಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಭರ್ತಿ ಮಾಡಿ ವಿದ್ಯಾರ್ಥಿಗಳಿಂದ ಪಡೆದ ದಾಖಲಾತಿಗಳನ್ನು ಆಯಾ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಕೊಪ್ಪಳ, ಜೂ.30 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯು 2015-16 ನೇ ಸಾಲಿನಲ್ಲಿ ನಡೆದ ಮೆಟ್ರಿಕ್ ನಂತರದ ಕೋರ್ಸ್‍ಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲೇ ಪ್ರಥಮ ಶ್ರೇಣಿಯಲ್ಲಿ ಪಾಸಾದ ಪ.ಜಾತಿ ಹಾಗೂ ಪ.ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
     2015-16 ಸಾಲಿನಲ್ಲಿ ನಡೆದ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ಪ.ಜಾತಿ ಹಾಗೂ ಪ.ಪಂಗಡದ ವಿದ್ಯಾರ್ಥಿಗಳು ಪ್ರೋತ್ಸಾಹಧನಕ್ಕಾಗಿ ಆನ್‍ಲೈನ್ ನಲ್ಲಿ  www.sw.kar.nic.in ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. 
     ಪ್ರೋತ್ಸಾಹಧನದ ವಿವರ ಇಂತಿದೆ. ದ್ವಿತೀಯ ಪಿಯುಸಿ, 03 ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮಾ- ರೂ.20,000. ಪದವಿ- ರೂ.25,000. ಸ್ನಾತಕೋತ್ತರ ಪದವಿ (ಎಂ.ಎ, ಎಂ.ಎಸ್.ಸಿ, ಎಂಕಾಂ, ಎಂಬಿಎ, ಎಂಸಿಎ, ಎಂಎಫ್‍ಎ)- ರೂ.30,000. ಕೃಷಿ/ಇಂಜಿನಿಯರಿಂಗ್/ ಮೆಡಿಸಿನ್/ ವೆಟರ್ನರಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ.35,000 ಮೊತ್ತದ ಪ್ರೋತ್ಸಾಹಧನ ನೀಡಲಾಗುವುದು.
     ಪ್ರೋತ್ಸಾಹಧನ ಪಡೆಯಲು ಅರ್ಹತೆ: ದ್ವಿತೀಯ/ ಅಂತಿಮ ವರ್ಷದ ಪಿಯುಸಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ವತಿಯಿಂದ ನಡೆಸಲಾಗುವ 12 ನೇ ತರಗತಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳೂ ಸಹ ಅರ್ಜಿ ಅಲ್ಲಿಸಬಹುದು. ಪದವಿ/ಸ್ನಾತಕೋತ್ತರ ಪದವಿ/ ಕೃಷಿ/ ಪಶುಸಂಗೋಪನೆ/ ಇಂಜಿನಿಯರಿಂಗ್/ ಮೆಡಿಕಲ್ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷ ಪಬ್ಲಿಕ್ ಪರೀಕ್ಷೆ ಇದ್ದಲ್ಲಿ ಪ್ರತಿ ವರ್ಷವೂ ಪ್ರಥಮ ಪ್ರಯತ್ನದಲ್ಲಿ ಪಾಸಾಗಿರಬೇಕು. ಮತ್ತು ಅಂತಿಮವಾಗಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.  ಸೆಮಿಸ್ಟರ್ ಪದ್ದತಿಯಲ್ಲಿ ಎಲ್ಲಾ ಸೆಮಿಸ್ಟರ್‍ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪಾಸಾಗಿರಬೇಕು.   ರಾಜ್ಯದ ಪ.ಜಾತಿ ಹಾಗೂ ಪ.ಪಂಗಡದ ವಿದ್ಯಾರ್ಥಿಗಳು ಹೊರ ರಾಜ್ಯದಲ್ಲಿ ವ್ಯಾಸಂಗ ಮಾಡಿದ್ದರೂ ಸಹ ಅರ್ಹರಿರುತ್ತಾರೆ.  ರಾಜ್ಯ/ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಯುಜಿಸಿ ಮಾನ್ಯತೆ ಪಡೆದ ಡೀಮ್ಡ್ ವಿಶ್ವವಿದ್ಯಾಲಯಗಳಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸ್ವಾಯುತ್ತ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಹಾಗೂ ವಿದೇಶಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. ವಿದ್ಯಾರ್ಥಿ ವ್ಯಾಸಂಗ ಮಾಡಿದ ಶೈಕ್ಷಣಿಕ ಸಂಸ್ಥೆ ಯಾವ ಜಿಲ್ಲೆಯಲ್ಲಿ ಇರುತ್ತದೆಯೋ ಅದೇ ಜಿಲ್ಲೆಯ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ/ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ/ ಯೋಜನಾ ಸಮನ್ವಯಾಧಿಕಾರಿ/ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇವರಿಗೆ ಅರ್ಜಿ ಸಲ್ಲಿಸಬಹುದು. ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ನೇಟಿವ್ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
     ಅರ್ಹ ಅಭ್ಯರ್ಥಿಗಳು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸ್ವೀಕಾರವಾದ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲದ ಸಮಿತಿಯಲ್ಲಿ ಮಂಡಿಸಿ ಪ್ರೋತ್ಸಾಹಧನ ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ.5 ರಂದು ಕುಕನೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ

ಕೊಪ್ಪಳ ಜೂ.30: (ಕರ್ನಾಟಕ ವಾರ್ತೆ): ವಿವಿಧ ವೃತ್ತಿಯಲ್ಲಿ ಐಟಿಐ ಪಾಸಾದ ಮತ್ತು ಅಂತಿಮ ಸೆಮಿಸ್ಟರ್‍ನಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಕಿರ್ಲೋಸ್ಕರ್ ಟೊಯೋಟ ಟೆಕ್ಸ್‍ಟೈಲ್ ಮಷಿನರಿ ಪ್ರೈ.ಲಿ ಬೆಂಗಳೂರು ಇವರಿಂದ ಕ್ಯಾಂಪಸ್ ಸಂದರ್ಶನವನ್ನು  ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗುದ್ನೆಪ್ಪನ ಮಠ, ಕುಕನೂರು, ತಾ: ಯಲಬುರ್ಗಾ ಇಲ್ಲಿ  ಜುಲೈ 5 ರಂದು ಬೆಳಗ್ಗೆ 10 ಗಂಟೆಗೆ  ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.
      ಐಟಿಐ ಫಿಟ್ಟರ್, ಟರ್ನರ್, ವೆಲ್ಡರ್, ಮತ್ತು ಮಷಿನಿಸ್ಡ್ ವೃತ್ತಿಯಲ್ಲಿ ಉತ್ತೀರ್ಣರಾದ ಅಥವಾ ಈ ವೃತ್ತಿಗಳಲ್ಲಿ ಅಂತಿಮ ಸೆಮಿಸ್ಟರ್‍ನಲ್ಲಿ ತರಬೇತಿ ಪಡೆಯುತ್ತಿರುವ 18 ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಬಹುದು.   ಬೆಂಗಳೂರಿನ ಕಿರ್ಲೋಸ್ಕರ್ ಟೊಯೋಟ ಟೆಕ್ಸ್‍ಟೈಲ್ ಮಷಿನರಿ ಪ್ರೈ.ಲಿ. ಕಂಪನಿಯು ಕ್ಯಾಂಪಸ್ ಸಂದರ್ಶನ ನಡೆಸಲಿದೆ. ಸಂದರ್ಶನದಲ್ಲಿ ಪಾಲ್ಗೊಳ್ಳುವವರು ತಮ್ಮ ಸವಿವರವಾದ ಬಯೋಡಾಟಾ, ಪಾಸ್‍ಪೋರ್ಟ್ ಅಳತೆಯ ಕಲರ್ ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬೇಕು.  ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.  ಹೆಚ್ಚಿನ ಮಾಹಿತಿಗೆ ಮೊ ಸಂ: 9480715898 ಕ್ಕೆ ಸಂಪರ್ಕಿಸಬಹುದು ಎಂದು ಕುಕನೂರು ಸರಕಾರಿ ಕೈಗಾರಿಕಾ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ (ಸಿಎಂಎಸ್‍ಇಜಿಪಿ): ಅರ್ಜಿ ಅವಧಿ ವಿಸ್ತರಣೆ

ಕೊಪ್ಪಳ ಜೂ.30: (ಕರ್ನಾಟಕ ವಾರ್ತೆ): ಕೈಗಾರಿಗೆ ಹಾಗೂ ವಾಣಿಜ್ಯ ಇಲಾಖೆಯಿಂದ ಗ್ರಾಮೀಣ ನಿರುದ್ಯೋಗಿ ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ (ಸಿಎಂಎಸ್‍ಇಜಿಪಿ) ಅಡಿ ಪ್ರಸಕ್ತ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ 17 ರವರೆಗೆ ವಿಸ್ತರಿಸಲಾಗಿದೆ.
      ಯೋಜನೆಯ ಗರಿಷ್ಠ ವೆಚ್ಚ 10 ಲಕ್ಷ ರೂ. ಗಳ ತಯಾರಿಕಾ ಮತ್ತು ಸೇವಾ ಚಟುವಟಿಕೆಗಳಿಗೆ ಬ್ಯಾಂಕುಗಳು ನೀಡುವ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.25 (ಗರಿಷ್ಠ ರೂ.2. 5 ಲಕ್ಷ) ಮತ್ತು ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವರ್ಗದವರಿಗೆ, ಅಂಗವಿಕಲರಿಗೆ, ಮಾಜಿ ಸೈನಿಕರಿಗೆ,  ಮಹಿಳೆಯರಿಗೆ ಶೇ.35 ರಷ್ಟು ( ಗರಿಷ್ಠ ರೂ.3. 5 ಲಕ್ಷ) ಸಹಾಯಧನ ಸೌಲಭ್ಯ ಇರುತ್ತದೆ.
      ಉದ್ದಿಮೆ ಪ್ರಾರಂಭ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಯೋಜನೆಯ ವೆಚ್ಚದ ಶೇ.10 ರಷ್ಟು ಮತ್ತು ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ , ಅಂಗವಿಕಲ, ಮಾಜಿ ಸೈನಿಕ,  ಮಹಿಳಾ ಅಭ್ಯರ್ಥಿಗಳು ಶೇ.5 ರಷ್ಟು ಸ್ವಂತ ಬಂಡವಾಳ ಹೂಡಬೇಕು.
      ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 21 ಗರಿಷ್ಠ 35 ವರ್ಷ. ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಸೈನಿಕ,  ಮಹಿಳೆಯರಿಗೆ ಗರಿಷ್ಟ 45 ವರ್ಷ ನಿಗದಿಪಡಿಸಿದೆ. ಯೋಜನೆಯಡಿ ಹೊಸ ಘಟಕಗಳಿಗೆ ಮಾತ್ರ ಅವಕಾಶ. ವಿದ್ಯಾರ್ಹತೆ 8 ನೇ ತರಗತಿ ಪಾಸಾಗಿರಬೇಕು ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ ಪದವಿ ಪಡೆದಿರಬೇಕು.  ಆಸಕ್ತರು ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್  http://cmegp.kar.nic.in ಇಲ್ಲಿ ಜುಲೈ.17 ರೊಳಗಾಗಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಈ ಮೊದಲು ಜೂ. 30 ಕೊನೆಯ ದಿನಾಂಕವಾಗಿತ್ತು.   ಇದೀಗ ಜು. 17 ರವರೆಗೆ ಅವಧಿ ವಿಸ್ತರಿಸಲಾಗಿದೆ. ಅರ್ಜಿಯ ಪ್ರತಿ ಹಾಗೂ ನಿಗದಿತ ದಾಖಲಾತಿಯೊಂದಿಗೆ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ನಗರಸಭೆ ಎದುರುಗಡೆ, ಕೊಪ್ಪಳ ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ  ದೂರವಾಣಿ ಸಂಖ್ಯೆ: 08539-231548, 231101 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ದೇವರಾಜ ಅರಸು ಜನ್ಮ ಶತಮಾನೋತ್ಸವ ನಿಮಿತ್ಯ ಜು. 02 ರಂದು ಕೊಪ್ಪಳದಲ್ಲಿ ನೃತ್ಯರೂಪಕ


ಕೊಪ್ಪಳ ಜೂ.30: (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ ಸಮಾನತೆಯ ಹರಿಕಾರ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಜು. 02 ರಂದು ಸಂಜೆ 06 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಬೆಂಗಳೂರಿನ ರೂಪಾ ರಾಜೇಶ್ ಅವರಿಂದ ನೃತ್ಯ ರೂಪಕ ಹಮ್ಮಿಕೊಳ್ಳಲಾಗಿದೆ.
     ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ. ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಲಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎಸ್. ವಸ್ತ್ರದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ತಿಳಿಸಿದ್ದಾರೆ.

Wednesday, 29 June 2016

ದೇಶದ ಬೃಹತ್ ಯೋಜನೆಗಳಿಗೆ ಪ್ರೊ. ಮಹಾಲನೋಬಿಸ್ ಕೊಡುಗೆ ಅಪಾರ


ಕೊಪ್ಪಳ,ಜೂ.29(ಕರ್ನಾಟಕ ವಾರ್ತೆ): ಸರ್ಕಾರ ರೂಪಿಸುವ ಯಾವುದೇ ಯೋಜನೆಗಳ ಯಶಸ್ಸು, ಆಯಾ ಕ್ಷೇತ್ರದಲ್ಲಿನ ಅಂಕಿ-ಸಂಖ್ಯೆಗಳ ನಿಖರತೆಯನ್ನು ಅವಲಂಬಿಸಿದ್ದು, ನಿಖರ ಅಂಕಿ-ಅಂಶಗಳ ಮೂಲಕ ಪಂಚವಾರ್ಷಿಕ ಯೋಜನೆಗಳಂತಹ ದೇಶದ ಬೃಹತ್ ಯೋಜನೆಗಳ ಸಾಕಾರಕ್ಕೆ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪ್ರಶಾಂತಚಂದ್ರ ಮಹಾಲನೋಬಿಸ್ ಅವರ ಕೊಡುಗೆ ಅಪಾರವಾಗಿದೆ ಎಂದು ಗಂಗಾವತಿಯ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಅಬ್ದುಲ್ ರೆಹಮಾನ್ ಅವರು ಹೇಳಿದರು.
     ಜಿಲ್ಲಾಡಳಿತ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇವರ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪ್ರಶಾಂತಚಂದ್ರ ಮಹಾಲನೋಬಿಸ್ ರವರ 123ನೇ ಜನ್ಮ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ದೇಶದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪ್ರಶಾಂತಚಂದ್ರ ಮಹಾಲನೋಬಿಸ್ ಅವರು 1893 ಜೂ. 29 ರಂದು ಕೋಲ್ಕತ್ತಾದಲ್ಲಿ ಜನಿಸಿದರು.  ಮೂಲತಃ ಭೌತಶಾಸ್ತ್ರ ಪದವಿ ಪಡೆದರೂ ಕೂಡ, ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ, ಅರ್ಥಶಾಸ್ತ್ರದಲ್ಲಿ ಉನ್ನತ ವ್ಯಾಸಂಗವನ್ನು ಕೈಗೊಂಡರು.  ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿ, ಪ್ರಗತಿಯನ್ನು ಕೇವಲ ಗುಣಾತ್ಮಕವಾಗಿ ವಿಶ್ಲೇಷಣೆ ಮಾಡಲಾಗುತ್ತಿತ್ತು.  ಆದರೆ ಅಂಕಿ-ಅಂಶಗಳ ಮಹತ್ವದ ಬಗ್ಗೆ ಪ್ರೊ. ಮಹಾಲನೋಬಿಸ್ ಅವರ ಶ್ರಮದ ಫಲವಾಗಿ, ದೇಶದ ಅಭಿವೃದ್ಧಿಯನ್ನು ಸಂಖ್ಯಾತ್ಮಕವಾಗಿ ವಿಮರ್ಶೆ ಮಾಡಲು ಸಾಧ್ಯವಾಯಿತು.   ಸಾಮಾನ್ಯ ಜನರ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸುವ ಯಾವುದೇ ಯೋಜನೆಗಳ ಆಯಾ ವ್ಯಾಪ್ತಿಯ ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿರುತ್ತದೆ. ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದಲ್ಲಿ ಅಂತಹ ಯೋಜನೆಗಳು ವಿಫಲವಾಗುತ್ತವೆ.  ದೇಶದ ಪರಿಣಾಮಕಾರಿ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳು ಏಕೆ ಬೇಕು, ಯಾವ ರೀತಿ ಅನುಷ್ಠಾನಗೊಳ್ಳಬೇಕು, ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು ಎನ್ನುವುದರ ಬಗ್ಗೆ ಅಂಕಿ-ಅಂಶಗಳ ಸಹಿತ ಸಾಕಾರಗೊಳ್ಳುವಲ್ಲಿ ಪ್ರೊ. ಮಹಾಲನೋಬಿಸ್ ಅವರ ಕೊಡುಗೆ ಅತ್ಯಂತ ಪ್ರಮುಖವಾಗಿದೆ.  ಯಾವುದೇ ಸಂಶೋಧನೆಗಳಿಗೆ ಸಮೀಕ್ಷೆಗಳೇ ಮೂಲಾಧಾರ.  ಬಂಡವಾಳ ಹೂಡಿಕೆ, ಆರೋಗ್ಯ ಕ್ಷೇತ್ರ, ಅಭಿವೃದ್ಧಿ, ಜನಸಂಖ್ಯೆ ಕುರಿತಾದ ಸಂಶೋಧನೆಗಳಿಗೆ ಅಂಕಿ-ಅಂಶಗಳೇ ಮೂಲ ಆಧಾರ.   ಇಂದಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯವೇ ಹೆಚ್ಚು ಆಸಕ್ತಿದಾಯವಾಗಿದೆ.  ಆದರೆ ಅರ್ಥಶಾಸ್ತ್ರ ಅಧ್ಯಯನಕ್ಕೂ ಇದೀಗ ವ್ಯಾಪಕ ಬೇಡಿಕೆ ಇದೆ.  ಅರ್ಥಶಾಸ್ತ್ರ ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಇವೆ ಎಂದು ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಅಬ್ದುಲ್ ರೆಹಮಾನ್ ಅವರು ಹೇಳಿದರು.
     ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಟಿ.ಆರ್. ಸತ್ಯನಾರಾಯಣ ಅವರು ಕೃಷಿ ಮತ್ತು ರೈತರ ಕಲ್ಯಾಣ ಕುರಿತಂತೆ ಮಾತನಾಡಿ, ದೇಶದಲ್ಲಿ ಕೃಷಿ ಪರಿಸ್ಥಿತಿ ಉತ್ತಮವಾಗಿರುವುದರಲ್ಲಿಯೇ ರೈತರ ಕಲ್ಯಾಣ ಅಡಗಿದೆ.  ಕೃಷಿ ಇಲಾಖೆ ರೈತರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸುತ್ತಿದೆ.   ಇಂತಹ ಯೋಜನೆಗಳನ್ನು ರೂಪಿಸಲು ಅಂಕಿ-ಸಂಖ್ಯೆಗಳ ನಿಖರ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.  ದೇಶದ ಕೃಷಿ ಉತ್ಪಾದನೆ ಮತ್ತು ದೇಶದ ಜನಸಂಖ್ಯೆಯ ಪ್ರಮಾಣ ಒಂದಕ್ಕೊಂದು ಆಧಾರವಾಗಿವೆ.  ಕೃಷಿ ಭೂಮಿ, ಬೆಳೆ ಉತ್ಪಾದನೆ ಪ್ರಮಾಣ, ಬೆಳೆ ನಷ್ಟ ಮುಂತಾದ ವಿಷಯಗಳ ವರದಿ ಸಂಗ್ರಹಕ್ಕೆ ಅಂಕಿ-ಸಂಖ್ಯೆಗಳೇ ಮೂಲ ಆಧಾರವಾಗಿವೆ.  ದೇಶದಲ್ಲಿನ ಕೃಷಿ ಭೂಮಿಯ ಸದ್ಯದ ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಗುಣ ತಿಳಿದುಕೊಳ್ಳುವ ಸಲುವಾಗಿ ಇಡೀ ದೇಶದಲ್ಲಿ ಮಣ್ಣು ಆರೊಗ್ಯ ಅಭಿಯಾನ ಇದೀಗ ಎಲ್ಲೆಡೆ ನಡೆಯುತ್ತಿದೆ.  ಇದು ಕೃಷಿಯಲ್ಲಿ ಮಹತ್ತರ ಬದಲಾವಣೆ ತರಲು ಪೂರಕವಾಗಲಿದೆ ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಎಂ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ಉಪನ್ಯಾಸಕರುಗಳಾದ ಎಸ್.ವಿ. ಕಿನಗಿ, ಅನಿತಾ ಪಾಟೀಲ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಭೀಮಶಾ ಬಿ ಸಿಂಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜೂ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಜೂ. 30 ರಿಂದ ಜು. 02 ರವರೆಗೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಜೂ. 30 ರಂದು ಬೆಳಿಗ್ಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ಬೆ. 10 ಗಂಟೆಗೆ ಕೊಪ್ಪಳದಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡುವರು.  11-30 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಸಭೆಯ ನಂತರ ಪತ್ರಿಕಾಗೋಷ್ಠಿ ಕೈಗೊಂಡು, ಅಂದು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಜುಲೈ 01 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು.  ಮಧ್ಯಾಹ್ನ 01 ಗಂಟೆಗೆ ಗಂಗಾವತಿಗೆ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು.  ಮಧ್ಯಾಹ್ನ 3-30 ಗಂಟೆಗೆ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣಕ್ಕೆ ತೆರಳಿ, ಸ್ಥಳೀಯ ಶಾಸಕರೊಂದಿಗೆ ಭೇಟಿ ನಡೆಸುವರು.  ಸಂಜೆ 5-30 ಗಂಟೆಗೆ ಸಿಂಧನೂರಿಗೆ ತೆರಳಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಭೇಟಿ ನಡೆಸುವರು.  ರಾತ್ರಿ 10-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಜು. 02 ರಂದು ಬೆಳಿಗ್ಗೆ 11 ಗಂಟೆಗೆ ಕುಷ್ಟಗಿ ಪಟ್ಟಣಕ್ಕೆ ತೆರಳಿ ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನಡೆಸುವರು.  ಸಂಜೆ 4 ಗಂಟೆಗೆ ಯಲಬುರ್ಗಾ ತಾಲೂಕು ಕುಕನೂರಿಗೆ ಆಗಮಿಸಿ, ಪಟ್ಟಣ ಪಂಚಾಯತಿಯಲ್ಲಿ ಸಾರ್ವಜನಿಕರೊಂದಿಗೆ ಭೇಟಿ ನಡೆಸುವರು.  ಅಂದು ರಾತ್ರಿ 7-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸತ್ತ ಜಾನುವಾರುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಚನೆ

ಕೊಪ್ಪಳ ಜೂ. 29 (ಕರ್ನಾಟಕ ವಾರ್ತೆ): ಯಾವುದೇ ರೋಗದಿಂದ ಸತ್ತ ಜಾನುವಾರುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಜಯರಾಂ ಸೂಚನೆ ನೀಡಿದ್ದಾರೆ.
     ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಅಲೆಮಾರಿ ಜನಾಂಗದ ಜಾನುವಾರುಗಳಲ್ಲಿ ಅಂಥ್ರಾಕ್ಸ್ ರೋಗ ಕಂಡುಬಂದಿದ್ದು, ರೋಗ ನಿಯಂತ್ರಣಕ್ಕೆ ಈಗಾಗಲೆ ಪಶುಪಾಲನಾ ಇಲಾಖೆಯು ಕರ್ಕಿಹಳ್ಳಿ, ಹಿರೇಬಗನಾಳ, ಚಿಕ್ಕಬಗನಾಳ, ಹಿರೇಕಾಸನಕಂಡಿ, ಲಾಚನಕೇರಿ ಮತ್ತು ಕುಣಿಕೇರಿ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಂಡಿದೆ.  ಈ ಪ್ರದೇಶದಲ್ಲಿ ಸತ್ತ ಜಾನುವಾರುಗಳನ್ನು ಬೇರೆ ಕಡೆಗೆ ಸಾಗಿಸದೆ ಮತ್ತು ಎಲ್ಲೆಂದರಲ್ಲಿ ಬಿಸಾಡದೆ, ಸೂಕ್ತ ಸ್ಥಳದಲ್ಲಿ, ಸೂಕ್ತ ರೀತಿಯಿಂದ ಅಂದರೆ ಕನಿಷ್ಟ 6 ಅಡಿ ಆಳದಲ್ಲಿ ಗುಂಡಿಯನ್ನು ತೆಗೆದು ಸುಣ್ಣವನ್ನು ಹಾಕಿ ವಿಲೇವಾರಿ ಮಾಡಬೇಕು.  ಅಲ್ಲದೆ ಈ ರೀತಿ ಸತ್ತ ಜಾನುವಾರಿನ ಬಗ್ಗೆ ಮಾಹಿತಿಯನ್ನು ಪಶುಪಾಲನಾ ಇಲಾಖೆ ಮತ್ತು ಆಯಾ ಗ್ರಾಮ ಪಂಚಾಯತಿಗೆ ತಿಳಿಸಬೇಕು.  ಜಾನುವಾರುಗಳನ್ನು ಈ ಗ್ರಾಮಗಳಿಂದ ಬೇರೆಡೆಗೆ ಸ್ಥಳಾಂತರ ಮಾಡದಂತೆ ಮತ್ತು ಬೇರೆ ಜಾನುವಾರುಗಳಿ ಈ ಪ್ರದೇಶಕ್ಕೆ ಬರದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಯು ಚಿಕ್ಕಬಗನಾಳ ಗ್ರಾಮದಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿದೆ.  ಸಾರ್ವಜನಿಕರು ಸಹಕರಿಸುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಜೋಳ, ಮೆಕ್ಕೆಜೋಳ ಮತ್ತು ಸಜ್ಜೆ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

ಕೊಪ್ಪಳ ಜೂ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೊಪ್ಪಳ ಜಿಲ್ಲೆಯಾದ್ಯಂತ ಮುಂಗಾರು ಬೆಳೆಗಳ ಸ್ಥಿತಿಗತಿ ಅರಿಯಲು ಜಂಟಿಸಮೀಕ್ಷೆ ಕೈಗೊಂಡಿದ್ದು ಜೋಳ, ಮೆಕ್ಕೆಜೋಳ ಮತ್ತು ಸಜ್ಜೆ ಬೆಳೆಗಳ ರಕ್ಷಣೆಗೆ ಸಂಬಂಧಿಸಿದಂತೆ ರೈತರು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆಗಳನ್ನು ನೀಡಲಾಗಿದೆ.

ಜೋಳ : ಜೋಳದ ಬೆಳೆಯು ಜಿಲ್ಲೆಯಾದ್ಯಂತ ಸುಮಾರು 15-20 ದಿನಗಳ ಹಂತದಲ್ಲಿದೆ.  ಜೋಳ ಬೆಳೆಗೆ ಸುಳಿನೊಣ ಕೀಟ ಬಾಧೆ ಇದ್ದು, ಕೀಡೆಯ ಸುಳಿಯು ಬುಡ ಕತ್ತರಿಸುವುದರಿಂದ ಮಧ್ಯದ ಸುಳಿ ಸಾಯವುದು. ಪ್ರತಿಶತ ನೂರರಷ್ಟು ಹಾನಿಯಾಗುವುದು.  ಇದರ ನಿವಾರಣೆಗಾಗಿ ಬೆಳೆಗೆ ಹೆಕ್ಟೇರಿಗೆ 30 ಕಿ.ಗ್ರಾಂ ಶೇ. 3 ರ ಕಾರ್ಬೋ ಫ್ಯುರಾನ್ ಅಥವಾ 40 ಕಿ. ಗ್ರಾಂ ಶೇ. 10 ರ ಫೋರೇಟ್ ಹರಳನ್ನು ಬಿತ್ತನೆಗೆ ಮೊದಲು ಸಾಲುಗಳಲ್ಲಿ ಕೊಟ್ಟು ಬಿತ್ತನೆ ಮಾಡಬೇಕು ಮತ್ತು 500 ಮಿ.ಲೀ.ಮಿಥೈಲ್ ಡೆಮೆಟಾನ್ 25 ಇಸಿ ಅಥವಾ ಡೈಮಿಥೊಯೆಟ್ 30 ಇಸಿ ಯನ್ನು ಸಿಂಪಡಿಸಬೇಕು.   ಕಾಂಡ ಕೊರೆಯುವ ಹುಳುವಿನ ಬಾಧೆ ಸಹ ಕಂಡುಬರುವ ಸಾಧ್ಯತೆ ಇದ್ದು, ಎಲೆಯಲ್ಲಿ ಅಡ್ಡಲಾಗಿ ಸಮಾನಾಂತರ ರಂಧ್ರಗಳು ಎಲೆಗಳ ಮಧ್ಯಭಾಗದಲ್ಲಿ ಕೀಡೆಗಳು ಕೊರೆದು ತಿನ್ನುವದು. ಮರಿ ಕೀಡೆಗಳು ಕಾಂಡದ ಮಧ್ಯ ಬಾಗವನ್ನು ಸೇರಿ ಕಾಂಡ ಕೊರೆಯುವುದರಿಂದ ಸುಳಿ ಸಾಯುವದು. ಬೆಳೆದು ದಂಟು ಕೊರೆಯುವುದರಿಂದ ಪೊಳ್ಳು 25–30 ರಷ್ಟು ಹಾನಿ ಆಗಬಹುದು.  ಇದರ ನಿವಾರಣೆಗಾಗಿ ಪ್ರತಿ ಹೆಕ್ಟೇರಿಗೆ 7.5 ಕಿ. ಗ್ರಾಂ ಕಾರ್ಬೋಫ್ಯುರಾನ್ ಶೇ. 3 ರ ಹರಳು ಅಥವಾ ಕಾರ್ಬರಿಲ್ ಶೇ. 4 ಹರಳು ಅಥವಾ ಲಿಂಡೇನ್ ಶೇ. 1ರ ಹರಳನ್ನು ಸುಳಿಯಲ್ಲಿ ಹಾಕಬೇಕು.

ಗೋವಿನ ಜೋಳ / ಮೆಕ್ಕೆಜೋಳ :  ಮೆಕ್ಕೆಜೋಳ ಬೆಳೆಯು ಜಿಲ್ಲೆಯಾದ್ಯಂತ ಸುಮಾರು 10-15 ದಿನಗಳ ಹಂತದಲ್ಲಿರುತ್ತದೆ.
ಕಳೆ ನಿಯಂತ್ರಣ:  ಕಳೆಗಳನ್ನು ಸೂಕ್ತ ಕಳೆನಾಶಕಗಳನ್ನು ಬಳಸಿ ನಿಯಂತ್ರಿಸಬಹುದು. ಮರಳು ಭೂಮಿಯಾದಲ್ಲಿ 2.5ಕಿ. ಗ್ರಾಂ., ಕಪ್ಪು ಭೂಮಿಯಾದಲ್ಲಿ 3 ಕಿ. ಗ್ರಾಂ ಸಿಮ್ಯಾಜಿನ್ 50 ಡಬ್ಯೂಪಿ ಅಥವಾ 1 ಕಿ. ಗ್ರಾಂ ಅಟ್ರಾಜಿನ್ 50 ಡಬ್ಯೂಪಿ ಕಳೆನಾಶಕವನ್ನು 1000 ಲೀಟರ್ ನೀರಿನಲ್ಲಿ ಕರಗಿಸಿ ಬಿತ್ತನೆಯಾದ ದಿನ ಅಥವಾ ಮರುದಿನ ಮಣ್ಣಿನ ಮೇಲೆ ಸಿಂಪರಿಸಬೇಕು. ಈ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು ಮತ್ತು ಮಣ್ಣು ಹುಡಿಯಾಗಿರಬೇಕು ಇದರಿಂದ ಬೀಜದಿಂದ ಹರಡುವ ಕಳೆಗಳನ್ನು ನಿಯಂತ್ರಸಬಹುದು.
ಕಾಂಡ ಕೊರೆಯುವ ಹುಳು:  ಕೀಟ ಬಾಧೆ ಆಗಿರುವ ಗಿಡಗಳ ಎಲೆ ಸುಳಿಗರಿಗಳಲ್ಲಿ ಸಣ್ಣ ರಂಧ್ರಗಳು ಕಂಡು ಬರುತ್ತವೆ. ಕ್ರಮೇಣ ಅಂತಹ ಸುಳಿಗಳು ಒಣಗುತ್ತವೆ. ಸುಳಿಗಳನ್ನು ಕಿತ್ತಿದರೆ ಸರಳವಾಗಿ ಬರುತ್ತವೆ. ಇದು ಮುಖ್ಯವಾಗಿ ಕಾಂಡಕ್ಕೆ ಕೊಳೆತು ಸುಳಿ ಸಾಯುತ್ತದೆ.  ಇದರ ನಿರ್ವಹಣೆಗಾಗಿ ಹೆಕ್ಟೇರಿಗೆ 7.5 ಕಿ. ಗ್ರಾಂ ಲಿಂಡೇನ್ ಶೇ. 1 ರ ಹರಳು ಅಥವಾ 7.5 ಕಿ. ಗ್ರಾಂ ಕಾರ್ಭಾರಿಲ್ ಶೇ 4 ರ ಹರಳು ಆಥವಾ 7.5 ಕಿ. ಗ್ರಾಂ ಎಂಡೋಸಲ್ಫಾನ್ ಶೇ 8 ರ ಹರಳನ್ನು ಎಲೆ ಸುರಳಿಯಲ್ಲಿ ಹಾಕಬೇಕು. ಕೀಟದ ಬಾಧೆ ಪುನಃ ಕಂಡು ಬದಲ್ಲಿ 2 ವಾರಗಳ ನಂತರ ಮತ್ತೊಮ್ಮೆ ಇದೆ ರೀತಿಯ ಕ್ರಮ ಅನುಸರಿಸಬೇಕು.
ಸೈನಿಕ ಹುಳು:  ಈ ಹುಳು ಹಗಲು ಹೊತ್ತಿನಲ್ಲಿ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಎಲೆಗಳನ್ನು ತೀವ್ರಗತಿಯಲ್ಲಿ ತಿಂದು ಹಾನಿ ಮಾಡುತ್ತದೆ. ಇವುಗಳ ಸಂಖ್ಯೆ ಹೆಚ್ಚಾದಾಗ ಹಾನಿಯ ಪ್ರಮಾಣವು ಹೆಚ್ಚುತ್ತದೆ. ಎಲೆಯ ಮಧ್ಯ ನರವೊಂದನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ತಿಂದು ಹಾಕುತ್ತದೆ.  ಇದರ ನಿರ್ವಹಣೆಗಾಗಿ ಕಳಿತ ವಿಷಪಾಷಾಣ ಬಳಕೆಯಿಂದ ಕೀಟಗಳನ್ನು ಯಶಸ್ವಿಯಾಗಿ ನಿಯತ್ರಿಸಬಹುದು. 5-8 ಲೀಟರ್ ನೀರಿನಲ್ಲಿ 250 ಮೀ.ಲೀ ಮೊನೊಕ್ರೋಟೊಫಾಸ್ 36 ಎಸ್. ಎಲ್ ಕೀಟನಾಶಕ 4 ಕಿ. ಗ್ರಾಂ ಬೆಲ್ಲದೊಂದಿಗೆ ಬೆರೆಸಿ 50 ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನಲ್ಲಿ ಸರಿಯಾಗಿ ಬೆರೆಸಿ, ನಂತರ 2 ದಿನಗಳವರೆಗೆ ಪ್ಲಾಸ್ಟಿಕ್ ಚೀಲ ಅಥವಾ ಪೀಪಾಯಿಯಲ್ಲಿ ಕಳೆಯಲು ಬಿಡಬೇಕು. ಸಾಯಂಕಾಲದ ಸಮಯದಲ್ಲಿ ಹೆಕ್ಟೇರಿಗೆ 50  ಕಿ. ಗ್ರಾಂ ಪ್ರಮಾಣದಲ್ಲಿ ವಿಷಪಾಷಾಣವನ್ನು ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಹುಳುಗಳು ವಿಷಪಾಷಾಣಕ್ಕೆ ಆಕರ್ಷಿತಗೊಂಡು ತಿಂದು ಸಾಯುತ್ತವೆ.
ಉರಿಜಿಂಗಿ ರೋಗ:  ಬಿತ್ತಿದ 25-30 ದಿವಸಗಳ ಎಳೆಯ ಸಸಿಗಳಿಗೆ ತಗುಲಿದಾಗ ಅವು ಒಣಗಿ ಸಾಯಲು ಪ್ರಾರಂಭಿಸುತ್ತವೆ. ಬಲಿತ ಸಸ್ಯಗಳಿಗೆ ರೋಗ ಬಂದಾಗ ಎಲೆಗಳ ಮೆಲೆ ಅಂಡಾಕಾರದ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕರಗಳು ಕಾಣೀಸಿಕೊಳುತ್ತವೆ.  ಇಂತಹ ಹಲವಾರು ಚುಕ್ಕೆಗಳು ಒಂದರೊಡನೊಂದು ಕೂಡಿ ರೋಗದ ಸೋಂಕು ಬಿತ್ತನೆ ಬೀಜ, ಹೊಲದಲ್ಲಿ ಇರುವ ರೋಗ ಪೀಡಿತ ಎಲೆಗಳ ಮತ್ತು ಕೋಲಿಗಳಿಂದ ಹರಡುತ್ತದೆ.  ಇದರ ನಿರ್ವಹಣೆಗಾಗಿ 2.5 ಗ್ರಾಮ ಮ್ಯಾಂಕೊಜೇಬ್ 75 ಡಬ್ಯೂಪಿ ಶಿಲೀಂದ್ರನಾಶಕವನ್ನು ರೋಗ ಕಂಡ ತಕ್ಷಣ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಿ, ಪುನಃ 15 ದಿನಗಳ ನಂತರ ಇದೇ ಸಿಂಪರಣೆ ಮಾಡಬೇಕು. ಪ್ರತಿ ಹೆಕ್ಟೇರಿಗೆ 500 ಲೀಟರ್ ಸಿಂಪರಣಾ ದ್ರಾವಣ ಅವಶ್ಯಕ.

ಸಜ್ಜೆ:  ಸಜ್ಜೆ ಬೆಳೆಯು ಈಗ ಸುಮಾರು 10-15 ದಿನಗಳ ಹಂತದಲ್ಲಿದೆ.  ಅಂತರ ಬೇಸಾಯ ಪದ್ಧತಿ ಅಂದರೆ, ಬಿತ್ತನೆಯಾದ 20 ದಿನಗಳ ನಂತರ ತೆನೆ ಬರುವ ತನಕ 2 ರಿಂದ 3 ಬಾರಿ ಅಂತರ ಬೇಸಾಯ ಮಾಡಬೇಕು. ಮೊದಲನೆಯ ಅಂತರ ಬೇಸಾಯದ ನಂತರ ಒಂದು ಬಾರಿ ಕೈಗಳೆ ಮಾಡಿ ಬಿತ್ತನೆಯಾದ 4 ವಾರಗಳ ನಂತರ  ಮಣ್ಣೇರಿಸಬೇಕು.
ಸೈನಿಕ ಹುಳು:  ಕಳೆದ ವರ್ಷದಂತೆ ಈ ವರ್ಷವೂ ಕೂಡ ಸೈನಿಕ ಹುಳುವಿನ ಬಾಧೆ ಆಗುವ ಸೂಚನೆ ದೊರೆತಿದ್ದು, ಪ್ರಾಥಮಿಕ ಹಂತವಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ.  ಈ ಹುಳು ಹಗಲು ಹೊತ್ತಿನಲ್ಲಿ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಎಲೆಗಳನ್ನು ತೀವ್ರಗತಿಯಲ್ಲಿ ತಿಂದು ಹಾನಿ ಮಾಡುತ್ತದೆ. ಇವುಗಳ ಸಂಖ್ಯೆ ಹೆಚ್ಚಾದಾಗ ಹಾನಿಯ ಪ್ರಮಾಣವು ಹೆಚ್ಚುತ್ತದೆ. ಎಲೆಯ ಮಧ್ಯ ನರವೊಂದನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ತಿಂದು ಹಾಕುತ್ತದೆ.  ಇದರ ನಿರ್ವಹಣೆಗೆ ಕಳಿತ ವಿಷಪಾಷಣ ಬಳಕೆಯಿಂದ ಕೀಟಗಳನ್ನು ಯಶಸ್ವಿಯಾಗಿ ನಿಯತ್ರಿಸಬಹುದು. 5-8 ಲೀಟರ್ ನೀರಿನಲ್ಲಿ 250 ಮೀ.ಲೀ ಮೊನೊಕ್ರೋಟೊಫಾಸ್ 36 ಎಸ್. ಎಲ್ ಕೀಟನಾಶಕ 4 ಕಿ. ಗ್ರಾಂ ಬೆಲ್ಲದೊಂದಿಗೆ ಬೆರೆಸಿ 50 ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನಲ್ಲಿ ಸರಿಯಾಗಿ ಬೆರೆಸಿರಿ ನಂತರ 2 ದಿನಗಳವರೆಗೆ ಪ್ಲಾಸ್ಟಿಕ್ ಚೀಲ ಅಥವಾ ಪೀಪಾಯಿಯಲ್ಲಿ ಕಳೆಯಲು ಬಿಡಬೇಕು. ಸಾಯಂಕಾಲದ ಸಮಯದಲ್ಲಿ ಹೆಕ್ಟೇರಿಗೆ 50 ಕಿ. ಗ್ರಾಂ ಪ್ರಮಾಣದಲ್ಲಿ ವಿಷಪಾಷಾಣವನ್ನು ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಹುಳುಗಳು ವಿಷಪಾಷಾಣಕ್ಕೆ ಆಕರ್ಷಿತಗೊಂಡು ತಿಂದು ಸಾಯುತ್ತವೆ.
    ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತಾಲೂಕಾ ಪಂಚಾಯತಿ ಆವರಣ, ಕೊಪ್ಪಳ, ದೂರವಾಣಿ ಸಂ: 08539-220305, ಮೊ: 9448690684 ಕ್ಕೆ ಸಂಪರ್ಕಿಸಬಹುದು.

Tuesday, 28 June 2016

ಕೃಷಿ ಅಭಿಯಾನ- ಸರಣಿ-4 : ಕೃಷಿ ಕೂಲಿಕಾರ್ಮಿಕರ ಕೊರತೆ ನೀಗಿಸಲು ಕೃಷಿ ಯಾಂತ್ರೀಕರಣ ಯೋಜನೆ

ಕೊಪ್ಪಳ, ಜೂ.28 (ಕರ್ನಾಟಕ ವಾರ್ತೆ) : ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೃಷಿ ಕಾರ್ಮಿಕರ ಕೊರತೆ ಕಂಡುಬರುತ್ತಿದೆ.  ಕೃಷಿ ಕಾರ್ಮಿಕರ ಕೊರತೆಯ ಸಮಸ್ಯೆಯನ್ನು ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಿ, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ರೈತರು ಕೈಗೊಳ್ಳುವಂತಾಗಲು, ಕೃಷಿ ಇಲಾಖೆಯು ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿಗೊಳಿಸಿದೆ.
 ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ಪವರ ಟಿಲ್ಲರ್, ಭೂಮಿ ಸಿದ್ದತೆಯಿಂದ ಬಿತ್ತನೆ ಮತ್ತು ಅಂತರ ಬೇಸಾಯಕ್ಕೆ ಕೃಷಿ ಯಂತ್ರೋಪಕರಣಗಳು, ಡೀಸೆಲ್ ಪಂಪ್‍ಸೆಟ್‍ಗಳು, ಟ್ರ್ಯಾಕ್ಟರ / ಎಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಹಾಗೂ ಕೃಷಿ ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು ವಿತರಿಸˉÁಗತ್ತ್ತದೆ.   ಪ್ರಸಕ್ತ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯ ಸವಲತ್ತು ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಆಯಾ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.
     ಕೃಷಿ ಯಂತ್ರೋಪಕರಣಗಳನ್ನು ರೈತರು, ಸಹಾಯಧನ ಸೌಲಭ್ಯದಡಿ ಪಡೆಯಲು ಅರ್ಜಿಯನ್ನು ಸಲ್ಲಿಸಿ, ಕೃಷಿ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಕೃಷಿ ಇಲಾಖೆಯ ಗಮನಕ್ಕೆ ತರದೇ, ಪೂರ್ವಾನುಮತಿ ಪಡೆಯದೇ ರೈತರು ಸ್ವಂತವಾಗಿ ಖರೀದಿಸಿದ ಉಪಕರಣಗಳಿಗೆ ಇಲಾಖೆಯಿಂದ ಮಾನ್ಯತೆ ದೊರೆಯುವುದಿಲ್ಲ. ಯೋಜನೆಯ ಲಾಭ ಪಡೆಯ ಬಯಸುವ ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಸಂಬಂಧಿಸಿದ ಪಹಣಿ, ಹಿಡುವಳಿ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗುರುತಿನ ಪತ್ರ, ಭಾವಚಿತ್ರ ಬ್ಯಾಂಕ್ ಖಾತೆ ಸಂಖ್ಯೆ, 20 ರೂ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರದ ಮಖ್ಯಸ್ಥರಿಗೆ ಅರ್ಜಿ ಸಲ್ಲಿಸಬೇಕು.
      ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೃಷಿ ಯಂತ್ರೋಪಕರಣಗಳ ಹಾಗೂ ಕೃಷಿ ಸಂಸ್ಕರಣಾ ಮಾದರಿಗಳಿಗೆ ನಿಗದಿಪಡಿಸಿದ ಎಲ್-1 ದರದ ಶೇ.50 ರಷ್ಟು ಧನಸಹಾಯ ನೀಡಲಾಗುವುದು. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗೆ ಮೀಸಲಿಟ್ಟ ಅನುದಾನವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದ ರೈತರಿಗೆ ಕನಿಷ್ಟ ದರದ ಆಧಾರದ ಮೇಲೆ ಶೇ.90 ಅಥವಾ ಗರಿಷ್ಟ 1.00 ಲಕ್ಷ ರೂ.ಗಳ ವರೆಗೆ ಸಹಾಯಧನವನ್ನು   ಒದಗಿಸಲಾಗುವುದು.
     ಡಿಸೇಲ್ ಅಥವಾ ಸೀಮೆಎಣ್ಣೆ ಪಂಪ್‍ಸೆಟ್‍ಗಳಿಗೆ ಘಟಕದ ಕನಿಷ್ಟ ದರದ ಶೇ.90 ರಷ್ಟು ಅಥವಾ ಗರಿಷ್ಟ 20,000 ರೂ.ಗಳ ವರೆಗೆ ಸಹಾಯಧನ ನೀಡಲಾಗುವುದು. ಅನುದಾನದ ಲಭ್ಯತೆ ನೋಡಿಕೊಂಡು ಒಬ್ಬರಿಗೆ ಒಂದಕ್ಕಿಂತ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು. ಒಬ್ಬ ರೈತ ಒಂದು ಉಪಕರಣವನ್ನು ಸಹಾಯಧನದಡಿ ಪಡೆದ ನಂತರ ಅದೇ ಉಪಕರಣವನ್ನು 3 ವರ್ಷಗಳವರೆಗೆ ಸಹಾಯಧನದಡಿ ಪಡೆಯಲು ಅವಕಾಶವಿರುವುದಿಲ್ಲ. ರೈತ ಫಲಾನುಭವಿಗಳಿಗೆ ಎರಡು ಲಕ್ಷದವರೆಗೆ ಇರುವ ಕೃಷಿ ಯಂತ್ರೋಪಕರಣಗಳನ್ನು ಮಾತ್ರ ಈ ಯೋಜನೆಯಡಿ ನೀಡಲು ಅವಕಾಶವಿದೆ. ಸಾಮಾನ್ಯ ರೈತ ಫಲಾನುಭವಿಗಳಿಗೆ ಶೇ.50 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು.
     ಕೃಷಿ ಯಂತ್ರೋಪಕರಣಗಳ ದರವು 5 ಲಕ್ಷ ರೂ.ಗಳ ವರೆಗೆ ಇದ್ದಲ್ಲಿ, ಅಂತಹ ಉಪಕರಣಗಳನ್ನು ನಿಯಮದನ್ವಯ ನೊಂದಾಯಿತ ರೈತ ಗುಂಪುಗಳಿಗೆ ಮಾತ್ರ ನೀಡಲಾಗುವುದು.   ಕೆಲವು ಸಂದರ್ಭಗಳಲ್ಲಿ ಹೊಸದಾಗಿ ಗುಂಪುಗಳನ್ನು ರಚನೆ ಮಾಡಿಕೊಂಡಿದ್ದಲ್ಲಿ ಗುಂಪು ರಚನೆಯಾಗಿ ಕನಿಷ್ಟ 6 ತಿಂಗಳಾಗಿರಬೇಕು ಹಾಗೂ ತೃಪ್ತಿಕರವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಗುಂಪು ಅಥವಾ ಸಂಘದ ಹಣಕಾಸಿನ ಪರಿಸ್ಥಿತಿ ಉತ್ತಮ ಹಾಗೂ ಪಾರದರ್ಶಕವಾಗಿರಬೇಕು. ಸಂಘವು ವಾಣಿಜ್ಯ ಬ್ಯಾಂಕುಗಳೊಂದಿಗೆ ಉತ್ತಮ ಸಂಪರ್ಕ ಹೊಂದಿ ಉತ್ತಮ ವಹಿವಾಟು ನಡೆಸುತ್ತಿರುವ ಗುಂಪುಗಳಿಗೆ ಮಾತ್ರ ಕೃಷಿ ಯಂತ್ರೋಪಕಣಗಳನ್ನು ಸಹಾಯಧನ ಕಾರ್ಯಕ್ರಮದಡಿ ವಿತರಿಸಲು ಅವಕಾಶವಿದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು.

ತೊಗರಿ ಬೆಳೆ : ಮುಂಜಾಗ್ರತಾ ಕ್ರಮಗಳ ಕುರಿತು ರೈತರಿಗೆ ಸಲಹೆಗಳು

ಕೊಪ್ಪಳ ಜೂ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೊಪ್ಪಳ ಜಿಲ್ಲೆಯಾದ್ಯಂತ ಮುಂಗಾರು ಬೆಳೆಗಳ ಸ್ಥಿತಿಗತಿ ಅರಿಯಲು ಜಂಟಿಸಮೀಕ್ಷೆ ಕೈಗೊಂಡಿದ್ದು ತೊಗರಿ ಬೆಳೆಗೆ ಸಂಬಂಧಿಸಿದಂತೆ ರೈತರು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆಗಳನ್ನು ನೀಡಲಾಗಿದೆ.
     ತೊಗರಿ ಬೆಳೆಯನ್ನು ಜಿಲ್ಲೆಯಾದ್ಯಂತ ಕೂರಿಗೆ ಬಿತ್ತನೆ, ಕೈಗಾಳು ಹಾಗೂ ಸಸಿಗಳನ್ನು ತಯಾರಿಸಿ ಬೆಳೆಯುತ್ತಿದ್ದಾರೆ.  ಈಗ ಬೆಳೆಯು 8-15 ದಿವಸದ ಹಂತದಲ್ಲಿದೆ.
     ಕಳೆಗಳ ನಿರ್ವಹಣೆ: ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಲೀಟರ್ ನೀರಿಗೆ 3 ಮಿ. ಲೀ ಪೆಂಡಿಮಿಥೆಲಿನ್ ಅಥವಾ 2.2 ಮಿ. ಲೀ ಅಲಾಕ್ಲೋರ್ ಕಳೆನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 1000 ಲೀಟರ್ ಸಿಂಪರಣಾ ದ್ರಾವಣವನ್ನು ಬಳಸಬೇಕು. ಕಳೆನಾಶಕವನ್ನು ಸಿಂಪಡಿಸುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು. ಬಿತ್ತನೆಯಾದ 20-25 ದಿವಸಗಳ ನಂತರ ಒಂದು ಸಾರಿ ಕಳೆ ತೆಗೆಯಬೇಕು.
     ಮಿಶ್ರ ಬೆಳೆಗಳಲ್ಲಿ ಕಳೆಗಳ ಹತೋಟಿ :  ತೊಗರಿ ಮೂಲಾಧಾರಿತ ಮಿಶ್ರ ಬೆಳೆ ಯೋಜನೆಗಳಾದ ತೊಗರಿ + ಉದ್ದು, ತೊಗರಿ + ಹೆಸರು, ತೊಗರಿ + ಜೋಳ, ತೊಗರಿ + ಎಳ್ಳು ಇವುಗಳಲ್ಲಿ ಬಿತ್ತಿದ ದಿನ ಅಥವಾ ಬಿತ್ತಿದ ಮರುದಿನ 2.7 ಮಿ. ಲೀ ಪ್ಲುಕ್ಲೋರಾಲಿನ್ ಶೇ. 45 ಅಥವಾ 4 ಮಿ. ಲೀ ಅಲಾಕ್ಲೋರ್ ಶೇ. 50 ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಬೇಕು.  ಸಿಂಪರಣೆಯ ಸಮಯದಲ್ಲಿ ಮಣ್ಣು ಹುಡಿಯಾಗಿದ್ದು, ಸಾಕಷ್ಟು ತೇವದಿಂದ ಕೂಡಿರಬೇಕು.  ಹೆಕ್ಟೇರಿಗೆ 1000 ಲೀಟರ್ ಸಿಂಪರಣಾ ದ್ರಾವಣ ಉಪಯೋಗಿಸಬೇಕು.  ಅನವಶ್ಯಕ ಬೆಳವಣಿಗೆಯನ್ನು ಕುಂಠಿತಗೊಳಿಸಲು ಬಿತ್ತಿದ 70 ದಿನಗಳ ನಂತರ 3 ಮಿ. ಲೀ. ಮೆಪಿಕ್ವಾಟ್ ಕ್ಲೋರೈಡ್‍ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಮೊಗ್ಗು, ಹೂ ಮತ್ತು ಕಾಯಿ ಉದುರುವಿಕೆ ತಡೆಗಟ್ಟಲು ಬೆಳೆಯು ಮೊಗ್ಗು, ಹಂತದಲ್ಲಿದ್ದಾಗ 20 ಪಿಪಿಎಂ (100 ಲೀ. ನೀರಿನಲ್ಲಿ 2 ಮಿ. ಲೀ  ಎನ್‍ಎಎ ಬೆರೆಸುವುದು) ನ್ಯಾಪ್ತಲೀನ್ ಅಸಿಟಿಕ್ ಅಸಿಡ್ ಆಮ್ಲವನ್ನು 15 ದಿನಗಳ ಅಂತರದಲ್ಲಿ 3 ಬಾರಿ ಸಿಂಪಡಿಸಬೇಕು.
     ಕೀಟ ಮತ್ತು ರೋಗಗಳ ನಿರ್ವಹಣೆ: ಸದ್ಯದ ಪರಿಸ್ಥಿತಿಯಲ್ಲಿ ತೊಗರಿ ಬೆಳೆಗೆ ಎಲೆ ತಿನ್ನುವ ಕೀಟಗಳು ಕಂಡುಬಂದಿದ್ದು ಇವುಗಳ ಹತೋಟಿಗಾಗಿ ಹಲವು ನಿರ್ವಹಣಾ ಕ್ರಮಗಳನ್ನು ಪಾಲಿಸಲು ಸಲಹೆ ನೀಡಲಾಗಿದೆ.  ಮೋಹಕ ಬಲೆಗಳ ಬಳಕೆ ಉತ್ತಮ ಮಾರ್ಗವಾಗಿದ್ದು, ಇವುಗಳ ಬಳಕೆಯಿಂದ ಹಿಲಿಯೋಥಿಸ್ ಕೀಟದ ಸಂಖ್ಯೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಎಕರೆಗೆ 3-4 ಬಲೆಗಳನ್ನು ಬೆಳೆಗಿಂತ 1 ಅಡಿ ಎತ್ತರದಲ್ಲಿ ಕಟ್ಟಬೇಕು ಹಾಗೂ ಮೋಹಕ ವಸ್ತುಗಳನ್ನು 20 ದಿನಕ್ಕೊಮ್ಮೆಯಂತೆ ಬದಲಾಯಿಸಬೇಕು.  ಪ್ರತಿ ಬಲೆಗೆ ದಿನಕ್ಕೆ 10 ಕ್ಕೂ ಹೆಚ್ಚು ಪತಂಗಗಳು ಬಿದ್ದರೆ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು.
     ಕೀಟಭಕ್ಷಕ ಪಕ್ಷಿಗಳು :ಕೀಟಭಕ್ಷಕ ಪಕ್ಷಿಗಳಾದ ಕಪ್ಪುಕಾಜಾಣ, ಮನೆಗುಬ್ಬಿ, ಮೈನಾ, ಇರ್ಗೆಟ್ ಇತ್ಯಾದಿಗಳನ್ನು ಗುರುತಿಸಿ ಅವುಗಳ ಉಪಯುಕ್ತತೆಯನ್ನು ಪಡೆಯಲು ಪ್ರತಿ ಹೆಕ್ಟೇರಿಗೆ ಸುಮಾರು 25 ರಿಂದ 40 ಮರದ ಟೊಂಗೆಗಳನ್ನು ನೆಡಬೇಕು ಮತ್ತು ಮುಖ್ಯ ಬೆಳೆಯ ಜೊತೆಗೆ ಸ್ಥಳೀಯ ಜೋಳದ ಬೀಜಗಳನ್ನು ಬೆರೆಸಿ ಬಿತ್ತನೆ ಮಾಡಬೇಕು. ಹಕ್ಕಿಗಳ ಚಟುವಟಿಕೆ ಹೆಚ್ಚದಲ್ಲಿ ಕೀಟನಾಶಕಗಳ ಉಪಯೋಗವನ್ನು ಕಡಿಮೆಗೊಳಿಸಬಹುದು. ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಣೆ ಮಾಡಲು ಚುರುಮುರಿ ಕಾಳುಗಳನ್ನು ಹಾಕಬೇಕು. ಪಕ್ಷಿಗಳ ಚಟುವಟಿಕೆಗಳಿಂದ ಕೀಡೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.
     ಬೇವಿನ ಬೀಜದ ಕಷಾಯದ ಬಳಕೆ : ಶೇ. 5 ರ ಬೇವಿನ ಬೀಜದ ಕಷಾಯ ಸಿಂಪರಣೆ ಮಾಡಬೇಕು. ಬೇವಿನ ವಿಷಕಾರಿ ಹಾಗೂ ವಿಕರ್ಷಕ ಗುಣಧರ್ಮವು ಪತಂಗಗಳು ಮೊಟ್ಟೆ ಇಡಲು ಅಡೆತಡೆ ಉಂಟು ಮಾಡುವುದು ಹಾಗೂ ಕೀಡೆಗಳು ಆಹಾರ ಸೇವಿಸದೇ ಹಸಿವೆಯಿಂದ ಬಳಲಿ ನಾಶ ಹೊಂದುವಂತೆ ಮಾಡುವದು.
     ಕೀಟನಾಶಕಗಳ ಬಳಕೆ:  ತತ್ತಿ ನಾಶಕಗಳಾದ ಥೈಯೋಡಿಕಾರ್ಬ 75 ಡಬ್ಲ್ಯೂ.ಪಿ.0.6 ಗ್ರಾಂ ಅಥವಾ 2 ಮಿ.ಲೀ. ಪ್ರೋಪೆನೋಫಾಸ್ 50 ಇ.ಸಿ ಅಥವಾ 0.6 ಗ್ರಾಂ ಮಿಥೋಮಿಲ್ 40 ಎಸ್.ಪಿ. ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಮತ್ತು ಹಸಿರು ಕೀಡೆಗಳ ನಿರ್ವಹಣೆಗಾಗಿ 2 ಮಿ.ಲೀ. ಪ್ರೋಪೆನೋಫಾಸ್ 50 ಇ.ಸಿ. ಮತ್ತು 0.5 ಮಿ.ಲೀ. ನೊವಾನ್ ಮಿಶ್ರಣಮಾಡಿ ಸಿಂಪಡಿಸಬೇಕು.
     ತೊಗರಿಯಲ್ಲಿ ಕುಡಿ ಚಿವುಟುವದು : ತೊಗರಿಯನ್ನು ಬಿತ್ತನೆ ಮಾಡಿದ 50 ದಿನಗಳಲ್ಲಿ ಬೆಳೆ ಮೇಲ್ಭಾಗದ ಕುಡಿಯನ್ನು 5-6 ಸೆಂ. ಮೀ ದಷ್ಟು ಕುಡಿ  ಚಿವುಟುವದರಿಂದ  ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆದು, ಕಾಯಿಗಳ ಸಂಖ್ಯೆ ಹೆಚ್ಚಾಗಿ ಇಳುವರಿ ಹೆಚ್ಚಾಗುತ್ತದೆ.
    ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತಾಲೂಕಾ ಪಂಚಾಯತಿ ಆವರಣ, ಕೊಪ್ಪಳ, ದೂರವಾಣಿ ಸಂ: 08539-220305, ಮೊ: 9448690684 ಕ್ಕೆ ಸಂಪರ್ಕಿಸಬಹುದು.

ಜೂ.30 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನಾ ಸಭೆ

ಕೊಪ್ಪಳ ಜೂ.28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ಜೂ. 30 ರಂದು ಬೆಳಿಗ್ಗೆ 11-30 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್‍ಎಎಲ್ ನಲ್ಲಿ ಶಿಶುಕ್ಷು ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ಜೂ.28 (ಕರ್ನಾಟಕ ವಾರ್ತೆ): ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು (ಊಂಐ ) ಇವರಿಂದ ವಿವಿಧ ವೃತ್ತಿಗಳಲ್ಲಿ ಅಕ್ಟೋಬರ್ ನಿಂದ ಪ್ರಾರಂಭವಾಗಲಿರುವ ಶಿಶುಕ್ಷು (ಅಪ್ರೆಂಟಿಸ್) ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಎನ್‍ಸಿವಿಟಿ ಅಡಿಯಲ್ಲಿ ಐಟಿಐ ಪರೀಕ್ಷೆಯನ್ನು ಫಿಟ್ಟರ್, ಟರ್ನರ್, ಮಶಿನಿಷ್ಟ, ಎಲೆಕ್ಟ್ರೀಷನ್, ವೆಲ್ಡರ್, ಫೌಂಡ್ರಿಮ್ಯಾನ್, ಶೀಟ್ ಮೆಟಲ್ ವರ್ಕರ್ ಹಾಗೂ ಪಾಸಾ ವೃತ್ತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 ಅರ್ಜಿ ನಮೂನೆಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಪಡೆದು ಭರ್ತಿ ಮಾಡಿ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರ, ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಿ,  ಜುಲೈ 14 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಭವನ, ಮೊದಲನೆ ಮಹಡಿ, ಕೊಪ್ಪಳ ದೂ.ಸಂ :08539-220859 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.29 ರಂದು ಕೊಪ್ಪಳದಲ್ಲಿ ಸಾಂಖ್ಯಿಕ ದಿನಾಚರಣೆ

ಕೊಪ್ಪಳ ಜೂ.28 (ಕರ್ನಾಟಕ ವಾರ್ತೆ): ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ವತಿಯಿಂದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪಿ.ಸಿ ಮಹಾಲನೋಬಿಸ್ ಅವರ ಜನ್ಮದಿನಾಚರಣೆ ಅಂಗವಾಗಿ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮ ಜೂ.29 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
     ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ (ಯೋಗಕ್ಷೇಮ) ಎಂಬ ವಿಷಯದ ಕುರಿತು ವಿಷೇಶ ಉಪನ್ಯಾಸ ಏರ್ಪಡಿಸಲಾಗಿದೆ.  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂಖ್ಯಿಕ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಗೂ ಸಂಘಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಭೀಮಶಾ ಬಿ. ಸಿಂಗೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಜೂ.29 ರಂದು ಕಿನ್ನಾಳ ಗ್ರಾಮ ಪಂಚಾಯತ್‍ನಲ್ಲಿ ಗ್ರಾಮ ಸಭೆ

ಕೊಪ್ಪಳ ಜೂ.28 (ಕರ್ನಾಟಕ ವಾರ್ತೆ): ಕಿನ್ನಾಳ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಸಭೆಯನ್ನು ಜೂ.29 ರಂದು ಬೆಳಗ್ಗೆ 10.30 ಗಂಟೆಗೆ ಗ್ರಾ.ಪಂ ಆವರಣದಲ್ಲಿ ಏರ್ಪಡಿಸಲಾಗಿದೆ.
     ಗ್ರಾಮಸಭೆಯಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ರಚಿಸುವ ಕುರಿತು, ಪ್ರಧಾನ ಮಂತ್ರಿ ಆವಾಜ್ ಯೋಜನೆಯ (ಗ್ರಾಮೀಣ) ಹಾಗೂ ಇತರೆ ವಸತಿ ಯೋಜನೆಗಳ ವಸತಿ ರಹಿತ ಫಲಾನುಭವಿಗಳ ಪಟ್ಟಿ ತಯಾರಿಸುವ ಕುರಿತು, ಸ್ವಚ್ಚ ಭಾರತ ಅಭಿಯಾನದಡಿ ಕಿನ್ನಾಳ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಮಾಡುವ ಕುರಿತು ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದು. ಗ್ರಾಮದ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಿನ್ನಾಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 27 June 2016

ಹೆಸರು ಬೆಳೆ : ಮುಂಜಾಗ್ರತಾ ಕ್ರಮಗಳ ಕುರಿತು ರೈತರಿಗೆ ಸಲಹೆಗಳು


ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೊಪ್ಪಳ ಜಿಲ್ಲೆಯಾದ್ಯಂತ ಮುಂಗಾರು ಬೆಳೆಗಳ ಸ್ಥಿತಿಗತಿ ಅರಿಯಲು ಜಂಟಿಸಮೀಕ್ಷೆ ಕೈಗೊಂಡಿದ್ದು ಹೆಸರು ಬೆಳೆಗೆ ಸಂಬಂಧಿಸಿದಂತೆ ರೈತರು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆಗಳನ್ನು ನೀಡಲಾಗಿದೆ.
      ಹೆಸರು ಬೆಳೆ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಭಾಗದಲ್ಲಿ ಬಿತ್ತನೆಯಾಗಿದ್ದು, 20 ರಿಂದ 25 ದಿವಸದ ಬೆಳೆಯ ಹಂತದಲ್ಲಿದೆ.  ಈ ಹಂತದಲ್ಲಿ ಕಳೆಗಳ ನಿರ್ವಹಣೆ ಅಗತ್ಯವಿದ್ದು, ಮುಂದಿನ 10 ದಿನಗಳಲ್ಲಿ ಅಂತರಬೇಸಾಯ ಮಾಡಿ ಕಳೆ ಕತೋಟಿ ಮಾಡಬೇಕು.
     ಕೀಟ ಮತ್ತು ರೋಗ ನಿರ್ವಹಣೆ : ಮುಂಜಾಗ್ರತಾ ಕ್ರಮವಾಗಿ ರೈತರು ಪ್ರತಿ ಎಕರೆಗೆ 5 ರಂತೆ ಮೋಹಕ ಮತ್ತು ಅಂಟುಬಲೆಗಳನ್ನು ಹೊಲದಲ್ಲಿ ಹಾಕಬೇಕು.  ಇದರಿಂದ ಹೇನು, ಥ್ರ್ರಿಪ್ಸ್ ಮತ್ತು ಬಿಳಿ ನೊಣಗಳ ಬಾಧೆ ಕಡಿಮೆಯಾಗುತ್ತದೆ.  ಹೇನು ಮತ್ತು ತ್ರಿಪ್ಸ್ ಬಾಧೆ ಕಂಡುಬಂದರೆ, ಪ್ರತಿ ಲೀಟರ್ ನೀರಿಗೆ 1 ಮಿ.ಲಿ. ಪ್ಯಾರಾಥಿಯಾನ್ 50 ಇಸಿ ಅಥವಾ 1 ಮಿ.ಲೀ. ಮೊನೊಕ್ರೋಟೊಫಾಸ್ 36 ಎಸ್.ಎಲ್. ಅಥವಾ 1.7 ಮಿ.ಲೀ. ಡೈಮಿಥೋಯೇಟ್ 30 ಇಸಿ ಬೆರೆಸಿ ಸಿಂಪಡಿಸಬೇಕು ಅಥವಾ ಪ್ರತೀ ಲೀ. ನೀರಿಗೆ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಮಿ.ಲೀ ಥಯಾಮಿಥಾಕ್ಸಾಮ್ 25 ಡಬ್ಲ್ಯೂಜಿ ಅಥವಾ 1.7 ಮಿ.ಲೀ ಡೈಮೆಥೋಯೇಟ್ 30 ಇಸಿ ಬೆರೆಸಿ ಸಿಂಪಡಿಸಬೇಕು.  ಬಿಳಿ ನೊಣದ ನಿಯಂತ್ರಣಕ್ಕಾಗಿ ಟ್ರಯೊಜೊಫಾಸ್ 1.25 ಮಿ.ಲೀ ಪ್ರತೀ ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.  ಎಲೆ ತಿನ್ನುವ ಹಾಗು ಕಾಯಿ ಕೊರಕದ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ 0.5 ಮಿ. ಲೀ ಫೆನವಲರೇಟ್ 20 ಇಸಿ ಅಥವಾ 2 ಮಿ. ಲೀ ಕ್ವಿನಾಲ್‍ಫಾಸ್ 25 ಇಸಿ ಬೆರೆಸಿ ಸಿಂಪರಿಸಬೇಕು.
     ಹಳದಿ ನಂಜು ರೋಗ ನಿವಾರಣೆ : ಈ ರೋಗದ ಲಕ್ಷಣವೆಂದರೆ ಎಲೆಗಳ ಮೇಲೆ ತಿಳಿ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಹಳದಿ ಬಣ್ಣದ ಭಾಗ ಬೆಳೆಯುತ್ತಾ ಹೋಗುವುದು. ಇಂತಹ ರೋಗ ಪೀಡಿತ ಸಸಿಗಳು ತಡವಾಗಿ ಮಾಗುವುದಲ್ಲದೆ, ಹೂ ಕಾಯಿಗಳ ಸಂಖ್ಯೆ ಕಡಿಮೆ ಇರುವುದು. ಕಾಯಿಗಳ ಗಾತ್ರ ಚಿಕ್ಕದಾಗಿ ಕಾಳುಗಳು ಸಣ್ಣದಾಗುವವು. ಈ ರೋಗವು ಬೀಜಗಳ ಮುಖಾಂತರ ಪ್ರಸಾರ ಆಗುವುದಿಲ್ಲ.  ಆದರೆ ಇದರ ಪ್ರಸಾರ ಬಿಳಿನೊಣಗಳ ಮುಖಾಂತರ ಆಗುವುದು.  ಬಾಡುತ್ತಿರುವ ಮತ್ತು ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು. ಈ ರೋಗವು ಕೀಟಗಳಿಂದ ಪ್ರಸಾರವಾಗುವುದರಿಂದ ಕೀಟನಾಶಕ ಸಿಂಪರಣೆ ಮಾಡುವುದರಿಂದ ಹತೋಟಿ ಮಾಡಬಹುದು. ರೋಗ ಲಕ್ಷಣಗಳು ಕಂಡುಬಂದ ಮೇಲೆ 1.5 ಮೀ.ಲೀ. ಟ್ರೈಜೋಫಾಸ್ ಅಥವಾ 1 ಮೀ.ಲೀ ಆಕ್ಸಿಡೆಮೆಟಾನ್ ಮೀಥೈಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
     ಬೂದಿ ರೋಗ :   ಈ ರೋಗವು ಒಂದು ಶಿಲಿಂದ್ರದಿಂದ ಬರುತ್ತಿದ್ದು, ಇದರ ಲಕ್ಷಣಗಳೆಂದರೆ ರೋಗ ತಗುಲಿದ ಎಲೆಗಳ ಮೇಲೆ ಶಿಲೀಂದ್ರ ಬಿಳಿಯ ಆಕಾರದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ಎಲೆ ಹಾಗೂ ಕಾಯಿಗಳ ಮೇಲೆ ಬೂದು ಬಣ್ಣದ ಶಿಲೀಂದ್ರದ ಬೆಳವಣಿಗೆಯನ್ನು ಕಾಣಬಹುದು. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಉದುರುವವು. ಕಾಯಿಗಳ ಬೆಳವಣಿಗೆ ಕುಂಠಿತವಾಗುವುದರಿಂದ ಇಳುವರಿಯಲ್ಲಿ ನಷ್ಟ ಆಗುವುದು.  ಇದರ ನಿರ್ವಹಣೆಗಾಗಿ  0.5 ಮಿ.ಲೀ ಪ್ರೊಪಿಕೋನಾಜೋಲ್ ಅಥವಾ 3.0 ಗ್ರಾಂ ನೀರಿನಲ್ಲಿ ಕರಗುವ ಶೇ. 80 ರ ಗಂಧಕ ಅಥವಾ 1 ಗ್ರಾಂ ಕಾರ್ಬನ್‍ಡೈಜಿಮ್ 50 ಡಬ್ಯೂಪಿನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
     ಸರಕೊಸ್ಪೊರಾ ಎಲೆ ಚುಕ್ಕೆ ರೋಗ :  ಇದರ ರೋಗ ಲಕ್ಷಣಗಳೆಂದರೆ ಎಲೆಗಳ ಮೇಲೆ ಬೂದು ಬಣ್ಣದಿಂದ ಕೂಡಿದ ವೃತ್ತಾಕಾರದ ಚುಕ್ಕೆಗಳು ಕಾಣಿಸಿಕೊಂಡು ನಂಥರ ಅದರ ಸುತ್ತಲೂ ನೇರಳ ಮಿಶ್ರಿತ ಕಂದು ಬಣ್ಣದ ಬಳೆ ಆವರಿಸುತ್ತದೆ. ಈ ರೀತಿಯ ಚುಕ್ಕೆಗಳು ಕಾಯಿಗಳ ಮೇಲೆ ಕೂಡಾ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಬಿತ್ತಿದ ನಾಲ್ಕರಿಂದ ಆರು ವಾರಗಳ ನಂತರ ಕಾಣಿಸಿಕೊಳ್ಳುವ ಈ ರೋಗ, ವಾತಾವರಣದಲ್ಲಿ ಆದ್ರ್ರತೆ ಹೆಚ್ಚಾದಂತೆ ಈ ರೋಗ ಉಲ್ಬಣವಾಗುವುದು.  ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಜೈನೆಬ್ 75 ಡಬ್ಯೂಪಿ ಅಥವಾ ಮೆಂಕೋಜೆಬ್ 75 ಡಬ್ಯೂಪಿ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಯೂಪಿ ಬೆರೆಸಿ ಸಿಂಪಡಿಸಬೇಕು.
     ದಂಡಾಣುವಿನ ಎಲೆ ಚುಕ್ಕೆ ರೋಗ :  ಇದು ಒಂದು ದಂಡಾಣುವಿಂದ ಬರುತ್ತದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ಕಂದು ಬಣ್ಣದ ಚುಕ್ಕೆಗಳು ವೃತ್ತಾಕಾರವಾಗಿ ಇಲ್ಲವೆ ಇನ್ನಾವುದೇ ಆಕಾರದಲ್ಲಿ ಎಲೆಗಳ ಮೇಲೆ ಕಾಣಿಸಿಕೊಳ್ಳುವುದು. ನಂತರ ಇದು ಎಲೆಗಳ ದೇಟು ಹಾಗೂ ಕಾಂಡದ ಮೇಲೂ ಕಾಣಿಸಿಕೊಳ್ಳುವುದು. ಆದರೆ ಇಲ್ಲಿ ವೃತ್ತಾಕಾರವಾಗಿ ಇರದೆ ಉದ್ದವಾಗಿ ಇರುವುದು. ನಂತರ ಇದು ಕಾಯಿಗಳ ಮೇಲೂ ಕಂಡು ಬರುವುದು. ಹುಳಗಳ ಗಾಳಿಯ ಮುಖಾಂತರ ಹೆಚ್ಚಿನ ಪ್ರಸಾರವಾಗುತ್ತವೆ. ಬೀಜಗಳ ಮುಖಾಂತರ ಪ್ರಸಾರವಾಗುವುದೆಂದು ಕಂಡು ಬಂದಿದೆ.  ಇದರ ನಿರ್ವಹಣೆಗಾಗಿ  3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಯೂಪಿ ಬೆರೆಸಿ ಸಿಂಪಡಿಸಬೇಕು.
     ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತಾಲೂಕಾ ಪಂಚಾಯತಿ ಆವರಣ, ಕೊಪ್ಪಳ, ದೂರವಾಣಿ ಸಂ: 08539-220305, ಮೊ: 9448690684 ಕ್ಕೆ ಸಂಪರ್ಕಿಸಬಹುದು.

ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಸಕ್ತ ಸಾಲಿನಲ್ಲಿ ಉಚಿತವಾಗಿ ಪರೀಕ್ಷಾ ಪೂರ್ವ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ಜಿಲ್ಲೆಯ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ ಹಾಗೂ 3ಬಿ ವರ್ಗಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.  ಅಭ್ಯರ್ಥಿಯ ಮತ್ತು ಕುಟುಂಬದ ವಾರ್ಷಿಕ ಆದಾಯ ಪ್ರವರ್ಗ-1 ರ ಅಭ್ಯರ್ಥಿಗಳಿಗೆ 4. 50 ಲಕ್ಷ ರೂ., 2ಎ, 3ಎ ಹಾಗೂ 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 3. 50 ಲಕ್ಷ ರೂ. ಮೀರಿರಬಾರದು.  ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ, ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಮತ್ತು ಕೊಪ್ಪಳ ಪರೀಕ್ಷಾ ಕೇಂದ್ರಗಳ ದಿನಾಂಕ ಮತ್ತು ಸಮಯವನ್ನು ನಂತರದ ದಿನಗಳಲ್ಲಿ ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.  ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್  www.backwardclasses.kar.nic.in  ಅಥವಾ ಮೊಬೈಲ್- 9480818013,  9480818010 ಅಥವಾ ಸ್ಥಿರ ದೂರವಾಣಿ : 080-44554444 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2015-16 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
      ಕ್ರೀಡೆ, ಸಾಂಸ್ಕøತಿಕ ಹಾಗೂ ಸಮುದಾಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ, ಇಲಾಖೆಯಲ್ಲಿ ನೋಂದಾಯಿತ ಯುವಕ, ಯುವತಿಯರಿಗೆ ಹಾಗೂ ನೋಂದಾಯಿತ ಯುವಕ, ಯುವತಿ ಸಂಘಗಳಿಗೆ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ನೀಡುವ ಯೋಜನೆ ಇದೆ.  ಅರ್ಜಿ ಸಲ್ಲಿಸಲು ಇಚ್ಛಿಸುವವರು ದಿ; 31-3-2016 ಕ್ಕೆ 35 ವರ್ಷ ಮೀರಿರಬಾರದು.  ಜನ್ಮ ದಿನಾಂಕ ದೃಢೀಕರಿಸುವ ದಾಖಲೆ ಕಡ್ಡಾಯವಾಗಿ ಸಲ್ಲಿಸಬೇಕು.  ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗದಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ದೃಢೀಕರಣದ ಮೂಲ ಪ್ರತಿ ಸಲ್ಲಿಸಬೇಕು.  2015 ರ ಏಪ್ರಿಲ್ 01 ರಿಂದ 2016 ರ ಮಾರ್ಚ್ 31 ರವರೆಗಿನ ಸಾಧನೆಯನ್ನು ಮಾತ್ರ ಪರಿಗಣಿಸಲಾಗುವುದು.  ಈ ಕುರಿತಂತೆ ಕಾರ್ಯಕ್ರಮಗಳ ಪತ್ರಿಕಾ ವರದಿಗಳು, ಛಾಯಾಚಿತ್ರ, ಮತ್ತಿತರ ವರದಿಯ ಮೂಲ ಪ್ರತಿಯನ್ನು ಸಲ್ಲಿಸಬೇಕು.
      ವೈಯಕ್ತಿಕ ಮತ್ತು ಸಾಂಘಿಕ ಪ್ರಶಸ್ತಿಗೆ ಪ್ರಸ್ತಾವನೆಯನ್ನು ಎ-4 ಅಳತೆಯ ಪೇಪರ್‍ನಲ್ಲಿ ಸಲ್ಲಿಸಬೇಕು.  ಬೇರೆ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಾಗಲಿ, ಇತರೆ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಛಾಯಾಚಿತ್ರ ಹಾಗೂ ವರದಿಯನ್ನು ಪರಿಗಣಿಸಲಾಗುವುದಿಲ್ಲ.  ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇವರಿಗೆ ಜುಲೈ 15 ರೊಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ) : ಪ್ರಸಕ್ತ ಸಾಲಿನಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ಅಂದರೆ 01 ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಯಾ ಶಾಲೆಗಳ ಮುಖ್ಯೋಪಾಧ್ಯಾಯರ ಮೂಲಕ ಅರ್ಜಿ ಸಲ್ಲಿಸಲು ಜುಲೈ 07 ಕೊನೆಯ ದಿನವಾಗಿರುತ್ತದೆ.
     ಪ್ರಸಕ್ತ ಸಾಲಿನಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ಜಾರಿಗೊಳಿಸಲು ಇಲಾಖೆ ಸೂಚನೆ ನೀಡಿದೆ.   ಅರ್ಜಿ ಸಲ್ಲಿಸಲು ಹಿಂದುಳಿದ ಪ್ರವರ್ಗಗಳಿಗೆ ಸೇರಿದ ವಿದ್ಯಾರ್ಥಿಯ ಪೋಷಕರ ವಾರ್ಷಿಕ ವರಮಾನ ಪ್ರವರ್ಗ-1 ಕ್ಕೆ 01 ಲಕ್ಷ.  ಪ್ರವರ್ಗ 2ಎ, 3ಎ, 3ಬಿ ಗೆ ರೂ. 44500 ಕ್ಕಿಂಡ ಕಡಿಮೆ ಇರಬೇಕು.  ವಿದ್ಯಾರ್ಥಿಗಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು.  ಆಧಾರ್ ಕಾರ್ಡ್ ನೋಂದಣಿ ಆಗಿರಬೇಕು.  ವಿದ್ಯಾರ್ಥಿಗಳು ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ಜಾತಿ, ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.  ಆಯಾ ಮುಖ್ಯೋಪಾಧ್ಯಾಯರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ನಮೂನೆಯಲ್ಲಿ ಮಾಹಿತಿ ನಮೂದಿಸಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ತೋಟಗಾರಿಕೆ ಬೆಳೆಗಳಿಗೆ ವಿಮೆ ಕಂತು ಪಾವತಿಸಲು ಜೂ. 30 ಕೊನೆ ದಿನ

ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ): ತೋಟಗಾರಿಕೆ ಬೆಳೆಗಳಿಗೆ 2016-17 ನೇ ಸಾಲಿಗೆ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದು, ವಿಮಾ ಕಂತು ಪಾವತಿಸಲು ಜೂ. 30 ಕೊನೆಯ ದಿನವಾಗಿರುತ್ತದೆ.
     ತೋಟಗಾರಿಕೆ ಬೆಳೆಗಳಾದ ಹಸಿ ಮೆಣಸಿನಕಾಯಿ (ನೀರಾವರಿ), ಅಂಗಾಂಶ ಬಾಳೆ, ಕಂದು ಬಾಳೆ, ದಾಳಿಂಬೆ, ಟೊಮ್ಯಾಟೋ (ನೀರಾವರಿ), ಟಮ್ಯಾಟೋ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ), ಈರುಳ್ಳಿ(ಮಳೆ ಆಶ್ರಿತ), ಬದನೆ ಬೆಳೆಗಳನ್ನು ಈ ಯೋಜನೆಗಳ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಹೋಬಳಿವಾರು ಬೆಳೆಗಳ ವ್ಯಾಪ್ತಿಯ ಕುರಿತು ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು. ವಿಮಾ ಕಂತಿಗೆ ಸಂಬಂಧಪಟ್ಟಂತೆ ಹಸಿಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 3750 ರೂ., ಅಂಗಾಂಶ ಬಾಳೆ ಪ್ರತಿ ಹೆಕ್ಟೇರ್‍ಗೆ 6000 ರೂ., ಕಂದುಬಾಳೆ ಪ್ರತಿ ಹೆಕ್ಟೇರ್‍ಗೆ 4500 ರೂ., ದಾಳಿಂಬೆ ಪ್ರತಿ ಹೆಕ್ಟೇರ್‍ಗೆ 7500 ರೂ., ಟಮ್ಯಾಟೋ   ಪ್ರತಿ ಹೆಕ್ಟೇರ್‍ಗೆ 5650 ರೂ., ಈರುಳ್ಳಿ ಪ್ರತಿ ಹೆಕ್ಟೇರ್‍ಗೆ 3550 ರೂ., ಬದನೆ ಪ್ರತಿ ಹೆಕ್ಟೇರ್‍ಗೆ 2700 ರೂ. ನಂತೆ ರೈತರು ತಮ್ಮ ವಿಮೆ ಕಂತಿನ ಮೊತ್ತವನ್ನು ಪಾವತಿಸಲು ಜೂನ್-30 ಕೊನೆಯ ದಿನವಾಗಿದೆ
     ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿಪಂ) ಕೊಪ್ಪಳ. :08539-231530, ಹಿರಿಯ ಸಹಾಯಕ   ರಮೇಶ ಗುಡಿಸಲದ, (7406504120) ಮತ್ತು ನಜೀರ್ ಅಹ್ಮದ್ ಸೋಂಪುರ ಹಿ.ಸ.ತೋ.ನಿ (ಜಿ.ಪಂ)ಕೊಪ್ಪಳ (8861294104).  ಅಜರುದ್ದೀನ್ ಗುಳೆದಗುಡ್ಡ (8867729889) ಮತ್ತು ವಸಂತಪ್ಪ ಹಿ.ಸ.ತೋ.ನಿ (ಜಿ.ಪಂ)ಗಂಗಾವತಿ. (9448262462).  ರವೀಂದ್ರ ಹಂಚಿನಾಳ (9740629545) ಮತ್ತು ಮಂಜುನಾಥ ಲಿಂಗಣ್ಣನವರ್ ಸ.ತೋ.ನಿ (ಜಿಪಂ) ಯಲಬುರ್ಗಾ(9740963828).  ವಿದ್ಯಾಧರ  (9611869849)  ಮತ್ತು ರಾಜಕುಮಾರ್ ಗೋವಿನ (9480633045) ಕ್ಕೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

ಕುಷ್ಟಗಿ : ಹೂಲಗೇರಾ ತಾಂಡಾ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮೀಸಲು ತಿದ್ದುಪಡಿ

ಕೊಪ್ಪಳ ಜೂ.27 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಶಿಶು ಅಭಿವೃದ್ಧಿ ಯೋಜನೆ (ಕೇಂದ್ರ) ಮೂಲಕ ಕುಷ್ಟಗಿ ತಾಲೂಕಿನ ಹೂಲಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೂಲಗೇರಾ ತಾಂಡಾದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಿರಿಸಲಾಗಿದೆ.  ಈ ಮೊದಲು ಇತರೆ ವರ್ಗಕ್ಕೆ ಮೀಸಲಿರಿಸಲಾಗಿದೆ ಎಂದು ತಪ್ಪಾಗಿ ಪ್ರಕಟಣೆ ನೀಡಲಾಗಿತ್ತು.
      ನಿಗದಿತ ಅರ್ಜಿ ನಮೂನೆಯನ್ನು ಶಿಶು ಅಭಿವೃದ್ಧಿ ಯೋಜನೆ (ಕೇಂದ್ರ) ದಿಂದ ಪಡೆದು ಭರ್ತಿಮಾಡಿ ಜುಲೈ 17 ರೊಳಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಬುತ್ತಿ ಬಸವೇಶ್ವರ ನಗರ, ಕುಷ್ಟಗಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Sunday, 26 June 2016

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಯಲಬುರ್ಗಾದಲ್ಲಿ ಸಾರ್ವಜನಿಕ ಅಭಿನಂದನೆ

ಬಸವರಾಜ ರಾಯರಡ್ಡಿ ಅವರು, ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೊದಲ ಬಾರಿಗೆ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಭಾನುವಾರದಂದು ಯಲಬುರ್ಗಾದ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡರು.


ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ 100 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ- ಬಸವರಾಜ ರಾಯರಡ್ಡಿ

ಕೊಪ್ಪಳ ಜೂ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್ ನಲ್ಲಿ ಹೊಸದಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕಾಗಿ 100 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಉನ್ನತ ಶಿಕ್ಷಣ ಸಚಿವರಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಕೈಗೊಂಡ ಮೊದಲ ಅಭಿವೃದ್ಧಿ ಕಾರ್ಯ ಇದಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೊದಲ ಬಾರಿಗೆ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಭಾನುವಾರದಂದು ಯಲಬುರ್ಗಾದ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
     ಉನ್ನತ ಶಿಕ್ಷಣ ಸಚಿವರಾಗಿ ತಾವು ಅಧಿಕಾರ ಸ್ವೀಕರಿಸಿದ ನಂತರ, ಕೊಪ್ಪಳ ಜಿಲ್ಲೆಯದೇ ಆಗಿರುವ ತಳಕಲ್ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ 100 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡುವ ಕಡತಕ್ಕೆ ಸಹಿ ಮಾಡಿದ್ದೇನೆ.  ಈ ಮೂಲಕ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.  ಜೂ. 30 ರಂದು ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯ ಸಮಗ್ರ ವಿಷಯಗಳ ಕುರಿತು ಅಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು.   ಅದೇ ದಿನದಂದು ಇತರೆ ತಾಲೂಕಿನಲ್ಲಿಯೂ ಸಭೆ ಕೈಗೊಂಡು ಪ್ರಾಥಮಿಕ ಹಂತದ ಮಾಹಿತಿ ಪಡೆಯಲಾಗುವುದು.  ನಾನು ಸಮಾಜ ಸೇವಕ, ಜನತೆಯ ಸೇವೆಯನ್ನೇ ದೇವರ ಸೇವೆ ಎಂಬುದಾಗಿ ಭಾವಿಸಿರುವವನು ನಾನು.  ಶಾಸಕನಾಗಿಯೂ ಅಭಿವೃದ್ಧಿಪರ ಕಾರ್ಯ ನಿರ್ವಹಿಸಿದ್ದು, ಸಚಿವರಾಗಿಯೂ ತಾವು ಅಭಿವೃದ್ಧಿ ಕಾರ್ಯಗಳತ್ತ ಇನ್ನೂ ಹೆಚ್ಚಿನ ಗಮನ ಹರಿಸುತ್ತೇನೆ.  ಸಚಿವ ಸ್ಥಾನ ಪಡೆದ ನಂತರ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.  ಸಚಿವ ಸ್ಥಾನವನ್ನು, ಸಾರ್ವಜನಿಕ ಸೇವೆಗಾಗಿ ದೊರೆತ ಉತ್ತಮ ಅವಕಾಶ ಎಂಬುದಾಗಿ ಭಾವಿಸುತ್ತೇನೆ.  ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು, ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.  ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಕೊಪ್ಪಳದಲ್ಲಿ ಎರಡು ವಾರದೊಳಗೆ ಪಿ.ಜಿ. ಸೆಂಟರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು.  ಅಲ್ಲದೆ ಗಂಗಾವತಿಯಲ್ಲಿಯೂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

Saturday, 25 June 2016

ಕಿನ್ನಾಳ ವಿದ್ಯಾರ್ಥಿ ಮನೆಗೆ ಜೆಸ್ಕಾಂ ನಿರ್ದೇಶಕ ರೆಡ್ಡಿ ಶ್ರೀನಿವಾಸ ಭೇಟಿ : ಕುಟುಂಬಕ್ಕೆ ಸಾಂತ್ವನ


ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ವಿದ್ಯುತ್ ಶಾಕ್‍ನಿಂದ ಮೃತಪಟ್ಟ ಕಿನ್ನಾಳದ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಹನುಮೇಶ್ ಕರಿಯಪ್ಪ ಬನ್ನಿಕಟ್ಟಿ ಅವರ ಮನೆಗೆ ಜೆಸ್ಕಾಂ ನಿರ್ದೇಶಕ ಶ್ರೀನಿವಾಸ ರೆಡ್ಡಿ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
     ಕಿನ್ನಾಳದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಜೂ. 22 ರಂದು ವಿದ್ಯುತ್ ಶಾಕ್‍ನಿಂದ ವಿದ್ಯಾರ್ಥಿ ಹನುಮೇಶ್ ಕರಿಯಪ್ಪ ಬನ್ನಿಕಟ್ಟಿ ಮೃತಪಟ್ಟ ದುರ್ಘಟನೆ ಜರುಗಿತ್ತು.  ಈ ಹಿನ್ನೆಲೆಯಲ್ಲಿ ಜೆಸ್ಕಾಂ ನ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ಶನಿವಾರದಂದು ಕಿನ್ನಾಳ ಗ್ರಾಮಕ್ಕೆ ತೆರಳಿ ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನಾಡಿದರು.  ಶಾಲೆಯ ಬಳಿಯಲ್ಲಿನ ಟ್ರಾನ್‍ಫಾರ್ಮರ್ ಅನ್ನು ಈಗಾಗಲೆ ಸ್ಥಳಾಂತರಿಸಲಾಗಿದೆ.  ನಂತರ ಅದೇ ಗ್ರಾಮದ ಇನ್ನೊಂದು ಶಾಲೆಗೆ ಭೇಟಿ ನೀಡಿ ಪರಿಶಿಲಿಸಿದ ಸಂದರ್ಭದಲ್ಲಿ ಶಾಲೆಯ ನಡುವೆಯೇ ಇದ್ದ ವಿದ್ಯುತ್ ಕಂಬವನ್ನು ಸ್ಥಳದಲ್ಲಿಯೇ ಹಾಜರಿದ್ದು, ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದ ಕಾರ್ಯ ಕೈಗೊಂಡರು.   ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯಸ್ಥರು ಹಾಗೂ ಎಸ್‍ಡಿಎಂಸಿ ಯವರು, ಆಯಾ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು.  ಆಂತರಿಕ ವೈರಿಂಗ್ ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು.  ಕಂಪ್ಯೂಟರ್‍ಗಳನ್ನು ಹೊಂದಿರುವ ಶಾಲೆಗಳು ವಿದ್ಯುತ್ ಉಪಕರಣಗಳಿಗೆ ಸೂಕ್ತ ವೈರಿಂಗ್ ಹಾಗೂ ಅರ್ಥಿಂಗ್ ಮಾಡಿಸಲು ಅಗತ್ಯ ಕ್ರಮ ಕೈಗೊಂಡು, ಅಮಾಯಕ ವಿದ್ಯಾರ್ಥಿಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದು ಜೆಸ್ಕಾಂ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ಮನವಿ ಮಾಡಕೊಂಡರು.  ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಈಗಾಗಲೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದ್ದು, ಪರಿಹಾರ ಒದಗಿಸುವಂತೆ ಕೋರಲಾಗಿದೆ ಎಂದರು.
     ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಮಹೇಶ್, ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಗಂಗಾಧರ್, ವಿಎಸ್‍ಎಸ್‍ಎನ್ ಅಧ್ಯಕ್ಷ ವಿರೇಶ್, ಎಸ್‍ಡಿಎಂಸಿ ಅಧ್ಯಕ್ಷ ಬಸವರಾಜ ಚಿಲವಾಡಗಿ, ಶರೀಫ್, ದೇವಣ್ಣ ಮುಂತಾದವರಿದ್ದರು.

ಅಂಥ್ರಾಕ್ಸ್ ಭೀತಿ : ಕರ್ಕಿಹಳ್ಳಿ ಸುತ್ತಮುತ್ತಲ ಜಾನುವಾರುಗಳಿಗೆ ಮುಂಜಾಗ್ರತೆಗಾಗಿ ಲಸಿಕೆ ಹಾಕಲು ಡಿ.ಸಿ. ಸೂಚನೆ


ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ತಾಲೂಕಿನ ಕರ್ಕಿಹಳ್ಳಿ ಬಳಿ ಜಾನುವಾರುಗಳಿಗೆ ಅಂಥ್ರಾಕ್ಸ್ ರೋಗ ಹರಡುವ ಭೀತಿ ಕಂಡುಬಂದಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸುತ್ತಮುತ್ತಲ ಎಲ್ಲ ಜಾನುವಾರುಗಳಿಗೆ ಅಗತ್ಯ ಲಸಿಕೆ ಹಾಕಬೇಕು.  ಹಾಗೂ ರೋಗ ಹರಡದಂತೆ ಇಲ್ಲಿನ ಸಾರ್ವಜನಿಕರಿಗೆ ಅಗತ್ಯ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪಶುಸಂಗೋಪನೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಾನುವಾರುಗಳಿಗೆ ಅಂಥ್ರಾಕ್ಸ್ ರೋಗ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಮುಂಜಾಗ್ರತಾ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ತಾಲೂಕಿನ ಕರ್ಕಿಹಳ್ಳಿ ಸುತ್ತಮುತ್ತ ಜಾನುವಾರುಗಳಿಗೆ ಅಂಥ್ರಾಕ್ಸ್ ರೋಗ ಕಂಡುಬಂದಿರುವ ಹಿನ್ನೆಲೆಯಲ್ಲಿ, ಪಶುಸಂಗೋಪನೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಲವು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು.  ಇತರೆ ಜಾನುವಾರುಗಳಿಗೆ ಹಾಗೂ ಜನರಿಗೆ ರೋಗ ಹರಡದಂತೆ ಮಾಡಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು.  ಅಗತ್ಯ ಔಷಧಿ ಹಾಗೂ ಲಸಿಕೆಯನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು.   ಕರ್ಕಿಹಳ್ಳಿ ಸುತ್ತಮುತ್ತಲಿನ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು.  ಸಾರ್ವಜನಿಕರಿಗಾಗಿ ಪಶುಸಂಗೋಪನೆ ಇಲಾಖೆಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಸಂಖ್ಯೆ : 9742466540 ಆಗಿದ್ದು, ಡಾ. ಅಂಗಡಿ ಅವರು ಸಹಾಯವಾಣಿ ನಿರ್ವಹಿಸಲಿದ್ದಾರೆ.  ಜಾನುವಾರುಗಳು ಯಾವುದೇ ರೋಗದಿಂದ ಸತ್ತಲ್ಲಿ, ಕೂಡಲೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು.  ಅಲ್ಲದೆ ಸಂಬಂಧಿಸಿದ ಗ್ರಾ.ಪಂ. ಪಿಡಿಓ ಗೆ ಹಾಗೂ ಪಶು ವೈದ್ಯಾಧಿಕಾರಿಗಳಲ್ಲಿ ತಿಳಿಸಬೇಕು.  ರೋಗವು ಜಾನುವಾರುಗಳಿಂದ ಜನರಿಗೂ ಸಹ ಹರಡುವ ಸಾಧ್ಯತೆ ಇರುವುದರಿಂದ, ಆರೋಗ್ಯ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯನ್ನು ಸ್ಥಾಪಿಸಿ, ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪಶುಸಂಗೋಪನೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  ಕರ್ಕಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಸಹ ಸಾರ್ವಜನಿಕರು ಜಾನುವಾರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.  ಅಲ್ಲದೆ ಬೇರೆ ಭಾಗದ ಜಾನುವಾರುಗಳು ಈ ಭಾಗಕ್ಕೆ ಬಾರದಂತೆ ಹಾಗೂ ಇಲ್ಲಿನ ಜಾನುವಾರುಗಳನ್ನು ಬೇರೆಡೆ ಅನಗತ್ಯವಾಗಿ ಸಾಗಿಸದಂತೆಯೂ ಸಹ ಎಚ್ಚರಿಕೆ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ಹಾಗೂ ಪಿಡಿಓ ಗಳು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಜಯರಾಂ ಅವರು, ಮಾತನಾಡಿ,  ಅಂಥ್ರಾಕ್ಸ್ ರೋಗ ಕುರಿತಂತೆ ಮಾಹಿತಿ ದೊರೆತ ಕೂಡಲೆ, ಬೆಂಗಳೂರಿನಲ್ಲಿರುವ ಪ್ರಾಣಿಗಳ ಜೈವಿಕ ಸಂಸ್ಥೆಯ ವಿಜ್ಞಾನಿಗಳನ್ನು ಜಿಲ್ಲೆಗೆ ಕರೆಸಿ, ಪರಿಶೀಲನೆ ಕಾರ್ಯ ಕೈಗೊಳ್ಳಲಾಯಿತು.  ರೋಗದಿಂದ ಸತ್ತ ಜಾನುವಾರುಗಳನ್ನು ಎಲ್ಲೆಂದರಲ್ಲಿ, ಹೇಗೆ ಬೇಕೋ ಹಾಗೆ ಹೂಳಬಾರದು.  ಅಥವಾ ಬಿಡಬಾರದು.  ಇದರಿಂದ ಜನರಿಗೂ ಸಹ ಈ ರೋಗ ಹರಡುವ ಸಾಧ್ಯತೆಗಳಿರುತ್ತದೆ.   ರೋಗದಿಂದ ಸತ್ತ ಜಾನುವಾರುಗಳನ್ನು ಕನಿಷ್ಟ 06 ಅಡಿ ಆಳದಲ್ಲಿ ಹೂಳಬೇಕು.   ಗುಂಡಿಗೆ ಸತ್ತ ಜಾನುವಾರು ಹಾಕುವುದಕ್ಕೂ ಮುನ್ನ ಹಾಗೂ ನಂತರವೂ ಕೂಡ  ಸುಣ್ಣವನ್ನು  ಗುಂಡಿಯಲ್ಲಿ ಹಾಕಿ ನಂತರವೇ ಮುಚ್ಚಬೇಕು.   ಈಗಾಗಲೆ ಈ ಭಾಗದಲ್ಲಿ ಸುಮಾರು 3800 ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ಹಾಕಲಾಗಿದೆ.  ಇನ್ನೂ 1200 ಜಾನುವಾರುಗಳಿಗೆ ಎರಡು ದಿನಗಳ ಒಳಗಾಗಿ ಲಸಿಕೆ ಹಾಕಲಾಗುವುದು.  ಜಾನುವಾರುಗಳಿಗೆ ರೋಗ ಕಂಡುಬಂದಲ್ಲಿ ಅಗತ್ಯ ಚಿಕಿತ್ಸೆಯ ಜೊತೆಗೆ ರೋಗ ಲಕ್ಷಣ ಕಡಿಮೆಯಾಗುವವರೆಗೂ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.  ಜಾನುವಾರುಗಳಿಂದ ಜನರಿಗೂ ಸಹ ಈ ರೋಗ ಹರಡುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರೂ ಸಹ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ.ಎಸ್. ಜಂಬಗಿ, ಬೆಂಗಳೂರಿನ ಪ್ರಾಣಿಗಳ ಜೈವಿಕ ಸಂಸ್ಥೆಯ ವಿಜ್ಞಾನಿಗಳಾದ ಡಾ. ಗಿರೀಶ್ ಹಾಗೂ ವೆಂಕಟೇಶ್, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.  ಜಾನುವಾರುಗಳಿಗೆ ಯಾವುದೇ ರೋಗ ಕುರಿತಂತೆ ಮಾಹಿತಿಗಾಗಿ ಪಶುಸಂಗೋಪನೆ ಇಲಾಖೆ ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳಾದ ಕೊಪ್ಪಳ- ಡಾ. ಯಮುನಪ್ಪ- 9845892056, ಯಲಬುರ್ಗಾ ಡಾ. ತಿಪ್ಪಣ್ಣ- 9448571358.  ಗಂಗಾವತಿ ಡಾ. ಸೋಮಪ್ಪ- 9845635656.  ಕುಷ್ಟಗಿ ಡಾ. ಜಯರಾಂ ಚವ್ಹಾಣ್- 9740335765 ಕ್ಕೆ ಸಂಪರ್ಕಿಸಬಹುದು.

ಕುಷ್ಟಗಿ : ಮೆಟ್ರಿಕ್ ನಂತರದ ನೂತನ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗಾಗಿ ಕುಷ್ಟಗಿ ಪಟ್ಟಣದಲ್ಲಿ ಹೊಸದಾಗಿ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಹೊಸದಾಗಿ ಪ್ರಾರಂಭಿಸಲಾಗಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಅಲ್ಪಸಂಖ್ಯಾತರಿಗೆ ಶೇ. 75 ಮತ್ತು ಇತರರಿಗೆ ಶೇ. 25 ರಷ್ಟು ಸ್ಥಾನಗಳು ಲಭ್ಯವಿರುತ್ತವೆ.  ನಿಗದಿತ ಅರ್ಜಿ ನಮೂನೆಯನ್ನು ಕುಷ್ಟಗಿಯ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಜುಲೈ 20 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಯನ್ನು ಕುಷ್ಟಗಿಯ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ನೂತನ ಸಚಿವರಾದ ಬಸವರಾಜ ರಾಯರಡ್ಡಿ ಅವರು ಜೂ. 26 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ ಧಾರವಾಡದಿಂದ ಹೊರಟು, 11 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸುವರು.  ನಂತರ ಯಲಬುರ್ಗಾ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 3 ಗಂಟೆಗೆ ಧಾರವಾಡಕ್ಕೆ ತೆರಳಿ, ಅಲ್ಲಿಂದ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಮುಂಗಾರು ಹಂಗಾಮು : ಫಸಲ್ ಬೀಮಾ ಯೋಜನೆ ಸದುಪಯೋಗ ಪಡೆದುಕೊಳ್ಳಲು ಮನವಿ

ಕೊಪ್ಪಳ ಜೂ.25 (ಕರ್ನಾಟಕ ವಾರ್ತೆ): ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯನ್ನು ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಹೊಸದಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು ಎಲ್ಲಾ ವರ್ಗದ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಎ.ರಾಮದಾಸ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಮಾ ಕಂತು : ವಾಣಿಜ್ಯ ಬೆಳೆಗಳು(ಹತ್ತಿ)- ಶೇ.05, ಇತರೆ ಕೃಷಿ ಬೆಳೆಗಳಿಗೆ ಶೇ.02 ರಷ್ಟು.
ರೈತರು ವಿಮೆಮಾಡಿಸಬೇಕಾದ ಕ್ರಮಗಳು : ಸಂಬಂಧಿಸಿದ ಬ್ಯಾಂಕ್‍ನಲ್ಲಿ ಖಾತೆ ಹೊಂದಿರಬೇಕು. ನಿಗದಿತ ವಿಮಾ ಕಂತನ್ನು ಬ್ಯಾಂಕಿನಲ್ಲಿ ಪಾವತಿಸಬೇಕು. ಭೂಮಿ ಹೊಂದಿರುವುದಕ್ಕೆ ಪಹಣೆ ದಾಖಲೆಯನ್ನು ಲಗತ್ತಿಸಬೇಕು. ಕಂದಾಯ ಇಲಾಖೆಯಿಂದ ಬಿತ್ತನೆ ದೃಡಿಕರಣ ಪತ್ರ ಪಡೆಯಬೇಕು. ಆದಾರ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು. ಬ್ಯಾಂಕ್ ಪಾಸ್‍ಬುಕ್ ಪ್ರತಿ ಲಗತ್ತಿsಸಬೇಕು. ಜುಲೈ 30 ರೊಳಗಾಗಿ ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
 ಯೋಜನೆಯಡಿ ಎಲ್ಲಾ ವರ್ಗದ ರೈತರು ಪಾಲ್ಗೊಂಡು ಬೆಳೆವಿಮೆ ಪ್ರೀಮಿಯಮ್ ತುಂಬಿ ಯೋಜನೆಯ ಪ್ರಯೋಜನ ಪಡೆಯಬಹುದು.  ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸ್ಥಳಿಯ ವಾಣಿಜ್ಯ, ಗ್ರಾಮೀಣ ಬ್ಯಾಂಕ್ ನಲ್ಲಿ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಎ.ರಾಮದಾಸ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ : ಕೈಗಾರಿಕಾ ತರಬೇತಿ ಸಂಸ್ಥೆ ಪ್ರವೇಶಕ್ಕಾಗಿ ಅರ್ಜಿ ಅಹ್ವಾನ

ಕೊಪ್ಪಳ ಜೂ.25 (ಕರ್ನಾಟಕ ವಾರ್ತೆ): ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿ ಇವರಿಂದ ಐಎಂಸಿ, ಪಿಪಿಪಿ ಯೋಜನೆಯಡಿ ವಿವಿಧ ವೃತ್ತಿಗಳಿಗೆ (ಎನ್‍ಸಿವಿಟಿ-ಟ್ರೆಡರ್ಸ್) ಪ್ರಸಕ್ತ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಎಲೆಕ್ಟ್ರೀಷನ್-05, ಫಿಟ್ಟರ್-05, ಎಲೆಕ್ಟ್ರಾನಿಕ್ ಮೆಕ್ಯಾನಿಕ್-06 ಟ್ರರ್ನರ್-04 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜುಲೈ-15 ಕೊನೆಯದಿನ. ಮೊದಲು ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಆನೆಗೊಂದಿ ರಸ್ತೆ, ಗಂಗಾವತಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 22 June 2016

ಭಾಗ್ಯನಗರ ಪಟ್ಟಣ ಪಂಚಾಯತಿ ಚುನಾವಣೆ : ಅಧಿಸೂಚನೆ ಪ್ರಕಟ

ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಭಾಗ್ಯನಗರ ನೂತನ ಪಟ್ಟಣ ಪಂಚಾಯತಿಗೆ ಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಬುಧವಾರದಂದು ಅಧಿಸೂಚನೆ ಹೊರಡಿಸಿದ್ದಾರೆ.
ಚುನಾವಣಾ ವೇಳಾಪಟ್ಟಿ : ನಾಮಪತ್ರಗಳ ಸಲ್ಲಿಕೆ ಕಾರ್ಯ ಜು. 22 ರಿಂದಲೇ ಪ್ರಾರಂಭವಾಗಿದ್ದು, ನಾಮಪತ್ರ ಸಲ್ಲಿಸಲು ಜೂ. 29 ಕೊನೆಯ ದಿನಾಂಕವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಜೂ. 30 ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಜುಲೈ 02 ಕೊನೆಯ ದಿನಾಂಕವಾಗಿದ್ದು, ಜುಲೈ 10 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.  ಮತ ಎಣಿಕೆ ಜುಲೈ 13 ರಂದು  ಜರುಗಲಿದ್ದು, ಚುನಾವಣೆ ಪ್ರಕ್ರಿಯೆ ಜುಲೈ 13 ರ ಒಳಗಾಗಿ ಪೂರ್ಣಗೊಳ್ಳಲಿದೆ. 
ನೀತಿ ಸಂಹಿತೆ ಜಾರಿ : ಚುನಾವಣಾ ನೀತಿ ಸಂಹಿತೆ ಜೂ. 22 ರಿಂದ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದ್ದು,   ಜೂ. 22 ರಿಂದ ಜು. 13 ರವರೆಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ.
ಮೀಸಲಾತಿ :  ಭಾಗ್ಯನಗರ ಪಟ್ಟಣ ಪಂಚಾಯತಿಯ ಒಟ್ಟು 19 ವಾರ್ಡ್‍ಗಳ ಮೀಸಲಾತಿ ವಿವರ ಇಂತಿದೆ.  ವಾರ್ಡ್ ನಂ.01- ಹಿಂದುಳಿದ ವರ್ಗ (ಎ).  ವಾರ್ಡ್ ನಂ. 2- ಪರಿಶಿಷ್ಟ ಜಾತಿ (ಮಹಿಳೆ).  ವಾರ್ಡ್ ನಂ. 3 - ಸಾಮಾನ್ಯ (ಮಹಿಳೆ).  ವಾರ್ಡ್ ನಂ. 4- ಸಾಮಾನ್ಯ.  ವಾರ್ಡ್ ನಂ. 5- ಹಿಂದುಳಿದ ವರ್ಗ (ಎ) (ಮಹಿಳೆ).  ವಾರ್ಡ್ ನಂ. 6- ಸಾಮಾನ್ಯ (ಮಹಿಳೆ).  ವಾರ್ಡ್ ನಂ. 07- ಸಾಮಾನ್ಯ (ಮಹಿಳೆ).  ವಾರ್ಡ್ ನಂ. 8- ಸಾಮಾನ್ಯ.  ವಾರ್ಡ್ ನಂ. 9- ಸಾಮಾನ್ಯ.  ವಾರ್ಡ್ ನಂ. 10- ಹಿಂದುಳಿದ ವರ್ಗ (ಎ).  ವಾರ್ಡ್ ನಂ. 11- ಪರಿಶಿಷ್ಟ ಪಂಗಡ.  ವಾರ್ಡ್ ನಂ. 12-ಸಾಮಾನ್ಯ (ಮಹಿಳೆ).  ವಾರ್ಡ್ ನಂ. 13- ಸಾಮಾನ್ಯ.  ವಾರ್ಡ್ ನಂ. 14- ಪರಿಶಿಷ್ಟ ಜಾತಿ.  ವಾರ್ಡ್ ನಂ. 15- ಪರಿಶಿಷ್ಟ ಜಾತಿ (ಮಹಿಳೆ).  ವಾರ್ಡ್ ನಂ. 16- ಪರಿಶಿಷ್ಟ ಜಾತಿ.  ವಾರ್ಡ್ ನಂ. 17- ಸಾಮಾನ್ಯ (ಮಹಿಳೆ).  ವಾರ್ಡ್ ನಂ. 18- ಹಿಂದುಳಿದ ವರ್ಗ(ಬಿ).  ವಾರ್ಡ್ ನಂ. 19- ಸಾಮಾನ್ಯ.  
ವಾರ್ಡ್‍ವಾರು ಮತದಾರರು : ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪುರುಷ- 7548, ಮಹಿಳೆ- 7366 ಸೇರಿದಂತೆ ಒಟ್ಟು 14915 ಮತದಾರರಿದ್ದಾರೆ.  ವಾರ್ಡ್ ಸಂಖ್ಯೆ-1 : ಪುರುಷ-437, ಮಹಿಳೆ-430, ಒಟ್ಟು- 867.  ವಾರ್ಡ್ ಸಂಖ್ಯೆ-2 : ಪುರುಷ-383, ಮಹಿಳೆ-390, ಒಟ್ಟು- 773. ವಾರ್ಡ್ ಸಂಖ್ಯೆ- 3 : ಪುರುಷ-269, ಮಹಿಳೆ-249, ಒಟ್ಟು- 518. ವಾರ್ಡ್ ಸಂಖ್ಯೆ-4 : ಪುರುಷ-513, ಮಹಿಳೆ-494, ಒಟ್ಟು- 1007. ವಾರ್ಡ್ ಸಂಖ್ಯೆ- 5 : ಪುರುಷ-298, ಮಹಿಳೆ-284, ಒಟ್ಟು- 582.  ವಾರ್ಡ್ ಸಂಖ್ಯೆ- 6 : ಪುರುಷ-248, ಮಹಿಳೆ-257, ಒಟ್ಟು- 505.  ವಾರ್ಡ್ ಸಂಖ್ಯೆ- 7 : ಪುರುಷ-501, ಮಹಿಳೆ-507, ಒಟ್ಟು- 1008.  ವಾರ್ಡ್ ಸಂಖ್ಯೆ- 8 : ಪುರುಷ-340, ಮಹಿಳೆ-347, ಒಟ್ಟು- 687.  ವಾರ್ಡ್ ಸಂಖ್ಯೆ- 9 : ಪುರುಷ-425, ಮಹಿಳೆ-423, ಒಟ್ಟು- 848.  ವಾರ್ಡ್ ಸಂಖ್ಯೆ- 10 : ಪುರುಷ-319, ಮಹಿಳೆ-303, ಇತರೆ-01,  ಒಟ್ಟು- 623.  ವಾರ್ಡ್ ಸಂಖ್ಯೆ- 11 : ಪುರುಷ-467, ಮಹಿಳೆ-478, ಒಟ್ಟು- 945.  ವಾರ್ಡ್ ಸಂಖ್ಯೆ- 12 : ಪುರುಷ-324, ಮಹಿಳೆ-360, ಒಟ್ಟು- 684.  ವಾರ್ಡ್ ಸಂಖ್ಯೆ- 13 : ಪುರುಷ-377, ಮಹಿಳೆ-363, ಒಟ್ಟು- 740.  ವಾರ್ಡ್ ಸಂಖ್ಯೆ- 14 : ಪುರುಷ-389, ಮಹಿಳೆ-387, ಒಟ್ಟು- 776.  ವಾರ್ಡ್ ಸಂಖ್ಯೆ-15 : ಪುರುಷ-620, ಮಹಿಳೆ-545, ಒಟ್ಟು- 1165.  ವಾರ್ಡ್ ಸಂಖ್ಯೆ- 16 : ಪುರುಷ-690, ಮಹಿಳೆ-637, ಒಟ್ಟು- 1327.  ವಾರ್ಡ್ ಸಂಖ್ಯೆ- 17 : ಪುರುಷ-289, ಮಹಿಳೆ-281, ಒಟ್ಟು- 570.  ವಾರ್ಡ್ ಸಂಖ್ಯೆ- 18 : ಪುರುಷ-353, ಮಹಿಳೆ-314, ಒಟ್ಟು- 667.  ವಾರ್ಡ್ ಸಂಖ್ಯೆ- 19 : ಪುರುಷ-306, ಮಹಿಳೆ-317, ಒಟ್ಟು- 623.

ಭಾಗ್ಯನಗರ ಚುನಾವಣೆ : ಜಾಹೀರಾತಿಗೆ ಜಿಲ್ಲಾ ಸಮಿತಿಯ ಅನುಮತಿ ಕಡ್ಡಾಯ

ಕೊಪ್ಪಳ  ಜೂ. 22 (ಕ.ವಾ): ಭಾಗ್ಯನಗರ ಪಟ್ಟಣ ಪಂಚಾಯತಿ ಚುನಾವಣೆಯನ್ನು ಕಟ್ಟುನಿಟ್ಟಾಗಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಪತ್ರಿಕಾ ಮಾಧ್ಯಮ, ದೃಶ್ಯ, ಶ್ರವಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಮಾಧ್ಯಮ ಚುನಾವಣಾ ನಿಯಂತ್ರಣ ಸಮಿತಿ ರಚಿಸಿ  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
      ಭಾಗ್ಯನಗರ ಪಟ್ಟಣ ಪಂಚಾಯತಿಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೇಬಲ್ ನೆಟ್‍ವರ್ಕ್ ಮೂಲಕ ಅಥವಾ ಟಿ.ವಿ. ಚಾನೆಲ್ ಗಳ ಮೂಲಕ ಅಥವಾ ಪ್ರಚಾರ ನಡೆಸುವುದಕ್ಕೆ ಮುನ್ನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.  ಈ ಬಗ್ಗೆ ಕೇಬಲ್ ಆಪರೇಟರ್‍ಗಳು ಮತ್ತು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
     ಚುನಾವಣೆ ಸಂದರ್ಭದಲ್ಲಿ ಪತ್ರಿಕೆ, ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ಪ್ರಚಾರ ನಿಯಂತ್ರಣಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕೊಪ್ಪಳ ತಹಸಿಲ್ದಾರರು ಸದಸ್ಯರಾಗಿದ್ದು ಜಿಲ್ಲಾ ವಾರ್ತಾಧಿಕಾರಿಗಳು ಸಮಿತಿಯ ಸಂಚಾಲಕರಾಗಿದ್ದಾರೆ.
     ಕೇಬಲ್ ಆಪರೇಟರ್‍ಗಳಿಗೂ ಸಹ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ತಾವು ಪ್ರಸಾರ ಮಾಡುವ ಯಾವುದೇ ಚುನಾವಣಾ ಪ್ರಚಾರದ ವಿಷಯಕ್ಕೆ, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆಯೇ ಎಂಬುದರ ಕುರಿತು ಪ್ರಮಾಣಪತ್ರ ದಾಖಲೆಯನ್ನು ಪರಿಶೀಲಿಸಿದ ನಂತರವೇ ಪ್ರಸಾರಗೊಳಿಸಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯದೇ ಇರುವಂತಹ ಯಾವುದೇ ಪ್ರಚಾರದ ವಿಡಿಯೋ ಅಥವಾ ಧ್ವನಿಮುದ್ರಿಕೆ ಪ್ರಸಾರಗೊಂಡಲ್ಲಿ ಅಂತಹ ಕೇಬಲ್ ಆಪರೇಟರ್‍ಗಳ ಎಲ್ಲ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.  
     ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಪಕ್ಷದ/ವಯಕ್ತಿಕ ಚುನಾವಣಾ ಪ್ರಚಾರವನ್ನು ವಿವಿಧ ಮಾಧ್ಯಮಗಳ ಮೂಲಕ ಮಾಡಲಿದ್ದು,  ಪತ್ರಿಕೆ, ಟಿ.ವಿ. ಚಾನಲ್ ಅಥವಾ ಕೇಬಲ್ ನೆಟ್‍ವರ್ಕ್‍ಗಳಲ್ಲಿ ಪ್ರಚಾರ ನೀಡಬಯಸುವವರು ಕನಿಷ್ಟ 3 ದಿನ ಮೊದಲು ಅರ್ಜಿ ಸಲ್ಲಿಸಬೇಕು.  ಅಂತಹ ಅರ್ಜಿಯು ಉದ್ದೇಶಿತ ಜಾಹೀರಾತು ಪ್ರಚಾರದ ಎರಡು ಪ್ರತಿಗಳನ್ನು ವಿದ್ಯುನ್ಮಾನ ರೂಪದಲ್ಲಿ (ಸಿ.ಡಿ) ಹಾಗೂ ಜೊತೆಗೆ ದೃಢೀಕೃತಗೊಂಡಿರುವ ಅದರ ಸಂಭಾಷಣೆಯ ಹಸ್ತಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.  ಇದಕ್ಕಾಗಿ ನಿಗದಿತ ನಮೂನೆಯನ್ನು ಚುನಾವಣಾ ಆಯೋಗ ನಿಗದಿಪಡಿಸಿದ್ದು, ಈ ಅರ್ಜಿ ನಮೂನೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದಲ್ಲಿ   ಲಭ್ಯವಿರುತ್ತದೆ.   ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗಕ್ಕೆ ಸಲ್ಲಿಸಬೇಕು. ಅಂತಹ ಜಾಹೀರಾತನ್ನು ಪರಿಶೀಲಿಸಿ, ಪ್ರಚಾರ ವಿಷಯ ಸಮರ್ಪಕವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಅರ್ಹತೆಯ ಪ್ರಮಾಣಪತ್ರ ನೀಡುವರು.
      ಚುನಾವಣಾ ಆಯೋಗವು ಪತ್ರಿಕೆ, ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು ಹೊರಡಿಸಿರುವ ಆದೇಶವನ್ನು ಎಲ್ಲ ಕೇಬಲ್ ಆಪರೇಟರ್‍ಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.

ಕೊಪ್ಪಳ ವನ ಮಹೋತ್ಸವದಲ್ಲಿಂದು ಗಿಡಗಳನ್ನು ವಿತರಿಸುವ ಪ್ರದೇಶಗಳು

ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ನಗರಸಭೆ, ಅರಣ್ಯ ಇಲಾಖೆ ಹಾಗೂ ಹಲವು ಪರಿಸರ ಪ್ರಿಯ ಸಂಘಟನೆಗಳೊಂದಿಗೆ ಕೊಪ್ಪಳ ನಗರದಲ್ಲಿ ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವನಮಹೋತ್ಸವ ಕಾರ್ಯಮದ ಅಂಗವಾಗಿ ಜೂ. 23 ರಂದು ನಗರದ ವಿವಿಧೆಡೆ ಗಿಡಗಳನ್ನು ವಿತರಿಸುವ ಕಾರ್ಯ ಜರುಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ತಿಳಿಸಿದ್ದಾರೆ.
     ಜಿಲ್ಲಾಡಳಿತವು ನಗರಸಭೆ, ಅರಣ್ಯ ಇಲಾಖೆ ಹಾಗೂ ಹಲವು ಪರಿಸರ ಪ್ರಿಯ ಸಂಘಟನೆಗಳೊಂದಿಗೆ ಕೊಪ್ಪಳ ನಗರದಲ್ಲಿ ಸುಮಾರು 25 ಸಾವಿರ ಗಿಡಗಳನ್ನು ನೆಡುವ ಮೂಲಕ ಹಸಿರೀಕರಣಗೊಳಿಸಲು ಮುಂದಾಗಿದೆ.  ಕೊಪ್ಪಳ ನಗರದಲ್ಲಿ ಅಶೋಕ ವೃತ್ತವನ್ನು ಕೇಂದ್ರಬಿಂದುವನ್ನಾಗಿಸಿ, ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ, ಕಾರ್ಯಕ್ರಮ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಜೂ. 23 ರಂದು ನಗರದಲ್ಲಿ    ವಿಕಾಸ ನಗರ, ಪೊಲೀಸ್ ವಸತಿ ಗೃಹ, ಸತ್ಯಧ್ಯಾನಪುರ ಬಡಾವಣೆ, ಕೃಷ್ಣ ದೇವಸ್ಥಾನ, ಶಿವ ಚಿತ್ರಮಂದಿರ, ಶಾಸಕರ ಕಾರ್ಯಾಲಯ, ಬಿ.ಟಿ.ಪಾಟೀಲ ನಗರ, ದಿವಟರ್ ನಗರ, ಮರಿಶಾಂತವೀರ ನಗರ, ಬೇಲ್ದಾರ ಕಾಲೋನಿ, ಕಾಳಿದಾಸ ನಗರ, ಸಿದ್ದೇಶ್ವರ ನಗರ, ಎನ್‍ಕೆಪಿಎಂ ಶಾಲೆ, ಜೀನಿಯಸ್ ಶಾಲೆ, ಅಗಡಿ ವಿರುಪಾಕ್ಷಪ್ಪನವರ ಮನೆ ಪ್ರದೇಶ, ಕಲ್ಯಾಣ ನಗರ, ರಾಮಚಂದ್ರರಾವ್ ಬಡಾವಣೆ, ಬಸವೇಶ್ವರ ವೃತ್ತ ಭಾಗ್ಯನಗರ ರಸ್ತೆ ಪ್ರದೇಶದಲ್ಲಿ ಗಿಡಗಳನ್ನು ಟ್ರ್ಯಾಕ್ಟರ್‍ಮೂಲಕ ವಿತರಿಸಲಾಗುವುದು.  ಆಯಾ ಕಟ್ಟಡಕ್ಕೆ ಸಂಬಂಧಿಸಿದವರು, ಸಾರ್ವಜನಿಕರು ಗಿಡಗಳನ್ನು ನೆಡಲು ಅಗತ್ಯ ಗುಂಡಿಗಳನ್ನು ತೋಡಿ, ಸಿದ್ಧವಾಗಿರಿಸಿಕೊಳ್ಳಬೇಕು.  ನೀಡಲಾಗುವ ಗಿಡವನ್ನು ನೆಟ್ಟು, ಜೋಪಾನ ಮಾಡಿ, ಸಂರಕ್ಷಿಸಬೇಕು.  ಈ ಮೂಲಕ ನಗರವನ್ನು ಹಸಿರಾಗಿಸಲು ಎಲ್ಲ ಸಾರ್ವಜನಿಕರು, ಸಂಘಟನೆಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ ಅಧ್ಯಕ್ಷರ ಕೊಪ್ಪಳ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಲೈಂಗಿಕ ಕಾರ್ಯಕರ್ತೆಯರ ಸ್ಥಿತಿ-ಗತಿಗಳ ಅಧ್ಯಯನ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಜಯಮಾಲ ಅವರು ಜೂ. 25 ಹಾಗೂ 26 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಡಾ. ಜಯಮಾಲ ಅವರು ಜೂ. 25 ರಂದು ಬಳ್ಳಾರಿಯಿಂದ ಹೊರಟು, ಬೆಳಿಗ್ಗೆ 9-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಸಮಿತಿ ಸಭೆ ಕೈಗೊಳ್ಳುವರು.  ಮಧ್ಯಾಹ್ನ 03 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಜೂ. 26 ರಂದು ಬೆಳಿಗ್ಗೆ ಪರಿಶೀಲನಾ ಸಭೆ ಕೈಗೊಂಡು, ಮಧ್ಯಾಹ್ನ 2 ಗಂಟೆಗೆ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು.

ಯಾವುದೇ ಮಗು ಲಸಿಕಾ ಕಾರ್ಯಕ್ರಮಗಳಿಂದ ವಂಚಿತವಾಗಬಾರದು- ಡಿಸಿ ಕನಗವಲ್ಲಿ ಕಟ್ಟುನಿಟ್ಟಿನ ಸೂಚನೆ

ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳಿಗಾಗಿ ಅನುಷ್ಠಾನಗೊಳಿಸಲಾಗುವ ಹಲವು ಲಸಿಕಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಯಾವುದೇ ಮಗು, ಯಾವುದೇ ಬಗೆಯ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯೋಜಿಸಲಾಗುವ ಲಸಿಕಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯಲ್ಲಿ ಶೇ. 97 ರಷ್ಟು ಸಾಧನೆಯಾಗಿದೆ.  ಹಲವು ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ ಸುಮಾರು 1194 ಮಕ್ಕಳು ವಿವಿಧ ಲಸಿಕಾ ಕಾರ್ಯಕ್ರಮದಿಂದ ವಂಚಿತರಾಗಿದ್ದಾರೆ.  ಮಕ್ಕಳಿಗೆ ಆರೋಗ್ಯ ಸರಿಯಿಲ್ಲ, ಮಕ್ಕಳು ಊರಲ್ಲಿ ಇಲ್ಲ, ಲಸಿಕೆ ಹಾಕಿಸಿದರೆ ಮಗುವಿಗೆ ಜ್ವರ ಬರುತ್ತದೆ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲವು ಕುಟುಂಬಗಳು ಲಸಿಕೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಡಾ. ಶ್ರೀಧರ್ ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಖುದ್ದು ಕ್ಷೇತ್ರಗಳಿಗೆ ಭೇಟಿ ನೀಡದೆ, ಕೇವಲ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ನೀಡುವ ಅಂಕಿ-ಅಂಶಗಳನ್ನೇ ಆಧರಿಸಿ, ಮಾಹಿತಿ ನೀಡುತ್ತೀರಿ.   ಮಾಹಿತಿಯ ಖಚಿತತೆ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ.  ಲಸಿಕಾ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಯಾವ ರೀತಿ ನಡೆಯುತ್ತವೆ ಎಂಬುದರ ಬಗ್ಗೆ ಖುದ್ದಾಗಿ ನಿಯಮಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ.  ಹೀಗಾಗಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಹಾಗೂ ಸೂಕ್ತ ಫಲಾನುಭವಿಗಳಿಗೆ ಯಾವ ರೀತಿ ತಲುಪುತ್ತಿವೆ ಎಂಬುದರ ಬಗ್ಗೆ ವಾಸ್ತವ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಗ್ರಾಮೀಣ ಜನರಲ್ಲಿ ಆರೋಗ್ಯ ಶಿಕ್ಷಣದ ಕೊರತೆ ಇರುವುದರಿಂದ, ಕೆಲವು ಬಾರಿ ತಪ್ಪು ಕಲ್ಪನೆಯಿಂದ ಮಕ್ಕಳಿಗೆ ಲಸಿಕೆ ಹಾಕಿಸಲು ನಿರಾಕರಿಸುತ್ತಾರೆ.  ನಿರಾಕರಣೆ ಮಾಡುವ ಮಕ್ಕಳ ಹೆಸರಿನ ಹಾಗೂ ಕುಟುಂಬದ ಪಟ್ಟಿಯನ್ನಿಟ್ಟುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ಜನರಿಗೆ ವಾಸ್ತವಿಕತೆಯ ಅರಿವು ಮೂಡಿಸಿ, ಎಲ್ಲ ಮಕ್ಕಳಿಗೂ ಲಸಿಕೆ ತಲುಪುವಂತೆ ಮಾಡಬೇಕು.  ಮೊದಲನೆ ಹಂತದ ಲಸಿಕಾ ಕಾರ್ಯಕ್ರಮಗಳಲ್ಲಿ ವಂಚಿತರಾಗುವ ಮಕ್ಕಳಿಗೆ, ಕನಿಷ್ಟ ಎರಡನೆ ಮತ್ತು ಮೂರನೆ ಹಂತದ ಲಸಿಕಾ ಕಾರ್ಯಕ್ರಮಗಳಲ್ಲಾದರೂ, ಲಸಿಕೆ ಹಾಕುವಂತಾಗಬೇಕು.  ಜಿಲ್ಲೆಯಲ್ಲಿ ಈವರೆಗೆ ಲಸಿಕಾ ಕಾರ್ಯಕ್ರಮಗಳಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ, ಕಡ್ಡಾಯವಾಗಿ ಅಂತಹ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ದೃಢಪಡಿಸಲು, ವಾರದೊಳಗಾಗಿ ಲಿಖಿತವಾಗಿ ತಮಗೆ ಪತ್ರ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆರಿಗೆ ಆಸ್ಪತ್ರೆ ಮಂಜೂರು : ಜಿಲ್ಲೆಯ ಕುಷ್ಟಗಿ ಮತ್ತು ಗಂಗಾವತಿಗೆ ಹೆರಿಗೆ ಆಸ್ಪತ್ರೆ ಈಗಾಗಲೆ ಮಂಜೂರಾಗಿದ್ದು, ಕಟ್ಟಡಕ್ಕಾಗಿ ನಿವೇಶನ ಗುರುತಿಸುವ ಕಾರ್ಯ ನಡೆದಿದೆ.  ಕುಷ್ಟಗಿಯಲ್ಲಿ  ಆಸ್ಪತ್ರೆಗಾಗಿ ಈಗಾಗಲೆ ಗುರುತಿಸಿರುವ ನಿವೇಶನಕ್ಕೆ ಸಂಬಧಿಸಿದಂತೆ, ಭೂಮಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.  ಅದೇ ರೀತಿ ಗಂಗಾವತಿಯಲ್ಲಿಯೂ ಭೂಮಿಯನ್ನು ಗುರುತಿಸಲಾಗಿದ್ದು, ಈ ಬಗ್ಗೆ ಇರುವ ಕೆಲ ಗೊಂದಲಗಳನ್ನು ತಹಸಿಲ್ದಾರರೊಂದಿಗೆ ಸ್ಥಳ ಪರಿಶೀಲನೆ ನಡೆಸುವ ಮೂಲಕ ನಿವಾರಿಸಿ, ಕೂಡಲೆ ಭೂಮಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿಕೊಳ್ಳಬೇಕು.  ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ.ಜಾತಿ/ಪ.ಪಂ ಲೇಖಕರ ಪ್ರಕಟಿತ ಗ್ರಂಥಗಳಿಗೆ ಧನಸಹಾಯ : ಅರ್ಜಿ ಆಹ್ವಾನ

ಕೊಪ್ಪಳ ಜೂ.22 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪ.ಜಾತಿ ಹಾಗೂ ಪ.ಪಂಗಡದ ಲೇಖಕರ ಪ್ರಕಟಿತ ಗ್ರಂಥಗಳಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    2015-16 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಇಲಾಖೆಯಿಂದ ರೂ.20,000 ಗಳ ಧನಸಹಾಯ ನೀಡಲಾಗುವುದು. ಸೃಜನೇತರ ಪ್ರಕಾರಕ್ಕೆ ಸೇರಿದ ಜಾನಪದ ವೈಜ್ಞಾನಿಕ, ಐತಿಹಾಸಿಕ, ಸಾಂಸ್ಕøತಿಕ, ಪ್ರವಾಸ ಕಥನ, ವ್ಯಕ್ತಿ ವಿಶೇಷ ಕುರಿತ ಸಾಹಿತ್ಯ ಪ್ರಕಾರದ ವಿಮರ್ಶಾತ್ಮಕ ಗ್ರಂಥಗಳಿಗೆ.  ಶಿಲ್ಪಕಲೆ, ಚಿತ್ರಕಲೆ,  ಸಂಗೀತ, ನಾಟಕ, ನೃತ್ಯ ಮತ್ತಿತರ ಕಲೆಗಳನ್ನು ಕುರಿತ ವಿಮರ್ಶಾತ್ಮಕ ಗ್ರಂಥಗಳಿಗೆ ಮಾತ್ರ ಧನಸಹಾಯ ನೀಡಲಾಗುವುದು. 
ಪ್ರಕಟಿತ ಕನ್ನಡ ಗ್ರಂಥಗಳ ಲೇಖಕರಿಂದ ಮಾತ್ರ ಅರ್ಜಿ ಸ್ವೀಕರಿಸಲಾಗುವುದು. ಯಾವುದೇ ಪ್ರಕಾಶನ ಅಥವಾ ಪ್ರಕಟಣಾ ಸಂಸ್ಥೆಗಳು ಸಲ್ಲಿಸುವ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಕಟಿತ ಗ್ರಂಥಗಳ ಒಟ್ಟು 1000 ಪ್ರತಿಗಳಿಗೆ ತಗುಲಿದ ಮುದ್ರಣ ವೆಚ್ಚದ ಅರ್ಧದಷ್ಟು ಇಲ್ಲವೇ ರೂ.20,000 ಗಳು ಇದರಲ್ಲಿ ಯಾವುದು ಕಡಿಮೆಯೇ ಅಷ್ಟನ್ನು ಮಾತ್ರ ಸಹಾಯಧನವನ್ನಾಗಿ ನೀಡಲಾಗುವುದು.   ಸೃಜನಶೀಲ ಪ್ರಕಾರಕ್ಕೆ ಸೇರಿದ ಅಂದರೆ ಕಥೆ, ಕಾದಂಬರಿ, ಕಾವ್ಯ, ನಾಟಕ, ಹರಟೆ, ಮಕ್ಕಳ ಸಾಹಿತ್ಯ ಹಾಗೂ ಭಾಷಾಂತರ ಕೃತಿಗಳು, ಯಾವುದೇ ಪರಿಶ್ರಮವಿಲ್ಲದ ಸಂಪಾದಿತ ಸಂಗ್ರಹಗಳು( ವಿದ್ವತ್ಪೂರ್ಣ, ವ್ಯಾಖ್ಯಾನ, ವಿಮರ್ಶೆ, ಮುನ್ನುಡಿಗಳಿಲ್ಲದ) ಸಂಭಾವನಾಗ್ರಂಥ, ಸಂಸ್ಮರಣ ಗ್ರಂಥ, ಅಭಿನಂದನಾ ಗ್ರಂಥ, ನೆನಪಿನ ಸಂಚಿಕೆಗಳ ಜಿತೆಗೆ ಧಾರ್ಮಿಕ ಗ್ರಂಥಗಳನ್ನು ಪರಿಗಣಿಸಲಾಗುವುದಿಲ್ಲ. ಪಠ್ಯ ಪುಸ್ತಕಗಳು, ಕೈಪಿಡಿಗಳು, ಮಾರ್ಗದರ್ಶಿ ಸೂತ್ರಗಳು, ಪಿಹೆಚ್‍ಡಿ, ಎಂಫಿಲ್, ಮತ್ತು ಇನ್ನಿತರ ಯಾವುದೇ ಪದವಿಗಾಗಿ ಸಿದ್ದಪಡಿಸಿದ ಗ್ರಂಥಗಳನ್ನು ಸಹಾಯಧನಕ್ಕೆ ಪರಿಗಣಿಸುವುದಿಲ್ಲ, ಹಾಗೂ ಬೇರೆ ಮೂಲಗಳಿಂದ ಧನಸಹಾಯ ಪಡೆದು ಪ್ರಕಟಿಸಿರುವ ಕೃತಿಗಳನ್ನು ಪರಿಗಣಿಸುವುದಿಲ್ಲ.
 2015-16 ನೇ ಸಾಲಿನಲ್ಲಿ ಅಂದರೆ 01-04-2015 ರಿಂದ 31-03-2016 ರವರೆಗೆ ಪ್ರಥಮಾವೃತ್ತಿಯಾಗಿ ಪ್ರಕಟವಾದ ಕೃತಿಗಳನ್ನು ಸಲ್ಲಿಸಬೇಕು. ಸಲ್ಲಿಸುವ ಕೃತಿ ಕನಿಷ್ಠ 100 ಪುಟಗಳನ್ನೊಳಗೊಂಡಿರಬೇಕು. ಲೇಖಕರು ಕೃತಿಯ 3 ಪ್ರತಿಗಳನ್ನು ಮಾತ್ರ ಅರ್ಜಿ ಜೊತೆ ಸಲ್ಲಿಸಬೇಕು. ಈಗಾಗಲೇ 3 ಸಲ ಧನಸಹಾಯ ಪಡೆದವರು ಪುನಃ ಅರ್ಜಿ ಸಲ್ಲಿಸುವಂತಿಲ್ಲ. ಗ್ರಂಥದÀ ಒಟ್ಟು 1000 ಪ್ರತಿಗಳಿಗೆ ತಗುಲಿದ ಮುದ್ರಣ ವೆಚ್ಚದ ಬಿಲ್ಲನ್ನು ಮುದ್ರಣಾಲಯದಿಂದ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು. ಲೇಖಕರು ಕೃತಿ ವಿಮರ್ಶೆಗಾಗಿ ವಿಮರ್ಶಕರ ಸಂಭಾವನೆ ಪಾವತಿಸಲು ಪರಿಶೀಲನಾ ಶುಲ್ಕ ಭರಿಸಬೇಕು. 100 ಪುಟಗಳ ಕೃತಿಗೆ ರೂ.100 ರಂತೆ ಮತ್ತು ನಂತರದ 100 ಪುಟಗಳಿಗೆ ರೂ.50 ರಂತೆ ಲೆಕ್ಕ ಹಾಕಿ ಅಷ್ಟು ಮೊತ್ತವನ್ನು ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರ ಹೆಸರಿಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಡಿ.ಡಿ ಪಡೆಯಬೇಕು. ಡಿಡಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕು.
ಅರ್ಜಿ ನಮೂನೆ ಹಾಗೂ ನಿಬಂಧನೆಯನ್ನು ಇಲಾಖೆಯ ವೆಬ್ ಸೈಟ್  www.kannadasiri.co.in ಇಲ್ಲಿ ಪಡೆದು ದಾಖಲೆಗಳು, ಡಿಡಿ, ಮತ್ತು 3 ಪುಸ್ತಕಗಳನ್ನು ಒಂದು ಲಕೋಟೆಯಲ್ಲಿಟ್ಟು, ಪ್ರಕಟಿತ ಗ್ರಂಥಗಳಿಗೆ ಧನಸಹಾಯ ಎಂದು ನಮೂದಿಸಿ, ಜುಲೈ 20 ರೊಳಗಾಗಿ  ನಿರ್ದೇಶಕರು, ಕನ್ನಡ ಮತ್ತು ಸಂಸಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002  ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜೂ.24 ರಂದು ಕುಷ್ಟಗಿಯಲ್ಲಿ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ

ಕೊಪ್ಪಳ ಜೂ.22 (ಕರ್ನಾಟಕ ವಾರ್ತೆ): ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿ ಜೂ.24 ರಂದು ಬೆಳಗ್ಗೆ 10.30 ಗಂಟೆಗೆ ಸಂಕಲ್ಪ ಗ್ರಾಮೀಣ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಘ, ದೇಸಾಯಿ ಕಾಂಪ್ಲೆಕ್ಸ್, ಬಸ್‍ಸ್ಟ್ಯಾಂಡ್ ಹತ್ತಿರ, ಕುಷ್ಟಗಿ ಇಲ್ಲಿ ಒಂದು ದಿನದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಕಾರ್ಯಕ್ರಮದಲ್ಲಿ ಸಿಎಂಇಜಿಪಿ ಯೋಜನೆಯ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ನೀಡುವರು. ಕುಷ್ಟಗಿ ತಾಲೂಕಿನಲ್ಲಿರುವ ಕನಿಷ್ಠ 8 ನೇ ತರಗತಿ ಪಾಸಾದ, ಐಟಿಐ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿರುವ ಯುವಕ/ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ಪ್ರಯೋಜನೆ ಪಡೆದುಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ

ಆರ್‍ಟಿಇ ಅಡಿ ದಾಖಲಾತಿಗೆ ಜೂ.25 ರ ವರೆಗೆ ಅವಧಿ ವಿಸ್ತರಣೆ

ಕೊಪ್ಪಳ ಜೂ.22 :(ಕರ್ನಾಟಕ ವಾರ್ತೆ): ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರಸಕ್ತ ಸಾಲಿಗೆ ಎರಡನೇ ಸುತ್ತಿನಲ್ಲಿ  ಆಯ್ಕೆಯಾದ ಮಕ್ಕಳ ದಾಖಲಾತಿ ಅವಧಿಯನ್ನು ಜೂ.25 ರವರೆಗೆ ವಿಸ್ತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೊದಲನೇ ಹಂತದ ಆನ್‍ಲೈನ್ ಲಾಟರಿ ಪ್ರಕ್ರಿಯೆ ಮೂಲಕ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಮುಗಿದು ನಂತರ, ಖಾಲಿ ಉಳಿದಿರುವ ಸೀಟುಗಳಿಗೆ ಜೂ.13 ರಂದು ನಡೆದ 2ನೇ ಹಂತದ ಆನ್‍ಲೈನ್ ಪ್ರಕ್ರಿಯೆಯಲ್ಲಿ ಒಟ್ಟು 16,806 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.  ದಾಖಲಾತಿಗೆ ಜೂ.15 ರಿಂದ 18 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಜೂ.25 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್‍ಟಿಇ ಅಡಿ ದಾಖಲಾತಿಗೆ ಜೂ.25 ರ ವರೆಗೆ ಅವಧಿ ವಿಸ್ತರಣೆ

ಕೊಪ್ಪಳ ಜೂ.22 :(ಕರ್ನಾಟಕ ವಾರ್ತೆ): ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರಸಕ್ತ ಸಾಲಿಗೆ ಎರಡನೇ ಸುತ್ತಿನಲ್ಲಿ  ಆಯ್ಕೆಯಾದ ಮಕ್ಕಳ ದಾಖಲಾತಿ ಅವಧಿಯನ್ನು ಜೂ.25 ರವರೆಗೆ ವಿಸ್ತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೊದಲನೇ ಹಂತದ ಆನ್‍ಲೈನ್ ಲಾಟರಿ ಪ್ರಕ್ರಿಯೆ ಮೂಲಕ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಮುಗಿದು ನಂತರ, ಖಾಲಿ ಉಳಿದಿರುವ ಸೀಟುಗಳಿಗೆ ಜೂ.13 ರಂದು ನಡೆದ 2ನೇ ಹಂತದ ಆನ್‍ಲೈನ್ ಪ್ರಕ್ರಿಯೆಯಲ್ಲಿ ಒಟ್ಟು 16,806 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.  ದಾಖಲಾತಿಗೆ ಜೂ.15 ರಿಂದ 18 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಜೂ.25 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಬೆಳೆಗಳಿಗೆ ವಿಮೆ ಕಂತು ಪಾವತಿಸಲು ಜೂ. 30 ಕೊನೆ ದಿನ

ಕೊಪ್ಪಳ ಜೂ. 16 (ಕರ್ನಾಟಕ ವಾರ್ತೆ): ತೋಟಗಾರಿಕೆ ಬೆಳೆಗಳಿಗೆ 2016-17 ನೇ ಸಾಲಿಗೆ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದು, ವಿಮಾ ಕಂತು ಪಾವತಿಸಲು ಜೂ. 30 ಕೊನೆಯ ದಿನವಾಗಿರುತ್ತದೆ.
     ತೋಟಗಾರಿಕೆ ಬೆಳೆಗಳಾದ ಹಸಿ ಮೆಣಸಿನಕಾಯಿ (ನೀರಾವರಿ), ಅಂಗಾಂಶ ಬಾಳೆ, ಕಂದು ಬಾಳೆ, ದಾಳಿಂಬೆ, ಟೊಮ್ಯಾಟೋ (ನೀರಾವರಿ), ಟಮ್ಯಾಟೋ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ), ಈರುಳ್ಳಿ(ಮಳೆ ಆಶ್ರಿತ), ಬದನೆ ಬೆಳೆಗಳನ್ನು ಈ ಯೋಜನೆಗಳ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಹೋಬಳಿವಾರು ಬೆಳೆಗಳ ವ್ಯಾಪ್ತಿಯ ಕುರಿತು ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು. ವಿಮಾ ಕಂತಿಗೆ ಸಂಬಂಧಪಟ್ಟಂತೆ ಹಸಿಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 3750 ರೂ., ಅಂಗಾಂಶ ಬಾಳೆ ಪ್ರತಿ ಹೆಕ್ಟೇರ್‍ಗೆ 6000 ರೂ., ಕಂದುಬಾಳೆ ಪ್ರತಿ ಹೆಕ್ಟೇರ್‍ಗೆ 4500 ರೂ., ದಾಳಿಂಬೆ ಪ್ರತಿ ಹೆಕ್ಟೇರ್‍ಗೆ 7500 ರೂ., ಟಮ್ಯಾಟೋ   ಪ್ರತಿ ಹೆಕ್ಟೇರ್‍ಗೆ 5650 ರೂ., ಈರುಳ್ಳಿ ಪ್ರತಿ ಹೆಕ್ಟೇರ್‍ಗೆ 3550 ರೂ., ಬದನೆ ಪ್ರತಿ ಹೆಕ್ಟೇರ್‍ಗೆ 2700 ರೂ. ನಂತೆ ರೈತರು ತಮ್ಮ ವಿಮೆ ಕಂತಿನ ಮೊತ್ತವನ್ನು ಪಾವತಿಸಲು ಜೂನ್-30 ಕೊನೆಯ ದಿನವಾಗಿದೆ
     ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿಪಂ) ಕೊಪ್ಪಳ. :08539-231530, ಹಿರಿಯ ಸಹಾಯಕ   ರಮೇಶ ಗುಡಿಸಲದ, (7406504120) ಮತ್ತು ನಜೀರ್ ಅಹ್ಮದ್ ಸೋಂಪುರ ಹಿ.ಸ.ತೋ.ನಿ (ಜಿ.ಪಂ)ಕೊಪ್ಪಳ (8861294104).  ಅಜರುದ್ದೀನ್ ಗುಳೆದಗುಡ್ಡ (8867729889) ಮತ್ತು ವಸಂತಪ್ಪ ಹಿ.ಸ.ತೋ.ನಿ (ಜಿ.ಪಂ)ಗಂಗಾವತಿ. (9448262462).  ರವೀಂದ್ರ ಹಂಚಿನಾಳ (9740629545) ಮತ್ತು ಮಂಜುನಾಥ ಲಿಂಗಣ್ಣನವರ್ ಸ.ತೋ.ನಿ (ಜಿಪಂ) ಯಲಬುರ್ಗಾ(9740963828).  ವಿದ್ಯಾಧರ  (9611869849)  ಮತ್ತು ರಾಜಕುಮಾರ್ ಗೋವಿನ (9480633045) ಕ್ಕೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

ಮಾಜಿ ಸೈನಿಕರಿಗೆ ಉದ್ಯೋಗ : ಅರ್ಜಿ ಆಹ್ವಾನ

ಕೊಪ್ಪಳ ಜೂ.22 (ಕರ್ನಾಟಕ ವಾರ್ತೆ): ಉಪನಿರ್ದೇಶಕರು, ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್, ಕೇಂದ್ರಿಯ ಸದನ, ಕೋರಮಂಗಲ. ಬೆಂಗಳೂರು ಇವರಿಂದ ಗ್ರಾಮೀಣ ಮತ್ತು  ನಗರ ಪ್ರದೇಶಗಳಲ್ಲಿ ಜನಗಣತಿ ಸರ್ವೆ ಮಾಡಲಿದ್ದು ಸರ್ವೆ ಹುದ್ದೆಗಾಗಿ ಮಾಜಿ ಸೈನಿಕ ರಿಂದ ಅರ್ಜಿ ಆಹ್ವಾನಿಸಿದೆ.
     ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಚೇರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ ಇವರಿಂದ ಪಡೆದು ಜೂ.29 ರೊಳಗಾಗಿ ಡೆಪ್ಯುಟಿ ಡೈರೆಕ್ಟರ್ ಜನರಲ್, ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎಫ್.ಓ.ಡಿ), ಇ & ಎಫ್ ವಿಂಗ್, 5ನೇ ಮಹಡಿ, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-34 ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Tuesday, 21 June 2016

ವಸತಿ ಶಾಲೆಗಳ 7 ಮತ್ತು 8 ನೇ ತರಗತಿ ಪ್ರವೇಶ ಪರೀಕ್ಷೆ ಜೂ. 26 ಕ್ಕೆ ಮುಂದೂಡಿಕೆ

ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ) ; ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಲ್ಲಿ 07 ಮತ್ತು 08 ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳಿಗಾಗಿ ಪ್ರವೇಶ ಪರೀಕ್ಷೆಯನ್ನು ಜೂ. 26 ಕ್ಕೆ ಮುಂದೂಡಲಾಗಿದೆ.
     ಪ್ರವೇಶ ಪರೀಕ್ಷೆಯನ್ನು ಈ ಮೊದಲು ಜೂ. 23 ರಂದು ನಡೆಸಲು ನಿಗದಿಪಡಿಸಲಾಗಿತ್ತು.  ಇದೀಗ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಪ್ರವೇಶ ಪರೀಕ್ಷೆಯು ಯಲಬುರ್ಗಾ ತಾಲೂಕು ಬೇವೂರಿನ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೂ. 26 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ವಸತಿ ಶಾಲೆಗಳ ಪ್ರವೇಶಕ್ಕೆ ಜೂ. 23 ರಂದು ಮೂರನೆ ಹಂತದ ಕೌನ್ಸಿಲಿಂಗ್

ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಪ್ರಸಕ್ತ ಸಾಲಿನ 6 ನೇ ತರಗತಿಯ ಪ್ರವೇಶಕ್ಕೆ ಮೂರನೆ ಹಂತದ ಕೌನ್ಸಿಲಿಂಗ್ ಜೂ. 23 ರಂದು ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾ ತಾಲೂಕು ಬೇವೂರಿನ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಲಿದೆ.
     ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರ ನಿರ್ದೇಶನದಂತೆ ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಪ್ರಸಕ್ತ ಸಾಲಿನ 6 ನೇ ತರಗತಿಯ ಪ್ರವೇಶಕ್ಕೆ ಮೂರನೆ ಹಂತದ ಕೌನ್ಸಿಲಿಂಗ್ ಜೂ. 23 ರಂದು ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾ ತಾಲೂಕು ಬೇವೂರಿನ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದು, ಸಂಬಂಧಪಟ್ಟ ವಿದ್ಯಾರ್ಥಿಗಳು ಕೌನ್ಸಿಲಿಂಗ್ ಪತ್ರದೊಂದಿಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಕೃಷಿ ಅಭಿಯಾನ- ಸರಣಿ-3- ಕೃಷಿ ಯಂತ್ರಧಾರೆ – ರೈತರಿಗೆ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣಗಳ ಪೂರೈಕೆ

ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ) : ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ರೈತರು ಶ್ರಮ ಜೀವಿಗಳು.  ಬಡ ರೈತರು ಎಲ್ಲದಕ್ಕೂ ಕೂಲಿಕಾರರನ್ನೇ ಅವಲಂಬಿಸುವ ಎನ್ನುವ ಪರಿಸ್ಥಿತಿ ಹಾಗೂ  ಕೃಷಿ ಯಂತ್ರೋಪಕರಣಗಳನ್ನು ಕೇವಲ ಶ್ರೀಮಂತ ರೈತರು ಮಾತ್ರ ಉಪಯೋಗಿಸಲು ಸಾಧ್ಯ ಎನ್ನುವ ಮಾತು ಈ ಮೊದಲು ಇತ್ತು.  ಆದರೆ ಇದೀಗ ಕಾಲ ಬದಲಾಗಿದೆ.  ಬಡ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧರದಲ್ಲಿ ಒದಗಿಸುವ “ಕೃಷಿ ಯಂತ್ರಧಾರೆ” ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.

ಯೋಜನೆಯ ಉದ್ದೇಶ:  ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಕೂಲಿಕಾರರ ಕೊರತೆ ಇದೆ.  ಬೇಸಾಯಕ್ಕಾಗಿ ಭೂಮಿ ಹದಗೊಳಿಸುವುದು, ಬಿತ್ತನೆ, ಕೀಟನಾಶಕಗಳ ಸಿಂಪಡಣೆ ಹೀಗೆ ಎಲ್ಲ ಚಟುವಟಿಕೆಗಳಿಗೆ ಕುಟುಂಬದ ಎಲ್ಲರೂ ಪಾಲ್ಗೊಳ್ಳಬೇಕು.  ಎಲ್ಲವೇ ಕೂಲಿಕಾರರನ್ನೇ ಅವಲಂಬಿಸುವ ಅನಿವಾರ್ಯತೆ.  ಇದರಿಂದ ರೈತರಲ್ಲಿ ಆತಂಕ ಮೂಡುವುದು ಸಹಜವೆ.  ಎಲ್ಲ ವರ್ಗದ ರೈತರು ನಿರಾತಂಕವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು ಎನ್ನುವ ಉದ್ದೇಶದಿಂದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ'' ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ರಾಜ್ಯದ ಗ್ರಾಮೀಣ ಪ್ರದೇಶದ ಹೋಬಳಿಗಳಲ್ಲಿ ಚಾರಿಟಬˉï ಟ್ರಸ್ಟ್/ ಸರ್ಕಾರೇತರ ಸಂಸ್ಥೆಗಳ, ಕೃಷಿ ಯಂತ್ರೋಪಕರಣ ತಯಾರಕ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸˉÁಗಿದೆ.

ರೈತರಿಂದ ಸದುಪಯೋಗ : ಕೊಪ್ಪಳ ಜಿಲ್ಲೆಯಲ್ಲಿ 2014-15 ನೇ ಸಾಲಿನಿಂದ ಈ ಯೋಜನೆ ಜಾರಿಯಲ್ಲಿದ್ದು, ಪ್ರತಿ ತಾಲೂಕಿನ ಕಸಬಾ ಹೋಬಳಿ ಹೊರತುಪಡಿಸಿ ಉಳಿದ ಗ್ರಾಮೀಣ ಹೋಬಳಿಗಳಲ್ಲಿ ಇಂತಹಾ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.  2015-16 ನೇ ಸಾಲಿನಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ, ಕುಷ್ಟಗಿ ತಾಲೂಕಿನ ಹನುಮನಾಳ, ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಹಾಗೂ ಗಂಗಾವತಿ ತಾಲೂಕಿನ ಹುಲಿಹೈದರ್ ಹೋಬಳಿಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ 4 ಕೇಂದ್ರಗಳನ್ನು ಶ್ರೀ ಥರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ನಿರ್ವಹಣೆ ಮಾಡುತ್ತಿದೆ. ಇಲ್ಲಿಯವರೆಗೆ ಒಟ್ಟು 4571 ಜನ ರೈತ ಫಲಾನುಭವಿಗಳು ಈ 4 ಕೇಂದ್ರಗಳ ಮೂಲಕ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಯೋಜನೆಯ ಸದುಪಯೋಗ ಪಡಿಸಿಕೊಂಡಿರುತ್ತಾರೆ.

12 ಹೊಸ ಕೇಂದ್ರ ಮಂಜೂರು : ಈ ಯೋಜನೆಯ ಅದ್ಭುತ ಯಶಸ್ಸನ್ನು ಮನಗಂಡಿರುವ ಸರ್ಕಾರ ಕೊಪ್ಪಳ ಜಿಲ್ಲೆಗೆ 2016-17 ನೇ ಸಾಲಿನಲ್ಲಿ ಇರಕಲ್ಲಗಡ, ಹಿಟ್ನಾಳ, ಹನುಮಸಾಗರ, ತಾವರಗೇರಾ, ಕುಕನೂರು, ಮಂಗಳೂರು, ಕನಕಗಿರಿ, ಕಾರಟಗಿ, ವೆಂಕಟಗಿರಿ, ಮರಳಿ, ಸಿದ್ದಾಪುರ ಹಾಗೂ ನವಲಿ ಸೇರಿದಂತೆ ಒಟ್ಟು 12 ಹೊಸ ಸೇವಾ ಕೇಂದ್ರಗಳನ್ನು ಮಂಜೂರು ಮಾಡಿದೆ.   ಜಿಲ್ಲೆಯ 4 ತಾಲೂಕುಗಳ ಕಸಬಾ ಹೋಬಳಿಗಳನ್ನು ಹೊರತುಪಡಿಸಿ ಎಲ್ಲಾ ಹೋಬಳಿಗಳಲ್ಲಿ ಸದರಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 
     12 ಹೊಸ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ಮಹಿಂದ್ರಾ & ಮಹಿಂದ್ರಾ ಸಂಸ್ಥೆ ಹೊಂದಿರುತ್ತದೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಖಿಖIಓಉಔ (ಖಿಡಿಚಿಛಿಣoಡಿ ಖiಟಿg ಚಿಟಿಜ ಉo) ಎಂಬ ಕಾಲ್ ಸೆಂಟರ್ ಸ್ಥಾಪಿಸಿ ರೈತರು ಮನೆಯಿಂದಲೆ ಈ ಕಾಲ್ ಸೆಂಟರಿಗೆ ಕರೆಮಾಡಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯುವ ವಿನೂತನ ವ್ಯವಸ್ಥೆಯನ್ನು ಮಾಡಲಿದೆ.  ಕಾರಣ ರೈತ ಬಾಂಧವರು ಈ ಎಲ್ಲಾ 16 ಕೇಂದ್ರಗಳ ಸದುಪಯೋಗ ಮಾಡಿಕೊಂಡು ತಮ್ಮ ಕೃಷಿ ಚಟುವಟಿಕೆಯನ್ನು ಸುಗಮವಾಗಿ ಕೈಗೊಳ್ಳಬಹುದಾಗಿದೆ ಎನ್ನುತ್ತಾರೆ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು.

ಯೋಗ, ಭಾರತದ ಭವ್ಯ ಪರಂಪರೆಯ ಪ್ರತೀಕ : ಕರಡಿ ಸಂಗಣ್ಣ


ಕೊಪ್ಪಳ, ಜೂ.21 (ಕರ್ನಾಟಕ ವಾರ್ತೆ) : ವಿಶ್ವ ಯೊಗ ದಿನವನ್ನು ಇಂದು ಭಾರತದಲ್ಲಷ್ಟೇ ಅಲ್ಲದೇ, ಜಗತ್ತಿನ ಸುಮಾರು 177 ದೇಶಗಳು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಯೋಗವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಎರಡನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಜೀವನದಲ್ಲಿ ಪರಿಪೂರ್ಣತೆ ಪಡೆಯಲು ಸಹಕಾರಿಯಾಗುವ ಯೋಗವು ಮನುಜ ಕುಲಕ್ಕೆ ನಮ್ಮ ಪೂರ್ವಜರು ನೀಡಿದ ಕೊಡುಗೆಯಾಗಿದೆ.  ಋಷಿ-ಮುನಿಗಳು ಪರಿಚಯಿಸಿದ ಯೋಗದ ಮಹತ್ವದಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗು ನೋಡುವಂತಾಗಿದೆ.   ಜಗತ್ತಿಗೆ ಭಾರತದ ಕೊಡುಗೆಯಾಗಿರುವ ಯೋಗವು ಇಂದು ಯಾವುದೇ ಧರ್ಮಕ್ಕೆ ಸೀಮಿತಗೊಳ್ಳದೇ ವಿಶ್ವ ವ್ಯಾಪ್ತಿಯಾಗಿ ಬೆಳೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದೀಗ ಯೋಗ ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದ್ದು, ಜಗತ್ತಿನ 177 ದೇಶಗಳು ಇಂದು ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ.  ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇದರ ಶ್ರೇಯಸ್ಸು ಸಲ್ಲಬೇಕು.  ಯೋಗ ಎಂಬುದು ಬದುಕಿನ ಸಂಜೀವಿನಿಯಾಗಿದ್ದು, ಯೋಗ ಅಳವಡಿಸಿಕೊಂಡವರು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಲ್ಲರು.  ದಿನನಿತ್ಯ ಯೋಗಾಭ್ಯಾಸ ಮಾಡುವವರು, ಇಡೀ ದಿನ ಹುರುಪಿನಿಂದ ಹಾಗೂ ಚೈತನ್ಯದಿಂದ ಕಾರ್ಯ ನಿರ್ವಹಿಸಲು ಸಾಧ್ಯವಿದೆ.  ಯೋಗವು ಇಂದಿನ ಸಾಮಾಜಿಕ ಬದುಕಿನಲ್ಲಿನ ಒತ್ತಡಗಳನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುವ ದಿವ್ಯ ಔಷಧಿಯಾಗಿದೆ.  ಯೋಗದಿಂದ ಬದುಕಿನಲ್ಲಿ ಏಕಾಗ್ರತೆ ಹಾಗೂ ದೃಢ ಮನಸ್ಸು ಪಡೆಯಲು ಸಾಧ್ಯವಿದೆ.  ಬದುಕಿನ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುವ ಸಾಮಥ್ರ್ಯ ಯೋಗಕ್ಕಿದೆ ಎಂದು ಬಣ್ಣಿಸಿದ ಸಂಸದ ಕರಡಿ ಸಂಗಣ್ಣ ಅವರು, ತಾವೂ ಸಹ ದಿನ ನಿತ್ಯ ಯೋಗಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿದರು.  ಸಮಾರಂಭಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳದ ಯೋಗ ಗುರು ಅಶೋಕಸ್ವಾಮಿ ಹಿರೇಮಠ ಅವರು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು.  ಜಿಲ್ಲಾ ಆಯುಷ್ ಅಧಿಕಾರಿ ಬಸಪ್ಪ ವಾಲಿಕಾರ್, ಈಶ್ವರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿರಂಬರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀಕಾಂತ ಬಾಸೂರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ದೈಹಿಕ ಶೀಕ್ಷಣ ಅಧೀಕ್ಷ ಸುದರ್ಶನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.  ಗಣ್ಯರಾದ ಸಿ. ವೈ. ಚಂದ್ರಶೇಖರ್, ಭೂಸನೂರ ಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿಮಾಲಯ ಶಿಖರವೇರಿದ ಡಿಎಫ್‍ಓ ಪ್ರಭಾಕರನ್ ಅವರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸನ್ಮಾನ


ಕೊಪ್ಪಳ ಜೂ. 21 (ಕರ್ನಾಟಕ ವಾರ್ತೆ): ಹಿಮಾಲಯದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಯಶಸ್ವಿಯಾಗಿ ಹಿಂದಿರುಗಿದ ಕೊಪ್ಪಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರಿಗೆ ಕೊಪ್ಪಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಂದ ಸೋಮವಾರದಂದು ಕೊಪ್ಪಳದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


     ಕೊಪ್ಪಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು, ದೃಢ ಮನಸ್ಸು ಮತ್ತು ಸಾಧಿಸುವ ಛಲ ಇದ್ದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.   ಮೌಂಟ್ ಎವರೆಸ್ಟ್ ಏರುವ ಸಂದರ್ಭದಲ್ಲಿ ತಾವು ತೆಗೆದಿರುವ ಫೋಟೋ ಹಾಗೂ ವಿಡಿಯೋ ಪ್ರದರ್ಶನ ಸಹಿತ ಸಂಪೂರ್ಣ ಮಾಹಿತಿ ನೀಡಿದ ಪ್ರಭಾಕರನ್ ಅವರು ತಮ್ಮ ಅನುಭವವನ್ನು ವಿವರಿಸಿದ್ದು ಹೀಗೆ.  ಮೌಂಟ್ ಎವರೆಸ್ಟ್ ಶಿಖರ ಏರಬೇಕೆನ್ನುವ ತಮ್ಮ ಕನಸು ಅನೇಕ ವರ್ಷಗಳದ್ದು.  ಬಾಲ್ಯದಿಂದಲೇ ತಮಗೆ ಸಾಹಸ ಕ್ರೀಡೆ, ಅರಣ್ಯದಲ್ಲಿ ಟ್ರಕ್ಕಿಂಗ್ ಬಗ್ಗೆ ಆಸಕ್ತಿ ಇತ್ತು.  ಮೌಂಟ್ ಎವರೆಸ್ಟ್ ಶಿಖರ ಏರಬೇಕೆನ್ನುವ ಮಹದಾಸೆಯಿಂದ ಹಲವಾರು ತರಬೇತಿಗಳನ್ನು ಪಡೆದಿದ್ದೆ.  2015 ರಲ್ಲಿ ಸರ್ಕಾರದಿಂದ ಅನುಮತಿ ಪಡೆದು, ಪ್ರಾಯೋಜಕತ್ವದ ನೆರವಿನೊಂದಿಗೆ ನೇಪಾಳದ ಭಾಗದಿಂದ ಮೌಂಟ್ ಎವರೆಸ್ಟ್ ಶಿಖರ ಏರಲು, ತೆರಳಲಾಗಿತ್ತು.  ನಮ್ಮ ತಂಡ ಬೇಸ್ ಕ್ಯಾಂಪಿಗೂ ತಲುಪಿದ್ದವು.  ಆದರೆ ಅಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ಹಲವರು ದುರಂತಕ್ಕೆ ಬಲಿಯಾದ ಘಟನೆ ನಮ್ಮ ಕಣ್ಣೆದುರೇ ಘಟಿಸಿತ್ತು.  ದುರಂತದಲ್ಲಿ ತಮ್ಮ ಕಾಲೂ ಸಹ ಎರಡು ಕಡೆ ಫ್ಯಾಕ್ಚರ್ ಆಗಿತ್ತು.  ನಿಜಕ್ಕೂ ಇದು ನಮ್ಮ ಜಂಘಾಬಲವನ್ನೇ ಉಡುಗಿಸಿತ್ತು.  ನಿರಾಸೆಯೊಂದಿಗೆ ಆಗ ತಾವು ವಾಪಸ್ ಬಂದು, ಕೊಪ್ಪಳದ ಕಚೇರಿಯ ಕರ್ತವ್ಯಕ್ಕೆ ಹಾಜರಾಗಿದ್ದೆ.  ಬೆಳಗಿನ ಅವಧಿಯಲ್ಲಿ ಕಚೇರಿ ಕರ್ತವ್ಯ ನಿರ್ವಹಿಸುತ್ತಿದ್ದೆ.  ಆದರೆ ಸಂಜೆಯಾಗುತ್ತಿದ್ದಂತೆ, ಮತ್ತೆ ಮನಸ್ಸು ಹಿಮಾಲಯದತ್ತ ಹೊರಳುತ್ತಿತ್ತು.  ಮತ್ತೊಮ್ಮೆ ಹಿಮಾಲಯ ಶಿಖರ ಏರಬೇಕೆನ್ನುವ ಆಸೆಗೆ, ಸರ್ಕಾರ ರಜೆ ಮಂಜೂರು ಮಾಡುವ ಮೂಲಕ ಸಹಕಾರ ನೀಡಿತು.  2016 ರಲ್ಲಿ ಶಿಖರ ಏರಲು ಮತ್ತೊಮ್ಮೆ ತೆರಳಿದೆ.  ಆದರೆ ಈ ಬಾರಿ ದುರ್ಗಮ ಹಾದಿ ಎಂದೇ ಹೇಳಲಾಗುವ, ಟಿಬೆಟ್ ಕಡೆಯಿಂದ ಮೌಂಟ್ ಎವರೆಸ್ಟ್ ಏರಲು ನಿರ್ಧರಿಸಲಾಯಿತು.  ಸಮುದ್ರ ಮಟ್ಟದಿಂದ 8848 ಮೀ. ಎತ್ತರವಿರುವ ಮೌಂಟ್ ಎವರೆಸ್ಟ್ ಶಿಖರವನ್ನು ಏರುವ, ಕೊನೆಯ ಹಂತದಲ್ಲಿ ಆಮ್ಲಜನಕದ ಕೊರತೆ ಆಗುವ ಕಾರಣ ಉಸಿರಾಡಲು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ.  ಇದಕ್ಕೆಂದೇ ಆಮ್ಲಜನಕದ ಮೂರು ಘಟಕಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ.  ಈ ಮೂರು ಘಟಕಗಳನ್ನು ಬಳಸಿಕೊಂಡು ಶಿಖರವೇರಿ, ಪುನಃ ಕೆಳಗಿಳಿಯಬೇಕಾಗಿರುತ್ತದೆ.  ನಿಗದಿತ ಸಮಯದೊಳಗೆ ಇದು ಸಾಧ್ಯವಾಗದಿದ್ದಲ್ಲಿ ಆಮ್ಲಜನಕದ ತೊಂದರೆಯಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಮೇ. 20 ರಂದು ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರುವ ಮೂಲಕ ನನ್ನ ಬದುಕಿನ ಆಸೆಯನ್ನು ಈಡೇರಿಸಿಕೊಂಡೆ ಎಂಬುದಾಗಿ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
     ಪ್ರಭಾಕರನ್ ಅವರ ಸಾಧನೆಯನ್ನು ಕೊಂಡಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು, ಪ್ರಭಾಕರನ್ ಅವರ ಸಾಧನೆಯಿಂದ ರಾಷ್ಟ್ರ ಮಟ್ಟದಲ್ಲಿ ಕೊಪ್ಪಳವನ್ನು ಗುರುತಿಸುವಂತಾಗಿದೆ ಎಂದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ತಲುಪಿ, ಬಂದಿರುವ ಪ್ರಭಾಕರನ್ ಅವರು ಕೊಪ್ಪಳ ಜಿಲ್ಲೆಗೆ ಹೆಮ್ಮೆ ತರುವ ವ್ಯಕ್ತಿಯಾಗಿದ್ದಾರೆ.  ಎಲ್ಲ ಯುವಕರನ್ನು ಇವರನ್ನು ಆದರ್ಶವಾಗಿಟ್ಟುಕೊಂಡು, ಯಶಸ್ಸು ಸಾಧಿಸುವ ಛಲವನ್ನು ಮೂಡಿಸಿಕೊಳ್ಳಬೇಕು ಎಂದರು.
     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಅವರು ಕಾರ್ಯಕ್ರಮ ಆಯೋಜನೆಯ ನೇತೃತ್ವ ವಹಿಸಿದ್ದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಪ್ರಭಾಕರನ್ ಅವರ ಸಾಧನೆಯ ಕುರಿತು ಮಾತನಾಡಿದರು.  ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.  ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡು, ಪ್ರಭಾಕರನ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ವಸತಿ ಕಾಲೇಜಿನಲ್ಲಿ ಪಾಠ ಬೋಧನೆಗಾಗಿ ನಿವೃತ್ತ ಉಪನ್ಯಾಸಕರಿಂದ ಅರ್ಜಿ ಆಹ್ವಾನ

ಕೊಪ್ಪಳ ಜೂ.21 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಿಂದ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿರುವ ಮೊರಾರ್ಜಿ ದೇಸಾಯಿ ಪ.ಪೂ ವಸತಿ ವಿಜ್ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ಪಾಠ ಬೋಧನೆಗಾಗಿ ನಿವೃತ್ತ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಜೀವಶಾಸ್ತ್ರ ಉಪನ್ಯಾಸಕ(ಎಂಎಸ್ಸಿ. ಬಿ.ಇಡಿ)-01, ರಸಾಯನಶಾಸ್ತ್ರ ಉಪನ್ಯಾಸಕ (ಎಂ.ಎಸ್ಸಿ, ಬಿ.ಇಡಿ)-01, ಕನ್ನಡ ಉಪನ್ಯಾಸಕ (ಎಂ.ಎ, ಬಿ.ಇಡಿ)-01 ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ವಿದ್ಯಾರ್ಹತೆ ಮತ್ತು ಷರತ್ತುಗಳನ್ವಯ ಜೂ.27 ರೊಳಗಾಗಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಆಡಳಿತ ಭವನ, ಕೊಪ್ಪಳ ಇಲ್ಲಿಗೆ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮಸಾಗರ ದಾಂಡೇಕರ ಪ್ರಕಟಣೆ ತಿಳಿಸಿದ್ದಾರೆ.