Saturday, 28 June 2014

ಪ್ರೌಢಶಾಲಾ ಶಿಕ್ಷಕರಿಗೆ ಕೋರಿಕೆಯ ವರ್ಗಾವಣೆ : ಜು. 01 ರಿಂದ ಕೌನ್ಸಿಲಿಂಗ್



ಕೊಪ್ಪಳ ಜೂ. 28 (ಕ.ವಾ): ಪ್ರಸಕ್ತ ಸಾಲಿನ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆಗಾಗಿ ಜು. 01 ರಿಂದ 04 ರವರೆಗೆ ಕೌನ್ಸಿಲಿಂಗ್ ಗುಲಬರ್ಗಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ.
          ಸಹ ಶಿಕ್ಷಕರ ವರ್ಗಾವಣೆಯ ಅಂತಿಮ ತಾತ್ಕಾಲಿಕ ಪಟ್ಟಿ ಈಗಾಗಲೆ ವೆಬ್‍ಸೈಟ್ www.cpigulbarga.kar.nic.in ರಲ್ಲಿ ಪ್ರಕಟಿಸಲಾಗಿದೆ.  ಒಟ್ಟು 1588 ಅರ್ಜಿಗಳು ಅರ್ಹಗೊಂಡಿದ್ದು, ಇದರಲ್ಲಿ ದೈಹಿಕ ಶಿಕ್ಷಕರ ವೃಂದದಲ್ಲಿ ಒಟ್ಟು 204, ವಿಶೇಷ ಶಿಕ್ಷಕರ ವೃಂದದಲ್ಲಿ 85 ಅರ್ಜಿಗಳು ಅರ್ಹಗೊಂಡಿವೆ.  ವರ್ಗಾವಣೆ ಪ್ರಕ್ರಿಯೆ ಅಂತರ್ಜಾಲದ ಮೂಲಕ ನಡೆಸಲಾಗುತ್ತಿದ್ದು, ಸಹ ಶಿಕ್ಷಕರ ವೃಂದದವರಿಗೆ ಜು. 01 ರಂದು ಆದ್ಯತಾ ಕ್ರಮಸಂಖ್ಯೆ 01 ರಿಂದ 250 ರವರೆಗೆ, ಜು. 02 ರಂದು ಆದ್ಯತಾ ಕ್ರಮ ಸಂಖ್ಯೆ 251 ರಿಂದ 800.  ಜು. 03 ರಂದು 801 ರಿಂದ 1350.  ಜು. 04 ರಂದು 1351 ರಿಂದ 1588 ಆದ್ಯತಾ ಕ್ರಮ ಸಂಖ್ಯೆಯವರೆಗೆ ಕೌನ್ಸಿಲಿಂಗ್ ನಡೆಯಲಿದೆ.  ದೈಹಿಕ ಶಿಕ್ಷಕರ ವೃಂದದವರಿಗೆ ಜು. 04 ರಂದು 01 ರಿಂದ 204 ವರೆಗೆ.  ವಿಶೇಷ ಶಿಕ್ಷಕರ ವೃಂದದವರಿಗೆ ಜು. 04 ರಂದು ಆದ್ಯತಾ ಕ್ರಮ ಸಂಖ್ಯೆ 01 ರಿಂದ 85 ರವರೆಗೆ ಗುಲಬರ್ಗಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಯಲಿದೆ.  ನಿಗದಿತ ವೇಳಾಪಟ್ಟಿಯಂತೆ ಬೆಳಿಗ್ಗೆ 09 ಗಂಟೆಗೆ ಹಾಜರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗುಲಬರ್ಗಾದ ಅಪರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment