Wednesday, 30 September 2015

ಕೊಪ್ಪಳದಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಪ್ರಾರಂಭ

ಕೊಪ್ಪ ಸೆ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರವನ್ನು ಪ್ರಭಾರಿ ಜಿಲ್ಲಾಧಿಕಾರಿ ಡಾ|| ಪ್ರವೀಣಕುಮಾರ ಜಿ.ಎಲ್. ಅವರು ಬುಧವಾರದಂದು ಉದ್ಘಾಟಿಸಿದರು.
      ಗ್ರಾಹಕರ ಮಾಹಿತಿ ಕೇಂದ್ರದ ಉದ್ಘಾಟನೆಯ ನಂತರ ಈ ಕುರಿತು ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಆಯ್ಕೆಯಾಗಿರುವ ಕರುಣಾ ರೂರಲ್ ಡೆವ್ಹಲೆಪ್‍ಮೆಂಟ್ ಸೊಸೈಟಿ ಇವರಿಗೆ ಗ್ರಾಹಕರ ಮಾಹಿತಿ ಕೇಂದ್ರವನ್ನು ನಿರ್ವಹಿಸುವ ಹೊಣೆಗಾರಿಕೆ ವಹಿಸಲಾಗಿದೆ.   ಗ್ರಾಹಕರ ರಕ್ಷಣೆ ಕಾಯ್ದೆ ಅಡಿಯಲ್ಲಿ ಗ್ರಾಹಕರಿಗೆ ನೀಡಲಾದ ಹಕ್ಕು ಮತ್ತು ಕತ್ಯವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಗ್ರಾಹಕರು ಖರೀದಿಸುವ ವಸ್ತುಗಳಲ್ಲಿ ಪಡೆಯುವ ಸೇವೆಗಳು ದೋಷ ಪೂರಿತವಾಗಿದ್ದಲ್ಲಿ ಅಥವಾ ನೂನ್ಯತೆ ಇದ್ದಲ್ಲಿ, ನೊಂದ ಗ್ರಾಹಕರು ಅದನ್ನು ಪರಿಹರಿಸಿಕೊಳ್ಳುವ ಬಗ್ಗೆ ಮಾಹಿತಿ ಕೇಂದ್ರದ ಪ್ರಯೋಜನೆ ಪಡೆಯಬಹುದು ಎಂದು ತಿಳಿಸಿದರು. 
   ಕರುಣಾ ರೂರಲ್ ಡೆವ್ಹಲೆಪ್‍ಮೆಂಟ್ ಸೊಸೈಟಿಯ ವiಹಾಲಕ್ಷ್ಮೀ ಕೇಸರಹಟ್ಟಿ  ಹಾಗೂ ಇತರೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
      ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ 08539-225001 ಕ್ಕೆ ಸಂಪರ್ಕಿಸಿ ಯೋಜನೆಯ ಪ್ರಯೋಜನೆಯನ್ನು ಸಂಘದ ಮೂಲಕ ಪಡೆದುಕೊಳ್ಳಬಹುದಾಗಿದೆ.

ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರ

ಕೊಪ್ಪಳ, ಸೆ.30 (ಕರ್ನಾಟಕ ವಾರ್ತೆ) : ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳ ಇವರಿಂದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಕಾರ್ಯಾಗಾರವನ್ನು ಅಕ್ಟೋಬರ್ 05 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರಿನ ಎಸ್‍ಎಫ್‍ಎಸ್ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿ.ಇ.ಸಿ ಅನುಷ್ಠಾನ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಗೊಳಿಸಲು ಶಾಲಾ ಹಂತದಲ್ಲಿ ಕೈಗೊಂಡ ಕ್ರಮಗಳ ಕುರಿತು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಖುದ್ದಾಗಿ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. 

ವಾಹನ ದುರಸ್ತಿ ವೆಚ್ಚ ಪಾವತಿಸದಿರುವುದು ಸೇವಾ ನ್ಯೂನ್ಯತೆ : ಪರಿಹಾರ ಒದಗಿಸಲು ಆದೇಶ

ಕೊಪ್ಪಳ, ಸೆ.30 (ಕರ್ನಾಟಕ ವಾರ್ತೆ) : ವಿಮಾ ಪಾಲಿಸಿ ಹೊಂದಿ, ಅಪಘಾತದಿಂದ ದುರಸ್ತಿಗೊಂಡಿದ್ದ ವಾಹನವೊಂದರ ದುರಸ್ತಿ ವೆಚ್ಚವನ್ನು ಪಾವತಿಸಲು ತಿರಸ್ಕರಿಸಿದ ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಎಂಬ ಕಂಪನಿಯ ಸೇವಾ ನ್ಯೂನ್ಯತೆಯನ್ನು ಪರಿಗಣಿಸಿರುವ ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ವೇದಿಕೆಯು ಪರಿಹಾರ ಒದಗಿಸಲು ಕಂಪನಿಗೆ ಆದೇಶ ನೀಡಿದೆ.
     ಪ್ರಕರಣದ ವಿವರ ಇಂತಿದೆ.  ಕೊಪ್ಪಳದ ಹಮೀದ್ ಹುಸೇನಿ ಇವರು ಎಸ್.ಬಿ.ಐ ಬ್ಯಾಂಕ್ ಶಾಖೆ, ಕೊಪ್ಪಳದಿಂದ ಆರ್ಥಿಕ ಸಹಾಯ ಪಡೆದು ಟಿಪ್ಪರ್ ಒಂದನ್ನು ಖರೀದಿಸಿದ್ದರು. ಈ ವಾಹನಕ್ಕೆ ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಎಂಬ ಕಂಪನಿಯಿಂದ ವಿಮೆ ಮಾಡಿಸಿದ್ದರು.  ವಾಹನವು 2013 ರ ಏ.29 ರಂದು ಮಾರ್ಗ ಮಧ್ಯದಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಬಲಬದಿಯಲ್ಲಿ ಪಲ್ಟಿಯಾಗಿ ಸಾಕಷ್ಟು ಹಾನಿಗೊಂಡಿತು.  ಈ ಘಟನೆಗೆ ಸಂಬಂಧಿಸಿದಂತೆ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತಲ್ಲದೆ, ಈ ವಿಷಯವನ್ನು ವಿಮಾ ಕಂಪನಿಗೂ ಸಹ ಟೋಲ್ ನಂಬರ್ ಮೂಲಕ ತಿಳಿಸಲಾಗಿತ್ತು.  ಕಂಪನಿಯ ಸರ್ವೇಯರ್ ಅಪಘಾತ ಸ್ಥಳಕ್ಕಾಗಮಿಸಿ, ಸರ್ವೇ ಮಾಡಿಕೊಂಡು ಹೋಗಿ, ಟಾಟಾ ಮೋಟರ್ಸ್‍ನ ಅಧಿಕೃತ ಸೇವಾ ಕೇಂದ್ರ ಜಯಶ್ರೀ ಮೋಟರ್ಸ್, ಬೇವಿನಹಳ್ಳಿಯಲ್ಲಿ ದುರಸ್ತಿ ಮಾಡಿಸಿಕೊಳ್ಳಲು ನಿರ್ದೇಶನ ನೀಡಿದ್ದರು. ಅದರಂತೆ ದುರಸ್ತಿ ಕಾರ್ಯವನ್ನು ಕೈಗೊಂಡು ಅಂದಾಜು ಖರ್ಚಿನ ಕೊಟೇಷನ್ ಪ್ರತಿಯನ್ನು ಸರ್ವೇಯರ್ ತೆಗೆದುಕೊಂಡು ಹೋಗಿದ್ದರು. ಇದಾದ ಬಳಿಕ   ಹಮೀದ್ ಹುಸೇನಿ ಅವರು  ಮೂಲ ಬಿಲ್ಲುಗಳೊಂದಿಗೆ 1. 85 ಲಕ್ಷ ರೂ.ಗಳನ್ನು ಪಾವತಿಸುವಂತೆ ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಕಂಪನಿಗೆ ಪತ್ರ ಮುಖೇನ ಕೋರಿದ್ದರು.  ಆದರೆ ಕಂಪನಿಯು ಬಿಲ್ ಮೊತ್ತ ಪಾವತಿಸದ ಕಾರಣ, ಕೊಪ್ಪಳದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋದರು.
     ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷೆ ಏಕತಾ ಹೆಚ್.ಡಿ ಹಾಗೂ ಸದಸ್ಯರಾದ ಸುಜಾತಾ ಅಕ್ಕಸಾಲಿ ಅವರು ದಾಖಲೆಗಳನ್ನು ಪರಿಶೀಲಿಸಿ, ನಂತರ ಕಂಪನಿಯು ಸೇವಾ ನ್ಯೂನ್ಯತೆ ಎಸಗಿರುತ್ತಾರೆಂದು ಪರಿಗಣಿಸಿ, ದುರಸ್ತಿಯ ವೆಚ್ಚ ರೂ.1. 67 ಲಕ್ಷ ಗಳನ್ನು ಹಾಗೂ ಮಾನಸಿಕ ಹಿಂಸೆಗಾಗಿ ಪರಿಹಾರವಾಗಿ ರೂ. 5,000 ಗಳನ್ನು ಹಾಗೂ ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ರೂ.5,000 ಗಳನ್ನು ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಹಾಗೂ ಇದಕ್ಕೆ ತಪ್ಪಿದಲ್ಲಿ ಈ ಮೊತ್ತದ ಮೇಲೆ ವಾರ್ಷಿಕ ಶೇಕಡಾ 12 ಬಡ್ಡಿಯನ್ನು ಪ್ರಕರಣ ದಾಖಲಾದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಪಾವತಿಸಲು ಆದೇಶಿಸಿದೆ.

ಅ.02 ರಂದು ಸ್ವಚ್ಛತಾ ಅಭಿಯಾನ ಕುರಿತು ವಿಶೇಷ ಕಾರ್ಯಕ್ರಮ- ಜನಾರ್ಧನ ಹುಲಿಗಿ

ಕೊಪ್ಪಳ, ಸೆ.30 (ಕರ್ನಾಟಕ ವಾರ್ತೆ) :  ಕೊಪ್ಪಳ ತಾಲೂಕು ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 6 ಗ್ರಾಮ ಪಂಚಾಯಿತಿಗಳಲ್ಲಿ ಅ. 02 ರಿಂದ ವಿಶೇಷ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ಧನ ಹುಲಿಗಿ ಅವರು ತಿಳಿಸಿದ್ದಾರೆ.
     ಕೊಪ್ಪಳ ತಾಲೂಕಿನ ಹುಲಿಗಿ, ಅಗಳಕೇರಾ, ಬಂಡಿಹರ್ಲಾಪುರ, ಗುಳದಳ್ಳಿ ಹಾಗೂ ಬೂದಗುಂಪಾ ಗ್ರಾಮಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಆಯೋಜಿಸಿದ್ದು, ಇದರ ಉದ್ಘಾಟನಾ ಸಮಾರಂಭ ಅಕ್ಟೋಬರ್ 02 ಗಾಂಧಿ ಜಯಂತಿಯಂದು ಬೆಳಿಗ್ಗೆ 8 ಗಂಟೆಗೆ ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಆವರಣದಲ್ಲಿ ಏರ್ಪಡಿಸಲಾಗಿದೆ.
     ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಡಿಯಲ್ಲಿ ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 6 ಗ್ರಾಮ ಪಂಚಾಯತ್‍ಗಳಿಗೆ ತ್ಯಾಜ್ಯ ವಿಲೇವಾರಿಗಾಗಿ ಟ್ರ್ಯಾಕ್ಟರ್ ಹಾಗೂ ಪುಟ್ಟಿಗಳನ್ನು ಈಗಾಗಲೇ ಪೂರೈಸಲಾಗಿದ್ದು, ಹುಲಿಗಿ ಹೊರತುಪಡಿಸಿ ಉಳಿದ 5 ಗ್ರಾಮ ಪಂಚಾಯತ್‍ಗಳಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಎಲ್ಲ ಮನೆಗಳಿಗೂ ಪುಟ್ಟಿಗಳನ್ನು ಹಾಗೂ ಸೂಚನಾ ಫಲಕಗಳನ್ನು ಗಾಂಧಿ ಜಯಂತಿಯಂದು ವಿತರಿಸಲಾಗುವುದು. ಅಭಿಯಾನದಡಿ ಆರೂ ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛತಾ ಅಭಿಯಾನ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯ ಒಂದು ವಾರ್ಡಿನ ಸ್ವಚ್ಛತಾ ಸಮಿತಿಗೆ ಕನಿಷ್ಠ 25 ರಿಂದ 30 ಸ್ವಚ್ಛತಾ ಸದಸ್ಯರನ್ನು ನೇಮಿಸಲಾಗುವುದು. ಈ ಸದಸ್ಯರೆಲ್ಲರೂ ಆ ವಾರ್ಡಿನ, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಯುವಕ ಯುವತಿ ಸಂಘದ ಸದಸ್ಯರು ಹಾಗೂ ಸ್ವಚ್ಛತೆ ಬಗ್ಗೆ ಆಸಕ್ತಿ ಉಳ್ಳವರೆ ಆಗಿರುತ್ತಾರೆ. ಈ ಸಮಿತಿಗಳಲ್ಲಿ ಒಬ್ಬರನ್ನು ಸಂಚಾಲಕರನ್ನಾಗಿ, ಮತ್ತೊಬ್ಬರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ಇನ್ನೋರ್ವರನ್ನು ಕೋಶಾಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು.
     ವಾರ್ಡ್‍ಮಟ್ಟದ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸ್ವಚ್ಛತಾ ಅಭಿಯಾನ ಸಮಿತಿಗಳು ಗ್ರಾಮದ ಸ್ವಚ್ಛತೆಯನ್ನು ಕಾಪಾಡಲು ತ್ಯಾಜ್ಯವನ್ನು ವಿಂಗಡಿಸಿಕೊಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ ಅದನ್ನು ಉಪಯೋಗಿಸುವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಿದ್ದು, ತ್ಯಾಜ್ಯವನ್ನು ರಸ್ತೆ ಮೇಲಾಗಲಿ, ಚರಂಡಿಯಲ್ಲಾಗಲಿ ಹಾಕದಂತೆ ನಿರ್ದಿಷ್ಟಪಡಿಸಿದ ಕಸದ ತೊಟ್ಟಿಗಳಲ್ಲಿ ವಿಂಗಡಿಸಿ ಹಾಕುವುದನ್ನು ಪ್ರೇರೇಪಿಸಲಿವೆ. ಅಲ್ಲದೆ, ವಾರ್ಡುಗಳಲ್ಲಿ ನಡೆಯುವ ಯಾವುದೇ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಗ್ರಾಮ ಪಂಚಾಯತ್ ಒದಗಿಸುವ ತಳ್ಳು ಬಂಡಿಯಲ್ಲಿ ಕಸ ಸಂಗ್ರಹಿಸಿ ಕ್ರಮ ಬದ್ಧವಾಗಿ ಸಂಸ್ಕರಣಾ ಘಟಕಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಈ ಸಮಿತಿಗಳು ನಿರ್ವಹಿಸಲಿವೆ. ಮುಖ್ಯವಾಗಿ ಅಕ್ಟೋಬರ್ 02 ಗಾಂಧೀ ಜಯಂತಿಯಂದು ಎಲ್ಲಾ ಸಮಿತಿಗಳ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಲಿರುವ ಈ ಸ್ವಚ್ಛತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಗಾಂಧೀಜಿಯವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಿದ್ದಾರೆ ಮತ್ತು ನಂತರ ತ್ಯಾಜ್ಯ ಸಂಗ್ರಹಣಾ ವಾಹನದೊಂದಿಗೆ ಗ್ರಾಮ ಪಂಚಾಯಿತಿಯ ಪ್ರತಿ ಮನೆಗೂ ತೆರಳಿ ಕುಟುಂಬದ ಎಲ್ಲಾ ಸದಸ್ಯರಿಗೆ ಪ್ರತಿಜ್ಞಾ ವಿಧೀಯನ್ನು ಭೋಧಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಟಿ.ಜನಾರ್ಧನ ಹುಲಿಗಿ ತಿಳಿಸಿದ್ದಾರೆ.

ಅ.02 ರಂದು ಕಿನ್ನಾಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ

ಕೊಪ್ಪಳ, ಸೆ.30 (ಕರ್ನಾಟಕ ವಾರ್ತೆ) : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಹಾಗೂ   ಕಾಶಿವಿಶ್ವನಾಥ ಕರಡಿ ಮಜಲು ಹಾಗೂ ಸಾಂಸ್ಕøತಿಕ ಕಲಾ ಸಂಘ, ಕಿನ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಳೀಯ ಪ್ರಾಯೋಜಿತ ಕಾರ್ಯಕ್ರಮದಡಿ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಅ.02 ರಂದು ಸಂಜೆ 4.30 ಗಂಟೆಗೆ ಕಿನ್ನಾಳದ ಕಾಶಿವಿಶ್ವನಾಥ ದೇವಸ್ಥಾನದ(ಚೌಕಿ ಗುಡಿ) ಆವರಣದಲ್ಲಿ ಆಯೋಜಿಸಲಾಗಿದೆ.
     ಕಿನ್ನಾಳದ ಷಡಕ್ಷರಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಹಿರಿಯ ಶಾಸ್ತ್ರೀಯ ಸಂಗೀತ ಕಲಾವಿದ ಹುಚ್ಚೇಸಾಬ್ ಬಲ್ಲಾಹುಂಚಿ ಕಾರ್ಯಕ್ರಮ ಉದ್ಘಾಟಿಸುವರು. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅಧ್ಯಕ್ಷತೆ ವಹಿಸುವರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಬನ್ನಿಕೊಪ್ಪ, ಸದಸ್ಯ ಸುಭಾನ್‍ಸಾಬ ಹೀರ್ಯಾಳ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪಾಲಿಸಿ ಹಣ ನೀಡಲು ತಿರಸ್ಕಾರ : ಪರಿಹಾರ ನೀಡಲು ಆದೇಶ

ಕೊಪ್ಪಳ, ಸೆ.30 (ಕರ್ನಾಟಕ ವಾರ್ತೆ) : ಪಾಲಿಸಿದಾರನ ಉದ್ಯೋಗ ಮತ್ತು ಆದಾಯ ವಿವರವನ್ನು ಸಮರ್ಪಕವಾಗಿ ನೀಡಿರುವುದಿಲ್ಲ ಎಂಬ ಒಂದೇ ಕಾರಣದಿಂದ ಪಾಲಿಸಿ ಹಣವನ್ನು ನೀಡಲು ತಿರಸ್ಕರಿಸಿದ ಕೋಟಕ್ ಮಹಿಂದ್ರಾ ಓಲ್ಡ್ ಮ್ಯೂಚಲ್ಸ್ ಇನ್ಶೂರೆನ್ಸ್ ಲಿಮಿಟೆಡ್, ಮುಂಬೈ ಎಂಬ ವಿಮಾ ಕಂಪನಿಯ ಸೇವಾ ನ್ಯೂನ್ಯತೆಯನ್ನು ಪರಿಗಣಿಸಿರುವ ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ವೇದಿಕೆಯು ಪರಿಹಾರ ಒದಗಿಸಲು ಆದೇಶಿಸಿದೆ.
     ಪ್ರಕರಣದ ವಿವರ ಇಂತಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಭೀಮಪ್ಪ ಭೀಮಯ್ಯ ಗುಂಜಳ್ಳಿ ಎಂಬುವವರ ಮಗನು, ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚಲ್ ಇನ್ಶೂರೆನ್ಸ್ ಲಿಮಿಟೆಡ್. ಮುಂಬೈ ಎಂಬ ವಿಮಾ ಕಂಪನಿಯಲ್ಲಿ 2013 ರ ಮೇ.30 ರಂದು ರೂ.14. 80 ಲಕ್ಷ ರೂ. ಮೊತ್ತದ ಪಾಲಿಸಿ ಮಾಡಿಸಿ, ರೂ.19,132 ಗಳ ವಿಮಾ ಕಂತು ಪಾವತಿಸಿದ್ದರು.  ಪಾಲಿಸಿದಾರರ ತಂದೆ ಭೀಮಪ್ಪ ಗುಂಜಳ್ಳಿ ನಾಮಿನಿ ಆಗಿದ್ದರು.   ಭೀಮಪ್ಪ ಅವರ ಮಗ ಅದೇ 2013ರ ಜುಲೈ.10 ರಂದು ಹೃದಯಾಘಾತದಿಂದ ಗಂಗಾವತಿಯಲ್ಲಿ ಮರಣ ಹೊಂದಿದರು. ಇದಾದ ಬಳಿಕ ಭೀಮಪ್ಪ, ತನ್ನ ಮಗನ ಪಾಲಿಸಿಯ ವಿಷಯ ತಿಳಿದು,  ವಿಮಾ ಕಂಪನಿಗೆ ವಿಷಯ ತಿಳಿಸಿ, ಅವರು ಕಳುಹಿಸಿದ ಕ್ಲೇಂ ಫಾರ್ಮನ್ನು ತುಂಬಿ ಸಲ್ಲಿಸಿದರು. ವಿಮಾ ಕಂಪನಿಯು 2014 ರ ಮಾರ್ಚ್ 13 ರಂದು ಭೀಮಪ್ಪ ಅವರಿಗೆ ಪತ್ರ ಬರೆದು ತಮ್ಮ ಮಗನು ಪಾಲಿಸಿ ಮಾಡಿಸುವ ಸಮಯದಲ್ಲಿ ಉದ್ಯೋಗ ಮತ್ತು ಆದಾಯದ ನಿಜ ಸ್ವರೂಪವನ್ನು ತಿಳಿಸದೇ ಇರುವುದರಿಂದ ಪಾಲಿಸಿಯ ಹಣವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿ, ಕ್ಲೇಂ ಅರ್ಜಿಯನ್ನು ತಿರಸ್ಕರಿಸಿದರು.  ವಿಮಾ ಪಾಲಿಸಿಯ ಮೊತ್ತ ದೊರಕಿಸಿಕೊಡುವಂತೆ ಭೀಮಪ್ಪ ಅವರು ಕೊಪ್ಪಳದ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.
      ಗ್ರಾಹಕರ ವೇದಿಕೆ ನೀಡಿದ ಸಮನ್ಸ್‍ಗೆ ಕಂಪನಿಯು ತಮ್ಮ ವಕೀಲರ ಮೂಲಕ ಹಾಜರಾಗಿ, ಭೀಮಪ್ಪ ಅವರ ಮಗನು ಪಾಲಿಸಿ ಪಡೆಯುವ ಸಮಯದಲ್ಲಿ ನೀಡಿದ ಮಾಹಿತಿಯು ಸರಿಯಾಗಿದೆಯೆಂದು ನಂಬಿ ಪಾಲಿಸಿ ವಿತರಿಸಲಾಗಿತ್ತು. ಆದರೆ ಡೆತ್ ಕ್ಲೇಮ್ ಅರ್ಜಿಯನ್ನು ಪರಿಶೀಲಿಸುವ ಸಮಯದಲ್ಲಿ ಮಾತ್ರವೇ ಅವರು, ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೂ ಸಹ ಪ್ರಪೋಸಲ್ ಫಾರ್ಮ್‍ನಲ್ಲಿ ವಾರ್ಷಿಕ ಆದಾಯ ರೂ.3.00 ಲಕ್ಷ ಎಂದು ನಮೂದಿಸಿ ಪಾಲಿಸಿ ಪಡೆದಿರುತ್ತಾರೆ. ಅಲ್ಲದೇ ಮಗನು ವಿದ್ಯಾರ್ಥಿಯಾಗಿದ್ದು, ಸುಳ್ಳು ಮಾಹಿತಿಯನ್ನು ನೀಡಿ ಫ್ರಪೋಸಲ್‍ನಲ್ಲಿ ನಮೂದಿಸಿದ್ದಾರೆ. ಈ ಕಾರಣದಿಂದಾಗಿಯೇ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ತಮ್ಮಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿಲ್ಲ ಎಂದು ಕಂಪನಿಯು ವಾದ ಸಲ್ಲಿಸಿತು.
     ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷೆ ಏಕತಾ ಹೆಚ್.ಡಿ ಹಾಗೂ ಸದಸ್ಯರಾದ ಸುಜಾತಾ ಅಕ್ಕಸಾಲಿ ಅವರು, ಕಂಪನಿಯ ಏಜೆಂಟರು ಪಾಲಿಸಿಯನ್ನು ಮಾಡಿಸುವ ಸಂದರ್ಭದಲ್ಲಿ ಉದ್ಯೋಗ ಮತ್ತು ಆದಾಯದ ಮೂಲವನ್ನು ಪರಿಶೀಲಿಸದೇ ಪಾಲಿಸಿಯನ್ನು ವಿತರಿಸಿರುವುದು ಕಂಪನಿಯ ತಪ್ಪಾಗಿದೆ. ಹಾಗೂ ಕೇವಲ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದರು ಎಂಬುವುದರ ಆಧಾರದ ಮೇಲೆ ಪಾಲಿಸಿಯ ಹಣವನ್ನು ನೀಡಲು ನಿರಾಕರಿಸಿರುವುದು ಕೂಡಾ ಕಂಪನಿಯ ಸೇವಾ ನ್ಯೂನ್ಯತೆಯಾಗಿದೆ ಎಂದು ಪರಿಗಣಿಸಿ, ಕಂಪನಿಯು ಭೀಮಪ್ಪ ಅವರಿಗೆ ಪಾಲಿಸಿಯ ಹಣ ರೂ.14,80,000 ಗಳನ್ನು ಬೋನಸ್ ಮತ್ತು ಲಾಭಾಂಶದೊಂದಿಗೆ ಹಾಗೂ ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ರೂ.5,000 ಗಳನ್ನು, ಪ್ರಕರಣ ಖರ್ಚು ರೂ.1,500 ಗಳನ್ನು ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಆದೇಶಿಸಿದೆ. ಅಲ್ಲದೆ, ಇದಕ್ಕೆ ತಪ್ಪಿದಲ್ಲಿ ಈ ಮೊತ್ತದ ಮೇಲೆ ವಾರ್ಷಿಕ ಶೇಕಡಾ 12 ರಷ್ಟು ಬಡ್ಡಿಯನ್ನು ಪ್ರಕರಣ ದಾಖಲಾದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೂ ಪಾವತಿಸುವಂತೆ ಆದೇಶಿಸಿದೆ.

ಅ. 02 ರಂದು ಕೊಪ್ಪಳದಲ್ಲಿ ಗಾಂಧೀಜಿ ಜಯಂತಿ ಕಾರ್ಯಕ್ರಮ

ಕೊಪ್ಪಳ ಸೆ. 30 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮ ಅ. 02 ರಂದು ಬೆಳಿಗ್ಗೆ 10 ಗಂಟೆಗೆ ಆಡಿಟೋರಿಯಂ ಹಾಲ್‍ನಲ್ಲಿ ನಡೆಯಲಿದೆ.
     ಗಾಂಧೀಜಿ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಗೆ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವುದರ ಜೊತೆಗೆ ‘ರಘುಪತಿ ರಾಘವ ರಾಜಾ ರಾಮ್’ ಗೀತ ಗಾಯನ ನಡೆಯಲಿದೆ.  ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಹಾತ್ಮಾ ಗಾಂಧೀಜಿಯವರ ಕುರಿತು ಕಿರು ಚಿತ್ರ ಪ್ರದರ್ಶನ ಹಾಗೂ
‘ ಕರ್ನಾಟಕದಲ್ಲಿ ಗಾಂಧೀಜಿಯವರ ಹೆಜ್ಜೆಗಳು’ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದೆ.  ಈ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ತಪ್ಪದೆ ಹಾಜರಾಗಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಡಾ : ಪ್ರವೀಣ್‍ಕುಮಾರ್ ಜಿ.ಎಲ್. ಅವರು ಕೋರಿದ್ದಾರೆ.

Tuesday, 29 September 2015

ಲಘು ವಾಹನ ಚಾಲನಾ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಸೆ.29 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ರಾಜ್ಯ ಯೋಜನೆಯಡಿ ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ನಿರುದ್ಯೋಗಿಗಳಿಗೆ ಲಘುವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿಗಳನ್ನು ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ವಿಷಯ ನಿರ್ವಾಹಕರಿಂದ ಪಡೆಯಬಹುದಾಗಿದ್ದು, ಅಕ್ಟೋಬರ್ 14 ಅರ್ಜಿ ವಿತರಿಸುವ ಕೊನೆ ದಿನಾಂಕವಾಗಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಭಾವಚಿತ್ರ ಇರುವ ಗುರುತಿನ ಚೀಟಿ ಅಥವಾ ಆಧಾರ್‍ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್, ಒಂದು ಭಾವಚಿತ್ರ ಇತ್ಯಾದಿ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಲಗತ್ತಿಸಿ, ಸಲ್ಲಿಸಬಹುದಾಗಿದೆ. ಅಕ್ಟೋಬರ್ 15 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದ್ದು, ತಡವಾಗಿ ಬಂದತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವಿಷಯ ನಿರ್ವಾಹಕರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್‍ನ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ : ರೈತರಿಗೆ ಸಲಹೆಗಳು

ಕೊಪ್ಪಳ ಸೆ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ರೈತರು ಕಡಲೆ ಬೆಳೆ ಬಿತ್ತನೆಗೆ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ ಕುರಿತಂತೆ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಕಡಲೆ ಬಿತ್ತನೆ ಬೀಜಗಳನ್ನು ಶೇ. 2 ರ ಸುಣ್ಣದ ತಿಳಿ ನೀರಿನಲ್ಲಿ (ಕ್ಯಾಲ್ಸಿಯಂ ಕ್ಲೋರೈಡ್) 30 ನಿಮಿಷಗಳವರೆಗೆ ನೆನೆಸಿ ನಂತರ ನೆರಳಿನಲ್ಲಿ ಒಣಗಿಸಬೇಕು. ಪ್ರತೀ ಎಕರೆ ಬೀಜಕ್ಕೆ 500 ಗ್ರಾಂ ರೈಜೋಬಿಯಂ, 500 ಗ್ರಾಂ ರಂಜಕ ಕರಗಿಸುವ ಅಣುಜೀವಿ ಗೊಬ್ಬರ ಮತ್ತು 80-100 ಗ್ರಾಂ ಟ್ರೈಕೊಡರ್ಮದಿಂದ ಬೀಜೋಪಚಾರ ಮಾಡಬೇಕು.  ಪ್ರತೀ ಕೆ.ಜಿ ಬೀಜಕ್ಕೆ 2 ಗ್ರಾಂ ಕ್ಯಾಪ್ಟಾನ್ 80 ಡಬ್ಲ್ಯೂ.ಪಿ ಅಥವಾ 2 ಗ್ರಾಂ ಥೈರಮ್ 75 ಡಬ್ಲ್ಯೂ.ಎಸ್ ಅಥವಾ ಮೆಂಕೋಜೆಬ್ 75 ಡಬ್ಲ್ಯೂ.ಪಿ ಅಥವಾ ನಿಂದ ಬೀಜೋಪಚಾರ ಮಾಡುವುದರಿಂದ ರೋಗಗಳನ್ನು ತಡೆಗಟ್ಟಬಹುದು. ನೆಟೆ ರೋಗ/ಸಿಡಿ ರೋಗ/ಸೊರಗು ರೋಗ ಬಾಧೆ ಇರುವ ಪ್ರದೇಶಗಳಲ್ಲಿ 800 ಗ್ರಾಂ ಟ್ರೈಕೊಡರ್ಮವನ್ನು 100 ಕಿ.ಗ್ರಾಂ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಮತ್ತು 20 ಕಿ.ಗ್ರಾಂ ಬೇವಿನ ಬೀಜದ ಪುಡಿಯಲ್ಲಿ ಮಿಶ್ರಣ ಮಾಡಿ ಶೇ. 50 ರಷ್ಟು ತೇವಾಂಶ ಇರುವಂತೆ  ತೇವÀಗೊಳಿಸಿ, 7 ದಿನಗಳವರೆಗೆ ಪ್ಲಾಸ್ಟಿಕ್ ಹಾಳೆ ಹೊದಿಸಿ ನಂತರ ಬಿತ್ತುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು.  ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶಿಲೀಂದ್ರನಾಶಕದ (ರಸಾಯನಿಕ) ಜೊತೆ ಟ್ರೈಕೋಡರ್ಮವನ್ನು ಮಿಶ್ರಣ ಮಾಡಿ ಬಳಸಬಾರದು. 
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞ ರೋಹಿತ್.ಕೆ.ಎ. (9845194328) ಮತ್ತು ಯುಸುಫ್‍ಅಲಿ ನಿಂಬರಗಿ (7899600134) ಇವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮಂದಾಳು ಡಾ.ಎಂ.ಬಿ. ಪಾಟೀಲ (9480696319) ತಿಳಿಸಿದ್ದಾರೆ.

ಅ.01 ರಂದು ಕೊಪ್ಪಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಕೊಪ್ಪಳ, ಸೆ.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾಯಕ್ರಮ ಅ.01 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ. 
     ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ್, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅರವಿಂದಗೌಡ ಪಾಟೀಲ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಪರಸಪ್ಪ ಕತ್ತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿರೇಶಪ್ಪ ಸಾಲೋಣಿ, ಪ್ರಭಾರಿ ಜಿಲ್ಲಾಧಿಕಾರಿ ಡಾ||ಪ್ರವೀಣ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ತ್ಯಾಗರಾಜನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ವ್ಹಿ.ಎಮ್. ಭೂಸನೂರಮಠ, ಎಸ್.ರುದ್ರಯ್ಯ ಅವರು ಅತಿಥಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಉಪ್ಪಾರ ಸಮುದಾಯದವರಿಗೆ ಸಹಾಯಧನ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ, ಸೆ.29 (ಕರ್ನಾಟಕ ವಾರ್ತೆ) : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಪ್ಪಳ ಇವರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಉಪ್ಪಾರ ಸಮುದಾಯವು ತೊಡಗಿಸಿಕೊಂಡಿರುವ ಸಾಂಪ್ರದಾಯಿಕ ವೃತ್ತಿಯಲ್ಲಿ ಕೌಶಲ್ಯಾಭಿವೃದ್ಧಿ ಹೊಂದಲು ಹಾಗೂ ಇತರೆ ವೃತ್ತಿ ಮತ್ತು ಉದ್ಯೋಗ ಕೈಗೊಳ್ಳಲು ಸಾಲ ಮತ್ತು ಸಹಾಯಧನ ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲಿ ಬರುವ ಉಪ್ಪಾರ ಹಾಗೂ ಅದರ ಉಪ ಜಾತಿಗಳಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.40,000, ಮತ್ತು ನಗರ ಪ್ರದೇಶದವರಿಗೆ ರೂ.55,000 ಗಳ ಮಿತಿಯೊಳಗಿರಬೇಕು. ಅಭ್ಯರ್ಥಿಗಳು 18 ರಿಂದ 55 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಅರ್ಜಿದಾರರು ಕೈಗೊಳ್ಳುವ ವೃತ್ತಿಗೆ ಅನುಗುಣವಾಗಿ ಗರಿಷ್ಠ 50,000.ರೂ.ಗಳ ಸೌಲಭ್ಯ ಒದಗಿಸಲಾಗುವುದು. ಇದರಲ್ಲಿ ಶೇ. 30 ರಷ್ಟು ಗರಿಷ್ಠ 10,000 ರೂ.ಗಳವರೆಗೆ ಸಹಾಯಧನ ಹಾಗೂ ಉಳಿಕೆ 40,000 ರೂ.ಗಳವರೆಗೆ ವಾರ್ಷಿಕ ಶೇ.4 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು.   
     ಆಸಕ್ತರು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಯಲ್ಲಿ ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿ, ಅಕ್ಟೋಬರ್.24 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಮರಳಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ ನಿಗಮದ ವೆಬ್‍ಸೈಟ್  www.karnataka.gov.in/dbcdc ನ್ನು ವೀಕ್ಷಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಅ.02 ರಂದು ಕಡ್ಡಾಯವಾಗಿ ಗ್ರಾಮ ಸಭೆ ನಡೆಸಲು ಸೂಚನೆ

ಕೊಪ್ಪಳ, ಸೆ.29 (ಕರ್ನಾಟಕ ವಾರ್ತೆ) : ಗಂಗಾವತಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ಟೋಬರ್.02 ರಂದು ಗ್ರಾಮ ಸಭೆಯನ್ನು ಕಡ್ಡಾಯವಾಗಿ ನಡೆಸುವಂತೆ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್. ಮಠ ಅವರು ಸೂಚನೆ ನೀಡಿದ್ದಾರೆ.
     ಕೇಂದ್ರ ಸರ್ಕಾರವು ರಾಜ್ಯ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ತಯಾರಿಸುವ ಸಲುವಾಗಿ ಅಕ್ಟೋಬರ್.02 ರಂದು ಕಡ್ಡಾಯವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಯನ್ನು ನಡೆಸುವಂತೆ ನಿರ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‍ಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳು ಸಭೆಗೆ ಬೇಕಾದ ಪೂರ್ವ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು, ತಮ್ಮ ವ್ಯಾಪ್ತಿಯಲ್ಲಿ ಗ್ರಾಮ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು.  ಎಲ್ಲ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರು, ಯೋಜನೆಗೆ ಸಂಬಂಧಿಸಿದ ಎಲ್ಲಾ ಬಾದ್ಯಸ್ಥರು, ಪಾಲುದಾರರು, ಗ್ರಾಮಸ್ಥರು ಈ ಗ್ರಾಮ ಸಭೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ಗಂಗಾವತಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. 

Monday, 28 September 2015

ಶೀಘ್ರ ಲಿಪಿಗಾರರ ಹುದ್ದೆ : ಅರ್ಜಿ ಆಹ್ವಾನ

ಕೊಪ್ಪಳ, ಸೆ.28 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ 12 ಶೀಘ್ರ ಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
      ಖಾಲಿ ಇರುವ ಒಟ್ಟು 12 ಶೀಘ್ರಲಿಪಿಗಾರರ ಹುದ್ದೆಗಳಲ್ಲಿ ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವೃಂದಕ್ಕೆ 09 ಹುದ್ದೆಗಳನ್ನು ಹಾಗೂ ಉಳಿಕೆ ಮೂಲ ವೃಂದಕ್ಕೆ 03 ಹುದ್ದೆಗಳನ್ನು ವರ್ಗೀಕರಣಗೊಳಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಹಿರಿಯ ದರ್ಜೆ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿರಬೇಕು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ. 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-01 ರ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. 
     ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪತ್ರ, ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿ, ನಡತೆ ಪ್ರಮಾಣ ಪತ್ರ,  ಜಾತಿ ಹಾಗೂ ಇತರೆ ಮೀಸಲಾತಿ ಪ್ರಮಾಣ ಪತ್ರ, ಅನುಚ್ಛೇಧ 371 (ಜೆ) ಅಡಿ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳು ಅರ್ಹತಾ ಪ್ರಮಾಣ ಪತ್ರ ಮತ್ತು ಸರ್ಕಾರಿ ಸೇವೆಯಲ್ಲಿರುವ ನೌಕರರು ತಮ್ಮ ವೃಂದ ನಿಯಂತ್ರಣ ಪ್ರಾಧಿಕಾರ ಅಥವಾ ಕಛೇರಿ ಮುಖ್ಯಸ್ಥರಿಂದ ನೀಡಲಾದ ಸ್ವಗ್ರಾಮ ಪ್ರಮಾಣ ಪತ್ರ ಸೇರಿದಂತೆ ಇತರೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ, 5 ರೂ.ಗಳ ಅಂಚೆ ಸ್ಟ್ಯಾಂಪ್ ಹೊಂದಿರುವ ಸ್ವ-ವಿಳಾಸದ ಲಕೋಟೆಯೊಂದಿಗೆ  ಅಕ್ಟೋಬರ್ 19 ರ ಸಂಜೆ 5.45 ಗಂಟೆಯೊಳಗಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ. 
     ಶೀಘ್ರ ಲಿಪಿಗಾರರ ಹುದ್ದೆಯ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಒಂದು ನಿಮಿಷಕ್ಕೆ 120 ಶಬ್ದಗಳಂತೆ 5 ನಿಮಿಷಗಳ ಉಕ್ತ ಲೇಖನವನ್ನು ಕನ್ನಡ ಮತ್ತು ಆಂಗ್ಲ ಬಾಷೆಯಲ್ಲಿ ನೀಡಲಾಗುವುದು. ಮತ್ತು ಅದನ್ನು ಲಿಪ್ಯಂತರಗೊಳಿಸಿ, ಬೆರಳಚ್ಚು ಮಾಡಲು 45 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಅಲ್ಲದೆ, ಕರ್ನಾಟಕ ಅಧೀನ ನ್ಯಾಯಾಲಯಗಳ ನಿಯಮಗಳು 2007ರ ಅನ್ವಯ ನೇರನೇಮಕಾತಿಯ ಮೂಲಕ ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್  www.ecourts.gov.in/india/karnataka/koppal/recruitment ಗೆ ಭೇಟಿ ನೀಡಬಹುದಾಗಿದೆ.

ಸೆ.25 ರಿಂದ ಸ್ವಚ್ಛ ಭಾರತ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮ

ಕೊಪ್ಪಳ, ಸೆ.28 (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆ ಕಾರ್ಯಾಲಯದ ವತಿಯಿಂದ ಸ್ವಚ್ಛ ಭಾರತ ಮಿಷನ್‍ನ ವಾರ್ಷಿಕೋತ್ಸವದ ಅಂಗವಾಗಿ ಸೆ.25 ರಿಂದ ಅಕ್ಟೋಬರ್.11 ರವರೆಗೆ ಸ್ವಚ್ಛ ಭಾರತ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
     ಅಕ್ಟೋಬರ್.02 ರಂದು ಸ್ವಚ್ಛ ಭಾರತ ಮಿಷನ್‍ನ ವಾರ್ಷಿಕೋತ್ಸವವನ್ನು ಆಚರಿಸಬೇಕಿರುವ ಹಿನ್ನೆಲೆಯಲ್ಲಿ ಸೆ.25 ರಿಂದ ಅಕ್ಟೋಬರ್.11 ರವರೆಗೆ ಈ ಸ್ವಚ್ಛ ಭಾರತ ಫೋರ್ಟ್‍ನೈಟ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಮೊದಲನೇ ಹಂತವಾಗಿ ಸೆ.25 ರಿಂದ ಅಕ್ಟೋಬರ್.01 ರವರೆಗೆ ನಗರದ ವಿವಿಧ ವಾರ್ಡುಗಳಲ್ಲಿ ಸಭೆಗಳನ್ನು ನಡೆಸಲಾಗುವುದು. ಅಕ್ಟೋಬರ್.02 ರಂದು ಮಹಾತ್ಮಾ ಗಾಂಧೀಜಿ ಜಯಂತಿ ಹಾಗೂ ಸ್ವಚ್ಛ ಭಾರತ್ ಮಿಷನ್ ವಾರ್ಷಿಕೋತ್ಸವ ಆಚರಿಸಲಾಗುವುದು. ಎರಡನೇ ಹಂತವಾಗಿ ಅಕ್ಟೋಬರ್.03 ರಿಂದ 11 ರವರೆಗೆ ಒಂದು ದಿನ ಮಾರುಕಟ್ಟೆ ಸ್ವಚ್ಛತೆ, ಒಂದು ದಿನ ಶಾಲೆಗಳ ಆವರಣ ಸ್ವಚ್ಛತೆ, ಒಂದು ದಿನ ಶೌಚಾಲಯಗಳ  ಸ್ವಚ್ಛತೆ, ಒಂದು ದಿನ ಸ್ಮಶಾನಗಳ ಸ್ವಚ್ಛತೆ ಸೇರಿದಂತೆ ಹೀಗೆ ಪ್ರತಿ ದಿನ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪೌರಾಯುಕ್ತ ರಮೇಶ ಪಟ್ಟೇದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಲಿಂಗ ಸಮಾನತೆ ಕುಟುಂಬದಿಂದಲೇ ಪ್ರಾರಂಭವಾಗಲಿ- ಎಸ್. ಮಹೇಶ್

ಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಗಂಡು-ಹೆಣ್ಣು ಎಂಬ ಬೇಧ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಲಿಂಗ ಸಮಾನತೆಯು ಕುಟುಂಬದಿಂದಲೇ ಪ್ರಾರಂಭವಾಗಬೇಕು ಎಂದು ಕುಷ್ಟಗಿ ಸಿವಿಲ್ ನ್ಯಾಯಾಧೀಶ ಎಸ್. ಮಹೇಶ್ ಅವರು ಹೇಳಿದರು.
     ಕುಷ್ಟಗಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಕುಷ್ಟಗಿ, ಮಹಿಳಾ ಅಭಿವೃದ್ದಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಗ್ರಾಮ ಪಂಚಾಯತಿ ಗುಮಗೇರಿ ಇವರುಗಳ  ಸಂಯುಕ್ತ ಆಶ್ರಯದಲ್ಲಿ ದೇವದಾಸಿ ಮಹಿಳೆಯರಿಗಾಗಿ ಹಾಗೂ ಹಿರಿಯ ನಾಗರಿಕರಿಗಾಗಿ ಕುಷ್ಟಗಿ ತಾಲೂಕು ಗುಮಗೇರಾದ ಬಾಬು ಜಗಜೀವನರಾಂ ಸಮುದಾನ ಭವನದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಮಹಿಳೆಯರ ಮೇಲೆ ಶೋಷಣೆ ನಡೆಯುವುದು ಸಮಾಜದಲ್ಲಿ ಮಾತ್ರವಲ್ಲಿ, ಅದು ಪ್ರತಿಯೊಂದು ಮನೆಯಿಂದಲೇ ಪ್ರಾರಂಭವಾಗುತ್ತಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಪುರುಷರಿಗಿಂತ ತಾವು ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂದು ಸಾಬೀತು ಮಾಡಿದ್ದಾರೆ.  ಲಿಂಗ ತಾರತಮ್ಯವನ್ನು ತೊಡೆದುಹಾಕಲು ಪ್ರತಿಯೊಂದು ಕುಟುಂಬದವರು ತಮ್ಮ ತಮ್ಮ ಮನೆಗಳಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವ ಮಾಡದೇ ಮಹಿಳಯನ್ನು ಪುರುಷನಿಗೆ ಸಮಾನವೆಂದು ಭಾವಿಸಬೇಕಿದೆ.   ಅಲ್ಲದೇ ಪ್ರತಿಯೊಬ್ಬರೂ ಸಹ ಹಿರಿಯ ನಾಗರಿಕರನ್ನು ಕಡೇಗಣಿಸದೇ ಗೌರವದಿಂದ ಕಾಣಬೇಕು ಎಂದರು.
ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಸುಧಾ ಎಂ, ಚಿದ್ರಿ ಅವರು, ದೇವದಾಸಿ ಪುನರ್ವಸತಿ ಯೋಜನೆಯಡಿ ದೇವದಾಸಿ ಮಹಿಳೆಯರಿಗೆ ನೀಡಲಾಗುವ ವಿವಿಧ ಸೌಲಭ್ಯಗಳ ಕುರಿತು ಮಾತನಾಡಿದರು.  ಕುಷ್ಟಗಿ ಪಿಎಸ್‍ಐ ರಮೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು.
ವಕೀಲರಾದ ಎನ್.ಪಿ. ಸುದ್ದಿ ಅವರು  ಮಹಿಳಾ ಕಾನೂನು ಹಾಗೂ ದೇವದಾಸಿ ಸಮರ್ಪಣಾ ನಿಷೇದ ಕಾಯ್ದೆ ಕುರಿತು, ವಕೀಲರಾದ ಎಸ್.ಎಸ್. ಪಾಟೀಲ್ ಅವರು ಹಿರಿಯ ನಾಗರಿಕರ ರಕ್ಷಣೆಗೆ ಸಂಬಂಧಿಸಿದ ಕಾನೂನು ಕುರಿತು ಉಪನ್ಯಾಸ ನೀಡಿದರು. 
       ಗ್ರಾ.ಪಂ. ಅಧ್ಯಕ್ಷೆ ಯಮನವ್ವ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಪಿ.ಡಿ.ಓ.  ಮಲ್ಲಿಕಾರ್ಜುನ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರುಗಳು ಉಪಸ್ಥಿರಿದ್ದರು. ದಾದೇಸಾಬ ಹಿರೇಮನಿ ಸ್ವಾಗತಿಸಿದರು ಭೀಮಣ್ಣ ಕಾರ್ಯಕ್ರಮ ನಿರೂಪಿಸಿದರು.  ಮರಿಯಪ್ಪ ವಂದನಾರ್ಪಣೆಗೈದರು.

ಕೊಪ್ಪಳದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ : ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ

ಕೊಪ್ಪಳ, ಸೆ.28 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಕೊಪ್ಪಳದ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ ಶಿರಹಟ್ಟಿ ಹೇಳಿದರು.
     ಕೊಪ್ಪಳ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಪ್ರವಾಸಿ ಅಧಿಕಾರಿಗಳ ಕಛೇರಿಯಲ್ಲಿ  ಏರ್ಪಡಿಸಲಾಗಿದ್ದ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಹಾಗೂ ಸ್ಥಳಗಳ ಪರಿಚಯ ಮಾಡಿಕೊಡುವ ವೆಬ್‍ಸೈಟನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯು ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಸಾಕಷ್ಟು ಮಹತ್ವದ ಸ್ಥಳಗಳನ್ನು ಒಳಗೊಂಡಿದೆ. ಕೊಪ್ಪಳ ಮತ್ತು ಬಹದ್ದೂರಬಂಡಿ ಕೋಟೆ, ಜೈನ ಬಸದಿಗಳು, ಇಂದ್ರಕೀಲ ಪರ್ವತ, ಅಶೋಕನ ಶಿಲಾ ಶಾಸನಗಳು, ಆನೆಗೊಂದಿ ಸೇತುವೆ, ಶಿಲಾಯುಗದ ಮೋರೇರ ಮನೆಗಳು, ವರ್ಣಚಿತ್ರಗಳು ಇವುಗಳಲ್ಲಿ ಪ್ರಮುಖವಾಗಿವೆ.  ಪ್ರವಾಸೋದ್ಯಮದ ಕೊರತೆಯಿಂದಾಗಿ ಸೊರಗಿರುವ ಅವುಗಳನ್ನು ಅಭಿವೃದ್ಧಿಗೊಳಿಸಿದಲ್ಲಿ ಜಿಲ್ಲೆಯು ಕೂಡ ಒಂದು ಅತ್ಯುತ್ತಮ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಿದೆ. ಅಲ್ಲದೆ ಕಾರವಾರ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ಇಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬೇಕಿದೆ.  ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಶ್ರಮಿಸುವ ಅಗತ್ಯವಿದೆ ಎಂದರು.
      ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ಎಸ್. ತಳುಕೇರಿ ಮಾತನಾಡಿ, ಜಿಲ್ಲೆಯು ಸಾಕಷ್ಟು ಐತಿಹಾಸಿಕ ಸ್ಥಳಗಳನ್ನು ಹೊಂದಿದ್ದು, ಈ ಪ್ರವಾಸಿ ಸ್ಥಳಗಳಿಗೆ ಜಿಲ್ಲಾ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಬಹಳಷ್ಟು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದರು. ಇಲಾಖೆಯ ಅನ್ನಪೂರ್ಣ ತೆಗ್ಗಿನಮಠ, ಜಿಲ್ಲೆಯ ಐತಿಹಾಸಿಕ ಪ್ರವಾಸಿ ಸ್ಥಳಗಳನ್ನು ಪರಿಚಯಿಸಿದರು.

Saturday, 26 September 2015

SWR Railway Revised Time Table of some Trains from 1st October 2015दक्षिण पश्चिम रेलवे                               
मुख्य जन-संपर्क अधिकारी कार्यालय,
 तृतीय तल, पूर्वी भाग,
नया क्षेत्रीय प्रधान कार्यालय बिल्डिंग,
गदग रोड,                                                             हुब्बल्लि-580020
South Western Railway
Office of the Chief Public Relations Officer,
IIIrd Floor, East Block,
New Zonal HQ Office Building,
Gadag Road,

HUBBALLI-580020 

---------------------------------------------------------------------------------
                                                Press  Note No. 165 dated  26-09-2015
SALIENT FEATURES OF RAILWAY REGIONAL PUBLIC TIME TABLE
TO COME INTO FORCE FROM 01ST OCTOBER, 2015

The following changes will come into effect in the New Regional Railway Public Time Table from 01st October, 2015.

I.      AMALGAMATION OF  TRAINS:

Amalgamation of Train Nos.57641/57642 Solapur-Bagalkot-Solapur Passenger and Train Nos. 57643/57644 Bagalkot-Gadag-Bagalkot Passenger will be running as Single Train with Train Nos. 57641/57642 Solapur-Gadag-Solapur Passenger with effect from 01st October, 2015.

The revised timings  of Train No.57641 Solapur-Gadag Passenger will depart at SOLAPUR at 11-50 hrs; arrive/depart at Vijapura at 14-00/14-05 hrs; Bagalkot at 16-55/17-00 hrs. and reach at GADAG station at 19-40 hrs. on the same day, with effect from 01st Oct. 2015.

In the return direction, Train No.57642 Gadag-Solapur Passenger will depart at GADAG at 02-00 hrs. and arrive/depart at Bagalkot at 04-13/04-15 hrs; Vijapura at 06-25/06-30 hrs; and reach at SOLAPUR Station at 09-30 hrs. on the same day, with effect from 01st Oct. 2015.


II.    CHANGE OF TERMINAL  OF  TRAINS:

1.       Train Nos.12510/12509 Bengaluru City-Guwahati-Bengaluru City Express  will change its terminal from Bengaluru City station to Bengaluru Cantt. Station.

Accordingly, Train No.12510 Guwahati –Bengaluru Cantt. Express leaving Guwahati on 03rd January, 2016 and will arrive at Bengaluru Cantt.  at 11-40 hrs. on 05th January, 2016 instead of at Bengaluru City station.

In the return direction, Train No.12509 Bengaluru Cantt-Guwahati Express will depart from Bengaluru Cantt. station at 23-40 hrs., on 06th January, 2016 instead of from  Bengaluru City station.

2.       Train Nos.12845/12846 Bhubaneswar-Yesvantpur-Bhubaneswar Weekly Express  will change its terminal from Yesvantpur station to Bengaluru Cantt. Station.

Accordingly, Train No.12845 Bhubaneswar-Bengaluru Cantt. Weekly Express leaving Bhubaneswar on 03rd January, 2016 and will arrive Bengaluru Cantt.  at 10-50 hrs. on 04th January, 2016 instead of at Yesvantpur station.

In the return direction, Train No.12846 Bengaluru Cantt-Bhubaneswar Weekly Express will depart from Bengaluru Cantt. station at 08-25 hrs., on 05th January, 2016 instead of  from Yesvantpur station.

3.       Train Nos.18637/18638 Hatia-Yesvantpur-Hatia Weekly Express  will change its terminal from Yesvantpur station to Bengaluru Cantt. Station.

Accordingly, Train No.18637 Hatia-Bengaluru Cantt. Weekly Express leaving Hatia  on 02nd January, 2016 and will arrive Bengaluru Cantt.  at 04-30 hrs. on 04th January, 2016 instead of at Yesvantpur station.

In the return direction, Train No.18638 Bengaluru Cantt-Hatia Weekly Express will depart from Bengaluru Cantt. station at 00-45 hrs., on 05th January, 2016 instead of  from Yesvantpur station.
...2)
(2)

4.       Train Nos.12295/12296 Bengaluru City-Pataliputra-Bengaluru City Sangamitra  Express  will change its terminal from Patna station to  Pataliputra Station.

Accordingly, Train No.12295 Bengaluru City-Pataliputra Sangamitra Express leaving Bengaluru City Station  on 30th December, 2015 and will arrive at Pataliputra station  at 09-20 hrs. on 01st  January, 2016 instead of at  Patna station.

In the return direction, Train No.12296 Pataliputra-Bengaluru City Express will depart from Pataliputra station at 19-45 hrs., on 01st January, 2016 instead of  from Patna station.


III. SPEEDING UP  OF  TRAINS:

The following Trains are speeded up with revised timings will be from the dates mentioned against each.  The existing timings are indicated in bracket.

1.       Train No.12736 Yesvantpur-Secunderabad Garib Rath Express will depart at Yesvantpur at 16-45 hrs. (13-30) and arrive at Secunderabad at 05-30 hrs. (04-00), with effect from 23rd Nov. 2015.

2.       Train No.12735 Secunderabad-Yesvantpur Garib Rath Express will depart at Secunderabad  at 19-50 hrs. (no change) and arrive at Yesvantpur at 09-15 hrs. (11-15), with effect from 22nd Nov. 2015.


3.       Train No.16535 Mysuru-Solapur Golbumbaz  Express will depart at Mysuru at 16-00 hrs. (15-30); from 01st Oct. 2015 and  depart at Yesvantpur at 19-15 hrs. (19-30) from 01st Oct. 2015 and arrive/depart at Vijapura at 09-25/09-30 hrs. (10-20/10-25), from 02nd Oct. 2015.

4.       Train No.16536 Solapur-Mysuru Golbumbaz  Express will arrive/depart at Vijapura station at 16-50/17-00 hrs. (16-40/16-50); from 01st Oct. 2015.

5.       Train No.11048 Hubballi-Miraj Express  will depart from Hubballi at 23-30 hrs. (23-00) and arrive at Miraj at 05-15 hrs. (no change), with effect from 01st Oct. 2015


6.       Train No.16515 Yesvantpur-Karwar Tri-Weekly Express  will depart from Yesvantpur at 07-00 hrs. (06-30) and arrive/depart at Arsikere at 09-55/10-05hrs.(09-35/09-45), with effect from 02nd Oct. 2015.

7.       Train No.11304 Kolhapur-Hyderabad Express  will depart at Miraj 09-15 hrs. (09-00), with effect from 01st Oct. 2015.
8.       Train No.17235 Bengaluru City-Nagercoil Express  will depart from Bengaluru City station  17-15 hrs. (17-00), with effect from 01st Oct. 2015.
9.       Train No.11302 Bengaluru City-CSTM(Mumbai) Express  will depart from Bengaluru City Station  20-45 hrs. (20-30), with effect from 01st Oct. 2015.
10.   Train No.16024 Yesvantpur-Mysuru Express  will depart from Yesvantpur station 13-15 hrs. (13-00), with effect from 01st Oct. 2015.
11.   Train No.56262 Bengaluru City -Arakkonam Passenger  will depart from Bengaluru City station  09-15 hrs. (08-45), with effect from 01st Oct. 2015.

IV.  REVISION IN  TRAIN TIMINGS:

1.    Train Nos.16315 Bengaluru City--Kochuveli Express will depart at Bengaluru City at 17-00 hrs. instead of 17-15 hrs.,  with effect from 01st October, 2015.
2.    Train No. 56213 Chamarajanagar-Tirupati Fast Passenger will depart at Bengaluru City station at 20-30 hrs. instead of 20-45 hrs., with effect from 01st October, 2015.
3.    Train No.12649 Yesvantpur-H. Nizamuddin Sampark Kranti Express will depart from Yesvantpur at 22-00 hrs. instead of 20-10 hrs., with effect from 02nd October, 2015.
4.    Train No.12650 H. Nizamuddin-Yesvantpur Sampark Kranti Express will arrive at Yesvantpur at 19-35 hrs. instead of 19-10 hrs., with effect from 01st October, 2015.
5.     Train No.16571 Yesvantpur-Bidar Express will depart from Yesvantpur at 19-00 hrs. instead of 19-15 hrs. with effect from 01st October, 2015.
6.    Train No. 22691 Bengaluru City-H. Nizamuddin Rajdhani Express will depart from Bengaluru City station at 20-00 hrs. instead of 20-20 hrs., with effect from 01st October, 2015.
7.    Train No. 22693 Bengaluru City-H. Nizamuddin Rajdhani Express will depart from Bengaluru City station at 20-00 hrs. instead of 20-20 hrs., with effect from 01st October, 2015.
...3)
(3)


8.    Train No. 22817 Howrah-Mysuru Express will depart at Bengaluru City station at 01-00 hrs. instead of 01-15 hrs. , with effect from 04th Oct. 2015.
9.    Train No. 22818 Mysuru-Howrah Express will depart at Bengaluru City station at 03-10 hrs. instead of 03-15 hrs. , with effect from 05th Oct. 2015.
10. Train No. 56508 Bengaluru City-Marikuppam Fast Passenger will depart from Bengaluru station at 18-00 hrs. instead of 18-05 hrs., with effect from 01st October, 2015.
11. Train No. 16505 Gandhidham-Bengaluru City Express will arrive/depart at HUBBALLI station at 17-00/17-10 hrs; instead of 17-30/17-40 hrs., with effect from 07th Oct. 2015.
12. Train No. 16507 Bhagat Ki Kothi-Bengaluru City Express will arrive/depart at HUBBALLI station at 17-00/17-10 hrs; instead of 17-30/17-40 hrs., with effect from 02nd Oct. 2015.
13. Train No. 16209 Ajmer-Mysuru Express will arrive/depart at HUBBALLI station at 17-00/17-10 hrs; instead of 17-30/17-40 hrs., with effect from 03rd  Oct. 2015.
14. Train No. 51458 Dharwad-Hubballi Passenger will depart from Dharwad at 22-05 hrs. instead of 21-05 hrs. and arrive at Hubballi station at 22-45 hrs. instead of 21-50 hrs. with effect from 01st October, 2015.
15. Train No. 56912 Hubballi-Bengaluru City Fast Passenger will depart from Hubballi station at 17-30 hrs. instead of 17-20 hrs., with effect from 01st October, 2015.
16. Train No. 16590 Kolhapur-Bengaluru City Ranichennamma Express will depart at Miraj station at 15-35 hrs. instead of 15-45 hrs., with effect from 01st October, 2015.
17. Train No. 51462 Belagavi-Miraj Passenger will arrive at Miraj at 09-10 hrs. instead of 08-55 hrs., with effect from 01st October, 2015.
18.  Train No. 51412 Hubballi-Ballari Passenger will depart from HUBBALLI at 07-45 hrs. instead of 08-00 hrs., with effect from 01st October, 2015.
19. Train No. 57453 Ballari-Guntakal Passenger  will depart from Ballari station at 14-05 hrs. instead of 14-25 hrs., with effect from 01st October, 2015.
20. Train No. 16232 Mysuru-Mayiladuturai Express will depart from Mysuru at 15-30 hrs. instead of 16-00 hrs.,  with effect from 01st October, 2015.
21.  Train No. 16206 Mysuru-Talaguppa Express will depart from Mysuru station at 05-50 hrs. instead of 06-00 hrs; arrive/depart at Arsikere at 08-43/08-45 hrs instead of 08-55/09-00 hrs; and arrive at Talaguppa at 13-30 hrs. instead of at 13-35 hrs., with effect from 01st October, 2015.
22. Train No. 56270 Mysuru-Shivamogga Town Fast  Passenger  will depart from Mysuru station at 10-20 hrs. instead of at 10-05 hrs., with effect from 01st October, 2015. 
23. Train No. 56216 Mysuru-Shravanabelagola Passenger will depart from Mysuru station at 11-25 hrs. instead of  at 11-10 hrs., with effect from 01st October, 2015.
24.  Train No. 56268 Mysuru-Arsikere Passenger will depart  at Mysuru  at 18-20  hrs. instead of 18-35 hrs., with effect from 01st October, 2015.
25. Train No. 56281 Chamarajanagar-Bengaluru City Passenger  will arrive/depart  at Mysuru at 08-45/09-00 hrs. instead of 08-40/-08-45 hrs with effect from 01st October, 2015.
26. Train No. 56204 Mysuru-Chamarajanagar Passenger  will depart  at Mysore at 07-20 hrs. instead of 07-30 hrs., with effect from 01st October, 2015.
27. Train No. 56214 Tirupati-Chamarajanagar  Passenger  will depart  at Mysuru station at 10-40 hrs. instead of 10-55 hrs., with effect from 01st October, 2015.
28. Train No. 56233 Bengaluru-Mysuru Passenger will arrive at Mysuru at 08-00 hrs. instead of 08-30 hrs., with effect from 01st October, 2015.
29. Train No. 56232 Bengaluru-Mysuru Passenger will arrive at Mysuru at 12-50 hrs. instead of 12-30 hrs., with effect from 01st October, 2015.
30. Train No.16558 Bengaluru-Mysuru Express will arrive at Mysuru station at 13-30 hrs. instead of at 13-15 hrs;  with effect from 01st October, 2015.
31. Train No. 56282 Bengaluru City- Chamarajanagar Passenger  will arrive/depart  at Mysuru at 18-40/18-45 hrs. instead of 18-35/-18-45 hrs., with effect from 01st October, 2015.
32.  Train No. 56215 Shravanabelagola-Mysuru Passenger  will arrive at Mysuru station at 20-00 hrs. instead of 19-25 hrs., with effect from 01st October, 2015.
33. Train No. 56205 Nanjangud Town-Mysuru Passenger  will arrive at Mysuru station 11-10 hrs. instead of 10-50 hrs. with effect from 01st October, 2015.
34. Train No. 56209 Chamarajanagar-Mysuru Passenger  will arrive  at Mysuru at 19-50 hrs. instead of 19-45 hrs with effect from 01st October, 2015.
...4)

                                                                 (4)

35. Train No. 56201 Chamarajanagar-Mysuru Passenger  will arrive  at Mysuru at 22-30 hrs. instead of 22-25 hrs with effect from 01st October, 2015.
36. Train No. 16202 Shivamogga Town-Bengaluru City Express  will depart from Shivamogga Town station  at 06-35 hrs. instead of at 06-40 hrs., with effect from 01st October, 2015. 
37. Train No. 56270 Mysuru-Shivamogga Town Fast  Passenger  will arrive at Shivamogga Town station at16-45 hrs instead of at 16-35 hrs., with effect from 01st October, 2015. 
38.  Train No. 16515 Yesvantpur-Karwar Express  will arrive/depart  at Arsikere station at 09-55/10-05 hrs. instead of 09-30/09-45 hrs, with effect from 02nd October, 2015. 
39. Train No. 56224 Arsikere-Begaluru City Passenger will depart from Arsikere at 05-00 hrs. instead of 05-05 hrs.  with effect from 01st October, 2015.
40. Train No. 16507 Bhagat Ki Kothi-Bengaluru City Express will arrive/depart at Arsikere station at 22-50/22-55 hrs; instead of 23-10/23-15 hrs., with effect from 02nd Oct. 2015.
41. Train No. 16505 Gandhidham-Bengaluru City Express will arrive/depart at Arsikere station at 22-50/22-55 hrs; instead of 23-10/23-15 hrs., with effect from 07th Oct. 2015.
42. Train No. 16209 Ajmer-Mysuru Express will arrive/depart arrive/depart at Arsikere station at 22-50/22-55 hrs; instead of 23-10/23-15 hrs., with effect from 03rd Oct. 2015.
43. Train No. 56273 Arsikere-Hubballi Passenger will depart from Arsikere at 04-50 hrs. instead of 04-45 hrs.  with effect from 01st October, 2015.
44. Train No. 56269 Shivamogga Town-Mysuru   Passenger  will arrive/depart at Arsikere station at 12-35/12-40 hrs. instead of at 12-30/12-35 hrs., with effect from 01st October, 2015. 
45. Train No. 56268 Mysuru-Arsikere Passenger will arrive at Arsikere station at 22-30 hrs; instead of 22-50 hrs., with effect from 01st Oct. 2015.
46. Train No. 11036 Mysuru-Dadar Sharavathi Express  will depart at Mysuru at 06-05 hrs. instead of 06-30 hrs.; and arrive/depart at Arsikere at 09-10/09-15 hrs., instead of 09-40/09-45 hrs; and arrive/depart at Hubballi at 15-05/15-15 hrs;  instead of 15-10/15-25 hrs., with effect from 04th  October, 2015.
47. Train No. 11006 Puducherry-Dadar Express will depart at Yesvantpur at 06-30 hrs. instead of 07-00 hrs. and arrive/depart at Arsikere at 09-10/09-15 hrs.,instead of 09-40/09-45 hrs; and arrive/depart at Hubballi at 15-05/15-15 hrs;  instead of 15-10/15-25 hrs., with effect from 01st  October, 2015.
48. Train No.11022 Tirunelveli-Dadar Express will depart at Yesvantpur at 06-30 hrs. instead of 07-00 hrs. and arrive/depart at Arsikere at 09-10/09-15 hrs.,instead of 09-40/09-45 hrs; and arrive/depart at Hubballi at 15-05/15-15 hrs;  instead of 15-10/15-25 hrs., with effect from 02nd  October, 2015.
*****
     (Office of the Chief Public Relations Officer, SWR, III Floor, East Block, New Zonal  Rly. HQ building,
     Gadag Road,  Hubballi-580 020)