Wednesday, 30 September 2015

ಅ.02 ರಂದು ಕಿನ್ನಾಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ

ಕೊಪ್ಪಳ, ಸೆ.30 (ಕರ್ನಾಟಕ ವಾರ್ತೆ) : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಹಾಗೂ   ಕಾಶಿವಿಶ್ವನಾಥ ಕರಡಿ ಮಜಲು ಹಾಗೂ ಸಾಂಸ್ಕøತಿಕ ಕಲಾ ಸಂಘ, ಕಿನ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಳೀಯ ಪ್ರಾಯೋಜಿತ ಕಾರ್ಯಕ್ರಮದಡಿ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಅ.02 ರಂದು ಸಂಜೆ 4.30 ಗಂಟೆಗೆ ಕಿನ್ನಾಳದ ಕಾಶಿವಿಶ್ವನಾಥ ದೇವಸ್ಥಾನದ(ಚೌಕಿ ಗುಡಿ) ಆವರಣದಲ್ಲಿ ಆಯೋಜಿಸಲಾಗಿದೆ.
     ಕಿನ್ನಾಳದ ಷಡಕ್ಷರಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಹಿರಿಯ ಶಾಸ್ತ್ರೀಯ ಸಂಗೀತ ಕಲಾವಿದ ಹುಚ್ಚೇಸಾಬ್ ಬಲ್ಲಾಹುಂಚಿ ಕಾರ್ಯಕ್ರಮ ಉದ್ಘಾಟಿಸುವರು. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅಧ್ಯಕ್ಷತೆ ವಹಿಸುವರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಬನ್ನಿಕೊಪ್ಪ, ಸದಸ್ಯ ಸುಭಾನ್‍ಸಾಬ ಹೀರ್ಯಾಳ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Post a Comment