Saturday, 28 June 2014

ಕೃಷಿ ವಿಮೆ : ಪ್ರೀಮಿಯಂ ಪಾವತಿ ಅವಧಿ ಜು. 31 ರವರೆಗೆ ವಿಸ್ತರಣೆ



ಕೊಪ್ಪಳ ಜೂ. 28 (ಕ.ವಾ): ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ವಿಮಾ ಕಂತು ತುಂಬಲು ಕೊನೆಯ ದಿನಾಂಕವನ್ನು ಜು. 31 ರವರೆಗೆ ವಿಸ್ತರಿಸಲಾಗಿದೆ.
          ಪ್ರಸಕ್ತ ಸಾಲಿನ ಮುಂಗಾರು ವಿಳಂಬವಾಗಿರುವುದರಿಂದ, ಬಿತ್ತನೆ ಚಟುವಟಿಕೆ ಅವಧಿ ಮುಂದೂಡಲ್ಪಟ್ಟಿದೆ.  ಈ ಹಿನ್ನೆಲೆಯಲ್ಲಿ ಕೃಷಿ ವಿಮೆಯಲ್ಲಿ ರೈತರು ಭಾಗವಹಿಸುವಂತೆ, ವಿಮಾ ಕಂತು ತುಂಬಲು ಕೊನೆಯ ದಿನಾಂಕವನ್ನು ಜು.ಲ 31 ರವರೆಗೆ ವಿಸ್ತರಿಸಲಾಗಿದ್ದು, ರೈತಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Post a Comment